ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ನೋಟ್ 8 ಬಿಡುಗಡೆ!..ಅದ್ಬುತವಾಗಿವೆ ಎಲ್ಲಾ ಫೀಚರ್ಸ್!!

ಮಿಡ್‌ನೈಟ್ ಬ್ಲ್ಯಾಕ್, ಡೀಪ್ ಸೀ ಬ್ಲೂ ಮತ್ತು ಓರ್ಕಿಡ್ ಗ್ರೇ ಮೂರು ಬಣ್ಣಗಳಲ್ಲಿ ನೋಟ್ 8 ಸ್ಮಾರ್ಟ್‌ಫೋನ್ ಅನ್ನು ಸ್ಯಾಮ್‌ಸಂಗ್ ಪರಿಚಯಿಸಿದೆ.!!

|

ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ತೀವ್ರ ಕುತೂಹಲ ಹುಟ್ಟು ಹಾಕಿದ್ದ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಬಿಡುಗಡೆಯಾಗಿದೆ.!! ನ್ಯೂಯಾರ್ಕ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಮಿಡ್‌ನೈಟ್ ಬ್ಲ್ಯಾಕ್, ಡೀಪ್ ಸೀ ಬ್ಲೂ ಮತ್ತು ಓರ್ಕಿಡ್ ಗ್ರೇ ಮೂರು ಬಣ್ಣಗಳಲ್ಲಿ ನೋಟ್ 8 ಸ್ಮಾರ್ಟ್‌ಫೋನ್ ಅನ್ನು ಸ್ಯಾಮ್‌ಸಂಗ್ ಪರಿಚಯಿಸಿದೆ.!!

6.3 ಇಂಚುಗಳ ಬಹುದೊಡ್ಡ ಕ್ವಾಡ್ ಎಚ್‌ಡಿ ಪ್ಲಸ್ (2960x1440 ಪಿಕ್ಸೆಲ್) ಡಿಸ್‌ಪ್ಲೇ ಮೂಲಕ ಮಾರುಕಟ್ಟೆಗೆ ಕಾಲಿಟ್ಟಿರುವ ಗ್ಯಾಲಕ್ಸಿ ನೋಟ್ 8 ಆಪಲ್‌ಗೂ ಸೆಡ್ಡುಹೊಡೆಯುವಂತಿದ್ದು, ಬಾರಿ ಫೀಚರ್ಸ್ ಹೊಂದಿದೆ.!! ಇನ್ನು ಸೆಪ್ಟಂಬರ್‌ನಲ್ಲಿ ನೋಟ್ 8 ಗ್ರಾಹಕರಿಗೆ ತಲುಪಲಿದೆ.! ಹಾಗಾದರೆ, ಗ್ಯಾಲಕ್ಸಿ ನೋಟ್ 8 ಹೇಗಿದೆ? ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಎಸ್‌ಪೆನ್ ಇನ್ ನೋಟ್ 8

ಎಸ್‌ಪೆನ್ ಇನ್ ನೋಟ್ 8

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 8 ಫ್ಯಾಬ್ಲೆಟ್‌ನಲ್ಲಿ ಕಂಡುಬಂದಿರುವ ಪ್ರಮುಖ ವೈಶಿಷ್ಟ್ಯವೆಂದರೆ 'ಎಸ್' ಪೆನ್ ಸೌಲಭ್ಯವನ್ನು ಒದಗಿಸುತ್ತಿದೆ. ಈ ಮೂಲಕ ಲೈವ್ ಮೆಸೇಜ್, ಕೈಯಿಂದಲೇ ಬರಹ ಹೀಗೆ ಹತ್ತು ಹಲವಾರು ವಿಶೇಷತೆಗಳನ್ನು ಒಳಗೊಂಡಿರಲಿದೆ.!!

ಅದ್ಬುತವಾಗಿದೆ ಡಿಸ್‌ಪ್ಲೇ!!

ಅದ್ಬುತವಾಗಿದೆ ಡಿಸ್‌ಪ್ಲೇ!!

ಗ್ಯಾಲಕ್ಸಿ ನೋಟ್ 8 ಬಹುದೊಡ್ಡ ಸೂಪರ್ AMOLED ಇನ್ಪಿನಿಟಿ 6.3 ಇಂಚುಗಳ ಕ್ವಾಡ್ ಎಚ್‌ಡಿ ಪ್ಲಸ್ (2960x1440ಪಿಕ್ಸೆಲ್) ಡಿಸ್‌ಪ್ಲೇ ಹೊಂದಿದೆ. ಮೊಬೈಲ್‌ನಲ್ಲಿಯೇ ಕಂಪ್ಯೂಟರ್‌ ಬಳಕೆಯ ಫೀಲ್ ಅನ್ನು ಡಿಸ್‌ಪ್ಲೇ ನೀಡಲಿದೆ ಎಂದು ಸ್ಯಾಮ್‌ಸಂಗ್ ಹೇಳಿದ್ದು, ಡಿಸ್‌ಪ್ಲೇ ವಿನ್ಯಾಸ ಅತ್ಯಾಕರ್ಶಕವಾಗಿದೆ.!!

ಪ್ರೊಸೆಸರ್ ಮತ್ತು ಒಎಸ್?

ಪ್ರೊಸೆಸರ್ ಮತ್ತು ಒಎಸ್?

ಪ್ರಸ್ತುತ ಅತ್ಯುತ್ತಮ ಪ್ರೊಸೆಸರ್ ಆಗಿರುವ ಕ್ವಾಲ್ಕಮ್‌ ಕಂಪೆನಿಯ ಒಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 835 ಪ್ರೊಸಸರ್ ಅನ್ನು ಗ್ಯಾಲಕ್ಸಿ ನೋಟ್ 8 ಹೊಂದಿದೆ.!! ಆಂಡ್ರಾಯ್ಡ್ 7.1.1 ನೌಗಾಟ್ ನಲ್ಲಿ ಫೋನ್‌ ಕಾರ್ಯಾಚರಣೆ ನೀಡಲಿದ್ದು, ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಹೊಂದಿರಲಿದೆ.!!

RAM ಮತ್ತು ROM!!

RAM ಮತ್ತು ROM!!

ಹೈ ಎಂಡ್‌ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 8 6GB LPDDR4 RAM ಹೊಂದಿದೆ. 64GB, 128GB ಹಾಗೂ 256GB ಸ್ಟೋರೆಜ್ನ ಮೂರು ವೆರಿಯಂಟ್‌ನಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.!!

ಡ್ಯುಯಲ್ ಕ್ಯಾಮೆರಾ!!

ಡ್ಯುಯಲ್ ಕ್ಯಾಮೆರಾ!!

ನಿರೀಕ್ಷೆಯಂತೆಯೇ ಗ್ಯಾಲಕ್ಸಿ ನೋಟ್ 8 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ. 12 ಮೆಗಾಫಿಕ್ಸೆಲ್‌ನಲ್ಲಿ ಎರಡು ರಿಯರ್ ಕ್ಯಾಮೆರಾಗಳಿದ್ದು, ಮೊದಲನೆ ಕ್ಯಾಮೆರಾ ವೈಡ್ ಆಂಗಲ್ ಲೆನ್ಸ್ ಜೊತೆ f/1.7 aperture, ಎರಡನೆ ಕ್ಯಾಮೆರಾ ಟೆನಿಫೋಟೋ ಝೂಮ್ ಲೆನ್ಸ್ ಜೊತೆ f/2.4 aperture ಹೊಂದಿದೆ.!!

ಸೆಲ್ಫಿ ಕ್ಯಾಮೆರಾ ಸಹ ಅದ್ಬುತವಾಗಿದೆ.!!

ಸೆಲ್ಫಿ ಕ್ಯಾಮೆರಾ ಸಹ ಅದ್ಬುತವಾಗಿದೆ.!!

ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿರುವ ನೋಟ್ 8 ಸೆಲ್ಫಿ ಕ್ಯಾಮೆರಾ ಸಹ ಅದ್ಬುತವಾಗಿದೆ. 8MP ಫ್ರಂಟ್ ಶೂಟರ್ (f/1.7 aperture), ಆಪ್ಟಿಕಲ್ ಇಮೇಜ್ ಸ್ಟೆಬಿಲೈಜರ್ ಮತ್ತು
ಫೇಸ್ ಡಿಟೆಕ್ಷನ್‌ನಂತಹ ಹಲವು ಆಯ್ಕೆಗಳು ಸೆಲ್ಫಿ ಕ್ಯಾಮೆರಾದಲ್ಲಿವೆ.!!

ಬ್ಯಾಟರಿ ಮತ್ತು  ವಿಶೇಷತೆಗಳು?

ಬ್ಯಾಟರಿ ಮತ್ತು ವಿಶೇಷತೆಗಳು?

ಗ್ಯಾಲಕ್ಸಿ ನೋಟ್ 8 3300mAh ಬ್ಯಾಟರಿ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಒಳಗೊಂಡಿದೆ. ಜೊತೆಗೆ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿ5, ಸ್ಕ್ರಾಟ್ ನಿರೋಧಕ, Adreno 540 ಗ್ರಾಫಿಕ್ಸ್, ಯುಎಸ್‌ಬಿ Type-C ಸೇರಿದಂತೆ ಹಲವು ವಿಶೇಷತೆಗಳು ಸ್ಮಾರ್ಟ್‌ಫೋನ್‌ನಲ್ಲಿ ಅಡಕವಾಗಿವೆ.

Best Mobiles in India

English summary
Last year's Note 7 had to be recalled after dozens spontaneously caught fire because of defective batteries.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X