Subscribe to Gizbot

9,990 ರೂ.ಗೆ 'ಎಐ ಸೆಲ್ಫಿ' ಆಧಾರಿತ ಒಪ್ಪೊ ಸ್ಮಾರ್ಟ್‌ಫೋನ್ ಬಿಡುಗಡೆ!!

Written By:

ಭಾರತದಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಮಾರಾಟವನ್ನು ಎದುರುನೋಡುತ್ತಿದ್ದ ಒಪ್ಪೊ ಮೊಬೈಲ್ ಕಂಪೆನಿ ಭಾರತದಲ್ಲಿ 10,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಸೆಲ್ಫಿ ಆಧಾರಿತ ಸ್ಮಾರ್ಟ್‌ಪೊನ್ ಅನ್ನು ಬಿಡುಗಡೆ ಮಾಡಿದೆ. ಶಿಯೋಮಿ ಮತ್ತು ವಿವೋ ವೈ ಸೀರಿಸ್ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯಲು ನೂತನ ಒಪ್ಪೊ ಎ71 2018 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.!

 9,990 ರೂ.ಗೆ 'ಎಐ ಸೆಲ್ಫಿ' ಆಧಾರಿತ ಒಪ್ಪೊ ಸ್ಮಾರ್ಟ್‌ಫೋನ್ ಬಿಡುಗಡೆ!!

ಒಪ್ಪೊ ಎ71 2017 ಮಾದರಿಯ ಅಪ್‌ಡೇಟ್ ವರ್ಷನ್ ಸ್ಮಾರ್ಟ್‌ಫೋನ್ ಇದಾಗಿದ್ದು, ಅದೇ ಹೆಸರಿನಲ್ಲಿ ಮತ್ತೆ ಬಿಡುಗಡೆಯಾಗಿದೆ.! ನೂತನವಾಗಿ ಬಿಡುಗಡೆಯಾಗಿರುವ ಪೋನಿನಲ್ಲಿ ಕ್ಯಾಮೆರಾ ತಂತ್ರಜ್ಞಾನದಲ್ಲಿ ಕೃತಕ ಬುದ್ದಿಮತ್ತೆಯನ್ನು ತರಲಾಗಿದೆ.!! ಹಾಗಾದರೆ, ಇದೀಗ ಬಿಡುಗಡೆಯಾಗಿರುವ ಒಪ್ಪೊ ಎ71 2018 ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಪ್ಪೊ A71 (2018) ಕ್ಯಾಮೆರಾ ಹೇಗಿದೆ?

ಒಪ್ಪೊ A71 (2018) ಕ್ಯಾಮೆರಾ ಹೇಗಿದೆ?

ಒಪ್ಪೊ A71 (2018) ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, ಎಫ್,2.2 ಅಪಾರ್ಚರ್, ಎಲ್‌ಇಡಿ ಫ್ಲಾಶ್ ಆಟೊಫೋಕಸ್ ಜೊತೆಗೆ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಹೊಂದಿದೆ. ಇನ್ನು 5MP ಸೆಲ್ಫಿ ಕ್ಯಾಮೆರಾ, ಎಫ್,2.4 ಅಪಾರ್ಚರ್, ಬೊಕ್ಕೆ ಎಫೆಕ್ಟ್, ಎಲ್‌ಇಡಿ ಫ್ಲಾಶ್, ಆಟೊಫೋಕಸ್ ತಂತ್ರಜ್ಞಾನವನ್ನು ಹೊಂದಿದೆ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಒಪ್ಪೊ ಎ71 2018 ಸ್ಮಾರ್ಟ್‌ಫೋನ್ 5.20 ಇಂಚ್ (720x1280 pixels) ಟಿಎಫ್‌ಟಿ ಡಿಸ್‌ಪ್ಲೇಯನ್ನು ಹೊಂದಿದೆ. ಸ್ಮಾರ್ಟ್‌ಫೋನಿನಲ್ಲಿ ಬೆಜೆಲ್‌ಗಳು ಕೂಡ ಅಪ್‌ಡೇಟ್ ಆಗದೆ ಹಾಗೆಯೇ ಉಳಿದಿವೆ ಎನ್ನಬಹುದಾಗಿದ್ದು, ಒಪ್ಪೊ ಎ71 2018 ಸ್ಮಾರ್ಟ್‌ಫೋನ್ ಒಪ್ಪೊ ಎ71 2017 ಮಾದರಿಯ ವಿನ್ಯಾಸದಲ್ಲಿಯೇ ಹೊರಬಂದಿದೆ !!

ಪ್ರೊಸೆಸರ್ ಮತ್ತು ಒಎಸ್!!

ಪ್ರೊಸೆಸರ್ ಮತ್ತು ಒಎಸ್!!

ಒಪ್ಪೊ A71 (2018) ಸಣ್ಣ ನವೀಕರಣಗಳೊಂದಿಗೆ ಬಂದರೂ ಸಹ, ಕಳೆದ ವರ್ಷದ ಮಾದರಿಗೆ ಹೋಲಿಸಿದರೆ 1.8GHz ಸ್ನಾಪ್ಡ್ರಾಗನ್ 450 ಪ್ರೊಸೆಸರ್ ಅನ್ನು ಫೋನಿನಲ್ಲಿ ನೀಡಲಾಗಿದೆ. ಸ್ಮಾರ್ಟ್‌ಪೋನ್ ಆಂಡ್ರಾಯ್ಡ್ ನ್ಯೂಗಾದಲ್ಲಿ ಕಾರ್ಯನಿರ್ವಹಣೆ ನೀಡಲಿದ್ದು, ಓಡಿಯೋ ಅಪ್‌ಡೇಟ್ ಬಗ್ಗೆ ಯಾವುದೇ ಮಾಹಿತಿಯನ್ನು ಒಪ್ಪೊ ನೀಡಿಲ್ಲ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

3GB RAM ಮತ್ತು 16GB ಮೆಮೊರಿ ವೆರಿಯಂಟ್‌ನಲ್ಲಿ ಒಪ್ಪೊ ಎ71 2018 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಸ್ಮಾರ್ಟ್‌ಪೋನ್ ಮೆಮೊರಿಯನ್ನು 256GB ವರೆಗೆ ಹೆಚ್ಚಿಸಬಹುದಾದ ಆಯ್ಕೆ ಸ್ಮಾರ್ಟ್‌ಪೋನಿನಲ್ಲಿರುವುದು ವಿಶೇಷ ಎಂದು ಹೇಳಬಹುದು.!!

ಇತೆರೆ ಫೀಚರ್ಸ್‌ಗಳೇನು?

ಇತೆರೆ ಫೀಚರ್ಸ್‌ಗಳೇನು?

3000mAh ಬ್ಯಾಟರಿ ಶಕ್ತಿಯನ್ನು ಹೊಂದಿರುವ ಒಪ್ಪೊ ಎ71 ಡ್ಯುಯಲ್ ಸಿಮ್, 4G ವೋಲ್ಟ್, ಬ್ಲೂಟೂತ್ 4.1, ಒಟಿಜಿ ಸಪೋರ್ಟ್, 3.5mm ಆಡಿಯೋ ಪೋರ್ಟ್ ಸೇರಿ ಬಹುತೇಕ ಎಲ್ಲಾ ಫೀಚರ್ಸ್ ಹೊಂದಿದೆ. ಆದರೆ, ಸ್ಮಾರ್ಟ್‌ಪೋನಿನಲ್ಲಿ ಫಿಂಗರ್ ಪ್ರಿಂಟ್ ಆಯ್ಕೆ ಹೊಂದಿಲ್ಲದೆ ಇರುವುದು ಫೋನಿನ ಮಿತಿ ಎನ್ನಬಹುದು.!

ಸ್ಮಾರ್ಟ್‌ಫೋನ್ ಖರೀದಿಸಬಹುದೇ?

ಸ್ಮಾರ್ಟ್‌ಫೋನ್ ಖರೀದಿಸಬಹುದೇ?

ಬ್ಲ್ಯಾಕ್ ಮತ್ತು ಗೋಲ್ಡ್ ಬಣ್ಣಗಳಲ್ಲಿ ಬಿಡುಗಡೆಯಾಗಿರುವ ಒಪ್ಪೊ ಎ71 2018 ಸ್ಮಾರ್ಟ್‌ಫೋನ್ 9,990 ರೂಪಾಯಿಗಳಿಗೆ ಭಾರತದ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ.! ಕ್ಯಾಮೆರಾ ಪ್ರಿಯರಿಗೆ ಮಾತ್ರ ಫೋನ್ ಹೇಳಿ ಮಾಡಿಸಿದಂತಿದ್ದು, ನಾವು ನೀಡುವ ಹಣಕ್ಕೆ ಸಾಮಾನ್ಯ ತೃಪ್ತಿದಾಯಕ ಸ್ಮಾರ್ಟ್‌ಫೋನ್ ಇದು ಎನ್ನಬಹುದು.!!

ಓದಿರಿ:ಮಕ್ಕಳು ಸ್ಮಾರ್ಟ್‌ಫೋನ್ ಮುಟ್ಟಿದರೆ ಸಾಕು ಅದರ ಕಾರ್ಯಗಳು ನಿಷ್ಕ್ರಿಯವಾಗುತ್ತವೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
things you need to know about OPPO A71 AI selfie camera phone. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot