ಆಶಾ 308 Vs ಗ್ಯಾಲಾಕ್ಸಿ ವೈ ಡ್ಯುಯೋಸ್‌ ಲೈಟ್‌

By Vijeth Kumar Dn
|

ಆಶಾ 308 Vs ಗ್ಯಾಲಾಕ್ಸಿ ವೈ ಡ್ಯುಯೋಸ್‌ ಲೈಟ್‌
ಸ್ಯಾಮ್ಸಂಗ್‌, ನೋಕಿಯಾ, ಮೈಕ್ರೋಮ್ಯಾಕ್ಸ್‌, ಕಾರ್ಬನ್‌ ಸೇರಿದಂತೆ ಮೊದಲಾದ ಮೊಬೈಲ್‌ ತಯಾರಿಕಾ ಸಂಸ್ಥೆಗಳ ಸ್ಮಾರ್ಟ್‌ಫೋನ್ಸ್‌ಳು ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಯಶಸ್ಸನ್ನು ಗಳಿಸಿವೆ ಅದರಲ್ಲಿಯೂ ಡ್ಯುಯೆಲ್‌ ಸಿಮ್‌ ಸ್ಮಾರ್ಟ್‌ಫೋನ್ಸ್‌ ಮಾದರಿಯ ನೂತನ ಟ್ರೆಂಡ್‌ ಅನ್ನೇ ಹುಟ್ಟು ಹಾಕಿವೆ. ಅದರಲ್ಲಿಯೂ ಕೆಲ ಸ್ಮಾರ್ಟ್‌ಫೋನ್ಸ್‌ ತಯಾರಕರುಗಳು ಡ್ಯುಯೆಲ್‌ ಸಿಮ್‌ ಜೊತೆಗೆ ಟಚ್‌ಸ್ಕ್ರೀನ್‌ ಸೌಲಭ್ಯವನ್ನು ನೀಡುವುದರ ಜೊತೆಗೆ ಗ್ರಾಹಕನ್ನು ಆಕರ್ಶಿಸುತ್ತಿದ್ದಾರೆ.

ಇದೇ ಹಾದಿಯಲ್ಲಿ ನೋಕಿಯಾ ಸಂಸ್ಥೆಯು ಸೋಮವಾರ ತನ್ನಯ ನೂತನ ಸ್ಮಾರ್ಟ್‌ಫೋನ್‌ ಆದಂತಹ ಆಶಾ 308 ಟಚ್‌ಸ್ಕ್ರೀನ್‌ ಸ್ಮಾರ್ಟ್‌ ಫೋನ್‌ ಅನ್ನು ರೂ.5,685 ಬೆಲೆಗೆ ಆಕರ್ಶಕ ಪ್ರೀ ಲೋಡೆಡ್‌ ಆಪ್ಸ್‌ ನೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದೆ. ಅಂದಹಾಗೆ ಕೆಲದಿನಗಳ ಹಿಂದೆಯಷ್ಟೇ ಸ್ಯಾಮ್ಸಂಗ್‌ ಸಂಸ್ಥೆಯು ಕೂಡ ತನ್ನಯ ನೂತನ ಗ್ಯಾಲಾಕ್ಸಿ ವೈ ಡ್ಯೂಯೋಸ್‌ ಲೈಟ್‌ ಸ್ಮಾರ್ಟ್‌ಫೋನ್ಸ್‌ ಅನ್ನು 6,790 ರೂ.ಬೆಲೆಯಲ್ಲಿ ಪರಿಚಯಿಸಿದ್ದು, ಆಶಾ 308 ಸ್ಮಾರ್ಟ್‌ಫೋನ್‌ಗೆ ಪ್ರಬಲ ಸ್ಪರ್ಧಿ ಎಂದೆನಿಸಿಕೊಂಡಿದೆ.

ಅಂದಹಾಗೆ ನೀವೂ ಕೂಡ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಈ ಎರಡೂ ಸ್ಮಾರ್ಟ್‌ಫೋನ್ಸ್‌ಗಳಲ್ಲಿ ಯಾವುದನ್ನಾದರೂ ಖರೀದಿಸ ಬೇಕೆಂದಿದ್ದಲ್ಲಿ ಅದಕ್ಕೂ ಮುನ್ನ ಇವೆರಡರ ನಡುವಿನ ಹೋಲಿಕೆಯನ್ನು ಒಮ್ಮೆ ಗಮನಿಸಿ, ನಂತರ ನಿಮ್ಮ ಆಯ್ಕೆಯ ಸ್ಮಾರ್ಟ್‌ಫೋನ್ ಯಾವುದೆಂದು ನೀವೇ ಆಯ್ಕೆ ಮಾಡಿ ಖರೀದಿಸಿ ಕೋಳ್ಳಿ.

ಗಾತ್ರ ಹಾಗೂ ಸುತ್ತಳತೆ : ಆಶಾ 308 ಸ್ಮಾರ್ಟ್‌ಫೋನ್‌ 109.9 x 54.0 x 13.0 mm ಸುತ್ತಳತೆಯೊಂದಿಗೆ 104 ಗ್ರಾಂ ತೂಕವಿದ್ದರೆ, ಗ್ಯಾಲಾಕ್ಸಿ ಗ್ಯಾಲಾಕ್ಸಿ ವೈ ಡ್ಯುಯೋಸ್‌ ಲೈಟ್‌ ಫೋನ್‌ನಲ್ಲಿ 103.5 x 58 x 12 mm ಸುತ್ತಳತೆಯೊಂದಿಗೆ 103 ಗ್ರಾಂ ತೂಕವಿದೆ.

ದರ್ಶಕ: ಆಶಾ 308 ನಲ್ಲಿ 3 ಇಂಚಿನ ಮಲ್ಟಿ ಪಾಯಿಂಟ್‌ ಟಚ್‌ಸ್ಕ್ರೀನ್‌ ಹಾಗೂ 400 x 240 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದೆ. ಆದರೆ ಗ್ಯಾಲಾಕ್ಸಿ ವೈ ಡ್ಯುಯೋಸ್‌ ಲೈಟ್‌ನಲ್ಲಿ ಕೊಂಚ ಕಡಿಮೆಯ ಅಂದರೆ 2.8 ಇಂಚಿನ ಟಚ್‌ಸ್ಕ್ರೀನ್‌ ದರ್ಶಕ ದೊಂದಿಗೆ 240 x 320 ಪಿಕ್ಸೆಲ್ಸ್‌ ಹೊಂದಿದೆ..

ಪ್ರೊಸೆಸರ್‌: ಈ ವಿಚಾರದಲ್ಲಿ ಎರಡೂ ಸ್ಮಾರ್ಟ್‌ಫೋನ್‌ಗಳು ಕೊಂಚ ಬರಾಬರಿಯ ಸಾಮರ್ತ್ಯವನ್ನೇ ಹೊಂದಿದೆ, ನೋಕಿಯಾ ಆಶಾ 800MHz ಪ್ರೊಸೆಸರ್‌ ಹೊಂದಿದ್ದರೆ ಗ್ಯಾಲಾಕ್ಸಿ ವೈ ಡ್ಯುಯೋಸ್‌ ಲೈಟ್‌ ನಲ್ಲಿ 832MHz ಪ್ರೊಸೆಸರ್‌ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಆಶಾ 308 ನೋಕಿಯಾ ಸೀರೀಸ್‌ 40 ಆಪರೇಟಿಂಗ್‌ ಸಿಸ್ಟಂ ಹೊಂದಿದ್ದರೆ, ಗ್ಯಾಲಾಕ್ಸಿ ವೈ ಡ್ಯುಯೋಸ್‌ ಲೈಟ್ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 2.3.5 ಜಿಂಜರ್ಬೆಡ್‌ ಆಪರೇಟಿಂಗ್‌ ಸಿಸ್ಟಂ ಹೊಂದಿದೆ.

ಕ್ಯಾಮೆರಾ: ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ 2MP ನ ಹಿಂಬದಿಯ ಕ್ಯಾಮೆರಾ ಹೊಂದಿವೆ. ಅಂದಹಾಗೆ ಎರಡೂ ಸ್ಮಾರ್ಟ್‌ಫೋನ್ಸ್‌ಗಳಲ್ಲಿ ವಿಡಿಯೋ ಕರೆಗಾಗಿ ಮುಂಬದಿಯ ಕ್ಯಾಮೆರಾಗಳಿಲ್ಲ.

ಮೆಮೊರಿ: ಆಶಾ 308 ನಲ್ಲಿ 20MB ಆಂತರಿಕ ಮೆಮೊರಿ ಹೊಮದಿದ್ದರೆ ಮತ್ತೊಂದೆಡೆ ಗ್ಯಾಲಾಕ್ಸಿ ವೈಡ್ಯುಯೋಸ್‌ ಲೈಟ್‌ನಲ್ಲಿ 2GB ಆಂತರಿಕ ಸ್ಟೋರೇಜ್‌ ಹೊಂದಿದೆ. ಅಂದಹಾಗೆ ಎರಡೂ ಸ್ಮಾರ್ಟ್‌ಫೋನ್ಸ್‌ಗಳಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್‌ ಸೌಲಭ್ಯವಿದ್ದು 32GB ವರೆಗೂ ಮೆಮೊರಿ ವಿಸ್ತರಿಸಿ ಕೊಳ್ಳ ಬಹುದಾಗಿದೆ.

ಕನೆಕ್ಟಿವಿಟಿ: ಆಶಾ 308 ನಲ್ಲಿ ಬ್ಲೂಟೂತ್‌ 3.0 ಹಾಗೂ ಮೈಕ್ರೋ USB 2.0 ಫೀಚರ್ಸ್‌ ಹೊಂದಿದ್ದರೆ. ಮತ್ತೊಂದೆಡೆ ಗ್ಯಾಲಾಕ್ಸಿ ವೈ ಡ್ಯುಯೋಸ್‌ ಲೈಟ್‌ನಲ್ಲಿ ಮೈಕ್ರೋ USB 2.0, Wi-Fi , 3G ಹಾಗೂ ಬ್ಲೂಟೂತ್‌ ಹೊಂದಿದೆ.

ಬ್ಯಾಟರಿ: ಆಶಾ 308 ನಲ್ಲಿ 1,110 mAh BL-4U ಬ್ಯಾಟರಿ ಇದ್ದು 6 ಗಂಟೆಗಳ ಟಾಕ್‌ ಟೈಮ್‌ ಹಾಗೂ 510 ಗಂಟೆಗಳ ಸ್ಟ್ಯಾಂಡ್‌ ಬೈ ನೀಡುತ್ತದೆ. ಹಾಗೂ ಗ್ಯಾಲಾಕ್ಸಿ ವೈ ಡ್ಯುಯೋಸ್‌ ಲೈಟ್‌ನಲ್ಲಿ 1,200 mAh Li-ion ಬ್ಯಾಟರಿ ಇದ್ದು ಕ್ಷಮತೆಯ ಕುರಿತಾಗಿ ಮಾಹಿತಿ ಲಭ್ಯವಿಲ್ಲ.

ಬೆಲೆ: ಖರೀದಿಸುವುದಾದರೆ ಆಶಾ 308 ರೂ. 5,685 ದರದಲ್ಲಿ ಲಭ್ಯವಿದ್ದರೆ ಗ್ಯಾಲಾಕ್ಸಿ ವೈ ಡ್ಯೂಯೋಸ್‌ ಲೈಟ್‌ ರೂ. 6,790 ಬೆಲೆಯಲ್ಲಿ ಪಟೆಯಬಹುದಾಗಿದೆ.

Read In English...

5,000 ಬೆಯಲ್ಲಿನ ಟಾಪ್‌ 5 ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ಸ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X