Just In
Don't Miss
- Movies
ರವಿಚಂದ್ರನ್ ಸಿನಿಮಾದಲ್ಲಿ ನಾಯಿಗೂ ದುಬಾರಿ ಸುಂಭಾವನೆ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾಡುಗಳನ್ನು ರಕ್ಷಿಸುವುದಕ್ಕೆ ನಿಮ್ಮ ಹಳೆ ಫೋನೇ ಸಾಕು!
ಮನುಷ್ಯ ಅದೆಷ್ಟು ಕ್ರೂರಿ ಎಂದರೆ ನೈಸರ್ಗಿಕ ಸಂಪತ್ತನ್ನು ದಿನದಿಂದ ದಿನಕ್ಕೆ ತನ್ನ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಲೇ ಇದ್ದಾನೆ ಮತ್ತು ಅವುಗಳ ನಾಶಕ್ಕೆ ಮುಂದಾಗುತ್ತಿದ್ದಾನೆ. ಪ್ರತಿ ಜೀವಿಯೂ ಈ ಭೂಮಿಯಲ್ಲಿ ವಾಸಿಸಬೇಕು ಎಂದರೆ ನಮ್ಮ ಉಸಿರಾಟಕ್ಕೆ ಸಹಕರಿಸೋ ಮರಗಳು ಇರಲೇಬೇಕು. ಆದರೆ ಮರಗಳ ಮಾರಣಹೋಮ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ.

ಅದರಲ್ಲೂ ಪಶ್ಚಿಮ ಘಟ್ಟಗಳಂತ ಮಳೆಕಾಡುಗಳು ಕಳ್ಳಕಾಕರ ಕೈಯಲ್ಲಿ ನರಳುತ್ತಿದೆ. ಕಾಡು ನಾಡಾಗಿ ಬದಲಾಗುತ್ತಿದೆ ಮತ್ತು ಕಾಡಿನ ಜೀವಿಗಳು ನಾಡು ಸೇರೋ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡುಗಳ ರಕ್ಷಣೆ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ.
ಮಳೆಕಾಡುಗಳಲ್ಲಿ ಕೀಟಗಳು, ಹಕ್ಕಿಗಳು, ಪ್ರಾಣಿಗಳ ಚಲನವಲನದ ಶಬ್ದ ನಿಜಕ್ಕೂ ಪ್ರಕೃತಿಯ ಸೊಬಗಿನ ಇನ್ನೊಂದು ರೂಪ. ಅವುಗಳ ನಾಶ ನಮ್ಮ ಅಂತ್ಯಕ್ಕೆ ನಾವೇ ಬರೆದುಕೊಳ್ಳುತ್ತಿರುವ ಮುನ್ನುಡಿಯಾಗಿದೆ. ಆದರೆ ಇವುಗಳ ನಾಶಕ್ಕೆ ಮುಂದಾಗುತ್ತಿರುವವರನ್ನು ರೆಡ್ ಹ್ಯಾಂಡ್ ಆಗಿ ಸಿಕ್ಕಿಬೀಳುವಂತೆ ಮಾಡಬೇಕು! ಆದರೆ ಅದು ಹೇಗೆ?
ಹೀಗೆ ಕಳ್ಳ ಮಾರ್ಗದಲ್ಲಿ ಕಾಡು ಉತ್ಪನ್ನಗಳ ನಾಶಕ್ಕೆ ಮುಂದಾಗುವವರನ್ನು ಗುರುತಿಸುವುದಕ್ಕೆ ಉತ್ತರ ನಿಮ್ಮ ಹಳೆಯ ಸೆಲ್ ಫೋನ್ ಗಳಲ್ಲೇ ಇದೆ ಮತ್ತು ನಿಮ್ಮ ಮೇಜಿನ ಮೇಲೆ ಕುಳಿತು ಅವರಿಗೆ ಕಡಿವಾಣ ಹಾಕುವುದಕ್ಕೆ ಸಾಧ್ಯವಿದೆ!

ಹಳೆಯ ಸೆಲ್ ಫೋನ್ ಗಳಿಂದ ಕಾಡುಗಳ ರಕ್ಷಣೆ ಹೇಗೆ?
ಭೌತ ವಿಜ್ಞಾನಿ ಮತ್ತು ಎಂಜಿನಿಯರ್ ಆಗಿರುವ ಟೋಫರ್ ವೈಟ್ ಬೋರ್ನಿಯೋವಿನ ಮಳೆಕಾಡುಗಳಿಗೆ ಭೇಟಿ ನೀಡಿದ ನಂತರ ಕಾಡಿನ ಶಬ್ದಗಳಿಂದ ವಿಚಲಿತರಾದರು. ಅಲ್ಲಿನ ಕೆಟ್ಟ ಶಬ್ದದ ಹಾವಳಿಯಿಂದಾಗಿ ಆತ ಹಕ್ಕಿಗಳ ಚಿಲಿಪಿಲಿ, ಕೀಟಗಳ ಸಂಚಾರ ಅಥವಾ ಪ್ರಾಣಿಗಳ ಹೆಜ್ಜೆ ಜಾಡು , ಮರದ ಎಲೆಗಳ ಅಲುಗಾಟದ ಆಹ್ಲಾದ ಯಾವುದನ್ನೂ ಸವಿಯುವುದಕ್ಕೆ ಸಾಧ್ಯವಾಗಿಲ್ಲ.
ರೇಂಜರ್ ಸ್ಟೇಷನ್ ನ ಕೆಲವೇ ಮೀಟರ್ ದೂರದಲ್ಲಿ ಅನಧಿಕೃತವಾಗಿ ಮರಗಳನ್ನು ಉರುಳಿಸುತ್ತಿದ್ದದ್ದನ್ನು ವೈಟ್ ಗಮನಿಸಿದರು. ಇಂತಹ ಘಟನೆಯನ್ನು ತಡೆಯುವುದಕ್ಕಾಗಿ ವೈಟ್ ಉತ್ತಮ ಮಾರ್ಗವನ್ನ ಕಂಡುಹಿಡಿಯಲು ಯೋಚಿಸಿದರು ಮತ್ತು ಭೂಮಿಯ ರಕ್ಷಣೆಗೆ, ಕಾಡುಗಳ ರಕ್ಷಣೆಗೆ ಏನಾದರೂ ಮಾಡಲೇಬೇಕು ಎಂದು ಛಲ ಹೊತ್ತರು. ನಂತರ ಅವರು ಹೊಸ ಅಭಿವೃದ್ಧಿಯೊಂದನ್ನು ಸಾಧಿಸಿದರು ಅದುವೇ ರೈನ್ ಫಾರೆಸ್ಟ್ ಕನೆಕ್ಷನ್. ಮಳೆಕಾಡು ಸಂಪರ್ಕ . ಹೌದು ತಮ್ಮ ಹಳೆಯ ಫೋನ್ ಗಳನ್ನು ಬಳಸಿ ಈ ಭೂಮಿ ಎಂಬ ಗ್ರಹದ ನೈಸರ್ಗಿಕ ಸಂಪತ್ತಿನ ರಕ್ಷಣೆಗೆ ಪಟ ತೊಟ್ಟರು. ಹಾಗಾದ್ರೆ ಅವರು ಏನು ಮಾಡಿದರು ಎಂಬುದನ್ನು ಈ ವೀಡಿಯೋ ಮೂಲಕ ನೀವು ಗಮನಿಸಬಹುದು.
ನ್ಯಾಷನಲ್ ಜಿಯೋಗ್ರಫಿ ಸಂಸ್ಥೆ ಇಂತಹ ಕೆಲವು ಅಸಾಧ್ಯದ ವಿಚಾರಗಳನ್ನು ಪ್ರೊಮೋಟ್ ಮಾಡುತ್ತದೆ. ಅದರ ವೀಡಿಯೋ ತುಣುಕನ್ನು ನೀವು ಗಮನಿಸಬಹುದು.

ಬೆಂಬಲ ನೀಡುವುದಕ್ಕೆ ಅವಕಾಶ:
ನಮ್ಮ ಪ್ರತಿಯೊಂದು ಕ್ರಿಯೆಗೂ ಕೂಡಲೇ ಪ್ರತಿಕ್ರಿಯೆ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವೊಂದು ಪ್ರತಿಕ್ರಿಯೆಗಳು ನಿಧಾನವಾಗಿರಬಹುದು ಕೆಲವು ನಿಧಾನವಾಗಿರಬಹುದು. ಕಾಡಿನ ನಾಶಕ್ಕೆ ಫುಲ್ ಸ್ಟಾಪ್ ಹಾಕುವುದಕ್ಕೆ ಈ ಮಾರ್ಗ ಸಂಪೂರ್ಣ ಸಹಕಾರಿ ಎಂದು ಹೇಳಲಾಗುವುದಿಲ್ಲ. ಆದರೆ ಎಲ್ಲೋ ಕೆಲವು ಶೇಕಡಾವಾರು ಸಹಾಯ ಮಾಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಬೇರುಮಟ್ಟದ ಸಮಸ್ಯೆಗೆ ಪರಿಹಾರ ನೀಡದೆ ಇದ್ದರೂ ಸ್ವಲ್ಪ ಮಟ್ಟಿಗೆ ಸಮಸ್ಯೆಯ ನಿವಾರಣೆಗೆ ನಿಮ್ಮಿಂದ ಸಹಾಯವಾಗುತ್ತದೆ ಎಂಬುದನ್ನು ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ.

ರೈನ್ ಫಾರೆಸ್ಟ್ ಕನೆಕ್ಷನ್ ಪ್ರೊಜೆಕ್ಟ್ ಗೆ ಬೆಂಬಲ :
ನಿಮ್ಮ ಬಳಿ ಹಳೆಯ ಸೆಲ್ ಫೋನ್ ಇದ್ದಲ್ಲಿ ಅದನ್ನು ಮಳೆಕಾಡುಗಳ ರಕ್ಷಣೆಗಾಗಿ ದಾನ ಮಾಡಬಹುದು. ಅವರ ಅಗತ್ಯತೆಗೆ ನಿಮ್ಮ ಹಳೆಯ ಫೋನ್ ಕೆಲಸ ಮಾಡದೇ ಇದ್ದರೂ ಕೂಡ ನಿಮ್ಮಿಂದ ಬೆಂಬಲವಂತೂ ಅವರಿಗೆ ದೊರೆತಂತಾಗುತ್ತದೆ. ಹಾಗಾದ್ರೆ ರೈನ್ ಫಾರೆಸ್ಟ್ ವೆಬ್ ಸೈಟ್ ಗೆ ತೆರಳಿ ವೇಸ್ಟ್ ಆಗುವು ನಿಮ್ಮ ಹಳೆಯ ಫೋನ್ ದಾನ ಮಾಡುವುದಕ್ಕೆ ಮುಂದಾಗಬಹುದು. ಅದಕ್ಕಾಗಿ https://rfcx.org/get_involved ಈ ಲಿಂಕ್ ನ್ನು ಕ್ಲಿಕ್ಕಿಸಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470