Just In
Don't Miss
- News
ಬ್ರೆಕ್ಸಿಟ್ ಒಪ್ಪಂದ ಅನುಷ್ಠಾನಕ್ಕೆ ಜನವರಿ 31ರ ಡೆಡ್ಲೈನ್
- Sports
ಐಎಸ್ಎಲ್: ಗೋವಾ ಎದುರಾಳಿ ಎಟಿಕೆ, ಆಕ್ರಮಣಕಾರಿ ತಂಡಗಳ ಮುಖಾಮುಖಿ
- Lifestyle
ಶನಿವಾರದ ದಿನ ಭವಿಷ್ಯ 14-12-2019
- Movies
ದಬಾಂಗ್-3 ರಿಲೀಸ್ ಗೂ ಮೊದಲೇ ಅಚ್ಚರಿ ನೀಡಿದ ಸಲ್ಮಾನ್ ಖಾನ್
- Finance
ಬ್ರಿಟಿಷ್ ಬಿಲಿಯನೇರ್ ಉದ್ಯಮಿ ಬ್ರಾನ್ಸನ್ ಪೂರ್ವಜರ ಮೂಲ ತ.ನಾಡಿನ ಕಡಲೂರು
- Automobiles
ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್ಯುವಿ ಬಿಡುಗಡೆ
- Education
DRDO: 1817 ಹುದ್ದೆಗಳ ನೇಮಕಾತಿ...ತಿಂಗಳಿಗೆ 56,900/-ರೂ ವೇತನ
- Travel
ವಾರಾಂತ್ಯದಲ್ಲಿ ನಿಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಬೆಂಗಳೂರಿನ ಸುತ್ತಮುತ್ತ ಈ ಸ್ಥಳಗಳೇ ಬೆಸ್ಟ್
'ಐಫೋನ್ ಎಕ್ಸ್'ಗೆ ಸೆಡ್ಡು ಹೊಡೆಯುವಂತಿದೆ 'ಗ್ಯಾಲೆಕ್ಸಿ ನೋಟ್ 9' ಬೆಲೆ!!
ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ ಸ್ಯಾಮ್‌ಸಂಗ್ ಕಂಪೆನಿಯ ನಿರೀಕ್ಷಿತ ಸ್ಮಾರ್ಟ್‌ಪೋನ್ ಇದೇ ಆಗಸ್ಟ್ ತಿಂಗಳಿನ 9 ನೇ ತಾರೀಖಿನಂದು ಬಿಡುಗಡೆಯಾಗುತ್ತಿರುವ ಸುದ್ದಿಯ ಬೆನ್ನಲ್ಲೇ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆಗಳು ಎಷ್ಟು ಎಂಬ ಮಾಹಿತಿಗಳು ಇದೀಗ ಲೀಕ್ ಆಗಿದೆ.
ಹೌದು, ಮೊಬೈಲ್ ಮಾರುಕಟ್ಟೆಯ ನಿರೀಕ್ಷಿಗೆ ತಕ್ಕಂತೆ ಇದೂ ಕೂಡ ದುಬಾರಿ ಫೋನ್‌ಗಳ ಪಟ್ಟಿಯಲ್ಲಿರುವ ಮತ್ತೊಂದು ಸ್ಮಾರ್ಟ್‌ಪೋನ್ ಇದಾಗಲಿದ್ದು, ಗ್ಯಾಲೆಕ್ಸಿ ನೋಟ್ 9ನ ಆರಂಭಿಕ ಬೆಲೆ 65,000 ರೂಪಾಯಿಗಳಿಂದ ಶುರುವಾಗಲಿದೆ ಎಂಬ ಮಾಹಿತಿ ಖಚಿತ ಮೂಲಗಳಿಂದ ಹೊರಬಿದ್ದಿದೆ. ಈ ಬೆಲೆಯು ಎದುರಾಳಿ 'ಐಫೋನ್ ಎಕ್ಸ್'ಗೆ ನೇರಾನೇರಾ ಸೆಡ್ಡು ಹೊಡೆಯುವಂತಿದೆ.
6.4 ಇಂಚಿನ ಕ್ಯೂ ಹೆಚ್‌ಡಿ + ಗುಣಮಟ್ಟದ ಡಿಸ್‌ಪ್ಲೇ, ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ 512 ಜಿಬಿ ಆವೃತ್ತಿಯಲ್ಲಿ ಬಿಡುಗಡೆಯಾಗುತ್ತಿರುವ 'ಗ್ಯಾಲೆಕ್ಸಿ ನೋಟ್ 9' ಸ್ಮಾರ್ಟ್‌ಫೋನ್ ಈಗಾಗಲೇ ಎಲ್ಲರಲ್ಲಿಯೂ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಹಾಗಾದರೆ, ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 9 ವೈಶಿಷ್ಟ್ಯಗಳು ಯಾವುವು ಮತ್ತು ಫೀಚರ್ಸ್ ಏನಿರಬಹುದು ಎಂದು ಮುಂದೆ ತಿಳಿಯಿರಿ.

ಎಲ್ಲೆಲ್ಲಿ ಲಾಂಚ್ ಆಗಲಿದೆ
ಸ್ಯಾಮ್ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಮೊದಲಿಗೆ ದಕ್ಷಿಣ ಕೊರಿಯಾ ಅಥವಾ ಚೀನಾದಲ್ಲಿ ಮೊದಲು ಬಿಡುಗಡೆಗೊಳ್ಳಲಿದೆ ಎನ್ನಲಾಗಿದ್ದು, ನಂತರ ವಿಶ್ವದ ಎಲ್ಲಾ ಕಡೆ ಸ್ಮಾರ್ಟ್‌ಪೋನ್ ಸಿಗುವ ಸಾಧ್ಯತೆಯಿದೆ. ಅಂದಾಜಿನ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ವಿಶ್ವ ಮಾರುಕಟ್ಟೆಯ ಜೊತೆಗೆ ಪರಿಚಯಗೊಳ್ಳುವ ಸಾಧ್ಯತೆ ಹೆಚ್ಚಿದೆ.

6.4 ಇಂಚು ಕ್ಯೂ ಹೆಚ್‌ಚ್ಡಿ + ಡಿಸ್ಪ್ಲೇ
ಸ್ಯಾಮ್ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್ಫೋನ್ ದೊಡ್ಡ ಡಿಸ್ಪ್ಲೇ ಅನ್ನು ಹೊಂದಿರುತ್ತದೆ. 6.4 ಇಂಚು ಕ್ಯೂಹೆಚ್‌ಚ್ಡಿ + ಸೂಪರ್ AMOLED ಡಿಸ್ಪ್ಲೇ ಹೊಂದಿದೆ, 18.5: 9 ಆಸ್ಪೆಕ್ಟ್ ರೇಷಿಯೊ ಹೊಂದಿರುವ ಸಾಧ್ಯತೆಯಿದೆ. ಅದಲ್ಲದೆ ಗ್ಯಾಲೆಕ್ಸಿ ನೋಟ್ 8 ನಂತೆ ಇನ್ಫಿನಿಟಿ ಡಿಸ್ಪ್ಲೇ ಅನ್ನು ಹೊಂದಿದೆ ಎಂದು ಸ್ಮಾರ್ಟ್‌ಫೋನ್ ತಜ್ಞರ ಅಭಿಪ್ರಾಯ.

ಪ್ರೊಸೆಸರ್ ಯಾವುದು?
ಹೊಸ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್ಫೋನ್ನಲ್ಲಿ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 ಪ್ರೊಸೆಸರ್ ಅಥವಾ ತನ್ನದೇ ಆದ ಎಕ್ಸಿನೋಸ್ 9810 ಸಿಒಸಿ ಹೊಂದಿರುವ ಸಾಧ್ಯತೆಯಿದೆ. ಎರಡು ಪ್ರೊಸೆಸರ್ಗಳು ಉನ್ನತ ಕಾರ್ಯಮಟ್ಟವನ್ನು ಹೊಂದಿರುವ ಕಾರಣ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್ಫೋನ್ ಕಾರ್ಯನಿರ್ವಹಣೆ ಉತ್ತಮವಾಗಿರುತ್ತದೆ.

512 ಜಿಬಿ ಮೆಮೊರಿ
ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್ಫೋನ್ 6 ಜಿಬಿ ಮತ್ತು 8 ಜಿಬಿ ರಾಮ್ ಹೊಂದಿದ್ದು, 512 ಜಿಬಿ ಆಂತರಿಕ ಸ್ಟೋರೇಜ್ ಹೊಂದಿದ ಬಗ್ಗೆ ಸ್ಮಾರ್ಟ್ಫೋನ್ ತಜ್ಞರು ಖಾತರಿ ವ್ಯಕ್ತಪಡಿಸಿದ್ದಾರೆ. ಈ ಹಿಂದೆ 256 ಜಿಬಿ ಆವೃತ್ತಿಯನ್ನು ಲಾಂಚ್ ಮಾಡಲಾಗಿದೆ. ಈಗ ಹೊಸದಾಗಿ ದೊಡ್ಡ ಆವೃತ್ತಿ ಕಾಣಿಸಿಕೊಳ್ಳುತ್ತದೆ.

ಕ್ಯಾಮೆರಾ ತಂತ್ರಜ್ಞಾನ?
ಸ್ಯಾಮ್ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಉನ್ನತ ವೈಶಿಷ್ಟ್ಯಗಳೊಂದಿಗೆ ಹೊಂದಿದ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ, 8 ಎಂಪಿ ಫ್ರಂಟ್ ಸೆಲ್ಫಿ ಕ್ಯಾಮೆರಾ ಹೊಂದಿರುವ ಸಾಧ್ಯತೆಗಳು. ಆದರೆ, ಕ್ಯಾಮೆರಾ ತಂತ್ರಜ್ಞಾನಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಇತರೆ ವೈಶಿಷ್ಟ್ಯಗಳು?
ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನಿನಲ್ಲಿ 4,000 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಫೇಸ್ ಅನ್ಲಾಕ್ ಅನ್ನು ನಿರೀಕ್ಷಿಸಬಹುದಾಗಿದೆ. ಇನ್ನು ಆಂಡ್ರಾಯ್ಡ್ 8.1 ಓರಿಯೊ ಒಎಸ್ ಮೂಲಕ ಕಾರ್ಯನಿರ್ವಹಣೆ ನೀಡುವ ಗ್ಯಾಲೆಕ್ಸಿ ನೋಟ್ 9 ಸ್ಮಾರ್ಟ್‌ಫೋನ್ 'ಆಂಡ್ರಾಯ್ಡ್ ಪಿ' ಗೂ ಅಪ್‌ಡೇಟ್ ಪಡೆಯುವ ಸಾಧ್ಯತೆಗಳಿವೆ.

FCC ಪ್ರಮಾಣಿತ ಪತ್ರ
ಇತ್ತೀಚೆಗೆ ಯುಎಸ್‌ನ ಎಫ್‌ಸಿಸಿ ಪ್ರಮಾಣೀಕೃತ ವೆಬ್‌ಸೈಟ್‌ನಲ್ಲಿ ಸ್ಯಾಮ್ಸಂಗ್ ಗ್ಯಾಲೆಕ್ಸಿ ನೋಟ್ 9 ಸ್ಥಾನ ಪಡೆದಿದೆ. ಇದರೊಂದಿಗೆ ಗೆಲಾಕ್ಸಿ ಟ್ಯಾಬ್ ಎಸ್4 ಸನ್ನು ಕೂಡ ಎಫ್‌ಸಿಸಿ ಪ್ರಮಾಣೀಕರಿಸಿರುವುದರಿಂದ, ಆಗಸ್ಟ್ ತಿಂಗಳ 9ನೇ ತಾರೀಖಿನಂದು ಗೆಲಾಕ್ಸಿ ಟ್ಯಾಬ್ ಎಸ್4 ಸಹ ಬಿಡುಗಡೆಯಾಗುವ ಸಾಧ್ಯತೆಯಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790