Subscribe to Gizbot

ಈ ವರ್ಷ ಹೆಚ್ಚು ಸುದ್ದಿ ಮಾಡಿದ ಟಾಪ್‌ ಸ್ಮಾರ್ಟ್‌ಫೋನ್‌ಗಳು

Posted By:

ಈ ವರ್ಷದ ಬಹಳಷ್ಟು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.ಇವುಗಳಲ್ಲಿ ಬಹುತೇಕ ಸ್ಮಾರ್ಟ್‌ಫೋನ್‌ ಸುದ್ದಿ ಮಾಡದಿದ್ದರೂ ಕೆಲವು ಸ್ಮಾರ್ಟ್‌ಫೋನ್‌ಗಳು ತನ್ನ ವಿಶೇಷತೆ,ಮಾರಾಟದಿಂದ ವಿಶ್ವದೆಲ್ಲೆಡೆ ಸುದ್ದಿ ಮಾಡಿದೆ. ಹೀಗಾಗಿ ಇಲ್ಲಿ ಈ ವರ್ಷ ಅತಿ ಹೆಚ್ಚು ಸುದ್ದಿಯಾದ,ವಿಶೇಷತೆಯಿಂದ ಪ್ರಸಿದ್ದಿ ಪಡೆದ ಕೆಲವು ಸ್ಮಾರ್ಟ್‌ಫೋನ್‌ಗಳ ವಿವರವಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4:

ಈ ವರ್ಷ ಹೆಚ್ಚು ಸುದ್ದಿಯಾದ ಟಾಪ್‌ ಸ್ಮಾರ್ಟ್‌ಫೋನ್‌ಗಳು


ಆಂಡ್ರಾಯ್ಡ್‌ ಸ್ಮಾರ್ಟ್‌ಫೋನಿನ ಈ ವರ್ಷದ ಇತಿಹಾಸದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌.ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ 2 ಕೋಟಿ ಗೆಲಾಕ್ಸಿ ಎಸ್‌ 4 ಸ್ಮಾರ್ಟ್‌ಫೋನ್ ವಿಶ್ವದಾದ್ಯಂತ ಮಾರಾಟವಾಗಿತ್ತು.

 ನೆಕ್ಸಸ್‌5

ಈ ವರ್ಷ ಹೆಚ್ಚು ಸುದ್ದಿಯಾದ ಟಾಪ್‌ ಸ್ಮಾರ್ಟ್‌ಫೋನ್‌ಗಳು


ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆಂಡ್ರಾಯ್ಡ್‌ ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದ ಗ್ರಾಹಕರಿಗಾಗಿಯೇ ಬಿಡುಗಡೆಯಾದ ಫೋನ್‌. ಹಾರ್ಡ್‌ವೇರ್‌,ಸಾಫ್ಟ್‌ವೇರ್‌,ಬೆಲೆ ಕಡಿಮೆ ಈ ಮೂರು ವಿಚಾರ ಲೆಕ್ಕಚಾರ ಮಾಡಿದರೆ ಸದ್ಯಕ್ಕೆ ಆಂಡ್ರಾಯ್ಡ್‌ ಓಸ್‌ನಲ್ಲಿ ಇದೇ ನಂಬರ್‌ ಒನ್‌ ಸ್ಮಾರ್ಟ್‌ಫೋನ್‌.

ಇದನ್ನೂ ಓದಿ: ನೆಕ್ಸಸ್‌ -5 ಸ್ಮಾರ್ಟ್‌ಫೋನನ್ನು ಗ್ರಾಹಕರು ಈಗಲೇ ಯಾಕೆ ಖರೀದಿಸಬೇಕು?

ಐಫೋನ್‌ 5ಎಸ್‌

ಈ ವರ್ಷ ಹೆಚ್ಚು ಸುದ್ದಿಯಾದ ಟಾಪ್‌ ಸ್ಮಾರ್ಟ್‌ಫೋನ್‌ಗಳು


ವಿಶ್ವದ ವೇಗದ ಸ್ಮಾರ್ಟ್‌‌‌ಫೋನ್‌ ಎಂದು ಹೆಸರುವಾಸಿಯಾಗಿರುವ ಐಫೋನ್‌ 5ಎಸ್‌ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ತಂತ್ರಜ್ಞಾನವನ್ನು ಒಳಗೊಂಡಿದೆ.ಈ ಹಿಂದೆ ಮೋಟರೋಲಾ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ತಂತ್ರಜ್ಞಾನದ ಫೋನ್‌ ಬಿಡುಗಡೆ ಮಾಡಿದ ಬಳಿಕ ಯಾವ ಕಂಪೆನಿ ಈ ವಿಶೇಷತೆಯನ್ನು ನೀಡಿರಲಿಲ್ಲ.ಈಗ ಆಪಲ್‌ ಈ ವಿಶೇಷತೆಯನ್ನು ನೀಡುವ ಮೂಲಕ ಹೊಸ ಟ್ರೆಂಡ್ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಂಪೆನಿ ಫಿಂಗರ್‌ ಪ್ರಿಂಟ್‌ ತಂತ್ರಜ್ಞಾನದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಸಾಧ್ಯತೆ ಇದೆ.

 ಬ್ಲ್ಯಾಕ್‌ಬೆರಿ ಕ್ಯೂ10

ಈ ವರ್ಷ ಹೆಚ್ಚು ಸುದ್ದಿಯಾದ ಟಾಪ್‌ ಸ್ಮಾರ್ಟ್‌ಫೋನ್‌ಗಳು


ಕ್ವರ್ಟಿಕೀ ಪ್ಯಾಡ್‌ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಲ್ಯಾಕ್‌ಬೆರಿ ಯಾವಾಗಲೂ ನಂಬರ್‌ ಒನ್‌. ಹೀಗಾಗಿ ಬ್ಲ್ಯಾಕ್‌ಬೆರಿ ಕ್ವರ್ಟಿ‌ ಕೀಬೋರ್ಡ್‌ ಇರುವ ಫೋನ್‌ಗಳಲ್ಲಿ ಸದ್ಯಕ್ಕೆ ಬ್ಲ್ಯಾಕ್‌ಬೆರಿ ಕ್ಯೂ 10 ನಂಬರ್‌ ಒನ್‌‌ ಸ್ಮಾರ್ಟ್‌ಫೋನ್‌.

ಇದನ್ನೂ ಓದಿ: ಐಫೋನನ್ನು ಬ್ಲ್ಯಾಕ್‌ಬೆರಿಯಾಗಿ ಬದಲಾಯಿಸಿ!

 ಸೋನಿ ಎಕ್ಸ್‌ಪೀರಿಯಾ ಝಡ್‌

ಈ ವರ್ಷ ಹೆಚ್ಚು ಸುದ್ದಿಯಾದ ಟಾಪ್‌ ಸ್ಮಾರ್ಟ್‌ಫೋನ್‌ಗಳು


ಜಲ ನಿರೋಧಕ ವಿಶೇಷತೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್‌ ಇದಾಗಿದ್ದು ನೀರಿನಲ್ಲಿ ಬಿದ್ದರೂ ಈ ಸ್ಮಾರ್ಟ್‌ಫೋನ್‌ ಹಾಳಾಗುವುದಿಲ್ಲ.ಮಳೆಗೆ ಸ್ಮಾರ್ಟ್‌ಫೋನ್‌ ಹಾಳಾಗುತ್ತದೆ ಎಂದು ಹೇಳುವ ಮಂದಿ ಈ ಸ್ಮಾರ್ಟ್‌‌ಫೋನ್‌ ಖರೀದಿಸಬಹುದು.

 ಲೂಮಿಯಾ 1020

ಈ ವರ್ಷ ಹೆಚ್ಚು ಸುದ್ದಿಯಾದ ಟಾಪ್‌ ಸ್ಮಾರ್ಟ್‌ಫೋನ್‌ಗಳು


ಸ್ಮಾರ್ಟ್‌ಫೋನಲ್ಲೇ ಡಿಜಿಟಲ್‌ ಕ್ಯಾಮೆರಾ ಗುಣಮಟ್ಟದ ಫೋಟೋ ಕ್ಕಿಕ್ಕಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಅತ್ಯುತ್ತಮ ಫೋನ್‌.41 ಎಂಪಿ ಕ್ಯಾಮೆರಾ ಸೆನ್ಸರ್‌,ಪ್ಯೂರ್‌ವ್ಯೂ ಟೆಕ್ನಾಲಜಿ, ಫೋಟೋ ಬ್ಲರ್‌ ಆಗದಂತೆ ತಡೆಯುವ ಅಪ್ಟಿಕಲ್‌ ಇಮೇಜ್‌ ಸ್ಟೆಬಿಲೈಜೆಷನ್‌ ವಿಶೇಷತೆ ಇರುವ ಏಕೈಕ ಸ್ಮಾರ್ಟ್‌ಫೋನ್‌.

ಇದನ್ನೂ ಓದಿ: ನೋಕಿಯಾದ 49 ಸಾವಿರ ಬೆಲೆಯ ಸ್ಮಾರ್ಟ್‌ಫೋನಿನ ವಿಶೇಷತೆ ಏನು?

 ಗೆಲಾಕ್ಸಿ ಎಸ್‌3 ನೋಟ್‌:

ಈ ವರ್ಷ ಹೆಚ್ಚು ಸುದ್ದಿಯಾದ ಟಾಪ್‌ ಸ್ಮಾರ್ಟ್‌ಫೋನ್‌ಗಳು


ಸದ್ಯ ವಿಶ್ವದಲ್ಲಿರುವ ಅತ್ಯುತ್ತಮ ಫ್ಯಾಬ್ಲೆಟ್‌. 5.7 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌,3ಜಿ ರ್‍ಯಾಮ್‌ನೊಂದಿಗೆ ಬಿಡುಗಡೆಯಾದ ಮೊದಲ ಫ್ಯಾಬ್ಲೆಟ್‌.ಗೆಲಾಕ್ಸಿ ನೋಟ್‌3 ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ ವಿಶ್ವದಲ್ಲಿ ಒಂದು ಕೋಟಿ ಫ್ಯಾಬ್ಲೆಟ್‌ ಬಿಕಾರಿಯಾಗಿದೆ.

 ಮೋಟೋ ಎಕ್ಸ್‌

ಈ ವರ್ಷ ಹೆಚ್ಚು ಸುದ್ದಿಯಾದ ಟಾಪ್‌ ಸ್ಮಾರ್ಟ್‌ಫೋನ್‌ಗಳು


ಗ್ರಾಹಕರಿಗೆ ಬೇಕಾದ ಬಣ್ಣದಲ್ಲಿ ಹೊರಗಿನ ಭಾಗಗಳನ್ನು ಹಾಕಿ ಸೆಟ್‌ ಮಾಡಬಹುದಾದ ವಿಶ್ವದ ಮೊದಲ ಸ್ಮಾರ್ಟ್‌ಫೋನ್‌ ಫೋನ್‌(Customize smartphones)

 ಎಲ್‌ಜಿ ಜಿ2

ಈ ವರ್ಷ ಹೆಚ್ಚು ಸುದ್ದಿಯಾದ ಟಾಪ್‌ ಸ್ಮಾರ್ಟ್‌ಫೋನ್‌ಗಳು


ಎಲ್‌ಜಿ ಜಿ2 ವಿಶ್ವದ ಮೊದಲ ಹಿಂದುಗಡೆ ಕ್ಯಾಮೆರಾದ ಹತ್ತಿರ ವಾಲ್ಯೂಮ್‌ ಬಟನ್‌ ಹೊಂದಿರುವ ಸ್ಮಾರ್ಟ್‌ಫೋನ್‌

 ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಟರ್ಬೋ‌:

ಈ ವರ್ಷ ಹೆಚ್ಚು ಸುದ್ದಿಯಾದ ಟಾಪ್‌ ಸ್ಮಾರ್ಟ್‌ಫೋನ್‌ಗಳು


ಭಾರತದ ಸ್ಮಾರ್ಟ್‌‌ಫೋನ್‌ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನ ಪಡೆದು ಸುದ್ದಿಯಾಗಿದ್ದ ಮೈಕ್ರೋಮ್ಯಾಕ್ಸ್‌ ಈ ವರ್ಷದ ಕೊನೆಗೆ ತನ್ನ ಮೊದಲ ಫುಲ್‌ ಎಚ್‌ಡಿ ಸ್ಮಾರ್ಟ್‌ಫೋನ್ ಕ್ಯಾನ್‌ವಾಸ್ ಟರ್ಬೋ‌ಗೆ ಹಾಲಿವು‌ಡ್‌ ನಟ ಹ್ಯೂ ಜ್ಯಾಕ್‌ಮನ್‌ ನೇಮಿಸುವ ಮೂಲಕ ಸುದ್ದಿಯಾಗಿತ್ತು.ಭಾರತ ಜಾಹೀರಾತು ಇತಿಹಾಸದಲ್ಲಿ ಹಾಲಿವುಡ್‌ ಸೆಲೆಬ್ರಿಟಿಯೊಬ್ಬರು ದೇಶೀಯ ಕಂಪೆನಿಗೆ ಸೆಲೆಬ್ರಿಟಿಯಾಗುವುದು ಇದೇ ಮೊದಲು.

 ಎಚ್‌ಟಿಸಿ ಒನ್‌:

ಈ ವರ್ಷ ಹೆಚ್ಚು ಸುದ್ದಿಯಾದ ಟಾಪ್‌ ಸ್ಮಾರ್ಟ್‌ಫೋನ್‌ಗಳು


ಆಂಡ್ರಾಯ್ಡ್‌ ಓಎಸ್‌ ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿಮೆ ಮತ್ತು ಯೂಸರ್‌ ಇಂಟರ್‌ಫೇಸ್‌‌ ಉತ್ತಮವಾಗಿದ್ದರೂ ಅದರ ದೇಹ ಚೆನ್ನಾಗಿಲ್ಲ. ಬಹುತೇಕ ಕಂಪೆನಿಗಳು ಪ್ಲಾಸ್ಟಿಕ್‌ ದೇಹದಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತವೆ ಎನ್ನುವ ಆರೋಪವಿದೆ. ಆದರೆ ಎಚ್‌ಟಿಸಿ ಕಂಪೆನಿ ಫುಲ್‌ ಮೆಟಲ್‌ ಬಾಡಿ,ಸುಂದರ ವಿನ್ಯಾಸದ ಎಚ್‌ಟಿಸಿ ಒನ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿ, ಆಂಡ್ರಾಯ್ಡ್‌ನಲ್ಲೂ ಉತ್ತಮ ಫೋನ್‌ ತಯಾರಿಸಬಹುದು ಎಂದು ಹೇಳುವ ಮೂಲಕ ಆರೋಪವನ್ನು ಸುಳ್ಳು ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot