'ಒಪ್ಪೊ ಎಫ್ 7' ಕೃತಕ ಬುದ್ದಿಮತ್ತೆ ಕ್ಯಾಮೆರಾದಲ್ಲಿವೆ ನಿಮಗೆ ತಿಳಿಯದ ಹಲವು ಅದ್ಬುತ ಫೀಚರ್ಸ್!!

  ಇತ್ತೀಚಿಗಷ್ಟೆ ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟು ಟ್ರೆಂಡ್ ಸೃಷ್ಟಿಸಿರುವ 'ಒಪ್ಪೊ ಎಫ್ 7' ಸೆಲ್ಫಿ ಎಕ್ಸ್‌ಪರ್ಟ್ ಸ್ಮಾರ್ಟ್‌ಪೋನ್ ಇದೀಗ ಮತ್ತೆ ಸುದ್ದಿಯಲ್ಲಿದೆ. ಕೃತಕ ಬುದ್ದಿಮತ್ತೆ ಆಧಾರಿತ ಕ್ಯಾಮೆರಾ ತಂತ್ರಜ್ಞಾನ ಹೊಂದಿರುವ ಮೊಬೈಲ್‌ಗಳಲ್ಲಿಯೇ ಅತ್ಯುತ್ತಮ ಕ್ಯಾಮೆರಾ ತಂತ್ರಜ್ಞಾನ ಹೊಂದಿರುವ ಮೊಬೈಲ್ ಆಗಿ 'ಒಪ್ಪೊ ಎಫ್ 7' ಸ್ಮಾರ್ಟ್‌ಫೋನ್ ಹೊರಹೊಮ್ಮಿದೆ.

  25MP ಸೆಲ್ಫಿ ಕ್ಯಾಮೆರಾ ಹೊತ್ತು ಮೊಬೈಲ್ ಮಾರುಕಟ್ಟೆಯಲ್ಲಿ ಬಿಡುಗಡೆಗೂ ಮುನ್ನವೇ ಭಾರೀ ನಿರೀಕ್ಷೆ ಹುಟ್ಟಿಸಿದ್ದ 'ಒಪ್ಪೊ ಎಫ್ 7' ಸ್ಮಾರ್ಟ್‌ಫೋನ್, ಇದೀಗ ನಿರೀಕ್ಷೆಗೆ ತಕ್ಕಂತೆ ತನ್ನ ಕ್ಯಾಮೆರಾ ತಂತ್ರಜ್ಞಾನದ ಹೆಸರನ್ನು ಉಳಿಸಿಕೊಂಡಿದೆ. ಫುಲ್‌ಸ್ಕ್ರೀನ್ ಎಡ್ಜ್ ಟು ಎಡ್ಜ್ ಡಿಸ್‌ಪ್ಲೇ ಹಾಗೂ ಕೃತಕ ಬುದ್ದಿಮತ್ತೆ ಕ್ಯಾಮೆರಾ ತಂತ್ರಜ್ಞಾನ ಸ್ಮಾರ್ಟ್‌ಫೋನಿಗೆ ಜೀವ ತುಂಬಿವೆ.

  'ಒಪ್ಪೊ ಎಫ್ 7' ಕೃತಕ ಬುದ್ದಿಮತ್ತೆ ಕ್ಯಾಮೆರಾದಲ್ಲಿವೆ ನಿಹಲವು ಅದ್ಬುತ ಫೀಚರ್ಸ್!!

  ಮೊಬೈಲ್ ಪ್ರಿಯರು ಊಹಿಸಿದಕ್ಕಿಂತಲೂ ಅತ್ಯಂತ ಕಡಿಮೆ ಬೆಲೆಗೆ 25MP ಸೆಲ್ಫಿ ಕ್ಯಾಮೆರಾದ 'ಒಪ್ಪೊ ಎಫ್ 7' ಸೆಲ್ಫಿ ಎಕ್ಸ್‌ಪರ್ಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಟ್ಟಿದ್ದರಿಂದ 'ಒಪ್ಪೊ ಎಫ್ 7' ಸೆಲ್ಫಿ ಎಕ್ಸ್‌ಪರ್ಟ್ ಸ್ಮಾರ್ಟ್‌ಪೋನ್ ಮೊಬೈಲ್ ಪ್ರಿಯರ ಗಮನ ಸೆಳೆಯುತ್ತಿದೆ.! ಹಾಗಾದರೆ, 'ಒಪ್ಪೊ ಎಫ್ 7' ಸೆಲ್ಫಿ ಎಕ್ಸ್‌ಪರ್ಟ್ ಕ್ಯಾಮೆರಾ ಹೇಗಿದೆ ಎಂಬುದನ್ನು ಮುಂದೆ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  25 ಎಂಪಿ ಎಐ ಸೆಲ್ಫಿ ಕ್ಯಾಮೆರಾ!!

  ಒಂದು 25 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಮೂಲಕ ಹೊರಬಂದಿರುವ ಒಪ್ಪೊವಿನ ಮೊದಲ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಒಪ್ಪೊ ಎಫ್ 7' ಸ್ಮಾರ್ಟ್‌ಪೋನ್ ಪಾತ್ರವಾಗಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನದೊಂದಿಗೆ ಎಐ ಬ್ಯೂಟಿ 2.0 ತಂತ್ರಜ್ಞಾನವನ್ನು ಸ್ಮಾರ್ಟ್‌ಫೋನ್ ಒಳಗೊಂಡಿದೆ. ಮುಖದ ಮೇಲೆ 296 ಮುಖದ ಚುಕ್ಕೆಗಳನ್ನು ಹೆಚ್ಚು ನಿಖರವಾಗಿ ಗುರುತಿಸುವ ಮೂಲಕ ಮುಖ ಗುರುತಿಸುವಿಕೆಯ ಪರಿಣಾಮಕಾರಿ ಸಾಮರ್ಥ್ಯವನ್ನು ಸೆಲ್ಫಿ ಕ್ಯಾಮೆರಾ ತಂತ್ರಜ್ಞಾನ ಹೊಂದಿದೆ.!!

  ಎಐ ಬ್ಯೂಟಿ 2.0 ಮತ್ತು HDR ತಂತ್ರಜ್ಞಾನ!!

  ಒಪ್ಪೊ ಎಫ್ 5 ಬಿಡುಗಡೆಯಾದಾಗ ನಿಬ್ಬೆರಗಾಗಿದ್ದ AI ಬ್ಯೂಟಿ ಮೋಡ್ ಆಯ್ಕೆ ಈಗ ಒಪ್ಪೊ ಎಫ್ 7 ಸ್ಮಾರ್ಟ್‌ಫೋನಿನಲ್ಲಿ ಮತ್ತಷ್ಟು ಅಭಿವೃದ್ದಿಯಾಗಿದೆ. ಚರ್ಮದ ಟೋನ್‌ಗಳು ಮತ್ತು ಬಣ್ಣ, ವಯಸ್ಸು, ಚಿತ್ರದ ನಡುವಿನ ವ್ಯತ್ಯಾಸಗಳನ್ನು ಸ್ವಯಂ ಗುರುತಿಸುವ ಎಐ ಬ್ಯೂಟಿ ಮೋಡ್ ಸೂಕ್ತವಾದ ಸೌಂದರ್ಯವರ್ಧಕ ಚಿತ್ರಗಳನ್ನು ಚಿತ್ರಿಸಲಿದೆ. HDR ತಂತ್ರಜ್ಞಾನವು ಬಣ್ಣಗಳನ್ನು ವರ್ಧಿಸುತ್ತದೆ ಮತ್ತು ಸವಾಲಿನ ಬೆಳಕಿನ ಪರಿಸ್ಥಿತಿಗಳಲ್ಲಿ ಅತ್ಯುತ್ತಮ ಗುಣಮಟ್ಟದ ಫೋಟೊಗಳನ್ನು ಚಿತ್ರಿಸಲು ಸಹಾಯ ಮಾಡುತ್ತದೆ.!!

  ಅದ್ಬುತವಾಗಿದೆ ಸ್ಮಾರ್ಟ್‌ಪೋನ್ ವಿನ್ಯಾಸ!!

  ಫುಲ್‌ಸ್ಕ್ರೀನ್ ಎಡ್ಜ್ ಟು ಎಡ್ಜ್ ಡಿಸ್‌ಪ್ಲೇಯನ್ನು ಸಹೊಂದಿರುವ ಒಪ್ಪೊ ಎಫ್ 7 ಸ್ಮಾರ್ಟ್ಫೋನ್ 19.9 ಆಕಾರ ಅನುಪಾತದ 6.23-ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಸುತ್ತಲೂ ಇರುವ ಬೆಜಲ್‌ಗಳನ್ನು ಕಡಿಮೆ ಮಾಡಲಾಗಿದ್ದು, ಹಿಂಬಾಗದಲ್ಲಿ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ನೀಡಲಾಗಿದೆ. ಎಲ್ಲದಕ್ಕಿಂತ ಹೆಚ್ಚಿನದಾಗಿ ಸ್ಮಾರ್ಟ್‌ಪೋನಿನಲ್ಲಿ ಮಲ್ಟಿಮೀಡಿಯಾ ಪ್ರದರ್ಶನಕ್ಕೆ ಅತ್ಯುತ್ತಮ ಅವಕಾಶವನ್ನು ಕಲ್ಪಿಸಲಾಗಿದೆ ಎನ್ನಬಹುದು.!!

  ಪವರ್‌ಫುಲ್ ಹಾರ್ಡ್‌ವೇರ್!!

  64-ಬಿಟ್ ಆಕ್ಟಾ-ಕೋರ್ ಪ್ರೊಸೆಸರ್ ಜೊತೆಗೆ 4GB ಮತ್ತು 6GB RAM ಹೊಂದಿರುವ ಒಪ್ಪೊ ಎಫ್ 7 ಸ್ಮಾರ್ಟ್‌ಪೋನ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ನೀಡಲಿದೆ. ಒಪ್ಪೊ ಕಂಪೆನಿ ಹೇಳುವಂತೆ ಹಿಂದಿನ ಸರಣಿ ಒಪ್ಪೊ ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೊ ಎಫ್ 5 ಸ್ಮಾರ್ಟ್‌ಫೋನಿಗಿಂತಲೂ ಶೇ 80 ರಷ್ಟು ವೇಗದ ಕಾರ್ಯನಿರ್ವಹನೆಯನ್ನು ನೀಡಲಾಗಿದೆಯಂತೆ. ನೂತನ ಒಪ್ಪೊ ಎಫ್ 7 ಸ್ಮಾರ್ಟ್‌ಪೋನಿನಲ್ಲಿ ಬ್ಯಾಟರಿ ಜೀವಿತಾವಧಿ ಸಮಯವೂ ಸಾಕಷ್ಟು ಹೆಚ್ಚಳವಾಗಿದೆ ಎಂದು ಒಪ್ಪೊ ಕಂಪೆನಿ ತಿಳಿಸಿದೆ.!!

  ರಿಯಾಲಿಟಿ ಸ್ಟಿಕ್ಕರ್ಸ್ ಮತ್ತು AI ಫೋಟೋ ಆಲ್ಬಮ್ ನಿರ್ವಹಣೆ!

  ಒಪ್ಪೊ ಎಫ್ 7 ಸ್ಮಾರ್ಟ್‌ಫೋನ್ AI ತಂತ್ರಜ್ಞಾನಕ್ಕೆ ಹೆಚ್ಚುವರಿಯಾಗಿ ವರ್ಧಿತ ರಿಯಾಲಿಟಿ ಸ್ಟಿಕರ್‌ಗಳನ್ನು ರಚಿಸುವ ಸಾಮರ್ಥ್ಯವನ್ನು ಸೇರಿಸಲಾಗಿದೆ. ಈ ವರ್ಧಿತ ರಿಯಾಲಿಟಿ ಸ್ಟಿಕರ್‌ಗಳು ಮತ್ತು ಕವರ್ ಶಾಟ್ ಫೀಚರ್ಸ್ ನಿಮ್ಮನ್ನು ಕುತೋಹಲಗೊಳಿಸುತ್ತವೆ. ಕ್ಯಾಮರಾದಲ್ಲಿ ಒಮ್ಮೆ ಟ್ಯಾಪ್ ಮಾಡುವ ಮೂಲಕ ಸಂವೇದಾತ್ಮಕ ಅನಿಮೇಟೆಡ್ ಚಿತ್ರಗಳನ್ನು ಸಹ ಇಲ್ಲಿ ಸೇರಿಸಬಹುದು. ಇನ್ನು ಒಪ್ಪೊ ಎಫ್ 7 ಸ್ಮಾರ್ಟ್‌ಫೋನ್ AI ತಂತ್ರಜ್ಞಾನದ ಕ್ಯಾಮೆರಾ ಫೀಚರ್ಸ್‌ಗಳನ್ನು ಮಾತ್ರವಲ್ಲದೇ, AI ತಂತ್ರಜ್ಞಾನ ಆಧಾರಿತ AI ಫೋಟೋ ಆಲ್ಬಮ್ ನಿರ್ವಹಣೆಯನ್ನು ಸಹ ನೀಡಲಿದೆ. ನಿಮ್ಮ ಸ್ಮಾರ್ಟ್‌ಫೋನ್ ಮೆಮೊರಿಯನ್ನು ಉತ್ತಮ ಫೋಟೋ ಆಲ್ಬಮ್‌ನೊಂದಿಗೆ ನಿರ್ವಹಣೆ ಮಾಡಬಹುದಾಗಿದ್ದು, ಸಂಕೀರ್ಣವಾದ AI ಕ್ರಮಾವಳಿಗಳನ್ನು ಸ್ಮಾರ್ಟ್ ಫೋಟೋ ಆಲ್ಬಮ್ ಬಳಸುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The camera app on OPPO F7 is easy to use and features variety of exciting modes and filters. Here we take a closer look. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more