ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನೇ ಬದಲಿಸಿದ 2019ರ ಬಿಗ್‌ ಫೀಚರ್ಸ್‌..!

By Gizbot Bureau
|

ಕೆಲವೇ ದಿನಗಳಲ್ಲಿ 2019ಕ್ಕೆ ವಿದಾಯ ಹೇಳಿ, 2020ನ್ನು ಸ್ವಾಗತಿಸಲು ಇಡೀ ವಿಶ್ವ ಸಜ್ಜಾಗುತ್ತಿದದೆ. ಸ್ಮಾರ್ಟ್‌ಫೋನ್‌ ಮಾರುಕಟ್ಟೆಯು ಕೂಡ ಹೊಸ ವರ್ಷವನ್ನು ಸ್ವಾಗತಿಸಲು ಭರ್ಜರಿ ತಯಾರಿ ನಡೆಸುತ್ತಿದೆ. ಆದರೆ, ಈ ವರ್ಷ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಆದ ಬೆಳವಣಿಗೆಗಳು ಮುಂದಿನ ವರ್ಷದಲ್ಲೂ ಘಟಿಸುತ್ತಾವೆಯೇ ಎಂಬುದೇ ಎಲ್ಲರ ಪ್ರಶ್ನೆ. ಹೌದು, ಈ ವರ್ಷ ಅನೇಕ ಹೊಸ ರೀತಿಯ ಟ್ರೆಂಡ್‌ಗಳು ಸ್ಮಾರ್ಟ್‌ಫೋನ್‌ ಲೋಕದಲ್ಲಿ ಕಂಡಿವೆ. ಅವು ನಿಮ್ಮ ಸ್ಮಾರ್ಟ್‌ಫೋನ್‌ ಬಳಕೆಯ ವಿಧಾನವನ್ನೇ ಬದಲಿಸಿವೆ. ಅಂತಹ 10 ದೊಡ್ಡ ಫೀಚರ್‌ಗಳ ಮೇಲೆ ಒಂದ್ ಸುತ್ತು.. ನೋಡ್ಕೊಂಡು ಬನ್ನಿ..

ಪಂಚ್-ಹೋಲ್ ಫ್ರಂಟ್ ಕ್ಯಾಮೆರಾ

2019ರಲ್ಲಿ ಪಂಚ್-ಹೋಲ್ ಕ್ಯಾಮೆರಾಗಳೊಂದಿಗೆ ಅನೇಕ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿವೆ. ಲೇಸರ್ ಡ್ರಿಲ್ ಪಂಚ್-ಹೋಲ್‌ ಸ್ಕ್ರೀನ್‌ನಲ್ಲಿ ಹೆಚ್ಚಿನ ಜಾಗವನ್ನು ಉಳಿಸುತ್ತದೆ. ಹಾಗೂ ಸೆಲ್ಫಿ ಕ್ಯಾಮೆರಾವನ್ನು ಮರೆಮಾಚುತ್ತದೆ, ಈ ಫೀಚರ್‌ ಪ್ರಥಮವಾಗಿ ಹಾನರ್ ವೀವ್‌ 20 ಸ್ಮಾರ್ಟ್‌ಫೋನ್‌ನಲ್ಲಿ ಕಾಣಿಸಿಕೊಂಡಿತು. ನಂತರ, ಸ್ಯಾಮ್‌ಸಂಗ್ ಗ್ಯಾಲಕ್ಸಿ 10+, ನೋಟ್ 10 ಮತ್ತು ವಿವೋ Z1 ಪ್ರೋನಲ್ಲಿ ಕಾಣಿಸಿತು.

48 MP ರಿಯರ್‌ ಕ್ಯಾಮೆರಾ

48 MP ರಿಯರ್‌ ಕ್ಯಾಮೆರಾ

ಈ ವರ್ಷದ ಮತ್ತೊಂದು ಪ್ರಮುಖ ಫೀಚರ್‌ ಎಂದರೆ 48 MP ರಿಯರ್‌ ಕ್ಯಾಮೆರಾ. ಹಾನರ್ ವೀವ್‌ 20ರಲ್ಲಿ ಮೊದಲು ಬಂದ 48 MP ಸೆನ್ಸಾರ್‌ ಈ ವರ್ಷ ಪ್ರೀಮಿಯಂ ಮತ್ತು ಕೈಗೆಟುಕುವ ಶ್ರೇಣಿಯಲ್ಲೂ ಪ್ರವೇಶ ಮಾಡಿದೆ. ಒನ್‌ಪ್ಲಸ್ 7, ಒನ್‌ಪ್ಲಸ್ 7 ಪ್ರೋ, ಒನ್‌ಪ್ಲಸ್ 7T, ಒನ್‌ಪ್ಲಸ್ 7T ಪ್ರೋ, ಒಪ್ಪೊ F11 ಪ್ರೋ, ಒಪ್ಪೊ ರೆನೋ, ಶಿಯೋಮಿ ರೆಡ್‌ಮಿ ಕೆ 20 ಪ್ರೋ. ಶಿಯೋಮಿ ರೆಡ್‌ಮಿ ನೋಟ್ 7 ಪ್ರೋ, ಸ್ಯಾಮ್‌ಸಂಗ್ ಗೆಲಾಕ್ಸಿ M30s, ಶಿಯೋಮಿ Mi A3, ರಿಯಲ್‌ಮಿ 5 ಪ್ರೋ ಮತ್ತು ರಿಯಲ್‌ಮಿ 5s ಸ್ಮಾರ್ಟ್‌ಫೋನ್‌ಗಳಲ್ಲಿ 48 MP ರಿಯರ್‌ ಕ್ಯಾಮೆರಾ ಕಾಣಬಹುದು.

ಪಾಪ್-ಅಪ್ ಸೆಲ್ಫೀ ಕ್ಯಾಮೆರಾ

ಪಾಪ್-ಅಪ್ ಸೆಲ್ಫೀ ಕ್ಯಾಮೆರಾ

2019ರಲ್ಲಿ ಮುಖ್ಯವಾಹಿನಿಗೆ ಬಂದ ಮತ್ತೊಂದು ಪ್ರವೃತ್ತಿ ಎಂದರೆ ಸ್ಲೈಡರ್ ಮತ್ತು ಪಾಪ್-ಅಪ್ ಕ್ಯಾಮೆರಾ. ದೊಡ್ಡ ಸ್ಕ್ರೀನ್‌ ನೀಡುವುದು ಇದರ ಪ್ರಮುಖ ಉದ್ದೇಶವಾಗಿದ್ದು, ಎಡ್ಜ್-ಟು-ಎಡ್ಜ್ ಡಿಸ್‌ಪ್ಲೇ ನೀಡುತ್ತದೆ. ರಿಯಲ್‌ಮಿ X, ಶಿಯೋಮಿ ರೆಡ್‌ಮಿ K20 ಪ್ರೋ, ಒನ್‌ಪ್ಲಸ್ 7T, ಒನ್‌ಪ್ಲಸ್ 7T ಪ್ರೋ, ಒಪ್ಪೋ ರೆನೋ 10X ಜೂಮ್, ಸ್ಯಾಮ್‌ಸಂಗ್ ಗೆಲಾಕ್ಸಿ A80, V15 ಪ್ರೋ, V17 ಪ್ರೋ ಮತ್ತು ಹೆಚ್ಚಿನವುಗಳಲ್ಲಿ ಪಾಪ್‌-ಅಪ್‌ ಸೆಲ್ಫೀ ಕ್ಯಾಮೆರಾವನ್ನು ನೋಡಬಹುದು.

ಇನ್‌-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್

ಇನ್‌-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್

ಇನ್‌-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ 2019ರಲ್ಲಿ ಮಾರುಕಟ್ಟೆಗೆ ಬಂದ ಮತ್ತೊಂದು ಪ್ರಮುಖ ಫೀಚರ್‌ ಆಗಿದೆ. ಒಪ್ಪೋ, ಒನ್‌ಪ್ಲಸ್, ಸ್ಯಾಮ್‌ಸಂಗ್ ಮತ್ತು ವಿವೋ ಮುಂತಾದ ಕಂಪನಿಗಳು ಇನ್‌-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಬಂದಿವೆ.

4000mAh ಬ್ಯಾಟರಿ ಸಾಮರ್ಥ್ಯ

4000mAh ಬ್ಯಾಟರಿ ಸಾಮರ್ಥ್ಯ

ಈ ವರ್ಷದಲ್ಲಿ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಸಾಮರ್ಥ್ಯ ಹೆಚ್ಚಾಗಿದ್ದು, 4000mAh ಬ್ಯಾಟರಿಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಯಾಗಿವೆ. ಪ್ರೀಮಿಯಂ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಅಷ್ಟೇ ಅಲ್ಲದೇ, 20,000 ರೂ. ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ 4000mAh ಬ್ಯಾಟರಿ ಬಂದಿದೆ. ಸ್ಯಾಮ್‌ಸಂಗ್ ಗೆಲಾಕ್ಸಿ M30s, ಶಿಯೋಮಿ ರೆಡ್‌ಮಿ ನೋಟ್ 8 ಪ್ರೋ, ವಿವೋ U20, ವಿವೋ U10, ರಿಯಲ್‌ಮಿ XT, ವಿವೋ Z1 ಪ್ರೋ, ರಿಯಲ್‌ಮಿ 5 ಪ್ರೋ, ಒಪ್ಪೋ F11 ಪ್ರೋ, ಒಪ್ಪೋ A9ನಲ್ಲಿ ಬ್ಯಾಟರಿ ಸಾಮರ್ಥ್ಯದ ಹೆಚ್ಚಳವನ್ನು ನೋಡಬಹುದು.

ಫಾಸ್ಟ್ ಚಾರ್ಜಿಂಗ್

ಫಾಸ್ಟ್ ಚಾರ್ಜಿಂಗ್

ಫಾಸ್ಟ್ ಚಾರ್ಜಿಂಗ್ ಈ ವರ್ಷ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಬಂದ ಮತ್ತೊಂದು ದೊಡ್ಡ ವೈಶಿಷ್ಟ್ಯವಾಗಿದೆ. ಒಪ್ಪೋ, ವಿವೋ, ಒನ್‌ಪ್ಲಸ್, ರಿಯಲ್‌ಮಿ ಮತ್ತು ಸ್ಯಾಮ್‌ಸಂಗ್‌ನಂತಹ ಬಹುತೇಕ ಪ್ರಮುಖ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನಕ್ಕೆ ಬೆಂಬಲ ನೀಡುತ್ತಿವೆ.

ಡ್ಯುಯಲ್-ಟೋನ್ ಗ್ರೇಡಿಯಂಟ್ ಫಿನಿಶ್

ಡ್ಯುಯಲ್-ಟೋನ್ ಗ್ರೇಡಿಯಂಟ್ ಫಿನಿಶ್

ಈ ವರ್ಷ ಸ್ಮಾರ್ಟ್‌ಫೋನ್‌ಗಳ ಹಿಂಭಾಗದಲ್ಲಿ ಡ್ಯುಯಲ್-ಟೋನ್ ಗ್ರೇಡಿಯಂಟ್ ಫಿನಿಶ್ ನೀಡಲಾಗುತ್ತಿದೆ. ಈ ವರ್ಷ ಡ್ಯುಯಲ್-ಟೋನ್ ಗ್ರೇಡಿಯಂಟ್ ಬ್ಯಾಕ್ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡದ ಯಾವುದೇ ಬ್ರಾಂಡ್ ಇಲ್ಲ ಎನ್ನಬಹುದು.

ಮಲ್ಟಿಪಲ್‌ ರಿಯರ್‌ ಕ್ಯಾಮೆರಾ

ಮಲ್ಟಿಪಲ್‌ ರಿಯರ್‌ ಕ್ಯಾಮೆರಾ

ಕನಿಷ್ಠ ಮೂರು ಹಿಂದಿನ ಕ್ಯಾಮೆರಾಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಈ ವರ್ಷ ಹೊಸ ಟ್ರೆಂಡ್ ಸೃಷ್ಟಿಸಿದವು. 2019ರ ದ್ವಿತೀಯಾರ್ಧದಲ್ಲಿ ಡ್ಯುಯಲ್‌ ಕ್ಯಾಮೆರಾ ಹೊಂದಿರುವ ಯಾವುದೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿಲ್ಲ. ಕನಿಷ್ಠ ಮೂರು ಕ್ಯಾಮೆರಾ ಮತ್ತು ಗರಿಷ್ಠ ನಾಲ್ಕು ಹಿಂದಿನ ಕ್ಯಾಮೆರಾಗಳು ಸ್ಮಾರ್ಟ್‌ಫೋನ್‌ನಲ್ಲಿ ಸ್ಥಾನ ಪಡೆದಿದ್ದು, ಮೂರನೇ ಕ್ಯಾಮೆರಾ ಜೂಮಿಂಗ್‌ ಅಥವಾ ವೈಡ್ ಲೆನ್ಸ್ ಆಗಿ ಬಂದಿದೆ.

ಕೈಗೆಟುಕುವ ಪ್ರೀಮಿಯಂ ಫೋನ್‌ಗಳು

ಕೈಗೆಟುಕುವ ಪ್ರೀಮಿಯಂ ಫೋನ್‌ಗಳು

2019ರಲ್ಲಿ ಜನಸಾಮಾನ್ಯರಿಗೆ ಕೈಗೆಟುಕುವ ಪ್ರೀಮಿಯಂ ಫ್ಲ್ಯಾಗ್‌ಶಿಪ್‌ಗಳನ್ನು ಸಹ ಬಿಡುಗಡೆ ಮಾಡಲಾಯಿತು. ಎಲ್ಲಾ ಮೂರು ದೊಡ್ಡ ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಾದ ಸ್ಯಾಮ್‌ಸಂಗ್, ಒನ್‌ಪ್ಲಸ್ ಮತ್ತು ಗೂಗಲ್ ಈ ವರ್ಷ ಕೈಗೆಟುಕುವ ಫ್ಲ್ಯಾಗ್‌ಶಿಪ್‌ಗಳನ್ನು ಬಿಡುಗಡೆ ಮಾಡಿವೆ. ಇವುಗಳಲ್ಲಿ ಸ್ಯಾಮ್‌ಸಂಗ್ ಗೆಲಾಕ್ಸಿ 10E, ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7T ಮತ್ತು ಗೂಗಲ್ ಪಿಕ್ಸೆಲ್ 3A ಮತ್ತು ಪಿಕ್ಸೆಲ್ 3A XL ಪ್ರಮುಖ ಆಗಿವೆ. ಈ ಫೋನ್‌ಗಳ ಪ್ರವೃತ್ತಿಯನ್ನು 2018ರಲ್ಲಿ ಐಫೋನ್ ‍XR ಬಿಡುಗಡೆ ಮಾಡುವುದರೊಂದಿಗೆ ಆಪಲ್‌ ಕಂಪನಿ ಪ್ರಾರಂಭಿಸಿತ್ತು.

ಡಾರ್ಕ್ ಮೋಡ್

ಡಾರ್ಕ್ ಮೋಡ್

ಡಾರ್ಕ್‌ ಮೋಡ್‌ ಫೀಚರ್‌ ಖಂಡಿತವಾಗಿಯೂ 2019ರ ಸ್ಮಾರ್ಟ್‌ಫೋನ್‌ಗಳಿಗೆ ಬಂದ ಸಾಫ್ಟ್‌ವೇರ್‌ನಲ್ಲಿ ದೊಡ್ಡ ಬದಲಾವಣೆಯಾಗಿದೆ. ಆಂಡ್ರಾಯ್ಡ್ 10ನ ಇತ್ತೀಚಿನ ಆವೃತ್ತಿ ಮತ್ತು ಆಪಲ್‌ ಐಒಎಸ್ 13ನಲ್ಲಿ ಡಾರ್ಕ್ ಮೋಡ್ ಪ್ರಮುಖ ಲಕ್ಷಣವಾಗಿದೆ.

Best Mobiles in India

Read more about:
English summary
These Are The Top Ten Smartphone Features of 2019

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X