ವೈರಲ್ ಸುದ್ದಿ!..ಭಾರತದಲ್ಲಿ ಉತ್ಪಾದನೆಯಾಗುತ್ತಿದೆ 'ಗ್ಯಾಲಕ್ಸಿ ಫೋಲ್ಡ್'!

|

ಕಳೆದ ಫೆಬ್ರವರಿಯಲ್ಲಿ ಸ್ಯಾಮ್‌ಸಂಗ್‌ ಘೋಷಿಸಿದ ವಿಶ್ವದ ಮೊಟ್ಟ ಮೊದಲ ಮಡುಚಬಹುದಾದ ಸ್ಮಾರ್ಟ್‌ಫೋನ್ 'ಗ್ಯಾಲಕ್ಸಿ ಫೋಲ್ಡ್' ಭಾರತದಲ್ಲಿ ಉತ್ಪಾದನೆಯಾಗುತ್ತಿದೆ. 'ಗ್ಯಾಲಕ್ಸಿ ಫೋಲ್ಡ್‌' ಸ್ಮಾರ್ಟ್‌ಫೋನ್ ಅಧಿಕೃತವಾಗಿ ಅನಾವರಣಗೊಂಡು ನಾಲ್ಕು ತಿಂಗಳುಗಳಿಗಿಂತ ಹೆಚ್ಚು ಕಳೆದರೂ ಮಾರಾಟಕ್ಕೆ ಬಂದಿಲ್ಲ. ಆದರೂ, ಭಾರತದಲ್ಲಿ ಗ್ಯಾಲಕ್ಸಿ ಫೋಲ್ಡ್ ಫೋನ್ ತಯಾರಿಸಲು ಸ್ಯಾಮ್‌ಸಂಗ್ ಪ್ರಾರಂಭಿಸಿದೆ ಮತ್ತು ಶೀಘ್ರದಲ್ಲೇ ಅದನ್ನು ವಿಶ್ವದೆಲ್ಲೆಡೆ ಮಾರಾಟಕ್ಕೆ ತರುವ ಸಾಧ್ಯತೆಯಿದೆ ಇದೆ ಎಂದು ಪ್ರಖ್ಯಾತ ಮಾಧ್ಯಮಗಳು ವರದಿ ಮಾಡಿವೆ.

ವೈರಲ್ ಸುದ್ದಿ!..ಭಾರತದಲ್ಲಿ ಉತ್ಪಾದನೆಯಾಗುತ್ತಿದೆ 'ಗ್ಯಾಲಕ್ಸಿ ಫೋಲ್ಡ್'!

ಹೌದು, 'ಗ್ಯಾಲಕ್ಸಿ ಫೋಲ್ಡ್' ಡಿಸ್‌ಪ್ಲೇಯಲ್ಲಿ ಸಮಸ್ಯೆ ಕಂಡುಬಂದ ನಂತರ ಈ ಸ್ಮಾರ್ಟ್‌ಫೋನ್ ಅಷ್ಟೇನು ಸದ್ದು ಮಾಡಲಿಲ್ಲ. ಆದರೆ, ಇದೇ ಜುಲೈ ಅಂತ್ಯದಲ್ಲಿ 'ಗ್ಯಾಲಕ್ಸಿ ಫೋಲ್ಡ್' ಜಾಗತಿಕ ಉಡಾವಣೆ ಕಾಣಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇದರ ಜೊತೆಗೆ ಸ್ಯಾಮ್‌ಸಂಗ್ ಭಾರತದಲ್ಲಿ 'ಗ್ಯಾಲಕ್ಸಿ ಫೋಲ್ಡ್ ಫೋನ್ ತಯಾರಿಸಲು ಪ್ರಾರಂಭಿಸಿದೆ ಎಂದು ಹೇಳಿರುವ ಸುದ್ದಿ ಇದೀಗ ವೈರಲ್ ಆಗಿದೆ. ಇನ್ನು 'ಗ್ಯಾಲಕ್ಸಿ ಫೋಲ್ಡ್' ಬಿಡುಗಡೆಯನ್ನು ಭಾರೀ ಕಾತರದಿಂದ ಎದುರು ನೋಡುತ್ತಿದ್ದವರಿಗೆ ಈ ಫೋನಿನಲ್ಲಿದ್ದ ಸಮಸ್ಯೆ ಬಗೆಹರಿದಿರುವ ಸಿಹಿಸುದ್ದಿ ಸಿಕ್ಕಿದೆ.

'ಗ್ಯಾಲಕ್ಸಿ ಫೋಲ್ಡ್' ಫೋನಿನ ಪರದೆಗೆ ಪ್ರೊಟೆಕ್ಟಿವ್ ಲೇಯರ್ ಒಂದನ್ನು ಅಳವಡಿಸಲಾಗಿತ್ತು. ಆದರೆ, ಫೋನ್ ತೆರೆದು ಬಳಸಲು ಆರಂಭಿಸುತ್ತಿದ್ದಂತೆಯೇ ಪರದೆಯ ಕೆಳ ಭಾಗದಲ್ಲಿ ಪ್ರೊಟೆಕ್ಟಿವ್ ಲೇಯರ್ ಕಿತ್ತುಬರುತ್ತಿದೆ ಎಂದು ಹೇಳಲಾಗಿತ್ತು. ಈ ಸಮಸ್ಯೆಯನ್ನು ಈಗ ಬಗೆಹರಿಸಲಾಗಿದೆ ಎಂದು ಸ್ಯಾಮ್‌ಸಂಗ್ ಧೃಢಪಡಿಸಿದೆ. ಹಾಗಾಗಿ, ಶೀಘ್ರವೇ ಈ ಸ್ಮಾರ್ಟ್‌ಫೋನ್ ನಿಮ್ಮ ಕೈಸೇರುವುದು ನಿಶ್ಚಿತವಾಗಿದೆ. ಹಾಗಾದರೆ, ವಿಶ್ವದ ಮೊಟ್ಟ ಮೊದಲ ಮಡುಚಬಹುದಾದ ಸ್ಮಾರ್ಟ್‌ಫೋನ್ 'ಗ್ಯಾಲಕ್ಸಿ ಫೋಲ್ಡ್' ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಗ್ಯಾಲಕ್ಸಿ ಫೋಲ್ಡ್ ವಿನ್ಯಾಸ ಹೇಗಿದೆ?

ಗ್ಯಾಲಕ್ಸಿ ಫೋಲ್ಡ್ ವಿನ್ಯಾಸ ಹೇಗಿದೆ?

ಭವಿಷ್ಯದಲ್ಲಿ ಇಂತಹದೊಂದು ಮೊಬೈಲ್ ಮಾರುಕಟ್ಟೆಗೆ ಬರಲಿದೆ ಎಂಬ ಊಹೆಯನ್ನು ಮಾಡಿಕೊಳ್ಳದಂತೆ ಗ್ಯಾಲಕ್ಸಿ ಫೋಲ್ಡ್ ಸ್ಮಾರ್ಟ್‌ಫೋನ್ ವಿನ್ಯಾಸಗೊಂಡಿದೆ. ಮಡುಚಿದಾಗ ಕೇವಲ 4.6 ಇಂಚಿನ ಸ್ಕ್ರೀನ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಅನ್ನು ಪೂರ್ತಿ ತೆರೆದಾಗ 7.3 ಇಂಚಿನ ಸ್ಕ್ರೀನ್ ತೆರೆದುಕೊಳ್ಳುತ್ತದೆ. ಮುಂಬಾಗದ ಬಲಾಭಾಗದಲ್ಲಿ ಮೂರು ಸೆಲ್ಫೀ ಕ್ಯಾಮೆರಾಕ್ಕೆ ಸಪೋರ್ಟ್ ಮಾಡುವಂತಹ ನೋಚ್ ಹಾಗೂ ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ ವಿನ್ಯಾಸಕ್ಕೆ ಸರಿಸಾಟಿಯಾದ ಸ್ಮಾರ್ಟ್‌ಫೋನ್ ಮತ್ತೊಂದಿಲ್ಲ.

ಗ್ಯಾಲಕ್ಸಿ ಫೋಲ್ಡ್ ಡಿಸ್‌ಪ್ಲೇ ಹೇಗಿದೆ?

ಗ್ಯಾಲಕ್ಸಿ ಫೋಲ್ಡ್ ಡಿಸ್‌ಪ್ಲೇ ಹೇಗಿದೆ?

ಇದೊಂದು ಮಡಚುವ ಸ್ಮಾರ್ಟ್‌ಫೋನ್ ಆಗಿರುವುದರಿಂದ ಎರಡು ಡಿಸ್‌ಪ್ಲೇ ಸ್ರೀನ್‌ಗಳನ್ನು ಹೊಂದಿರುವುದನ್ನು ನೀವು ಸುಲಭವಾಗಿ ತಿಳಿಯಬಹುದಾಗಿದೆ. 4.6 ಇಂಚಿನ ಹಾಗೂ 7.3 ಇಂಚಿನ ಸ್ಕ್ರೀನ್ ಎರಡು ಸ್ಕ್ರೀನ್‌ಗಳು ಗ್ಯಾಲಾಕ್ಸಿ ಫೋಲ್ಡ್ ಫೋನಿನ ಪ್ರಮುಖ ವಿಶೇಷತೆಯಾಗಿದೆ. ಸ್ಯಾಮ್ಸಂಗ್ ಹೇಳುವ ಪ್ರಕಾರ, ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಅತ್ಯಂತ ವಿಶೇಷವಾಗಿದ್ದು, ಸ್ಮಾರ್ಟ್‌ಫೋನ್ ಅನ್ನು ಮನಬಂದಂತೆ ಪದರ ಮಾಡಲು ಅನುಮತಿಸುತ್ತದೆ ಎಂದು ತಿಳಿಸಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಮೊದಲೇ ಹೇಳಿದಂತೆ ಸ್ಯಾಮ್ಸಂಗ್ ಗ್ಯಾಲಕ್ಸಿ ಪದರ 7nm ಆಕ್ಟಾ-ಕೋರ್ ಪ್ರೊಸೆಸರ್ನಿಂದ ಶಕ್ತಿಯನ್ನು ಹೊಂದಿದೆ ಮತ್ತು ಡ್ಯುಯಲ್ ಬ್ಯಾಟರಿ ಸಿಸ್ಟಮ್ ಅನ್ನು ಪ್ಯಾಕ್ ಮಾಡುತ್ತದೆ. ಇದು ವೈರ್ಲೆಸ್ ಪವರ್ ಶೇರ್ ಸಿಸ್ಟಮ್ ಅನ್ನು ಬೆಂಬಲಿಸುತ್ತದೆ, ಇದು ಗ್ಯಾlAಕ್ಸಿ ಪದರವನ್ನು ಸ್ವತಃ ಚಾರ್ಜ್ ಮಾಡಲು ಮತ್ತು ಎರಡನೆಯ ಸಾಧನವನ್ನು ಏಕಕಾಲದಲ್ಲಿ ಅನುಮತಿಸುತ್ತದೆ. ಇನ್ನು ಫೋನ್ 12 ಜಿಬಿ ರಾಮ್ ಮತ್ತು 512 ಜಿಬಿ ಆಂತರಿಕ ಶೇಖರಣಾ ಬೆಂಬಲವನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.

ಒಟ್ಟು ಆರು ಕ್ಯಾಮೆರಾಗಳು!

ಒಟ್ಟು ಆರು ಕ್ಯಾಮೆರಾಗಳು!

'ಗ್ಯಾಲಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಒಟ್ಟು ಆರು ಕ್ಯಾಮೆರಾಗಳನ್ನು ಪ್ಯಾಕ್ ಮಾಡುವ ಮೊದಲ ಸ್ಮಾರ್ಟ್‌ಫೋನ್ ಆಗಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಮಡುಚಿದಾದ 10MP+f/2.2 ಸಾಮರ್ಥ್ಯದ ಒಂದು ಸೆಲ್ಫೀ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ಫೋನ್ 16MP ಅಲ್ಟ್ರಾ ವಿಶಾಲ ಕೋನ ಮಸೂರ ಮತ್ತು ಎರಡು 12MP ವಿಶಾಲ ಕೋನ ಮತ್ತು ಟೆಲಿಫೋಟೋ ಮಸೂರಗಳ ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಇನ್ನು ಟ್ಯಾಬ್ಲೆಟ್ ಮೋಡ್‌ನಲ್ಲಿ 10MP + 8MP ಡೆಪ್ತ್ ಸಂವೇದಕದಲ್ಲಿ ಸೆಲ್ಫೀ ಕ್ಯಾಮೆರಾಗಳನ್ನು ಕಾಣಬಹುದಾಗಿದೆ.

4380mAh ಬ್ಯಾಟರಿ ಸಾಮರ್ಥ್ಯ!

4380mAh ಬ್ಯಾಟರಿ ಸಾಮರ್ಥ್ಯ!

ಭಾರೀ ಫೀಚರ್ಸ್ ಹೊಂದಿರುವ 'ಗ್ಯಾಲಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಶಕ್ತಿಕೇಂದ್ರಕ್ಕೆ ಬಲವನ್ನು ಒದಗಿಸುವಲ್ಲಿ ಸ್ಯಾಮ್‌ಸಂಗ್ ಯಶಸ್ವಿಯಾಗಿದೆ. 4380mAh ಬ್ಯಾಟರಿ ಶಕ್ತಿಯನ್ನು ಹೊಂದಿರುವ ಸ್ಮಾರ್ಟ್‌ಪೋನ್ ತ್ವರಿತವಾಗಿ ಚಾರ್ಜ್ ಆಗುವಂತಹ ಇತ್ತೀಚಿನ QC2.0 ವೇಗದ ತಂತ್ರಜ್ಞಾನವನ್ನು ಹೊತ್ತು 'ಗ್ಯಾಲಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. QC2.0 ಮತ್ತು AFC ಯೊಂದಿಗೆ ಹೊಂದಾಣಿಕೆಯ ಚಾರ್ಜಿಂಗ್ WPC ಮತ್ತು PMA ನೊಂದಿಗೆ ಹೊಂದಾಣಿಕೆಯ ವೈರ್ಲೆಸ್ ಚಾರ್ಜಿಂಗ್ ಆಗಿದೆ.!

ನೂತನ ಆಂಡ್ರಾಯ್ಡ್ 9 ಪ್ಯಾಕ್!

ನೂತನ ಆಂಡ್ರಾಯ್ಡ್ 9 ಪ್ಯಾಕ್!

'ಗ್ಯಾಲಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 9 ಮೂಲಕ ರನ್ ಆಗಲಿದೆ ಮತ್ತು ಅಪ್ಲಿಕೇಶನ್ ಮುಂದುವರಿದಂತಹ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ ಮತ್ತು ಅದು ಮುಖಪುಟದಲ್ಲಿ ಚಾಲನೆಯಲ್ಲಿರುವ ಒಳಭಾಗದಲ್ಲಿ ಅದೇ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ನಿಮಗೆ ಅನುಮತಿಸುತ್ತದೆ. ಸ್ಯಾಮ್ಸಂಗ್ ಗೂಗಲ್ ಮತ್ತು ಆಂಡ್ರಾಯ್ಡ್ ಡೆವಲಪರ್ ಸಮುದಾಯದೊಂದಿಗೆ ಕೆಲಸ ಮಾಡಿರುವುದರಿಮದ ಈ ಸ್ಮಾರ್ಟ್‌ಫೋನಿನಲ್ಲಿ ವಿಶಿಷ್ಟ ಅನುಭವಕ್ಕಾಗಿ ವಿಶೇಷ ಅಪ್ಲಿಕೇಶನ್‌ಗಳು ಮತ್ತು ಸೇವೆಗಳು ಲಭ್ಯವಿವೆ ಎಂದು ತಿಳಿದುಬಂದಿದೆ.

Best Mobiles in India

English summary
we can now confirm that Samsung has started manufacturing the phone in India and is likely to formally launch it in the country very soon. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X