Subscribe to Gizbot

ನಿಂಜಾ 4 vs ಗ್ಯಾಲಾಕ್ಸಿ Y ಡ್ಯುಯೋಸ್‌ ಲೈಟ್

Posted By: Staff
 ನಿಂಜಾ 4 vs ಗ್ಯಾಲಾಕ್ಸಿ Y ಡ್ಯುಯೋಸ್‌ ಲೈಟ್

ಭಾರತೀಯ ಸ್ಮಾರ್ಟ್ಫೋನ್‌ ಮಾರುಕಟ್ಟೆಯಲ್ಲಿ ಇಂದು ಹಲವು ತಯಾರಕರುಗಳ ತರಾವರಿ ಸ್ಮಾರ್ಟ್ಫೋನ್‌ಗಳು ಲಭ್ಯವಿದೆ. ಅದರಲ್ಲಿಯೂ 2012 ರಲ್ಲಿ ಸ್ಥಳೀಯ ಫೋನ್ ತಯಾರಿಕಾ ಸಂಸ್ಥೆಗಳು ಜಾಗತಿಕ ದಿಗ್ಗಜ ತಯಾರಿಕಾ ಸಂಸ್ಥೆಗಳಿಗೆ ಸೆಡ್ಡು ಹೊಡೆಯಲೆಂದು ಆಂಡ್ರಾಯ್ಡ್ ಚಾಲಿತ ಡ್ಯೂಯೆಲ್‌ ಸಿಮ್ ಹೊಂದಿರುವ ಬಗೆಬೆಗೆಯ ಹ್ಯಾಂಡ್‌ಸೆಟ್‌ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.

ಅದರಂತೆ ಮೈಕ್ರೋಮ್ಯಾಕ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ A87 ನಿಂಜಾ 4 ಮಾರುಕಟ್ಟೆಯಲ್ಲಿನ ಸ್ಯಾಮ್ಸಂಗ್‌ ಗ್ಯಾಲಾಕ್ಸಿ Y ಲೈಟ್‌ ಭಾರೀ ಪೈಪೋಟಿ ನೀಡುತ್ತಿದೆ.

ಎರಡೂ ಹ್ಯಾಂಡ್‌ಸೆಟ್‌ಗಳು ಆಂಡ್ರಾಯ್ಡ್ ಚಾಲಿತ ಡ್ಯೂಯೆಲ್‌ ಸಿಮ್ ಸ್ಮಾರ್ಟ್ಫೋನ್‌ ಆಗಿದ್ದು ಇವೆರಡರ ನಡುವಿನ ವಿಶೇಷತೆಗಳೇನು ಎಂಬುದು ನಿಮಗಾಗಿ ಗಿಜ್ಬಾಟ್‌ನಲ್ಲಿ ಮಾತ್ರ.

ಡಿಸ್ಪ್ಲೆ ಹಾಗೂ ಡೈಮೆನ್ಶನ್: A87 ನಿಂಜಾ 4 ನ ಸುತ್ತಳತೆ 124.8 x 64 x 11.7 mm ಇದ್ದು ಗ್ಯಾಲಾಕ್ಸಿ Y ಡ್ಯುಯೊಸ್‌ ಲೈಟ್‌ 103.5 x 58 x 12 mm ಸುತ್ತಳತೆ ಹೊಂದಿದೆ. ಇದಲ್ಲದೆ A87 ನಿಂಜಾ 4 ನಲ್ಲಿ 4 ಇಂಚಿನ ಟಚ್‌ಸ್ಕ್ರೀನ್‌ ದರ್ಶಕ ದೊಂದಿಗೆ 480x800 ಪಿಕ್ಸೆಲ್‌ ರೆಸೆಲೂಷನ್‌ ಒಳಗೊಂಡಿದ್ದು, ಗ್ಯಾಲಾಕ್ಸಿ Y ಡ್ಯುಯೊಸ್‌ ಲೈಟ್‌ 2.8 ಇಂಚಿನ ಸ್ಕ್ರೀನ್‌ ಹಾಗೂ 240 x 320 ಪಿಕ್ಸೆಲ್‌ ರೆಸೆಲೂಷನ್‌ ನಿಂದ ಕೂಡಿದೆ.

