ಮೊಜೈಲಾದಿಂದ ಫೈರ್‌ಫಾಕ್ಸ್ ಓಎಸ್ ಫೋನ್

By Shwetha
|

ಡಿಜಿಟೈಮ್ಸ್‌ನ ಇತ್ತೀಚಿನ ವರದಿಯ ಪ್ರಕಾರ, ಮೊಜೈಲಾ ತೈವಾನ್ ಸಿಇಒ ಕೂ ಲಾಂಗ್ ಕಂಪೆನಿಯು ಅತ್ಯಂತ ಮಿತದರದ ಫೋನ್ ಅನ್ನು ಲಾಂಚ್ ಮಾಡುವುದನ್ನು ದೃಢಪಡಿಸಿದ್ದು ಇದರ ಬೆಲೆ ರೂ 3000 ಎಂದು ಅಂದಾಜಿಸಲಾಗಿದೆ. ಭಾರತದಲ್ಲೇ ಹತ್ತು ಹಾರ್ಡ್‌ವೇರ್ ಪಾಲುದಾರರು ಇದಕ್ಕಿದ್ದಾರೆ ಎಂದು ಲಾಂಗ್ ತಿಳಿಸಿದ್ದಾರೆ.

ಜೂನ್ 2014 ರ ಸಮಯದಲ್ಲೇ ಸ್ಲೈಸ್ ಮತ್ತು ಇಂಟೆಕ್ಸ್ ಜೊತೆಗೆ ತನ್ನ ಪಾಲುದಾರಿಕೆಯನ್ನು ಮೊಜೈಲಾ ಘೋಷಿಸಿತ್ತು. ಇಟಿ ವರದಿಯ ಪ್ರಕಾರ ಕಂಪೆನಿಯು ಎರಡು ಒಎಮ್‌ಎಸ್ ಫೋನ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡುತ್ತಿದ್ದು ಇದು ಫೈರ್‌ಫಾಕ್ಸ್ ಮೂಲವನ್ನು ಹೊಂದಲಿದೆ. ಭಾರತದಲ್ಲಿ ಮೊಜೈಲಾ ಹತ್ತು ರೀಟೈಲ್ ತಾಣಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ.

ಜಗತ್ತಿನ ಕಡಿಮೆ ದರದ ಫೋನ್ ಮೊಜೈಲಾದಿಂದ

ಈಗಾಗಲೇ, ಕಳೆದ ತಿಂಗಳಷ್ಟೇ ಇಂಟೆಕ್ಸ್ ಫೈರ್‌ಫಾಕ್ಸ್ ಓಎಸ್ ಡಿವೈಸ್, ಕ್ಲೌಡ್ ಎಫ್‌ಎಕ್ಸ್ ಅನ್ನು ಆಗಸ್ಟ್ 2014 ರಲ್ಲಿ ಲಾಂಚ್ ಮಾಡುವುದೆಂದು ಘೋಷಿಸಿತ್ತು. ಕಂಪೆನಿಯ ಅಧಿಕೃತ ವರದಿಯ ಪ್ರಕಾರ, ಇದನ್ನು ಒಳಗೊಂಡ ಸ್ಮಾರ್ಟ್‌ಫೋನ್ ಬೆಲೆ ರೂ 2,000ದ ಒಳಗೆ ಬರಲಿದೆ ಎಂದು ತಿಳಿಸಿದೆ.

ಇಂಟೆಕ್ಸ್ ಕ್ಲೌಡ್ ಎಫ್‌ಎಕ್ಸ್ 1GHz ಸ್ಪ್ರೆಡೇಟ್ರಮ್ ಪ್ರೊಸೆಸರ್ ಜೊತೆಗೆ ಬರಲಿದೆ ಎಂದು MWC ನಲ್ಲಿ ಈ ವರ್ಷದ ಮುಂಚೆಯೇ ತಿಳಿಸಲಾಗಿತ್ತು. ಇದನ್ನು ಇಂಟೆಕ್ಸ್ ಅಧಿಕೃತಗೊಳಿಸಿದ್ದು ತನ್ನ ಸ್ಮಾರ್ಟ್‌ಫೋನ್‌ಗೆ ಇದು 3.5 ಇಂಚಿನ ಡಿಸ್‌ಪ್ಲೇಯನ್ನು, 2 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ವೈ-ಫೈ ಮತ್ತು ಬ್ಲ್ಯೂಟೂತ್ ಹಾಗೂ ಡ್ಯುಯೆಲ್ ಸಿಮ್ ಅನ್ನು ಒದಗಿಸಲಿದೆ ಎಂದು ತಿಳಿಸಿದೆ.

ಇದೇ ಸಮಯದಲ್ಲಿ ಸ್ಪೈಸ್ ಕೂಡ ತನ್ನ ಫೈರ್‌ಫಾಕ್ಸ್ ಆಧಾರಿತ ಸ್ಮಾರ್ಟ್‌ಫೋನ್ ಅನ್ನು ಜುಲೈ ತಿಂಗಳಿನಲ್ಲಿ ಲಾಂಚ್‌ ಮಾಡುವ ನಿರೀಕ್ಷೆ ಇದೆ.

ಮೂರು ಸಾವಿರದ ಬೆಲೆಯ ಸ್ಮಾರ್ಟ್‌ಫೋನ್ ಶ್ರೇಣಿಯನ್ನು ನೋಡುವಾಗ, ಮೊಜೈಲಾ ಭಾರತದಲ್ಲಿರುವ ಲೋ ಎಂಡ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಗಮನದಲ್ಲಿಟ್ಟಿರುವಂತೆ ಕಂಡುಬರುತ್ತಿದೆ. ಫೈರ್‌ಫಾಕ್ಸ್ ತನ್ನ ಈ ಕಡಿಮೆ ದರದ ಫೋನ್‌ನೊಂದಿಗೆ ಮಾರುಕಟ್ಟೆಯಲ್ಲಿ ಉತ್ತಮ ಹೆಸರನ್ನು ಗಳಿಸಬಹುದೆಂಬುದು ನಿರೀಕ್ಷೆಯಾಗಿದೆ.

ಭಾರತೀಯ ಹಾರ್ಡ್‌ವೇರ್ ಪಾಲುದಾರರು ಮಾತ್ರವಲ್ಲದೆ, ಎಲ್‌ಜಿ ಇಲೆಕ್ಟ್ರಾನಿಕ್ಸ್ ಮತ್ತು ಚೀನಾ ಆಧಾರಿತ ಮಾರಾಟಗಾರರು ಕೂಡ ಫೈರ್‌ಫಾಕ್ಸ್ ಓಎಸ್‌ನಲ್ಲಿ ಚಾಲನೆಯಾಗುವಂತಹ ಸ್ಮಾರ್ಟ್‌ಫೋನ್‌ ತಯಾರಿಯಲ್ಲಿ ತೊಡಗಿದ್ದಾರೆ. ಈ ಎಲ್ಲಾ ಡಿವೈಸ್‌ಗಳು ಸದ್ಯಕ್ಕೆ ಭಾರತದಲ್ಲಿ ಕಾರುಬಾರು ನಡೆಸುತ್ತಿದ್ದು ಎಲ್ಲಿಯಾದರೂ ತಮ್ಮ ಹೆಸರು ಜನಪ್ರಿಯತೆಯನ್ನು ಗಳಿಸಿದೊಡನೆ ಈ ಹೊಸ ಓಎಸ್‌ ಆಧಾರಿತ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದು ನಿಖರವಾಗಿದೆ.

Best Mobiles in India

Read more about:
English summary
This article tells that Mozilla to launch worlds cheapest firefox os smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X