Just In
- 15 min ago
ಜಿಯೋ ಗ್ರಾಹಕರೆ, ಈ ರೀಚಾರ್ಜ್ ಪ್ಲ್ಯಾನ್ ಅನ್ನು ಖಂಡಿತಾ ನೀವು ಇಷ್ಟ ಪಡ್ತೀರಿ!?
- 19 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 21 hrs ago
Tech News of this Week; ಜಿಯೋ ಹಿಂದಿಕ್ಕಿದ ಏರ್ಟೆಲ್, ಹೆಚ್ಚು ಸೇಲ್ ಆದ ಫೋನ್ ಯಾವುದು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
Don't Miss
- News
Breaking; ಸಾಹಿತಿ, ವಿಮರ್ಶಕ ಕೆ. ವಿ. ತಿರುಮಲೇಶ್ ನಿಧನ
- Automobiles
'ಅಲ್ಟ್ರಾವೈಲೆಟ್ F77' ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Movies
ರಿಲೀಸ್ ದಿನ ಅಬ್ಬರಿಸಿದ್ದ ಕ್ರಾಂತಿ ನಂತರದ 3 ದಿನಗಳಲ್ಲಿ ಗಳಿಸಿದ್ದೆಷ್ಟು? ಇಲ್ಲಿದೆ ವೀಕೆಂಡ್ ಕಲೆಕ್ಷನ್ ರಿಪೋರ್ಟ್
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ಯಾಮ್ಸಂಗ್‌ನ ಪ್ರತಿಷ್ಠೆಯ ಕೂಸು 'ಗ್ಯಾಲಕ್ಸಿ ಫೋಲ್ಡ್' ನೋಂದಣಿ ಆರಂಭ!
ಸ್ಯಾಮ್ಸಂಗ್ ಕಂಪನಿಯ ಪ್ರತಿಷ್ಠೆಯ ಕೂಸು ''ಗ್ಯಾಲಕ್ಸಿ ಫೋಲ್ಡ್'' ಸ್ಮಾರ್ಟ್‌ಫೋನ್ ಇದೇ ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೆ ಪೂರಕವಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್ ನೋಂದಣಿ ಪ್ರಕ್ರಿಯೆ ಕೂಡ ಆರಂಭಗೊಂಡಿದೆ. ಮಡಚಬಲ್ಲ ಡಿಸ್‌ಪ್ಲೇ ಸಮಸ್ಯೆಯಿಂದಾಗಿ 'ಗ್ಯಾಲಕ್ಸಿ ಫೋಲ್ಡ್' ಬಿಡುಗಡೆಯನ್ನು ಮುಂದೂಡುತ್ತಾ ಬಂದಿರುವ ಸ್ಯಾಮ್‌ಸಂಗ್, ಇದೇ ಸೆಪ್ಟೆಂಬರ್ 27ಕ್ಕೆ ನೂತನ ಗ್ಯಾಲಕ್ಸಿ ಫೋಲ್ಡ್ ಫೋನ್ ಅನ್ನು ಅಮೆರಿಕದಲ್ಲಿ ಬಿಡುಗಡೆ ಮಾಡಲಿದೆ ಎಂದು ಕಂಪೆನಿ ಅಧಿಕೃತ ಮೂಲಗಳು ತಿಳಿಸಿವೆ.

ಹೌದು, ಮಡಚಬಲ್ಲ ಸ್ಮಾರ್ಟ್‌ಫೋನ್ ಕುರಿತು ಟೆಕ್‌ಲೋಕ ಕಾತರದಿಂದ ಎದುರು ನೋಡುತ್ತಿದೆ. ಹೀಗುರುವಾಗಲೇ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಫೋಲ್ಡ್ ನೋಂದಣಿ ಪ್ರಕ್ರಿಯೆ ಆರಂಭಿಸಿ ಸಿಹಿಸುದ್ದಿ ನೀಡಿದೆ. ಇದೀಗ ಬಂದಿರುವ ಮಾಹಿತಿಯಂತೆ, ಸೆ. 27 ರಿಂದ ಗ್ಯಾಲಕ್ಸಿ ಫೋಲ್ಡ್ ಅಮೆರಿಕದ ಮಾರುಕಟ್ಟೆ ಪ್ರವೇಶಿಸಲಿದೆ. ಅದಾದ ಕೆಲ ವಾರಗಳ ಬಳಿಕ ಇತರ ಮಾರುಕಟ್ಟೆಗಳಿಗೆ ಗ್ಯಾಲಕ್ಸಿ ಪೋಲ್ಡ್ ಎಂಟ್ರಿ ಕೊಡುವ ನಿರೀಕ್ಷೆಯಿದೆ. ಗ್ಯಾಲಕ್ಸಿ ಫೋಲ್ಡ್ ಬೆಲೆ ದೇಶದಲ್ಲಿ ಅಂದಾಜು 1,40,000 ರೂ. ಇರುವ ಸಾಧ್ಯತೆಯಿದೆ.

ಗ್ಯಾಲಕ್ಸಿ ಫೋಲ್ಡ್' ಸ್ಮಾರ್ಟ್‌ಫೋನ್ ಅಧಿಕೃತವಾಗಿ ಅನಾವರಣಗೊಂಡು ಐದು ತಿಂಗಳುಗಳಿಗಿಂತ ಹೆಚ್ಚು ಕಳೆದರೂ ಮಾರಾಟಕ್ಕೆ ಬಂದಿರಲಿಲ್ಲ. ಫೋನ್ ತೆರೆದು ಬಳಸಲು ಆರಂಭಿಸುತ್ತಿದ್ದಂತೆಯೇ ಪರದೆಯ ಕೆಳ ಭಾಗದಲ್ಲಿ ಪ್ರೊಟೆಕ್ಟಿವ್ ಲೇಯರ್ ಕಿತ್ತುಬರುತ್ತಿದೆ ಎಂದು ಹೇಳಲಾಗಿತ್ತು. ಈ ಸಮಸ್ಯೆಯನ್ನು ಈಗ ಬಗೆಹರಿಸಲಾಗಿದೆ ಎಂದು ಸ್ಯಾಮ್‌ಸಂಗ್ ಧೃಢಪಡಿಸಿದೆ. ಹಾಗಾದರೆ, ಮೊಟ್ಟ ಮೊದಲ ಮಡುಚಬಹುದಾದ 'ಗ್ಯಾಲಕ್ಸಿ ಫೋಲ್ಡ್' ಫೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಭವಿಷ್ಯದಲ್ಲಿ ಇಂತಹದೊಂದು ಮೊಬೈಲ್ ಮಾರುಕಟ್ಟೆಗೆ ಬರಲಿದೆ ಎಂಬ ಊಹೆಯನ್ನು ಮಾಡಿಕೊಳ್ಳದಂತೆ ಗ್ಯಾಲಕ್ಸಿ ಫೋಲ್ಡ್ ಸ್ಮಾರ್ಟ್‌ಫೋನ್ ವಿನ್ಯಾಸಗೊಂಡಿದೆ. ಮಡುಚಿದಾಗ ಕೇವಲ 4.6 ಇಂಚಿನ ಸ್ಕ್ರೀನ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಅನ್ನು ಪೂರ್ತಿ ತೆರೆದಾಗ 7.3 ಇಂಚಿನ ಸ್ಕ್ರೀನ್ ತೆರೆದುಕೊಳ್ಳುತ್ತದೆ. ಮುಂಬಾಗದ ಬಲಾಭಾಗದಲ್ಲಿ ಮೂರು ಸೆಲ್ಫೀ ಕ್ಯಾಮೆರಾಕ್ಕೆ ಸಪೋರ್ಟ್ ಮಾಡುವಂತಹ ನೋಚ್ ಹಾಗೂ ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ವಿನ್ಯಾಸಕ್ಕೆ ಸರಿಸಾಟಿಯಾದ ಸ್ಮಾರ್ಟ್‌ಫೋನ್ ಮತ್ತೊಂದಿಲ್ಲ.

ಇದೊಂದು ಮಡಚುವ ಸ್ಮಾರ್ಟ್‌ಫೋನ್ ಆಗಿರುವುದರಿಂದ ಎರಡು ಡಿಸ್‌ಪ್ಲೇ ಸ್ರೀನ್‌ಗಳನ್ನು ಹೊಂದಿರುವುದನ್ನು ನೀವು ಸುಲಭವಾಗಿ ತಿಳಿಯಬಹುದಾಗಿದೆ. 4.6 ಇಂಚಿನ ಹಾಗೂ 7.3 ಇಂಚಿನ ಸ್ಕ್ರೀನ್ ಎರಡು ಸ್ಕ್ರೀನ್‌ಗಳು ಗ್ಯಾಲಾಕ್ಸಿ ಫೋಲ್ಡ್ ಫೋನಿನ ಪ್ರಮುಖ ವಿಶೇಷತೆಯಾಗಿದೆ. ಸ್ಯಾಮ್ಸಂಗ್ ಹೇಳುವ ಪ್ರಕಾರ, ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಅತ್ಯಂತ ವಿಶೇಷವಾಗಿದ್ದು, ಸ್ಮಾರ್ಟ್‌ಫೋನ್ ಅನ್ನು ಮನಬಂದಂತೆ ಪದರ ಮಾಡಲು ಅನುಮತಿಸುತ್ತದೆ ಎಂದು ತಿಳಿಸಿದೆ.

ಮೊದಲೇ ಹೇಳಿದಂತೆ ಸ್ಯಾಮ್ಸಂಗ್ ಗ್ಯಾಲಕ್ಸಿ ಪದರ 7nm ಆಕ್ಟಾ-ಕೋರ್ ಪ್ರೊಸೆಸರ್ನಿಂದ ಶಕ್ತಿಯನ್ನು ಹೊಂದಿದೆ ಮತ್ತು ಡ್ಯುಯಲ್ ಬ್ಯಾಟರಿ ಸಿಸ್ಟಮ್ ಅನ್ನು ಪ್ಯಾಕ್ ಮಾಡುತ್ತದೆ. ಇದು ವೈರ್ಲೆಸ್ ಪವರ್ ಶೇರ್ ಸಿಸ್ಟಮ್ ಅನ್ನು ಬೆಂಬಲಿಸುತ್ತದೆ, ಇದು ಗ್ಯಾಲಕ್ಸಿ ಪದರವನ್ನು ಸ್ವತಃ ಚಾರ್ಜ್ ಮಾಡಲು ಮತ್ತು ಎರಡನೆಯ ಸಾಧನವನ್ನು ಏಕಕಾಲದಲ್ಲಿ ಅನುಮತಿಸುತ್ತದೆ. ಇನ್ನು ಫೋನ್ 12 ಜಿಬಿ ರಾಮ್ ಮತ್ತು 512 ಜಿಬಿ ಆಂತರಿಕ ಶೇಖರಣಾ ಬೆಂಬಲವನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.

'ಗ್ಯಾಲಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಒಟ್ಟು ಆರು ಕ್ಯಾಮೆರಾಗಳನ್ನು ಪ್ಯಾಕ್ ಮಾಡುವ ಮೊದಲ ಸ್ಮಾರ್ಟ್‌ಫೋನ್ ಆಗಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಮಡುಚಿದಾದ 10MP+f/2.2 ಸಾಮರ್ಥ್ಯದ ಒಂದು ಸೆಲ್ಫೀ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ಫೋನ್ 16MP ಅಲ್ಟ್ರಾ ವಿಶಾಲ ಕೋನ ಮಸೂರ ಮತ್ತು ಎರಡು 12MP ವಿಶಾಲ ಕೋನ ಮತ್ತು ಟೆಲಿಫೋಟೋ ಮಸೂರಗಳ ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಇನ್ನು ಟ್ಯಾಬ್ಲೆಟ್ ಮೋಡ್‌ನಲ್ಲಿ 10MP + 8MP ಡೆಪ್ತ್ ಸಂವೇದಕದಲ್ಲಿ ಸೆಲ್ಫೀ ಕ್ಯಾಮೆರಾಗಳನ್ನು ಕಾಣಬಹುದಾಗಿದೆ.

ಭಾರೀ ಫೀಚರ್ಸ್ ಹೊಂದಿರುವ 'ಗ್ಯಾಲಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಶಕ್ತಿಕೇಂದ್ರಕ್ಕೆ ಬಲವನ್ನು ಒದಗಿಸುವಲ್ಲಿ ಸ್ಯಾಮ್‌ಸಂಗ್ ಯಶಸ್ವಿಯಾಗಿದೆ. 4380mAh ಬ್ಯಾಟರಿ ಶಕ್ತಿಯನ್ನು ಹೊಂದಿರುವ ಸ್ಮಾರ್ಟ್‌ಪೋನ್ ತ್ವರಿತವಾಗಿ ಚಾರ್ಜ್ ಆಗುವಂತಹ ಇತ್ತೀಚಿನ QC2.0 ವೇಗದ ತಂತ್ರಜ್ಞಾನವನ್ನು ಹೊತ್ತು 'ಗ್ಯಾಲಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. QC2.0 ಮತ್ತು AFC ಯೊಂದಿಗೆ ಹೊಂದಾಣಿಕೆಯ ಚಾರ್ಜಿಂಗ್ WPC ಮತ್ತು PMA ನೊಂದಿಗೆ ಹೊಂದಾಣಿಕೆಯ ವೈರ್ಲೆಸ್ ಚಾರ್ಜಿಂಗ್ ಆಗಿದೆ.!

'ಗ್ಯಾಲಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 9 ಅಥವಾ ಆಂಡ್ರಾಯ್ಡ್ 10 ಮೂಲಕ ರನ್ ಆಗಲಿದೆ ಮತ್ತು ಅಪ್ಲಿಕೇಶನ್ ಮುಂದುವರಿದಂತಹ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ ಮತ್ತು ಅದು ಮುಖಪುಟದಲ್ಲಿ ಚಾಲನೆಯಲ್ಲಿರುವ ಒಳಭಾಗದಲ್ಲಿ ಅದೇ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ನಿಮಗೆ ಅನುಮತಿಸುತ್ತದೆ. ಸ್ಯಾಮ್ಸಂಗ್ ಗೂಗಲ್ ಮತ್ತು ಆಂಡ್ರಾಯ್ಡ್ ಡೆವಲಪರ್ ಸಮುದಾಯದೊಂದಿಗೆ ಕೆಲಸ ಮಾಡಿರುವುದರಿಮದ ಈ ಸ್ಮಾರ್ಟ್‌ಫೋನಿನಲ್ಲಿ ವಿಶಿಷ್ಟ ಅನುಭವಕ್ಕಾಗಿ ವಿಶೇಷ ಅಪ್ಲಿಕೇಶನ್‌ಗಳು ಮತ್ತು ಸೇವೆಗಳು ಲಭ್ಯವಿವೆ ಎಂದು ತಿಳಿದುಬಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470