ಪ್ರೊಸೆಸರ್‌: ಈ ವಿಭಾಗದಲ್ಲಿ A87 ನಿಂಜಾ 4 ಮೇಲುಗೈ ಸಾಧಿಸಿದ್ದು 1 GHz ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಹೊಂದಿದೆ ಆದರೆ ಗ್ಯಾಲಾಕ್ಸಿ Y ಡ್ಯುಯೊಸ್‌ ಲೈಟ್‌ ಕೇವಲ 832MHz ಪ್ರೊಸೆಸರ್ ನಿಂದ ಕೂಡಿದೆ.

ಆಪರೇಟಿಂಗ್‌ ಸಿಸ್ಟಮ್: ಅಗ್ಗದ ಬೆಲೆಯ ಸ್ಮಾರ್ಟ್ಫೋನ್‌ ಗಳಾದ್ದರಿಂದ ಎರಡೂ ಹ್ಯಾಂಡ್‌ಸೆಟ್‌ಗಳು ಆಂಡ್ರಾಯ್ಡ್ 2.3.5 ಜಿಂಜೆರ್‌ಬ್ರೆಡ್‌ OS ಚಾಲಿತವಾಗಿದ್ದು, ಗೂಗಲ್‌ ಆಪರೇಟಿಂಗ್‌ ಸಿಸ್ಟಂಗಿಂತಲೂ ಹಳೆಯದಾಗಿದೆ.

ಕ್ಯಾಮೆರಾ: ಎರಡೂ ಹ್ಯಾಂಡ್‌ಸೆಟ್ ಗಳಲ್ಲಿ 2MP ಕ್ಯಾಮೆರವಿದ್ದು ಹಾಗೂ ಗಮನಿಸ ಬೇಕಾದ ಅಂಶವೇನೆಂದರೆ ಎರೆಡರಲ್ಲಿಯೂ ವಿಡಿಯೋ ಕಾಲ್‌ಗಾಗಿ ಮುಂಬದಿಯ VGA ಕ್ಯಾಮೆರಾಗಳಿಲ್ಲ.

ಮೆಮೊರಿ: ಗ್ಯಾಲಾಕ್ಸಿ Y ಡ್ಯುಯೊಸ್‌ ಲೈಟ್‌ 2GB ಯ ಆಂತರಿಕ ಮೆಮೊರಿ ಹೊಂದಿದ್ದರೆ, A87 ನಿಂಜಾ 4 ನಲ್ಲಿ ಸೌಲಭ್ಯವಿಲ್ಲ. ಹಾಗೂ ಎರಡೂ ಹ್ಯಾಂಡ್ಸೆಟ್‌ಗಳಲ್ಲಿನ ಮೆಮೊರಿಯನ್ನು 32GB ಗಳವರೆಗೆ ವಿಸ್ತರಿಸಿ ಕೊಳ್ಳಬಹುದಾಗಿದೆ.

ಕನೆಕ್ಟಿವಿಟಿ: ಎರಡೂ ಹ್ಯಾಂಡ್‌ಸೆಟ್‌ ಗಳಲ್ಲಿ USB 2.0, Wi-Fi, 3G ಹಾಗೂ ಬ್ಲೂಟೂತ್‌ ಸೌಲಭ್ಯವಿದೆ.

ಬ್ಯಾಟರಿ: ಈ ವಿಚಾರದಲ್ಲಿ A87 ನಿಂಜಾ 4 ಹೆಚ್ಚಿನ ಸಾಮರ್ತ್ಯದ 1,400 mAh Li-ion ಹೊಂದಿದ್ದರೆ ಗ್ಯಾಲಾಕ್ಸಿ Y ಡ್ಯುಯೊಸ್‌ ಲೈಟ್‌ 1,200 mAh Li-ion ಬ್ಯಾಟರಿ ಹೊಂದಿದೆ.

ಬೆಲೆ: ಕೊಂಡುಕೊಳ್ಳೊ ವಿಚಾರಕ್ಕೆ ಬಂದರೆ A87 ನಿಂಜಾ 4 ಕೇವಲ 5,999 ರೂ. ಗಳಿಗೆ ಲಭ್ಯವಿದ್ದು, ಗ್ಯಾಲಾಕ್ಸಿ Y ಡ್ಯುಯೊಸ್‌ ಲೈಟ್‌ ಕೊಂಚ ದುಬಾರಿಯಾಗಿದ್ದು 6,990 ರೂ. ಬೆಲೆಗೆ ಲಭ್ಯವಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot