ಗ್ಯಾಲಾಕ್ಸಿ ನೋಟ್ 8 ಪ್ರೀ ಬುಕ್ಕಿಂಗ್ ಶುರು!..ಬುಕ್ ಮಾಡುವುದು ಹೀಗೆ!!

Written By:

ಸ್ಯಾಮ್ಸಂಗ್ ಕಂಪೆನಿಯ ಹೈ ಎಂಡ್‌ ಸ್ಮಾರ್ಟ್‌ಫೋನ್ ''ಗ್ಯಾಲಾಕ್ಸಿ ನೋಟ್ 8'' ಭಾರತದಲ್ಲಿ ಶೀಘ್ರವೇ ಮಾರಾಟವಾಗವ ಸಾಧ್ಯತೆ ಇದೆ.! ಭಾರತದಲ್ಲಿ ಗ್ಯಾಲಾಕ್ಸಿ ನೋಟ್ 8'' ಪ್ರೀ-ಬುಕ್ಕಿಂಗ್ ಮಾಡಲು ಸ್ಯಾಮ್‌ಸಂಗ್ ತನ್ನ ಗ್ರಾಹಕರಿಗೆ ಆಹ್ವಾನ ನೀಡಿದ್ದು, ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಟ್ 8 ಬುಕ್ ಮಾಡಬಹುದಾಗಿದೆ.!!

ಇನ್ನು ಗ್ಯಾಲಕ್ಸಿ ನೋಟ್ 8 ಬುಕ್ಕಿಂಗ್‌ಗೂ ಮೊದಲು ಸ್ಮಾರ್ಟ್‌ಫೋನ್ ಖರೀದಿಸಲು ತಮ್ಮ ಆಸಕ್ತಿಯನ್ನು ಗ್ರಾಹಕರು ರಿಜಿಸ್ಟರ್ ಮಾಡಲು ಕಂಪೆನಿ ತಿಳಿಸಿದೆ.!! ಹೆಸರು, ಇಮೇಲ್, ಮೊಬೈಲ್ ಸಂಖ್ಯೆ ಮತ್ತು ಪಿನ್ ಕೋಡ್‌ನಂತಹ ಕಡ್ಡಾಯವಲ್ಲದ ವಿವರಗಳನ್ನು ನೀಡಿ ಗ್ಯಾಲಕ್ಸಿ ನೋಟ್ 8 ಬಗ್ಗೆ ನಿಮ್ಮ ಆಸಕ್ತಿಯನ್ನು ಭರ್ತಿ ಮಾಡಿ ಎಂದು ಹೇಳಿದೆ.!!

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಫೋನ್‌ಗಳಲ್ಲಿ ಒಂದಾದ ಗ್ಯಾಲಾಕ್ಸಿ ನೋಟ್ 8 ಸ್ಮಾರ್ಟ್ಫೋನ್ ಖರೀದಿಸಲು ಗ್ರೆಆಹಕರು ತುದಿಗಾಲಿನಲ್ಲಿ ನಿಂತಿದ್ದು, ಹಾಗಾಗಿ, ಗ್ಯಾಲಕ್ಸಿ ನೋಟ್ 8 ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಸ್‌ಪೆನ್ ಇನ್ ನೋಟ್ 8

ಎಸ್‌ಪೆನ್ ಇನ್ ನೋಟ್ 8

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 8 ಫ್ಯಾಬ್ಲೆಟ್‌ನಲ್ಲಿ ಕಂಡುಬಂದಿರುವ ಪ್ರಮುಖ ವೈಶಿಷ್ಟ್ಯವೆಂದರೆ 'ಎಸ್' ಪೆನ್ ಸೌಲಭ್ಯವನ್ನು ಒದಗಿಸುತ್ತಿದೆ. ಈ ಮೂಲಕ ಲೈವ್ ಮೆಸೇಜ್, ಕೈಯಿಂದಲೇ ಬರಹ ಹೀಗೆ ಹತ್ತು ಹಲವಾರು ವಿಶೇಷತೆಗಳನ್ನು ಒಳಗೊಂಡಿರಲಿದೆ.!!

ಅದ್ಬುತವಾಗಿದೆ ಡಿಸ್‌ಪ್ಲೇ!!

ಅದ್ಬುತವಾಗಿದೆ ಡಿಸ್‌ಪ್ಲೇ!!

ಗ್ಯಾಲಕ್ಸಿ ನೋಟ್ 8 ಬಹುದೊಡ್ಡ ಸೂಪರ್ AMOLED ಇನ್ಪಿನಿಟಿ 6.3 ಇಂಚುಗಳ ಕ್ವಾಡ್ ಎಚ್‌ಡಿ ಪ್ಲಸ್ (2960x1440ಪಿಕ್ಸೆಲ್) ಡಿಸ್‌ಪ್ಲೇ ಹೊಂದಿದೆ. ಮೊಬೈಲ್‌ನಲ್ಲಿಯೇ ಕಂಪ್ಯೂಟರ್‌ ಬಳಕೆಯ ಫೀಲ್ ಅನ್ನು ಡಿಸ್‌ಪ್ಲೇ ನೀಡಲಿದೆ ಎಂದು ಸ್ಯಾಮ್‌ಸಂಗ್ ಹೇಳಿದ್ದು, ಡಿಸ್‌ಪ್ಲೇ ವಿನ್ಯಾಸ ಅತ್ಯಾಕರ್ಶಕವಾಗಿದೆ.!!

ಪ್ರೊಸೆಸರ್ ಮತ್ತು ಒಎಸ್?

ಪ್ರೊಸೆಸರ್ ಮತ್ತು ಒಎಸ್?

ಪ್ರಸ್ತುತ ಅತ್ಯುತ್ತಮ ಪ್ರೊಸೆಸರ್ ಆಗಿರುವ ಕ್ವಾಲ್ಕಮ್‌ ಕಂಪೆನಿಯ ಒಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 835 ಪ್ರೊಸಸರ್ ಅನ್ನು ಗ್ಯಾಲಕ್ಸಿ ನೋಟ್ 8 ಹೊಂದಿದೆ.!! ಆಂಡ್ರಾಯ್ಡ್ 7.1.1 ನೌಗಾಟ್ ನಲ್ಲಿ ಫೋನ್‌ ಕಾರ್ಯಾಚರಣೆ ನೀಡಲಿದ್ದು, ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಹೊಂದಿರಲಿದೆ.!!

RAM ಮತ್ತು ROM!!

RAM ಮತ್ತು ROM!!

ಹೈ ಎಂಡ್‌ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 8 6GB LPDDR4 RAM ಹೊಂದಿದೆ. 64GB, 128GB ಹಾಗೂ 256GB ಸ್ಟೋರೆಜ್ನ ಮೂರು ವೆರಿಯಂಟ್‌ನಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.!!

ಡ್ಯುಯಲ್ ಕ್ಯಾಮೆರಾ!!

ಡ್ಯುಯಲ್ ಕ್ಯಾಮೆರಾ!!

ನಿರೀಕ್ಷೆಯಂತೆಯೇ ಗ್ಯಾಲಕ್ಸಿ ನೋಟ್ 8 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ. 12 ಮೆಗಾಫಿಕ್ಸೆಲ್‌ನಲ್ಲಿ ಎರಡು ರಿಯರ್ ಕ್ಯಾಮೆರಾಗಳಿದ್ದು, ಮೊದಲನೆ ಕ್ಯಾಮೆರಾ ವೈಡ್ ಆಂಗಲ್ ಲೆನ್ಸ್ ಜೊತೆ f/1.7 aperture, ಎರಡನೆ ಕ್ಯಾಮೆರಾ ಟೆನಿಫೋಟೋ ಝೂಮ್ ಲೆನ್ಸ್ ಜೊತೆ f/2.4 aperture ಹೊಂದಿದೆ.!!

ಸೆಲ್ಫಿ ಕ್ಯಾಮೆರಾ ಸಹ ಅದ್ಬುತವಾಗಿದೆ.!!

ಸೆಲ್ಫಿ ಕ್ಯಾಮೆರಾ ಸಹ ಅದ್ಬುತವಾಗಿದೆ.!!

ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿರುವ ನೋಟ್ 8 ಸೆಲ್ಫಿ ಕ್ಯಾಮೆರಾ ಸಹ ಅದ್ಬುತವಾಗಿದೆ. 8MP ಫ್ರಂಟ್ ಶೂಟರ್ (f/1.7 aperture), ಆಪ್ಟಿಕಲ್ ಇಮೇಜ್ ಸ್ಟೆಬಿಲೈಜರ್ ಮತ್ತು ಫೇಸ್ ಡಿಟೆಕ್ಷನ್‌ನಂತಹ ಹಲವು ಆಯ್ಕೆಗಳು ಸೆಲ್ಫಿ ಕ್ಯಾಮೆರಾದಲ್ಲಿವೆ.!!

ಬ್ಯಾಟರಿ ಮತ್ತು ವಿಶೇಷತೆಗಳು?

ಬ್ಯಾಟರಿ ಮತ್ತು ವಿಶೇಷತೆಗಳು?

ಗ್ಯಾಲಕ್ಸಿ ನೋಟ್ 8 3300mAh ಬ್ಯಾಟರಿ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಒಳಗೊಂಡಿದೆ. ಜೊತೆಗೆ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿ5, ಸ್ಕ್ರಾಟ್ ನಿರೋಧಕ, Adreno 540 ಗ್ರಾಫಿಕ್ಸ್, ಯುಎಸ್‌ಬಿ Type-C ಸೇರಿದಂತೆ ಹಲವು ವಿಶೇಷತೆಗಳು ಸ್ಮಾರ್ಟ್‌ಫೋನ್‌ನಲ್ಲಿ ಅಡಕವಾಗಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
People can head over to the Samsung India website to register their interest in Samsung's new Note device, after which they will be notified of the latest updates.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot