ಭಾರತದಲ್ಲಿ ಕೇವಲ ಅರ್ಧಗಂಟೆಯಲ್ಲಿ ಐಶಾರಾಮಿ 'ಗ್ಯಾಲಕ್ಸಿ ಫೋಲ್ಡ್' ಸೋಲ್ಡ್ ಔಟ್!

|

ಐಷಾರಾಮಿ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿರುವ ಸ್ಯಾಮ್‌ಸಂಗ್‌ನ 'ಗ್ಯಾಲಕ್ಸಿ ಫೋಲ್ಡ್' ಫೋನ್ ಕೇವಲ ಅರ್ಧಗಂಟೆಯಲ್ಲಿ ಔಟ್ ಆಫ್ ಸ್ಟಾಕ್ ಪಟ್ಟಿಗೆ ಸೇರಿಕೊಂಡಿದೆ. ಸ್ಯಾಮ್‌ಸಂಗ್ ಕಂಪನಿಯು ತನ್ನ ಅಧಿಕೃತ ಆನ್‌ಲೈನ್ ಸ್ಟೋರ್‌ನಲ್ಲಿ ಶುಕ್ರವಾರ ಪೂರ್ವ ಬುಕಿಂಗ್ ತೆರೆದ 30 ನಿಮಿಷಗಳ ಅವಧಿಯಲ್ಲಿ ಒಟ್ಟು 1,600 'ಗ್ಯಾಲಕ್ಸಿ ಫೋಲ್ಡ್' ಸಾಧನಗಳನ್ನು ಫ್ಲಾಶ್‌ ಸೇಲ್‌ನಲ್ಲಿ ಮಾರಾಟ ಮಾಡಿದೆ ಎಂದು ಕಂಪೆನಿಯ ಉನ್ನತ ಮೂಲಗಳು ತಿಳಿಸಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

'ಗ್ಯಾಲಕ್ಸಿ ಫೋಲ್ಡ್'

ಹೌದು, ಸೂಪರ್-ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಮತ್ತೊಂದು ಮೊದಲನೆಯದು ಎಂದು ಕರೆಸಿಕೊಂಡಿರುವ ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಫೋಲ್ಡ್' ದೇಶದಲ್ಲೂ ಕೂಡ ಹವಾ ಎಬ್ಬಿಸಿದೆ. ಸ್ಯಾಮ್‌ಸಂಗ್ ಕಂಪೆನಿ ಪ್ರಕಾರ, ಗ್ಯಾಲಕ್ಸಿ ಫೋಲ್ಡ್ ಅನ್ನು ಮೊದಲೇ ಕಾಯ್ದಿರಿಸಿದ ಎಲ್ಲಾ ಗ್ರಾಹಕರು ಈಗಾಗಲೇ ಪೂರ್ಣ ಮೊತ್ತ 1,64,999 ರೂ.ಗಳನ್ನು ಮುಂಗಡವಾಗಿ ಪಾವತಿಸಿದ್ದಾರೆ. ಅವರಿಗೆ ಅಕ್ಟೋಬರ್ 20 ರಂದು 'ಗ್ಯಾಲಕ್ಸಿ ಫೋಲ್ಡ್' ಸಾಧನಗಳು ಕೈಸೇರಲಿವೆ ಎಂದು ಕಂಪೆನಿಯ ಉನ್ನತ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

'ಗ್ಯಾಲಕ್ಸಿ ಫೋಲ್ಡ್'

ಸ್ಯಾಮ್‌ಸಂಗ್‌ನ 'ಗ್ಯಾಲಕ್ಸಿ ಫೋಲ್ಡ್' ಸ್ಮಾರ್ಟ್‌ಫೋನಿನ ಬುಕ್ಕಿಂಗ್ ಜೊತೆಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಫೋಲ್ಡ್ ಫೋನ್ ಖರೀದಿಸಿರುವ ಪ್ರತಿ ಗ್ರಾಹಕರು ಒಂದು ವರ್ಷದ "ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ ಪ್ರೊಟೆಕ್ಷನ್" ಅನ್ನು ಸಹ ಪಡೆಯುತ್ತಾರೆ ಎಂದು ತಿಳಿದುಬಂದಿದೆ. ಹಾಗಾದರೆ, ಮೊನ್ನೆಮೊನ್ನೆಯಷ್ಟೇ ಭಾರತದಲ್ಲಿ ಬಿಡುಗಡೆಯಾಗಿರುವ ಟೆಕ್ ವಿಸ್ಮಯದ 'ಗ್ಯಾಲಕ್ಸಿ ಫೋಲ್ಡ್' ಸ್ಮಾರ್ಟ್‌ಫೋನ್ ಹೇಗಿದೆ?, ಗ್ಯಾಲಕ್ಸಿ ಫೋಲ್ಡ್' ಸ್ಮಾರ್ಟ್‌ಫೋನ್ ಹೊಂದಿರುವ ಫೀಚರ್ಸ್ ಮತ್ತು ವಿಶೇಷತೆಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಗ್ಯಾಲಕ್ಸಿ ಫೋಲ್ಡ್ ವಿನ್ಯಾಸ ಹೇಗಿದೆ?

ಗ್ಯಾಲಕ್ಸಿ ಫೋಲ್ಡ್ ವಿನ್ಯಾಸ ಹೇಗಿದೆ?

ಭವಿಷ್ಯದಲ್ಲಿ ಇಂತಹದೊಂದು ಮೊಬೈಲ್ ಮಾರುಕಟ್ಟೆಗೆ ಬರಲಿದೆ ಎಂಬ ಊಹೆಯನ್ನು ಮಾಡಿಕೊಳ್ಳದಂತೆ ಗ್ಯಾಲಕ್ಸಿ ಫೋಲ್ಡ್ ಸ್ಮಾರ್ಟ್‌ಫೋನ್ ವಿನ್ಯಾಸಗೊಂಡಿದೆ. ಮಡುಚಿದಾಗ ಕೇವಲ 4.6 ಇಂಚಿನ ಸ್ಕ್ರೀನ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಅನ್ನು ಪೂರ್ತಿ ತೆರೆದಾಗ 7.3 ಇಂಚಿನ ಸ್ಕ್ರೀನ್ ತೆರೆದುಕೊಳ್ಳುತ್ತದೆ. ಮುಂಬಾಗದ ಬಲಾಭಾಗದಲ್ಲಿ ಮೂರು ಸೆಲ್ಫೀ ಕ್ಯಾಮೆರಾಕ್ಕೆ ಸಪೋರ್ಟ್ ಮಾಡುವಂತಹ ನೋಚ್ ಹಾಗೂ ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ ವಿನ್ಯಾಸಕ್ಕೆ ಸರಿಸಾಟಿಯಾದ ಸ್ಮಾರ್ಟ್‌ಫೋನ್ ಮತ್ತೊಂದಿಲ್ಲ.

ಗ್ಯಾಲಕ್ಸಿ ಫೋಲ್ಡ್ ಡಿಸ್‌ಪ್ಲೇ ಹೇಗಿದೆ?

ಗ್ಯಾಲಕ್ಸಿ ಫೋಲ್ಡ್ ಡಿಸ್‌ಪ್ಲೇ ಹೇಗಿದೆ?

ಇದೊಂದು ಮಡಚುವ ಸ್ಮಾರ್ಟ್‌ಫೋನ್ ಆಗಿರುವುದರಿಂದ ಎರಡು ಡಿಸ್‌ಪ್ಲೇ ಸ್ರೀನ್‌ಗಳನ್ನು ಹೊಂದಿರುವುದನ್ನು ನೀವು ಸುಲಭವಾಗಿ ತಿಳಿಯಬಹುದಾಗಿದೆ. 4.6 ಇಂಚಿನ ಹಾಗೂ 7.3 ಇಂಚಿನ ಸ್ಕ್ರೀನ್ ಎರಡು ಸ್ಕ್ರೀನ್‌ಗಳು ಗ್ಯಾಲಾಕ್ಸಿ ಫೋಲ್ಡ್ ಫೋನಿನ ಪ್ರಮುಖ ವಿಶೇಷತೆಯಾಗಿದೆ. ಸ್ಯಾಮ್ಸಂಗ್ ಹೇಳುವ ಪ್ರಕಾರ, ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಅತ್ಯಂತ ವಿಶೇಷವಾಗಿದ್ದು, ಸ್ಮಾರ್ಟ್‌ಫೋನ್ ಅನ್ನು ಮನಬಂದಂತೆ ಪದರ ಮಾಡಲು ಅನುಮತಿಸುತ್ತದೆ ಎಂದು ತಿಳಿಸಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಮೊದಲೇ ಹೇಳಿದಂತೆ ಸ್ಯಾಮ್ಸಂಗ್ ಗ್ಯಾಲಕ್ಸಿ ಪದರ 7nm ಆಕ್ಟಾ-ಕೋರ್ ಪ್ರೊಸೆಸರ್ನಿಂದ ಶಕ್ತಿಯನ್ನು ಹೊಂದಿದೆ ಮತ್ತು ಡ್ಯುಯಲ್ ಬ್ಯಾಟರಿ ಸಿಸ್ಟಮ್ ಅನ್ನು ಪ್ಯಾಕ್ ಮಾಡುತ್ತದೆ. ಇದು ವೈರ್ಲೆಸ್ ಪವರ್ ಶೇರ್ ಸಿಸ್ಟಮ್ ಅನ್ನು ಬೆಂಬಲಿಸುತ್ತದೆ, ಇದು ಗ್ಯಾಲಕ್ಸಿ ಪದರವನ್ನು ಸ್ವತಃ ಚಾರ್ಜ್ ಮಾಡಲು ಮತ್ತು ಎರಡನೆಯ ಸಾಧನವನ್ನು ಏಕಕಾಲದಲ್ಲಿ ಅನುಮತಿಸುತ್ತದೆ. ಇನ್ನು ಫೋನ್ 12 ಜಿಬಿ RAM ಮತ್ತು 512 ಜಿಬಿ ಆಂತರಿಕ ಶೇಖರಣಾ ಬೆಂಬಲವನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.

ಒಟ್ಟು ಆರು ಕ್ಯಾಮೆರಾಗಳು!

ಒಟ್ಟು ಆರು ಕ್ಯಾಮೆರಾಗಳು!

'ಗ್ಯಾಲಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಒಟ್ಟು ಆರು ಕ್ಯಾಮೆರಾಗಳನ್ನು ಪ್ಯಾಕ್ ಮಾಡುವ ಮೊದಲ ಸ್ಮಾರ್ಟ್‌ಫೋನ್ ಆಗಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಮಡುಚಿದಾದ 10MP+f/2.2 ಸಾಮರ್ಥ್ಯದ ಒಂದು ಸೆಲ್ಫೀ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ಫೋನ್ 16MP ಅಲ್ಟ್ರಾ ವಿಶಾಲ ಕೋನ ಮಸೂರ ಮತ್ತು ಎರಡು 12MP ವಿಶಾಲ ಕೋನ ಮತ್ತು ಟೆಲಿಫೋಟೋ ಮಸೂರಗಳ ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಇನ್ನು ಟ್ಯಾಬ್ಲೆಟ್ ಮೋಡ್‌ನಲ್ಲಿ 10MP + 8MP ಡೆಪ್ತ್ ಸಂವೇದಕದಲ್ಲಿ ಸೆಲ್ಫೀ ಕ್ಯಾಮೆರಾಗಳನ್ನು ಕಾಣಬಹುದಾಗಿದೆ.

4380mAh ಬ್ಯಾಟರಿ ಸಾಮರ್ಥ್ಯ!

4380mAh ಬ್ಯಾಟರಿ ಸಾಮರ್ಥ್ಯ!

ಭಾರೀ ಫೀಚರ್ಸ್ ಹೊಂದಿರುವ 'ಗ್ಯಾಲಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಶಕ್ತಿಕೇಂದ್ರಕ್ಕೆ ಬಲವನ್ನು ಒದಗಿಸುವಲ್ಲಿ ಸ್ಯಾಮ್‌ಸಂಗ್ ಯಶಸ್ವಿಯಾಗಿದೆ. 4380mAh ಬ್ಯಾಟರಿ ಶಕ್ತಿಯನ್ನು ಹೊಂದಿರುವ ಸ್ಮಾರ್ಟ್‌ಪೋನ್ ತ್ವರಿತವಾಗಿ ಚಾರ್ಜ್ ಆಗುವಂತಹ ಇತ್ತೀಚಿನ QC2.0 ವೇಗದ ತಂತ್ರಜ್ಞಾನವನ್ನು ಹೊತ್ತು 'ಗ್ಯಾಲಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಫೋನಿನಲ್ಲಿ 15W ವೇಗದ ವೈರ್ಡ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಮತ್ತು 9W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ ವೈರ್ಲೆಸ್ ಚಾರ್ಜಿಂಗ್ ಸಾಮರ್ಥ್ಯವಿದೆ.

ದಪ್ಪ ಬೆಜೆಲ್‌ಗಳಿಂದ ಆವೃತ

ದಪ್ಪ ಬೆಜೆಲ್‌ಗಳಿಂದ ಆವೃತ

'ಗ್ಯಾಲಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್, ಬ್ಲೂಟೂತ್ 5, ಯುಎಸ್ಬಿ ಟೈಪ್-ಸಿ ಪೋರ್ಟ್, ಡಾಲ್ಬಿ ಅಟ್ಮೋಸ್ ಮತ್ತು ಸ್ಯಾಮ್ಸಂಗ್ ಡಿಎಕ್ಸ್‌ಗೆ ಬೆಂಬಲವಿದೆ. ಡಿಸ್‌ಪ್ಲೇ 720 ಪಿಕ್ಸೆಲ್‌ಗಳು ದಪ್ಪ ಬೆಜೆಲ್‌ಗಳಿಂದ ಆವೃತವಾಗಿವೆ. ಎರಡು ಪ್ರದರ್ಶನಗಳ ನಡುವೆ ತಡೆರಹಿತ ಪರಿವರ್ತನೆಗಾಗಿ ಸ್ಮಾರ್ಟ್‌ಫೋನ್ ಎಲ್ಲಾ ನಿರಂತರತೆಯ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ ಮತ್ತು ದೊಡ್ಡ ಪರದೆಯ ಸ್ಥಳಕ್ಕಾಗಿ ಮೂರು-ವಿಂಡೋ ಬಹುಕಾರ್ಯಕವನ್ನು ಬೆಂಬಲಿಸುತ್ತದೆ ಎಂದು ಹೇಳಲಾಗುತ್ತದೆ.

ನೂತನ ಆಂಡ್ರಾಯ್ಡ್ ಪ್ಯಾಕ್!

ನೂತನ ಆಂಡ್ರಾಯ್ಡ್ ಪ್ಯಾಕ್!

'ಗ್ಯಾಲಕ್ಸಿ ಪೋಲ್ಡ್' ಸ್ಮಾರ್ಟ್‌ಫೋನ್ ಕಂಪನಿಯ ಒನ್ ಯುಐನೊಂದಿಗೆ ಆಂಡ್ರಾಯ್ಡ್ 9 ಮೂಲಕ ರನ್ ಆಗಲಿದೆ ಮತ್ತು ಅಪ್ಲಿಕೇಶನ್ ಮುಂದುವರಿದಂತಹ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ ಮತ್ತು ಅದು ಮುಖಪುಟದಲ್ಲಿ ಚಾಲನೆಯಲ್ಲಿರುವ ಒಳಭಾಗದಲ್ಲಿ ಅದೇ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ನಿಮಗೆ ಅನುಮತಿಸುತ್ತದೆ. ಸ್ಯಾಮ್ಸಂಗ್ ಗೂಗಲ್ ಮತ್ತು ಆಂಡ್ರಾಯ್ಡ್ ಡೆವಲಪರ್ ಸಮುದಾಯದೊಂದಿಗೆ ಕೆಲಸ ಮಾಡಿರುವುದರಿಂದ ಈ ಸ್ಮಾರ್ಟ್‌ಫೋನಿನಲ್ಲಿ ವಿಶಿಷ್ಟ ಅನುಭವಕ್ಕಾಗಿ ವಿಶೇಷ ಅಪ್ಲಿಕೇಶನ್‌ಗಳು ಮತ್ತು ಸೇವೆಗಳು ಲಭ್ಯವಿವೆ.

Best Mobiles in India

English summary
The company has now closed the pre-bookings of Galaxy Fold in India for some time, as the initial stock was limited to 1,600 units. to know more visit to kannada.gizbxot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X