ಬಂದಿದೆ ಮತ್ತೊಂದು ನೋಚ್ ಸ್ಮಾರ್ಟ್ ಫೋನ್: ಫುಲ್ ವ್ಯೂವ್ ಡಿಸ್ ಪ್ಲೇಯೊಂದಿಗೆ...!

|

ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ಒಪ್ಪೋ ಕಂಪನಿಯೂ ಸಾಕಷ್ಟು ಸ್ಮಾರ್ಟ್ ಫೋನ್ ಗಳನ್ನು ಒಂದರ ಹಿಂದೆ ಒಂದರಂತೆ ಲಾಂಚ್ ಮಾಡುತ್ತಿದೆ. ಇದೇ ಮಾದರಿಯಲ್ಲಿ ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ವೊಂದನ್ನು ಸದ್ದಿಲ್ಲದೇ ಲಾಂಚ್ ಮಾಡಲು ಸಿದ್ಧತೆ ನಡೆಸಿದ್ದು, ಈ ಕುರಿತಂತೆ ಮಾಹಿತಿಯೂ ಮುಂದಿನಂತೆ ಇದೆ. ಮಾರುಕಟ್ಟೆಯಲ್ಲಿ ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಗಳ ಬೇಡಿಕೆಯೂ ಹೆಚ್ಚಾಗಿರುವುದೇ ಈ ಸ್ಮಾರ್ಟ್ ಫೋನ್ ಲಾಂಚ್ ಗೆ ಕಾರಣ ಎನ್ನಲಾಗಿದೆ.

ಬಂದಿದೆ ಮತ್ತೊಂದು ನೋಚ್ ಸ್ಮಾರ್ಟ್ ಫೋನ್: ಫುಲ್ ವ್ಯೂವ್ ಡಿಸ್ ಪ್ಲೇಯೊಂದಿಗೆ...!

ಮಾರುಕಟ್ಟೆಯಲ್ಲಿ ಎಲ್ಲಾ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳು ಒಂದರ ಹಿಂದೆ ಒಂದರಂತೆ ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡುವ ಪ್ರಯತ್ನಕ್ಕೆ ಮುಂದಾಗಿವೆ. ಇದೇ ಸಾಲಿನಲ್ಲಿ ಸಾಗಿರುವ ಒಪ್ಪೋ ನಾಚ್ ಡಿಸ್ ಪ್ಲೇ ಹಾಗೂ ಫುಲ್ ಸ್ಕ್ರಿನ್ ಡಿಸ್ ಪ್ಲೇ ಹೊಂದಿರುವ ಸ್ಮಾರ್ಟ್ ಫೋನ್ ವೊಂದನ್ನು ಲಾಂಚ್ ಮಾಡಲು ಮುಂದಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ಎಲ್ಲಾ ವಿಶೇಷತೆಗಳು ಇದರಲ್ಲಿದೆ ಎನ್ನಬಹುದಾಗಿದೆ.

ಒಪ್ಪೋ A5 ಸ್ಮಾರ್ಟ್ ಫೋನ್:

ಒಪ್ಪೋ A5 ಸ್ಮಾರ್ಟ್ ಫೋನ್:

ಒಪ್ಪೋ ಹೊಸದಾಗಿ ಲಾಂಚ್ ಮಾಡಲು ಮುಂದಾಗಿರುವ ಒಪ್ಪೋ A5 ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸತನಗಳಿಗೆ ಸಾಕ್ಷಿಯಾಗಲಿದೆ. ಇದರಲ್ಲಿರುವ ಎಲ್ಲಾ ಆಯ್ಕೆಗಳು ಬಳಕೆದಾರರಿಗೆ ಹೊಸ ಆಯ್ಕೆಯನ್ನು ನೀಡಲಿದೆ. ಇದಲ್ಲದೇ ಹೊಸ ಮಾದರಿಯ ಆಯ್ಕೆಗಳು ಇದರಲ್ಲಿದೆ. ಇದಕ್ಕಾಗಿ ಬೆಸ್ಟ್ ಮಿಡ್ ರೈನ್ಜ್ ಸ್ಮಾರ್ಟ್ ಫೋನ್ ಎನ್ನುವ ಸ್ಮಾರ್ಟ್ ಫೋನ್ ಎನ್ನಿಸಿಕೊಳ್ಳಲಿದೆ.

ಫುಲ್ ವ್ಯೂವ್ ಡಿಸ್ ಪ್ಲೇ:

ಫುಲ್ ವ್ಯೂವ್ ಡಿಸ್ ಪ್ಲೇ:

6.2 ಇಂಚಿನ ಡಿಸ್ ಪ್ಲೇಯನ್ನು ಒಪ್ಪೋ A5 ಸ್ಮಾರ್ಟ್ ಫೋನ್ ನಲ್ಲಿ ಕಾಣಬಹುದಾಗಿದ್ದು, ಇದು HD + ಗುಣಮಟ್ಟವನ್ನು ಹೊಂದಿದ್ದು, ಜೊತೆಗೆ ನಾಚ್ ಡಿಸ್ ಪ್ಲೇ ವಿನ್ಯಾಸ ಸಹ ಇದರಲ್ಲಿದೆ. ಇದಲ್ಲದೇ ಇದು 19:9 ಅನುಪಾತದ ಡಿಸ್ ಪ್ಲೇಯಾಗಿದ್ದು, ಫೂಲ್ ವ್ಯೂವ್ ಡಿಸ್ ಪ್ಲೇ ವಿನ್ಯಾಸವನ್ನು ಹೊಂದಿದ್ದು, ಗೇಮ್ ಆಡಲು ಮತ್ತು ವಿಡಿಯೋ ನೋಡುವ ವಿನ್ಯಾಸವು ಇದರಲ್ಲಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಒಪ್ಪೋ A5 ಸ್ಮಾರ್ಟ್ ಫೋನ್ ನಿನಲ್ಲಿ ವೇಗದ ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದರಲ್ಲಿ 4 GB RAM ನೊಂದಿಗೆ ಸ್ನಾಪ್ ಡ್ರಾಗನ್ 450 ಪ್ರೋಸೆಸರ್ ಅನ್ನು ನೀಡಲಾಗಿದ್ದು, ಇದರೊಂದಿಗೆ 64GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಇದಲ್ಲದೇ 256 GB ವೆರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಒಪ್ಪೋ A5 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, 13 MP + 2 MP ಕ್ಯಾಮೆರಾವನ್ನು ಹಿಂಭಾಗದಲ್ಲಿ ನೀಡಲಾಗಿದ್ದು, ಉತ್ತಮವಾದ ಫೋಟೋಗಳನ್ನು ಸೆರೆಹಿಡಿಯಲು ಇದು ಸಹಾಯವನ್ನು ಮಾಡಲಿದೆ. ಇದರೊಂದಿಗೆ ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ನೀಡಲಾಗಿದೆ. ಇದು ಹೊಸ ಆಯ್ಕೆಗಳನ್ನು ಹೊಂದಿದೆ.

ಫೇಷಿಯಲ್ ರೆಕಗ್ನಿಷನ್:

ಫೇಷಿಯಲ್ ರೆಕಗ್ನಿಷನ್:

ಇದಲ್ಲದೇ ಒಪ್ಪೋ A5 ಸ್ಮಾರ್ಟ್ ಫೋನಿನಲ್ಲಿ ಫೇಷಿಯಲ್ ರೆಕಗ್ನೀಷನ್ ಆಯ್ಕೆಯನ್ನು ನೀಡಲಾಗಿದ್ದು, ಇದಕ್ಕಾಗಿಯೇ ಮುಂಭಾಗದಲ್ಲಿ ನೋಚ್ ಅನ್ನು ನೀಡಲಾಗಿದ್ದು, ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಾಗಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 8.1 ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಕಲರ್ OS ಅನ್ನು ಕಾಣಬಹುದಾಗಿದೆ.

Best Mobiles in India

English summary
oppo a5 with 6.2-inch 19:9 fullview display, dual rear cameras, android 8.1, 4230mah battery announced. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X