ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ7 ಹೊಂದಿದೆ "ಎಸ್‌ ಪವರ್‌ ಪ್ಲಾನಿಂಗ್"! ಏನಿದು ಅದ್ಭುತ ತಂತ್ರಜ್ಞಾನ?

Written By:

ಸ್ಮಾರ್ಟ್‌ಫೋನ್ ಬಳಕೆದಾರರ ಬಹುದೊಡ್ಡ ಸಮಸ್ಯೆ ಎಂದರೆ ಯಾವುದೇ ಸ್ಮಾರ್ಟ್‌ಫೋನ್ ದೀರ್ಘಕಾಲ ಬ್ಯಾಟರಿ ಬಾಳಿಕೆಯನ್ನು ನೀಡುವುದಿಲ್ಲ ಎಂಬುದು. ಏನೇ ಮಾಡಿದರೂ ಸ್ಮಾರ್ಟ್‌ಫೋನ್ ಬ್ಯಾಟರಿಯ ಅತ್ಯುತ್ತಮ ತಂತ್ರಜ್ಞಾನ ಬರುವವರೆಗೂ ಬಹುಕಾಲ ಬ್ಯಾಟರಿ ಬಾಳಿಕೆ ಬರುವ ಸ್ಮಾರ್ಟ್‌ಫೋನ್ ಹೊಂದಲು ಸಾಧ್ಯವಿಲ್ಲ!!

ಆದ,ರೆ ಈ ಮಾತನ್ನು ಜಗತ್ತಿನ ಬಹುದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳಲ್ಲಿ ಒಂದಾದ ಸ್ಯಾಮ್‌ಸಂಗ್ ಸುಳ್ಳು ಮಾಡಿದೆ. ಹೌದು ಸ್ಯಾಮ್‌ಸಂಗ್ ನೂತನ ಗ್ಯಾಲಾಕ್ಸಿ ಜೆ7 ಪ್ರೈಮ್ ಹೊಂದಿರುವ "ಎಸ್‌ ಪವರ್‌ ಪ್ಲಾನಿಂಗ್" ಬ್ಯಾಟರಿ ಪ್ರಿಯ ಸ್ಮಾರ್ಟ್‌ಫೋನ್ ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ!!

ಆನ್‌ಲೈನ್ ವ್ಯವಹಾರ ಏಕೆ ಮಾಡಬೇಕು ಮತ್ತು ಏಕೆ ಮಾಡಬಾರದು? 10 ಕಾರಣಗಳು!?

ಹಾಗಾದರೆ ಸ್ಯಾಮ್‌ಸಂಗ್ ಅತಿಹೆಚ್ಚು ಬ್ಯಾಟರಿ ಬಾಳಿಕೆ ನೀಡುವ ಸ್ಮಾರ್ಟ್‌ಫೋನ್‌ ಕಂಡುಹಿಡಿದಿದೆಯೇ ಎಂದು ಆಶ್ಚರ್ಯಪಡಬೇಡಿ. ಯಾಕೇಂದರೆ ಸ್ಯಾಮ್‌ಸಂಗ್ ಪ್ರಸ್ತುತ ಇರುವ ಬ್ಯಾಟರಿ ತಂತ್ರಜ್ಞಾನಕ್ಕಿಂತ ಹೆಚ್ಚು ಏನನ್ನು ಕಂಡುಹಿಡಿದಿಲ್ಲ. ಆದರೆ ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿ ಉಪಯೋಗ ಹೇಗೆ ಆಗಬೇಕು ಎನ್ನುವ ಅತ್ಯದ್ಬುತ ತಂತ್ರಜ್ಞಾನವನ್ನು ತನ್ನ ಗ್ಯಾಲಾಕ್ಸಿ ಜೆ7 ಪ್ರೈಮ್  ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಿಕೊಂಡಿದೆ!

ಹಾಗಾದರೆ ಈ ಗ್ಯಾಲಾಕ್ಸಿ ಜೆ7 ಪ್ರೈಮ್ ಸ್ಮಾರ್ಟ್‌ಫೋನ್ "ಎಸ್‌ ಪವರ್‌ ಪ್ಲಾನಿಂಗ್" ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕೆಳಗಿನ ಸ್ಲೈಡರ್‌ ಮೂಲಕ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು

ಏನಿದು "ಎಸ್‌ ಪವರ್‌ ಪ್ಲಾನಿಂಗ್" ಪ್ಲಾನಿಂಗ್?

ಇಂಟರ್‌ನೆಟ್, ಗೆಮ್‌ಗಳಿಗಾಗಿಸ್ಮಾರ್ಟ್‌ಫೋನ್ ಹೆಚ್ಚು ಬ್ಯಾಟರಿಯನ್ನು ಬಳಸುತ್ತದೆ. ಹಾಗಾಗಿ ಸ್ಯಾಮ್‌ಸಂಗ್ ತನ್ನ ಗ್ಯಾಲಾಕ್ಸಿ ಜೆ7 ಸ್ಮಾರ್ಟ್‌ಫೋನ್‌ನಲ್ಲಿ ಮೂರು ರೀತಿಯಲ್ಲಿ ಬ್ಯಾಟರಿ ಬಳಕೆ ಮಾಡಬಹುದಾದ ಅತ್ತುತ್ತಮ ಮೂರು ಆಯ್ಕೆಯನ್ನು ಕಲ್ಪಿಸಿದೆ. ಅವುಗಳನ್ನೆ ಒಟ್ಟಾಗಿ ಎಸ್‌ ಪವರ್‌ ಪ್ಲಾನಿಂಗ್" ಎಂದು ಕರೆಯಲಾಗಿದೆ. ಆ ಮೂರು ಹಂತಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

#1 ರಿಸರ್ವ್ ಬ್ಯಾಟರಿ ಫಾರ್ ಕಾಲ್ಸ್

#1 ರಿಸರ್ವ್ ಬ್ಯಾಟರಿ ಫಾರ್ ಕಾಲ್ಸ್

ಗ್ಯಾಲಾಕ್ಸಿ ಜೆ7 ಸ್ಮಾರ್ಟ್‌ಫೋನ್‌ ಸೆಟ್ಟಿಂಗ್ಸ್‌ನಲ್ಲಿ ರಿಸರ್ವ್ ಬ್ಯಾಟರಿ ಫಾರ್ ಕಾಲ್ಸ್ ಎನ್ನುವ ಆಯ್ಕೆ ಇದ್ದು, ಅದನ್ನು ಎನೆಬಲ್ ಮಾಡಿದರೆ ನೀವು ಸ್ಮಾರ್ಟ್‌ಫೋನ್‌ ಬಳಕೆ ಮಾಡುವುದನ್ನು ಇದು ನಿಂತ್ರಿಸುತ್ತದೆ ಮತ್ತು ಬ್ಯಾಟರಿ ಉಪಯೋಗದ ಬಗ್ಗೆ ಎಚ್ಚರಿಕೆ ನಿಡುತ್ತದೆ.

#2 ಎಕ್ಸ್‌ಟೆಂಡ್ ಬ್ಯಾಟರಿ ಟೈಮ್

#2 ಎಕ್ಸ್‌ಟೆಂಡ್ ಬ್ಯಾಟರಿ ಟೈಮ್

ಎಕ್ಸ್‌ಟೆಂಡ್ ಬ್ಯಾಟರಿ ಟೈಮ್ ಎಸ್‌ ಪವರ್‌ ಪ್ಲಾನಿಂಗ್‌ನ ಎರಡನೇ ಹಂತ. ಈ ಆಯ್ಕೆಯಲ್ಲಿ ನಿವು ನಿಮ್ಮ ಬ್ಯಾಟರಿ ಬಳಕೆಯನ್ನು ಮೂರು ಲೆವೆಲ್‌ಗಳಲ್ಲಿ ನಿಯಂತ್ರಿಸಬಹುದು. ಮೇಲಿನ ಚಿತ್ರದ ಮೂಲಕ ಈ ಬಗ್ಗೆ ಹೆಚ್ಚು ತಿಳಿಯಿರಿ.

#3 ಫಾರ್ವರ್ಡ್ ಕಾಲ್ಸ್ ವೆನ್ ನೊ ಬ್ಯಾಟರಿ.

#3 ಫಾರ್ವರ್ಡ್ ಕಾಲ್ಸ್ ವೆನ್ ನೊ ಬ್ಯಾಟರಿ.

ಸ್ಮಾರ್ಟ್‌ಫೋನ್‌ ಹೆಚ್ಚು ಬಳಕೆ ಮಾಡಿ ಬ್ಯಾಟರಿ ಫುಲ್ ಡೆಡ್ ಆಗುವ ಸಮಯ ಬರಬಹುದು. ಅಂತಹ ಪರಿಸ್ಥಿತಿಯಲ್ಲಿ ಫಾರ್ವರ್ಡ್ ಕಾಲ್ಸ್ ವೆನ್ ನೊ ಬ್ಯಾಟರಿ ಆಯ್ಕೆಮಾಡಿ ನಿಮಗೆ ಬೇಕಾದ ನಂಬರ್‌ಗೆ ಕರೆ ಫಾರ್ವರ್ಡ್ ಆಗುವ ಹಾಗೆ ಮಾಡಬಹುದು

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
you can stay connected to the world even when the battery runs out. To know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot