TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಈ ವರ್ಷದ HMD ಗ್ಲೋಬಲ್ ನಲ್ಲಿ ನೋಕಿಯಾ 6.1 ಪ್ಲಸ್ ನೋಕಿಯಾದ ಅಧ್ಬುತ ಫೋನ್ ಗಳಲ್ಲಿ ಒಂದೆನಿಸಿದೆ. ಭಾರತವೂ ಸೇರಿದಂತೆ ನೋಕಿಯಾ 6.1 ಬಿಡುಗಡೆಗೊಂಡಿರುವ ಎಲ್ಲಾ ಮಾರುಕಟ್ಟೆಯಲ್ಲೂ ಕೂಡ ಪ್ರಸಿದ್ಧಿಯನ್ನು ಪಡೆದಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿ ಅಂದರೆ 15,999 ರುಪಾಯಿಗಳಲ್ಲಿ ಗ್ಲಾಸ್ ಡಿಸೈನ್ ಹೊಂದಿರುವ ಮತ್ತು ಆಕರ್ಷಣೀಯ ಹಾರ್ಡ್ ವೇರ್ ಹೊಂದಿರುವ ಫೋನ್ ಗಳಲ್ಲಿ ಇದು ಕೂಡ ಸೇರುತ್ತದೆ.
ಸದ್ಯ ಬರುವ ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ನೋಕಿಯಾ 6.1 ಪ್ಲಸ್ ಇದುವರೆಗೂ ಇಲ್ಲದ ಆಕರ್ಷಣೀಯ ಬೆಲೆಯಲ್ಲಿ ಅಂದರೆ 14,999 ರುಪಾಯಿಗಳಲ್ಲಿ ಸಿಗುತ್ತಿದೆ.
1,000 ರುಪಾಯಿಯ ಈ ರಿಯಾಯಿತಿಯು ಫ್ಲಿಪ್ ಕಾರ್ಟ್ ಸೇಲ್ ನಲ್ಲಿ ಅಕ್ಟೋಬರ್ 11 ರಿಂದ ಅನ್ವಯಿಸುತ್ತದೆ.ಅಂದರೆ ಫ್ಲಿಪ್ ಕಾರ್ಟ್ ಸೇಲಿನ 5 ದಿನಗಳ ಪೈಕಿ ಎರಡನೇ ದಿನ ಈ ಆಫರ್ ಇರುತ್ತದೆ. ಅಕ್ಟೋಬರ್ 10 ರಿಂದ 14 ರ ವರೆಗೆ ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇ ಸೇಲ್ ನಡೆಯುತ್ತದೆ.
ನೋಕಿಯಾ 6.1 ಪ್ಲಸ್ ಮತ್ತು ನೋಕಿಯಾ 5.1 ಪ್ಲಸ್ ಓಪಲ್ ಸೇಲ್ ನಲ್ಲಿ ಅಕ್ಟೋಬರ್ 11 ರಂದು ಲಭ್ಯವಾಗಲಿದೆಯಾ ಅಥವಾ ಕೆಲವೇ ಕೆಲವು ಸ್ಟಾಕ್ ಗಳು ಇವೆಯಾ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಖರೀದಿಸಬಯಸುವ ಗ್ರಾಹಕರಿಗೆ ಅಕ್ಟೋಬರ್ 11 ರಂದು ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗುತ್ತದೆ ಎಂಬುದು ಮಾತ್ರ ಖಾತ್ರಿ.
ನೋಕಿಯಾ 6.1 ಪ್ಲಸ್ :
ನೋಕಿಯಾ 6.1 ಪ್ಲಸ್ 5.8-ಇಂಚಿನ FHD+ (2280x1080) ಡಿಸ್ಪ್ಲೇಯನ್ನು ಹೊಂದಿದ್ದು 19:9 ಅನುಪಾತದಲ್ಲಿದೆ ಜೊತೆಗೆ ಡಿಸ್ಪ್ಲೇ ನಾಚ್ ಕೂಡ ಇದೆ. ಫೋನಿನಲ್ಲಿ ಗೋರಿಲ್ಲಾ ಗ್ಲಾಸ್ 3 ರಕ್ಷಣೆ ಇದ್ದು ಫೋನಿನ ಮುಂಭಾಗ ಮತ್ತು ಹಿಂಭಾಗ ಎಕಡೂ ಕೂಡ ಗ್ಲಾಸಿ ಫಿನಿಶ್ ನ್ನು ಹೊಂದಿದೆ. ಇದು ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 636 ಚಿಪ್ ಸೆಟ್ ನ್ನು ಹೊಂದಿದ್ದು 4ಜಿಬಿ RAMನ್ನು ಒಳಗೊಂಡಿದೆ. 64ಜಿಬಿ ಇಂಟರ್ನಲ್ ಸ್ಟೋರೇಜ್ ಲಭ್ಯವಾಗುತ್ತದೆ. 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶವಿದೆ.
ನೋಕಿಯಾ 6.1 ಪ್ಲಸ್ ಆಂಡ್ರಾಯ್ಡ್ ಒನ್ ಡಿವೈಸ್ ಆಗಿದ್ದು, ಸಮಯಕ್ಕೆ ಸರಿಯಾದ ಸೆಕ್ಯುರಿಟಿ ಅಪ್ ಡೇಟ್ ನ್ನು ಹೊಂದುತ್ತದೆ. ನೋಕಿಯಾ 6.1 ಪ್ಲಸ್ ಆಂಡ್ರಾಯ್ಡ್ 9 ಪೈ ಗೆ ಅಕ್ಟೋಬರ್ ನಲ್ಲಿ ಅಪ್ ಡೇಟ್ ಆಗಲಿದೆ ಎಂದು ಕೂಡ ತಿಳಿದುಬಂದಿದೆ.
ನೋಕಿಯಾ 5.1 ಪ್ಲಸ್ :
ನೋಕಿಯಾ 5.1 ಪ್ಲಸ್ 500 ರೂಪಾಯಿಯ ರಿಯಾಯಿತಿ ಬೆಲೆಯಲ್ಲಿ ಫ್ಲಿಪ್ ಕಾರ್ಟ್ ಸೇಲ್ ನಲ್ಲಿ ಸಿಗಲಿದೆ. ಈ ಬಜೆಟ್ ನೋಕಿಯಾ ಫೋನ್ 10,499 ರೂಪಾಯಿಗೆ ಅಕ್ಟೋಬರ್ 11 ರಂದು ಸಿಗುತ್ತದೆ. ಅಂದರೆ ಅದರ ನೈಜ ಎಂಆರ್ ಪಿ ಬೆಲೆ 10,999 ರುಪಾಯಿಗಿಂತ 500 ರೂಪಾಯಿ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ. ನೋಕಿಯಾ 6.1 ರಂತೆ ಇದರಲ್ಲೂ ಎಲ್ಲಾ ರೀತಿಯ ಗ್ಲಾಸ್ ಡಿಸೈನ್ ಗಳಿದೆ. ಇದು 5.8-ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದ್ದು 1.8GHz ಆಕ್ಟಾ-ಕೋರ್ ಹೆಲಿಯೋ P60 ಚಿಪ ಸೆಟ್ ನ್ನು ಒಳಗೊಂಡಿದೆ. ಇದರಲ್ಲಿ 3GB RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದೆ.ಈ ಫೋನಿನಲ್ಲಿ ಡುಯಲ್ ಕ್ಯಾಮರಾಗಳಿದ್ದು 13MP + 5MP ಕಾನ್ಫಿಗರೇಷನ್ ನ್ನು ಇದು ಹೊಂದಿದೆ. 3,060mAh ಬ್ಯಾಟರಿಯನ್ನು ಒಳಗೊಂಡಿರುವ ಈ ಫೋನ್ ನೋಕಿಯಾದ ಬೆಸ್ಟ್ ಫೋನ್ ಗಳಲ್ಲಿ ಒಂದೆನಿಸಿದೆ.