ಸ್ಪೈಸ್ ನಿಂದ ಹೊಸ ಆಂಡ್ರಾಯ್ಡ ಹ್ಯಾಂಡ್ ಸೆಟ್

Posted By: Staff
ಸ್ಪೈಸ್ ನಿಂದ ಹೊಸ ಆಂಡ್ರಾಯ್ಡ ಹ್ಯಾಂಡ್ ಸೆಟ್

ಸ್ಪೈಸ್ ಇದೀಗ ಅನೇಕ ಆಯ್ಕೆಗಳನ್ನು ಹೊಂದಿರುವ ಮೊಬೈಲೊಂದನ್ನು ಹೊರತರುತ್ತಿದೆ. ಸ್ಪೈಸ್ Mi-350n ಎಂಬ ಈ ನೂತನ ಮೊಬೈಲ್ ಆಂಡ್ರಾಯ್ಡ್ ಸಾಧನವಾಗಿರುವುದು ವಿಶೇಷವಾಗಿದೆ.

ಈ ಮೊಬೈಲ್ ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಮತ್ತು 650 MHz ಪ್ರೊಸೆಸರ್ ನಿಂದ ಕಾರ್ಯ ನಿರ್ವಹಿಸಲಿದೆ. ಈ ಮೊಬೈಲ್ ನಲ್ಲಿ ಇನ್ನೂ ಹಲವು ಆಯ್ಕೆಗಳಿವೆ. ಅದೇನೆಂದು ಮುಂದೆ ತಿಳಿದುಕೊಳ್ಳಿ

ಸ್ಪೈಸ್ Mi-350n ಮೊಬೈಲ್ ವಿಶೇಷತೆ:

* ಜಿಎಸ್ ಎಂ ಮೊಬೈಲ್

* ಡ್ಯೂಯಲ್ ಸಿಮ್

* 136 ಗ್ರಾಂ ತೂಕ

* 8.9 ಸೆ.ಮೀ ಡಿಸ್ಪ್ಲೇ, 320 x 480 ಪಿಕ್ಸಲ್ ರೆಸೊಲ್ಯೂಷನ್

* HVGA ಟಚ್ ಸ್ಕ್ರೀನ್

* 3.2 ಮೆಗಾ ಪಿಕ್ಸಲ್ ಕ್ಯಾಮೆರಾ

* ಮಲ್ಟಿ ಮೀಡಿಯಾ ಪ್ಲೇಯರ್, ಎಫ್ ಎಂ ರೇಡಿಯೋ

* 170 ಎಂಬಿ ಆಂತರಿಕ ಮೆಮೊರಿ

* 32 ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಅವಕಾಶ

* ವೈ-ಫೈ, GPS, ಮೈಕ್ರೊ-USB, ಬ್ಲೂಟೂಥ್

* WAP ಬ್ರೌಸರ್

* ಸಾಮಾಜಿಕ ತಾಣಗಳ ಆಯ್ಕೆ

* ಆಂಡ್ರಾಯ್ಡ್ ಮಾರ್ಕೆಟ್

1400 mAh ಲೀಥಿಯಂ ಐಯಾನ್ ಬ್ಯಾಟರಿ ಪಡೆದುಕೊಂಡಿರುವ ಈ ಸ್ಪೈಸ್ ಮೊಬೈಲ್ 6 ಗಂಟೆ ಟಾಕ್ ಟೈಂ ಮತ್ತು 400 ಗಂಟೆ ಸ್ಟ್ಯಾಂಡ್ ಬೈ ಟೈಂ ನೀಡುತ್ತದೆ.

ವ್ಯವಹಾರಕ್ಕೆ ಮತ್ತು ಮನರಂಜನೆಗೆ ಉಪಯೋಗವಾಗುವಂತಹ ಅನೇಕ ಆಯ್ಕೆಗಳನ್ನು ನೀವು ಈ ಫೋನ್ ನಿಂದ ಪಡೆಯಬಹುದು. ಬಾರ್ ಫೋನ್ ಮಾದರಿಯಲ್ಲಿರುವ ಫೋನ್ ನಲ್ಲಿ ಅನೇಕ ಅಪ್ಲಿಕೇಶನ್ ಗಳು ಲಭ್ಯವಿದೆ. ಆಂಡ್ರಾಯ್ಡ್ ಮಾರ್ಕೆಟ್ ಇನ್ನಷ್ಟು ಅವಕಾಶಗಳನ್ನು ನೀಡಲಿದೆ. ಇದು ಬಳಕೆದಾರರಿಗೆ 1000ಕ್ಕಿಂತ ಹೆಚ್ಚು ಆನ್ ಲೈನ್ ಅಪ್ಲಿಕೇಶನ್ ಬಳಕೆಗೆ ಅವಕಾಶ ನೀಡುತ್ತದೆ. ಇದರಲ್ಲಿ ಇ ಬುಕ್ ಮತ್ತು ಗೇಮ್ ಗಳೂ ನಿಮಗೆಂದೇ ಇವೆ.

ಈ ಸ್ಪೈಸ್ Mi-350n ಮೊಬೈಲ್ 9,000ರೂ ಗೆ ನಿಮಗೆ ಲಭ್ಯವಾಗಲಿದೆ. ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಆಂಡ್ರಾಯ್ಡ್ ಫೋನ್ ಗಳಿಗೆ ಹೋಲಿಸಿದರೆ ಇದು ಕೈಗೆಟುಕುವ ದರದಲ್ಲಿದೆ ಎಂದೇ ಹೇಳಬಹುದು.

Please Wait while comments are loading...
Opinion Poll

Social Counting