Subscribe to Gizbot

ಮುಂದಿನ ವರ್ಷದಲ್ಲಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್ ಫೋನ್ ಲಾಂಚ್

Written By: Lekhaka

ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ದಿನಕ್ಕೊಂದು ಸ್ಮಾರ್ಟ್ ಫೋನ್ ಕಾಲಿಡುತ್ತಿದ್ದು, ಇದೇ ಮಾದರಿಯಲ್ಲಿ ಶೀಘ್ರವೇ ಮಾರುಕಟ್ಟೆಗೆ ಬರುವ ಸ್ಮಾರ್ಟ್ ಫೋನ್ ಗಳ ಕುರಿತ ರೂಮರ್ ಗಳು ಹೆಚ್ಚಾಗುತ್ತಿದ್ದು, ವರ್ಷದ ಅಂತ್ಯ ಹತ್ತಿರವಾಗುತ್ತಿದ್ದಂತೆ ನೂತನ ವರ್ಷದಲ್ಲಿ ಬಿಡುಗಡೆಯಾಗುವ ಸ್ಮಾರ್ಟ್ ಫೋನ್ ಗಳ ಕುರಿತ ಮಾಹಿತಿಯೂ ಒಂದೊಂದಾಗಿ ಹೊರಗೆ ಬರುತ್ತಿದೆ. ಇದೇ ಮಾದರಿಯಲ್ಲಿ ಸ್ಯಾಮ್ ಸಂಗ್ ನ ಮುಂದಿನ ಟಾಪ್ ಎಂಡ್ ಫೋನಿನ ಬಗ್ಗೆ ಮಾಹಿತಿ ಲೀಕ್ ಆಗಿದೆ.

ಮುಂದಿನ ವರ್ಷದಲ್ಲಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್

ಸ್ಯಾಮ್ ಸಂಗ್ ಮುಂದಿನ ವರ್ಷದಲ್ಲಿ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಲಿದ್ದು, ಫೆಬ್ರವರಿಯಲ್ಲಿ ನಡೆಯಲಿರುವ MWC2018ನಲ್ಲಿ ಈ ಸ್ಮಾರ್ಟ್ ಫೋನ್ ಗಳನ್ನು ಮಾರಾಟಕ್ಕೆ ಇಡಲಿದೆ ಎನ್ನಲಾಗಿದೆ. ಈ ಕುರಿತಂತೆ ಹಲವು ರೂಮರ್ ಗಳು ಶುರುವಾಗಿದೆ.

ಗ್ಯಾಲೆಕ್ಸಿ 9 ಸ್ಮಾರ್ಟ್ ಫೋನ್ ಮುಂದಿನ ತಲೆ ಮಾರಿನ ಏಕ್ಸ್ ನೋಸ್ 9810 ಪ್ರೋಸೆಸರ್ ಇಲ್ಲವೇ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 845 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಅಲ್ಲದೇ 4GB/6GB RAM ಅನ್ನು ಅಳವಡಿಸುವ ಸಾಧ್ಯತೆಯೂ ಇದೆ. 64GB ಇಂಟರ್ನಲ್ ಮೊಮೆರಿಯನ್ನು ನೀಡಲಾಗುವುದು ಎನ್ನುವ ಸುದ್ದಿ ಇದೆ.

ಶಿಯೋಮಿ Mi A1 ಕೊಳ್ಳಲು ಬಂಪರ್ ಅವಕಾಶ: ಕೇವಲ ರೂ.12,999ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ..!

ಇದಲ್ಲದೇ ಈ ಸ್ಮಾರ್ಟ್ ಫೋಣ್ ಪ್ರಪಲ್ ಕಲರ್ ನಲ್ಲಿ ಬಳಕೆಗೆ ದೊರೆಯಲಿದ್ದು, ಗೊಲ್ಡ್, ಬ್ಲಾಕ್, ಬ್ಲೂ ಬಣ್ಣದಲ್ಲಿ ಜೊತೆಗೆ ಪ್ರಪಲ್ ಕಲರ್ ನಲ್ಲಿಯೂ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಇದರಿಂದಾಗಿ ಗ್ರಾಹಕರಿಗೆ ಹೆಚ್ಚಿನ ಆಯ್ಕೆಯೂ ದೊರೆಯಲಿದೆ ಎನ್ನಲಾಗಿದೆ.

ಐಫೋನ್ X ಗೆ ಸೆಡ್ಡು ಹೊಡೆಯುವ ಸಲುವಾಗಿ ಒನ್ ಪ್ಲಸ್ ಮಾದರಿಯಲ್ಲಿ ಫೇಷಿಯಲ್ ರೆಕಗ್ನೇಷನ್ ಲಾಕ್ ಅನ್ನು ಈ ಫೋನ್ ನಲ್ಲಿ ಸ್ಯಾಮ್ ಸಂಗ್ ಅಳವಡಿಸಲಿದೆ ಎನ್ನುವ ಮಾಹಿತಿ ಸಹ ಹೆಚ್ಚು ಸುಳಿದಾಡುತ್ತಿದೆ. ಇದೆಲ್ಲವೂ ಫೆಬ್ರವರಿ ತಿಂಗಳಿನಲ್ಲಿ ಬಹಿರಂಗಗೊಳ್ಳಲಿದೆ.

English summary
Samsung could be bringing the purple color option for the Galaxy S9 next year, in addition to black, gold, and blue.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot