Subscribe to Gizbot

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ7 ಮ್ಯಾಕ್ಸ್ ಇಂದಿನಿಂದ ಮಾರಾಟ!..ಚೀನಾ ಕಂಪೆನಿಗಳಿಗೆ ನಡುಕ!!

Written By:

ಚೀನಾ ಮೊಬೈಲ್ ಕಂಪೆನಿಗಳಿಂದ ಕಂಗೆಟ್ಟಿದ್ದ ಸ್ಯಾಮ್‌ಸಂಗ್ ಇದೀಗ ತನ್ನ ನೂತನ ಸ್ಮಾರ್ಟ್‌ಫೋನ್‌ ಮೂಲಕ ಮತ್ತೆ ಎದ್ದು ಬರುವ ನಿರೀಕ್ಷೆ ಇದೆ.!! ಹೌದು, ಇಂದು ಸ್ಯಾಮ್‌ಸಂಗ್‌ನ ಬಹು ನಿರೀಕ್ಷಿತ ಗ್ಯಾಲಾಕ್ಸಿ ಜೆ7 ಮ್ಯಾಕ್ಸ್ ಸ್ಮಾರ್ಟ್‌ಫೋನ್ ಇಂದಿನಿಂದ ಭಾರತದಲ್ಲಿ ಮಾರಾಟಕ್ಕಿದೆ.!!

ಚೀನಾ ಮೊಬೈಲ್‌ಗಳ ದರಸಮರಕ್ಕೆ ತತ್ತರಿಸಿದ್ದ ಸ್ಯಾಮ್‌ಸಂಗ್ ತನ್ನ ಹೆಚ್ಚು ಮೊಬೈಲ್ ಮಾರುಕಟ್ಟೆಯ ಪಾಲನ್ನು ಕಳೆದುಕೊಂಡಿತ್ತು. ಹಾಗಾಗಿ, ಕಡಿಮೆ ಬೆಲೆಯಲ್ಲಿ ಹೈ ಎಂಡ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಮೂಲಕ ಮತ್ತೆ ಮಾರುಕಟ್ಟೆಯಲ್ಲಿ ತನ್ನ ಚಾಪು ಮೂಡಿಸಲು ಮುಂದಾಗಿದೆ.!!

ಹಾಗಾದರೆ 5.7 ಇಂಚ್ ಸ್ಕ್ರೀನ್ ಹೊಂದಿರುವ ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಜೆ7 ಮ್ಯಾಕ್ಸ್ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ಗಳನ್ನು ಹೊಂದಿದೆ? ಬೆಲೆ ಎಷ್ಟು? ಖರೀದಿಸಲು ಬೆಸ್ಟ್ ಏಕೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.7 ಇಂಚ್ ಸ್ಕ್ರೀನ್ ಹೊಂದಿದೆ

5.7 ಇಂಚ್ ಸ್ಕ್ರೀನ್ ಹೊಂದಿದೆ

ಸ್ಯಾಮ್‌ಸಂಗ್ ಕಂಪೆನಿಯ ದೊಡ್ಡ ಸ್ಕ್ರೀನ್ ಹೊಂದಿರುವ ಅಪರೂಪದ ಫೋನ್‌ಗಳಲ್ಲಿ ಗ್ಯಾಲಾಕ್ಸಿ ಜೆ7 ಮ್ಯಾಕ್ಸ್ ಸಹ ಒಂದು.! ಮಲ್ಟಿಮೀಡಿಯಾಗೆ ಹೆಚ್ಚು ಸಪೋರ್ಟ್ ನೀಡುವ ಹಿನ್ನೆಲೆಯಲ್ಲಿ ಫುಲ್ ಹೆಚ್‌ಡಿ ಡಿಸ್‌ಪ್ಲೇ (1080*1920)ಹೊತ್ತು ಗ್ಯಾಲಾಕ್ಸಿ ಜೆ7 ಮ್ಯಾಕ್ಸ್ ಸ್ಮಾರ್ಟ್‌ಫೋನ್ ಹೊರಬಂದಿದೆ.!!

ಪ್ರೊಸೆಸರ್ ಮತ್ತು ಒಎಸ್!!

ಪ್ರೊಸೆಸರ್ ಮತ್ತು ಒಎಸ್!!

ಗ್ಯಾಲಾಕ್ಸಿ ಜೆ7 ಮ್ಯಾಕ್ಸ್ ಮಿಡಿಯಾಟೆಕ್ ಹಿಲಿಯೋ ಪಿ20 ಆಕ್ಟ-ಕೋರ್ ಪ್ರೊಸೆಸರ್ ಹೊಂದಿದೆ. ಇನ್ನು ಅತ್ಯಾಧುನಿಕ 7.0 ಆಂಡ್ರಾಯ್ಡ್ ನ್ಯೂಗಾ ಆಪರೇಟಿಂಗ್ ಸಿಸ್ಟಮ್‌ ಮೂಲಕ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ನೀಡಲಿದೆ.!!

RAM ಮತ್ತು ROM

RAM ಮತ್ತು ROM

ಸ್ಯಾಮ್‌ಸಂಗ್ ಕಂಪೆನಿಯ ನೂತನ ಫ್ಲಾಗ್‌ಶಿಪ್ ಫೋನ್ ಇದಾಗಿದ್ದು, 4GB RAM ಮತ್ತು 32GB ಆಂತರಿ ಮೆಮೊರಿಯನ್ನು ಸ್ಮಾರ್ಟ್‌ಫೋನ್ ಹೊಂದಿದೆ.!! ಹಾಗಾಗಿ, ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಉತ್ತಮವಾಗಿರಲಿದೆ.

 ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಪೀಚರ್ಸ್ನಲ್ಲಿಯೂ ಭಾರಿ ಅಪ್‌ಡೇಟ್ ಆಗಿರುವ ಸ್ಯಾಮ್‌ಸಂಗ್ ಇದೇ ಮೊದಲು ಭಾರಿಕೆ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಕ್ಯಾಮೆರಾ ನೀಡಿದೆ. ರಿಯರ್ ಮತ್ತು ಸೆಲ್ಫಿ ಎರಡೂ ಕ್ಯಾಮೆರಾಗಳಿಗೆ 13 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಿದ್ದು ಕೊಡುವ ಹಣಕ್ಕೆ ಹೇಳಿಮಾಡಿಸಿದಂತಿದೆ.!!

ಬೆಲೆ ಎಷ್ಟು? ಖರೀದಿಸಲು ಉತ್ತಮವೇ?

ಬೆಲೆ ಎಷ್ಟು? ಖರೀದಿಸಲು ಉತ್ತಮವೇ?

ಇಷ್ಟೆಲ್ಲಾ ಫೀಚರ್ಸ್ ಹೊಂದಿರುವ 17 ಸಾವಿರ ರೂಪಾಯಿಗಳ ಆಸುಪಾಸಿಗೆ ಬಿಡುಗಡೆಯಾಗಲಿದ್ದು, 3300mAh ಬ್ಯಾಟರಿ ಹೊಂದಿರುವ ಗ್ಯಾಲಾಕ್ಸಿ ಜೆ7 ಮ್ಯಾಕ್ಸ್ ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ಅತ್ಯುತ್ತಮ ಎಂದು ಹೇಳಬಹುದು.!!

ಓದಿರಿ:'ಒನ್‌ಪ್ಲಸ್ 5' ಇಂದು ರಿಲೀಸ್..ಸ್ಮಾರ್ಟ್‌ಫೋನ್ ಖರೀದಿಸಲು ಏಕಿಷ್ಟು ಆತುರ!!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Galaxy smartphone was first unveiled last week. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot