ಫೀಚರ್ ಫೋನ್ ನಿಂದ ಸ್ಮಾರ್ಟ್ ಫೋನ್ ಕಡೆಗೆ ಕಾಲಿಡುತ್ತಿರುವ ರಿಲಯನ್ಸ್ ಜಿಯೋ

|

ರಿಲಯನ್ಸ್ ಜಿಯೋ ಸಂಸ್ಥೆಯ ಮುಂದಿನ ಸ್ಮಾರ್ಟ್ ಫೋನ್ ಯುಎಸ್ ಮೂಲದ ಕಂಪೆನಿಯಿಂದ ತಯಾರಿಸಲಾಗುತ್ತದೆ – ನೀವು ತಿಳಿಯಬೇಕಾಗಿರುವ ಅಂಶಗಳು.

ಫೀಚರ್ ಫೋನ್ ನಿಂದ ಸ್ಮಾರ್ಟ್ ಫೋನ್ ಕಡೆಗೆ ಕಾಲಿಡುತ್ತಿರುವ ರಿಲಯನ್ಸ್ ಜಿಯೋ

ನಿಮ್ಮ ಮುಂದಿನ ರಿಲಯನ್ಸ್ ಜಿಯೋ ಸಂಸ್ಥೆಯ ಸ್ಮಾರ್ಟ್ ಫೋನ್ ನ್ನು ಯುಎಸ್ ಮೂಲದ ಕಂಪೆನಿಯೊಂದು ತಯಾರಿಸುವ ಸಾಧ್ಯತೆ ಇದೆ. ಮುಖೇಶ್ ಅಂಬಾನಿ ಮಾಲೀಕತ್ವದ ಟೆಲಿಕಾಂ ಸಂಸ್ಥೆ ಈ ನಿಟ್ಟಿನಲ್ಲಿ ಯುಎಸ್ ನ ಕಂಪೆನಿಯ ಜೊತೆಗೆ ಸ್ಮಾರ್ಟ್ ಫೋನ್ ತಯಾರಿಕೆಯ ಬಗ್ಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಹಾಗಾದ್ರೆ ಮುಂದಿನ ರಿಲಯನ್ಸ್ ಜಿಯೋ ಸ್ಮಾರ್ಟ್ ಫೋನ್ ಬಗ್ಗೆ ಯಾವೆಲ್ಲ ರೀತಿಯ ನಿರೀಕ್ಷೆಗಳು ಇದೀಗ ಹುಟ್ಟಿಕೊಳ್ಳುತ್ತಿದೆ ಎಂಬ ಬಗೆಗಿನ ವಿವರ ಇಲ್ಲಿದೆ.

ರಿಲಯನ್ಸ್ ಜಿಯೋ ಇನ್ಫೋಕಾಮ್ ಯುಸ್ ಒಪ್ಪಂದದ ತಯಾರಕ ಫ್ಲೆಕ್ಸ್ ಜೊತೆಗೆ ಮಾತುಕತೆ ನಡೆಸುತ್ತಿದೆ ಎಂಬ ವರದಿ

ರಿಲಯನ್ಸ್ ಜಿಯೋ ಇನ್ಫೋಕಾಮ್ ಯುಸ್ ಒಪ್ಪಂದದ ತಯಾರಕ ಫ್ಲೆಕ್ಸ್ ಜೊತೆಗೆ ಮಾತುಕತೆ ನಡೆಸುತ್ತಿದೆ ಎಂಬ ವರದಿ

ಸ್ಥಳೀಯವಾಗಿ ಸ್ಮಾರ್ಟ್ ಫೋನ್ ಗಳನ್ನು ತಯಾರಿಸಬೇಕು ಎಂಬ ಕುರಿತು ಯುಎಸ್ ಮೂಲದ ತಯಾರಿಕಾ ಸಂಸ್ಥೆ ಫ್ಲೆಕ್ಸ್ ಜೊತೆಗೆ ರಿಲಯನ್ಸ್ ಜಿಯೋ ಸಂಸ್ಥೆ ಮಾತುಕತೆ ನಡೆಸುತ್ತಿರುವ ಬಗ್ಗೆ ತಿಳಿದುಬಂದಿದೆ. ಫೈನಾನ್ಶಿಯಲ್ ಡೈಲಿ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಜಿಯೋ ಒಂದು ದೊಡ್ಡ ಚರ್ಚೆಯಲ್ಲಿ ತೊಡಗಿದೆ ಮತ್ತು ಬಹುದೊಡ್ಡ ಆರ್ಡರ್ ನ್ನು ನೀಡುವುದಕ್ಕೆ ಮತ್ತು ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಮುಂದಡಿ ಇಡುತ್ತಿದೆ. ಸರ್ಕಾರದ ಜೊತೆಗಿನ ಕೆಲವು ತೆರಿಗೆ ಬೆನಿಫಿಟ್ ಗಳು ಮತ್ತು ಫ್ಯಾಕ್ಟರಿ ಎಲ್ಲಿ ಇರಬೇಕು ಬಗೆಗಿನ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

ರಿಲಯನ್ಸ್ ಜಿಯೋ ಹೊಸ ಸ್ಮಾರ್ಟ್ ಫೋನ್ ಮೂಲಕ ಟಾಪ್-ಎಂಡ್ ಫೀಚರ್ ಫೋನ್ ಬಳಕೆದಾರರನ್ನು ಟಾರ್ಗೆಟ್ ಮಾಡುತ್ತಿದೆ

ರಿಲಯನ್ಸ್ ಜಿಯೋ ಹೊಸ ಸ್ಮಾರ್ಟ್ ಫೋನ್ ಮೂಲಕ ಟಾಪ್-ಎಂಡ್ ಫೀಚರ್ ಫೋನ್ ಬಳಕೆದಾರರನ್ನು ಟಾರ್ಗೆಟ್ ಮಾಡುತ್ತಿದೆ

ಜಿಯೋ ಸದ್ಯ ಟಾಪ್ ಎಂಡ್ ನ ಫೀಚರ್ ಫೋನ್ ಬಳಕೆದಾರರನ್ನು ಟಾರ್ಗೆಟ್ ಮಾಡಿಕೊಂಡು ದೇಶದಲ್ಲಿ ಹೊಸ ಫೋನ್ ಬಿಡುಗಡೆಗೊಳಿಸುವುದಕ್ಕೆ ಪ್ಲಾನ್ ಮಾಡುತ್ತಿದೆ.ಸುಮಾರು 500 ಮಿಲಿಯನ್ ಭಾರತೀಯ ಫೀಚರ್ ಫೋನ್ ಬಳಕೆದಾರರು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಮತ್ತು ಅದರ ಸೇವೆಗಳು ಲಭ್ಯವಾದಲ್ಲಿ ಸ್ಮಾರ್ಟ್ ಫೋನ್ ಗಳಿಗೆ ಅಟ್ರ್ಯಾಕ್ಟ್ ಆಗುತ್ತಾರೆ ಮತ್ತು ಹೊಸ ಸ್ಮಾರ್ಟ್ ಫೋನ್ ಗಳನ್ನು ಬಳಸಲು ಆರಂಭಿಸುತ್ತಾರೆ. ಇಂತಹ ಬಳಕೆದಾರರನ್ನು ಟಾರ್ಗೆಟ್ ಮಾಡಿರುವ ಜಿಯೋ ಸಂಸ್ಥೆ ಹೊಸದಾಗಿ ಸ್ಮಾರ್ಟ್ ಫೋನ್ ತಯಾರಿಕೆಗೆ ಆಲೋಚನೆ ಮಾಡುತ್ತಿದೆ ಎಂದು ವರದಿ ತಿಳಿಸುತ್ತದೆ.

ಈ ಸ್ಮಾರ್ಟ್ ಫೋನ್ ಖರೀದಿದಾರರಿಗೆ ಕೇವಲ ಡಾಟಾ ಮಾತ್ರವಲ್ಲದೆ ಹೆಚ್ಚಿನ ಇತರೆ ಆಫರ್ ಗಳನ್ನೂ ನೀಡುವ ಸಾಧ್ಯತೆ

ಈ ಸ್ಮಾರ್ಟ್ ಫೋನ್ ಖರೀದಿದಾರರಿಗೆ ಕೇವಲ ಡಾಟಾ ಮಾತ್ರವಲ್ಲದೆ ಹೆಚ್ಚಿನ ಇತರೆ ಆಫರ್ ಗಳನ್ನೂ ನೀಡುವ ಸಾಧ್ಯತೆ

ವರದಿಗಳು ಹೇಳುವಂತೆ ರಿಲಯನ್ಸ್ ಜಿಯೋ ಹೊಸ ಜಿಯೋ ಸ್ಮಾರ್ಟ್ ಫೋನ್ ಖರೀದಿದಾರರಿಗೆ ಕೇವಲ ಸ್ಮಾರ್ಟ್ ಫೋನ್ ಅಥವಾ ಡಾಟಾ ಮಾತ್ರವಲ್ಲದೆ ಇನ್ನೂ ಹೆಚ್ಚಿನ ಸೌಲಭ್ಯವನ್ನು ಒದಗಿಸುವ ನಿರೀಕ್ಷೆ ಇದೆ.ಒಂದು ಜಿಬಿ ಡಾಟಾ ಪ್ರತಿದಿನ ಉಚಿತವಾಗಿ ನೀಡುವುದರ ಜೊತೆಗೆ ಫೋನಿನ ನಿರ್ವಹಣಾ ವೆಚ್ಚವನ್ನು ಜಿಯೋ ಸಂಸ್ಥೆ ಭರಿಸುವ ಯೋಜನೆಯನ್ನು ರೂಪಿಸಿ ಜಿಯೋ ಸ್ಮಾರ್ಟ್ ಫೋನ್ ನ್ನು ಯಶಸ್ವಿಗೊಳಿಸುವುದಕ್ಕೆ ಪ್ಲಾನ್ ಮಾಡಬಹುದು ಎಂದು ಹೇಳುತ್ತಾರೆ ಮಾರ್ಕೆಟ್ ಅಧ್ಯಯನ ಸಂಸ್ಥೆ ಐಡಿಸಿಯ ಅಸೋಸಿಯೇಟ್ ರೀಸರ್ಚ್ ಡೈರೆಕ್ಟರ್ ಆಗಿರುವ ನಾವ್ಕೆಂದರ್ ಸಿಂಗ್.

ರಿಲಯನ್ಸ್ ಜಿಯೋ ಈ ಸ್ಮಾರ್ಟ್ ಫೋನ್ ಸ್ಕ್ರೀನ್ ಗಳಿಗೂ ವಿಮೆ ನೀಡುವ ಸಾಧ್ಯತೆ

ರಿಲಯನ್ಸ್ ಜಿಯೋ ಈ ಸ್ಮಾರ್ಟ್ ಫೋನ್ ಸ್ಕ್ರೀನ್ ಗಳಿಗೂ ವಿಮೆ ನೀಡುವ ಸಾಧ್ಯತೆ

ರಿಲಯನ್ಸ್ ಜಿಯೋ ಹೊಂದುವ ಹೆಚ್ಚುವರಿ ವೆಚ್ಚವು ಈ ಸ್ಮಾರ್ಟ್ ಫೋನ್ ಗಳ ಸ್ಕ್ರೀನ್ ರಿಪೇರಿ ವೆಚ್ಚವನ್ನು ಹೊಂದಿರಬಹುದು.ಫೀಚರ್ ಫೋನ್ ಹೊಂದಿರುವ ಬಳಕೆದಾರರನ್ನು ಸ್ಮಾರ್ಟ್ ಫೋನ್ ಗಳಿಗೆ ಬದಲಿಸುವ ನಿಟ್ಟಿನಲ್ಲಿ ಎದುರಾಗುವ ಪ್ರಮುಖ ಫಜೀತಿ ಎಂದರೆ ಬಳಕೆದಾರರಲ್ಲಿರುವ ಸ್ಕ್ರೀನ್ ಒಡೆದುಹೋಗುತ್ತದೆ ಎಂಬ ಭಯ ಆಗಿರುತ್ತದೆ. ಆದರೆ ಭಾರೀ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಗಳು ಲಭ್ಯವಾಗುವಂತೆ ಮಾಡಿ, ಸ್ಕ್ರೀನ್ ಒಡೆದರೆ ವಿಮೆ ಸೌಲಭ್ಯ ನೀಡುವ ಯೋಜನೆಯನ್ನು ಜಿಯೋ ರೂಪಿಸುವ ಸಾಧ್ಯತೆ ಇದೆ.

ಇದು ವಡಾಫೋನ್ ಐಡಿಯಾ ಮತ್ತು ಏರೆ ಟೆಲ್ ಗೆ ಒಂದು ದೊಡ್ಡ ಕೆಟ್ಟ ಸುದ್ದಿಯಾಗಿರಬಹುದು

ಇದು ವಡಾಫೋನ್ ಐಡಿಯಾ ಮತ್ತು ಏರೆ ಟೆಲ್ ಗೆ ಒಂದು ದೊಡ್ಡ ಕೆಟ್ಟ ಸುದ್ದಿಯಾಗಿರಬಹುದು

ರಿಲಯನ್ಸ್ ಜಿಯೋ ಸಂಸ್ಥೆ ಫ್ಲೆಕ್ಸ್ ಜೊತೆಗೆ ಕೈಜೋಡಿಸುತ್ತದೆ ಎಂಬ ವಿಚಾರವು ಖಂಡಿತ ಇತರೆ ಟೆಲಿಕಾಂ ಸಂಸ್ಥೆಗಳಿಗೆ ಒಂದು ಕೆಟ್ಟ ಸುದ್ದಿ ಆಗಿರುವ ಸಾಧ್ಯತೆ ಇದೆ. ವಡಾಫೋನ್ ಐಡಿಯಾ ಮತ್ತು ಏರ್ ಟೆಲ್ ಗೆ ಇದು ಖಂಡಿತ ಬ್ಯಾಡ್ ನ್ಯೂಸ್.ಜಿಯೋ ಸಂಸ್ಥೆ ದಿನದಿಂದ ದಿನಕ್ಕೆ ಗ್ರಾಹಕರನ್ನು ಸೆಳೆದು ಮೇಲ್ದರ್ಜೆಗೆ ಏರುತ್ತಿದೆ. ಹಳ್ಳಿಗಾಡು ಪ್ರದೇಶಗಳಲ್ಲಿ ಮಾರುಕಟ್ಟೆ ಹಂಚಿಕೆ, ಟೈಯರ್-3 ನಗರಗಳಲ್ಲಿ ಜಿಯೋ ಕಾರುಬಾರು ಇತ್ತೀಚೆಗೆ ಹೆಚ್ಚುತ್ತಿದೆ.ಅದರಲ್ಲೂ 4ಜಿ VoLTE ಫೀಚರ್ ಫೋನ್ ಜಿಯೋ ಫೋನ್ ಬಿಡುಗಡೆಯ ನಂತರ ಜಿಯೋ ಸಂಸ್ಥೆಯ ಏಳಿಗೆ ಗಮನಾರ್ಹ ರೀತಿಯಲ್ಲಿ ಹೆಚ್ಚುತ್ತಲೇ ಇದೆ.

ಬರ್ನೆಸ್ಟಿಯನ್ ವರದಿಯ ಪ್ರಕಾರ ರಿಲಯನ್ಸ್ ಜಿಯೋ ಬೆಳವಣಿಗೆಯು ಏರ್ ಟೆಲ್ ಮತ್ತು ವಡಾಫೋನ್ ಗೆ ಎಚ್ಚರಿಕೆಯ ಕರೆಘಂಟೆ

ಬರ್ನೆಸ್ಟಿಯನ್ ವರದಿಯ ಪ್ರಕಾರ ರಿಲಯನ್ಸ್ ಜಿಯೋ ಬೆಳವಣಿಗೆಯು ಏರ್ ಟೆಲ್ ಮತ್ತು ವಡಾಫೋನ್ ಗೆ ಎಚ್ಚರಿಕೆಯ ಕರೆಘಂಟೆ

ಇತ್ತೀಚೆಗೆ ಅಧ್ಯಯನ ಸಂಸ್ಥೆ ಬರ್ನೆಸ್ಟಿಯನ್ ನೀಡಿರುವ ವರದಿಯ ಪ್ರಕಾರ ಜಿಯೋ ಫೋನ್ ಮಾಡೆಲ್ ಗಳು ಭವಿಷ್ಯದಲ್ಲಿ ಜಿಯೋ ಸಂಸ್ಥೆಯನ್ನು ಉತ್ತುಂಗಕ್ಕೆ ಏರಿಸಲಿದೆ.ರಿಲಯನ್ಸ್ ಜಿಯೋ ಇನ್ಫೋಕಾಮ್ 2021 ರಲ್ಲಿ ಆದಾಯ ಮತ್ತು 2022 ರಲ್ಲಿ ಚಂದಾದಾರಿಕೆ ಎರಡೂ ಆಧಾರದಲ್ಲಿ ನಂಬರ್ 1 ಟೆಲಿಕಾಂ ಆಪರೇಟರ್ ಸ್ಥಾನವನ್ನು ಅಲಂಕರಿಸುವ ಸಾಧ್ಯತೆ ಇದೆ. ಈಗ ಸದ್ಯ ಗ್ರಾಹಕರನ್ನು ಸೆಳೆಯುತ್ತಿರುವ ಪರಿಯನ್ನು ಗಮನಿಸಿದರೆ 2021 ರ ಹೊತ್ತಿಗೆ ಆದಾಯ ಆಧಾರದಲ್ಲಿ ರಿಲಯನ್ಸ್ ಜಿಯೋ ನಂಬರ್ 1 ಸ್ಥಾನದಲ್ಲಿರುತ್ತದೆ ಮತ್ತು ಚಂದಾದಾರಿಕೆಯ ಆಧಾರದಲ್ಲಿ 2022 ರ ಹೊತ್ತಿಗೆ ನಂಬರ್ 1 ಸ್ಥಾನವನ್ನು ಪಡೆದಿರುತ್ತದೆ ಎಂಬುದು ವರದಿಯ ಅಭಿಪ್ರಾಯವಾಗಿದೆ.

Best Mobiles in India

English summary
Reliance Jio's next smartphone may be made by US-based company: All you need to know

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X