ಫೆಬ್ರವರಿ 26ಕ್ಕೆ ನೋಕಿಯಾದ ಮತ್ತೊಂದು ಸ್ಮಾರ್ಟ್‌ಪೋನ್‌ ಲಾಂಚ್‌

Written By:

ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ನೋಕಿಯಾ ಮತ್ತೊಂದು ಸ್ಮಾರ್ಟ್‌ಪೋನ್‌ ಬಿಡುಗಡೆಗೆ ಸದ್ದಿಲ್ಲದೇ ಸಿದ್ದತೆ ನಡೆಸಿದೆ. ಈಗಾಗಲೇ ಆಂಭಿಕ ಬೆಲೆಯ ಸ್ಮಾರ್ಟ್‌ಪೋನ್‌ ವೊಂದನ್ನು ಬಿಡುಗಡೆ ಮಾಡಿರುವ ನೋಕಿಯಾ ಈ ಬಾರಿ ಟಾಪ್ ಎಂಡ್ ಪೋನನ್ನು ಪರಿಚಯಿಸಲು ಮುಂದಾಗಿದೆ.

ಫೆಬ್ರವರಿ 26ಕ್ಕೆ ನೋಕಿಯಾದ ಮತ್ತೊಂದು ಸ್ಮಾರ್ಟ್‌ಪೋನ್‌ ಲಾಂಚ್‌

ಓದಿರಿ: ಏಪ್ರೀಲ್‌ನಲ್ಲಿ ಜಿಯೋ ಡಿಟಿಹೆಚ್ ಲಾಂಚ್: ಮೊದಲ ಮೂರು ತಿಂಗಳೂ ಉಚಿತ, ನಂತರ ಕೇವಲ 99 ರೂ.ಮಾತ್ರ...!

ಇದೇ ತಿಂಗಳು ಅಂದರೇ ಫೆಬ್ರವರಿ 26ರಂದು ನಡೆಯಲಿರುವ 'ಮೊಬೈಲ್ ವರ್ಡ್‌ ಕಾಂಗ್ರೆಸ್‌' ಕಾರ್ಯಕ್ರಮದಲ್ಲಿ 'ನೋಕಿಯಾ P1' ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಲಿದ್ದು, ಈ ಮೂಲಕ ತನ್ನ ಅಭಿಮಾನಿಗಳಿಗೆ ಹೊಸದೊಂದು ಟಾಪ್‌ ಎಂಡ್ ಪೋನ್ನು ನೀಡುತ್ತಿದೆ. ಈ ಪೋನು ಐಪೋನ್ 7, ಗೂಗಲ್ ಪಿಕ್ಸಲ್, ಸ್ಯಾಮ್‌ಸಂಗ್ ಎಡ್ಜ್ 7 ಪೋನುಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ ಎನ್ನುವ ಮಾತುಗಳು ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಈ ಪೋನಿನ ವಿಶೇಷತೆಗಳೇನು, ಬೆಲೆ ಎಷ್ಟು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಮುಂದಿದೆ.

ಓದಿರಿ: ಜಿಯೋ APN ನಂಬರ್ ಜೇಂಜ್ ಮಾಡಿ.... ಆಮೇಲೆ ಸ್ಪೀಡ್ ನೋಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟಾಪ್‌ಎಂಡ್ ವಿನ್ಯಾಸ:

ಟಾಪ್‌ಎಂಡ್ ವಿನ್ಯಾಸ:

ನೋಕಿಯಾ P1 ಪೋನಿನ ವಿನ್ಯಾಸವೂ ಅತ್ಯಂತ ಸುಂದರವಾಗಿದ್ದು, ಟಾಪ್‌ ಎಂಡ್ ಪೋನಿಗಳ ಗುಣಮಟ್ಟವನ್ನು ಹೊಂದಿದೆ. ಈ ಪೋನಿನಲ್ಲಿ ಹೋಮ್ ಬಟನ್ ಇದ್ದು, ಮೇಟಾಲಿಕ್ ಬಾಡಿ ಜೊತೆಗೆ ಮುಂಭಾಗದಲ್ಲಿಯೇ ಫಿಂಗರ್ ಪ್ರಿಂಚ್ ಸ್ಕ್ಯಾನರ್ ಸಹ ಇದೆ. ಕೈನಲ್ಲಿ ಹಿಡಿದುಕೊಳ್ಳಲು ಸೂಕ್ತವಾಗಿದ್ದು, ರೋಸ್ ಗೋಲ್ಡ್, ಬ್ಲ್ಯಾಕ್ ಮತ್ತು ಸಿಲ್ವರ್ ಬಣ್ಣಗಳಲ್ಲಿ ಈ ಲಭ್ಯವಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಈ ಪೋನು ಧೂಳು ಮತ್ತು ಜಲ ನಿರೋಧಕವನ್ನು ಹೊಂದಿದ್ದು, ನೀರಿನಲ್ಲಿ ಬಿದ್ದು ಹಾಳಾಗಲಿದೆ, ಇಲ್ಲವೇ ಧೂಳು ತುಂಬಿಕೊಳ್ಳಲಿದೆ ಎನ್ನುವ ಯಾವುದೇ ಭಯವಿಲ್ಲ.

ವೇಗದ ಕಾರ್ಯಚರಣೆ:

ವೇಗದ ಕಾರ್ಯಚರಣೆ:

ನೋಕಿಯಾ P1 ಪೋನನ್ನು ವೇಗದ ಕಾರ್ಯಚರಣೆಗಾಗಿಯೇ ವಿನ್ಯಾಸಗೊಳಿಸಲಾಗಿದ್ದು, 5.3 ಇಂಚಿನ ಪರದೆ ಈ ಪೋನಿನಲ್ಲಿದೆ. FHD ಇಲ್ಲಬೇ QHD ಗುಣಮಟ್ಟವನ್ನು ಈ ಪರದೆ ಹೊಂದಿರಲಿದೆ ಎನ್ನಲಾಗಿದೆ. ಪರದೆಯ ಸುರಕ್ಷತೆಗಾಗಿ ಗೂರಿಲ್ಲ ಗ್ಲಾಸ್ 5 ಅನ್ನು ಅಳವಡಿಸಲಾಗಿದ್ದು, ಹೊಚ್ಚ ಹೊಸ ಸ್ನಾಪ್‌ಡ್ರಾಗನ್ 835 ಪ್ರೋಸರ್ ಸೇರಿದಂತೆ 6GB RAM ಮತ್ತು 128 GB/256GB ಇಂಟರ್ನಲ್ ಮೆಮೋರಿ ಈ ಪೋನಿನಲ್ಲಿರಲಿದೆ.

ಗುಣಮಟ್ಟದ ಕ್ಯಾಮೆರಾಗಳು:

ಗುಣಮಟ್ಟದ ಕ್ಯಾಮೆರಾಗಳು:

ಈ ಹಿಂದಿನಂತೆ ನೋಕಿಯಾ ತನ್ನ ಸ್ಮಾರ್ಟ್‌ಪೋನ್‌ಗಳಲ್ಲಿ ಗುಣಮಟ್ಟದ ಕ್ಯಾಮೆರಾವನ್ನು ಅಳವಡಿಸುವುದನ್ನು ಮರೆತಿಲ್ಲ. ನೋಕಿಯಾ P1 ಸ್ಮಾರ್ಟ್‌ಪೋನು ಹಿಂಭಾಗದಲ್ಲಿ 22.3MP ಕ್ಯಾಮೆರಾವನ್ನು ಹೊಂದಿದ್ದು, ಅತ್ಯುತ್ತಮವಾದ ಪೋಟೋಗಳನ್ನು ಕ್ಲಿಕಿಸಲು ಈ ಪೋನು ಹೇಳಿಮಾಡಿಸಿದಂತಿದೆ. ಅಲ್ಲಧೇ ದೀರ್ಘಕಾಲದ ಬ್ಯಾಟರಿ ಬಾಳಿಕೆಗಾಗಿ ಈ ಪೋನಿನಲ್ಲಿ 3500mAH ಬ್ಯಾಟರಿಯನ್ನು ಅವಳಡಿಸಲಾಗಿದೆ.

ನೋಕಿಯಾ P1 ಬೆಲೆ:

ನೋಕಿಯಾ P1 ಬೆಲೆ:

ಫೆಬ್ರವರಿ 26ರಂದು ಬಿಡುಗಡೆಯಾಗಲಿರುವ ನೋಕಿಯಾ P1 ಸ್ಮಾರ್ಟ್‌ಪೋನ್‌ ಟಾಪ್‌ ಎಂಡ್ ಸರಣಿಯದ್ದಾಗಿದ್ದು, ಎರಡು ವಿಧದಲ್ಲಿ ಲಭ್ಯವಿರಲಿದೆ. 128GB ಸಾಮಾರ್ಥ್ಯದ ಪೋನಿನ ಬೆಲೆ $800 (ಸುಮಾರು 54,500 ರೂ>) ಮತ್ತು 256 GB ಸಾಮಾರ್ಥ್ಯದ ಪೋನಿನ ಬೆಲೆ $950( ಸುಮಾರು 64,500 ರೂ.) ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
the Nokia P1 to be unveiled at the Mobile World Congress 2017 at an event slated to happen on February 26. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot