ಈ ಫೋನ್ ಗಳು ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ

By Gizbot Bureau
|

ಈ ವರ್ಷ ಹಲವು ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳು ತಮ್ಮ ನೂತನ ಡಿವೈಸ್ ಗಳ ಬಿಡುಗಡೆಯನ್ನು ಮುಂದೂಡಿವೆ. ಆನ್ ಲೈನ್ ನಲ್ಲಿ ನೀಡಲಾಗುತ್ತಿದ್ದ ಆಫರ್ ಗಳಲ್ಲೂ ಕೂಡ ಕಡಿತವಾಗಿದೆ. ಕೊರೊನಾ ವೈರಸ್ ಕಾರಣದಿಂದಾಗಿ ಬಿಡುಗಡೆ ಕಾರ್ಯಕ್ರಮಗಳು ನಿಂತು ಹೋಗಿವೆ. ಸ್ಮಾರ್ಟ್ ಫೋನ್ ಗಳ ಮಾರಾಟ ಮತ್ತು ಶಿಪ್ಮೆಂಟ್ ನಲ್ಲಿ ವ್ಯತ್ಯಯವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಹಲವು ಡಿವೈಸ್ ಗಳು ಬಿಡುಗಡೆಗೊಂಡಿಲ್ಲ. ಆದರೆ ಭಾರತದಲ್ಲಿ ಈ ಕೆಳಗೆ ನಮೂದಿಸಲಾಗಿರುವ ಡಿವೈಸ್ ಗಳನ್ನು ಆದಷ್ಟು ಬೇಗನೆ ನಿರೀಕ್ಷಿಸಬಹುದಾಗಿದೆ. .

ಚೀನಾದ ಫೋನ್

ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ಕೆಲವು ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ಕೆಲವು ಮಾರುಕಟ್ಟೆಗಳಲ್ಲಿ ಈ ಕೆಳಗಿನ ಕೆಲವು ಡಿವೈಸ್ ಗಳು ಈಗಾಗಲೇ ಲಭ್ಯವಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸದ್ಯದಲ್ಲೆ ಸಿಗಲಿದೆ.

ಚೀನಾದ ಫೋನ್ ಗಳಾಗಿರುವ ಶಿಯೋಮಿ, ರಿಯಲ್ ಮಿ ಹಾನರ್‌ ಇತ್ಯಾದಿಗಳು ಕೂಡ ಇದರಲ್ಲಿ ಸೇರಿವೆ. ಹಾಗಾದ್ರೆ ಭಾರತೀಯ ಮಾರುಕಟ್ಟೆಯಲ್ಲಿ ಸಿಗಲಿರುವ ಕೆಲವು ಡಿವೈಸ್ ಗಳ ಪಟ್ಟಿ ಇಲ್ಲಿದೆ ನೋಡಿ.

ಹಾನರ್ X10

ಹಾನರ್ X10

ಹಾನರ್ X10 ಹೊಸದಾಗಿ ಬಿಡುಗಡೆಗೊಂಡಿರುವ 5ಜಿ ಸ್ಮಾರ್ಟ್ ಫೋನ್ ಆಗಿದ್ದು 6.63-ಇಂಚಿನ IPS LCD ಡಿಸ್ಪ್ಲೇ, ಆಕ್ಟಾ ಕೋರ್ ಇನ್ ಹೌಸ್ ಕಿರಿನ್ 5ಜಿ ಚಿಪಸ ಸೆಟ್, 4200mAh ಬ್ಯಾಟರಿ , ಪಾಪ್ ಅಪ್ ಸೆಲ್ಫೀ ಕ್ಯಾಮರಾ ಮತ್ತು ಹಿಂಭಾಗದಲ್ಲಿ ಪೆರಿಸ್ಕೋಪ್ ಸೆಟ್ ಅಪ್ ಇರುವ ಕ್ಯಾಮರಾ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.

ಒಪ್ಪೊ ಫೈಂಡ್ X2

ಒಪ್ಪೊ ಫೈಂಡ್ X2

ಓಪ್ಪೋ ಫೈಂಡ್ X2 ನಲ್ಲಿ 6.7-ಇಂಚಿನ QHD+ ಡಿಸ್ಪ್ಲೇ ಜೊತೆಗೆ 1440 x 3168 ಪಿಕ್ಸಲ್ಸ್ ರೆಸಲ್ಯೂಷನ್, ಆಂಡ್ರಾಯ್ಡ್ 10 ColorOS 7.1, ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865 SoC ಇರಲಿದ್ದು ಅದರಲ್ಲಿ 12GB of RAM, ಮತ್ತು ಟ್ರಿಪಲ್ ಕ್ಯಾಮರಾ ಸೆಟ್ ಅಪ್ ಜೊತೆಗೆ 48MP ಪ್ರೈಮರಿ ಕ್ಯಾಮರಾ ಸೆನ್ಸರ್ ಮತ್ತು 4200mAh ಬ್ಯಾಟರಿ ಜೊತೆಗೆ ಇನ್ನೂ ಹಲವು ವೈಶಿಷ್ಟ್ಯತೆಗಳಿವೆ.

ಒಪ್ಪೊ ಫೈಂಡ್ X2 ಪ್ರೊ

ಒಪ್ಪೊ ಫೈಂಡ್ X2 ಪ್ರೊ

ಓಪ್ಪೊ ಫೈಂಡ್ X2 ಪ್ರೋ ನಲ್ಲಿ ಇದಕ್ಕಿಂದ ಸಣ್ಣದಾಗಿರುವ ಓಪ್ಪೋ ಫೈಂಡ್ X2 ನಲ್ಲಿರುವ ಹಲವು ವೈಶಿಷ್ಟ್ಯತೆಗಳಿವೆ. ಇದರಲ್ಲಿ ಉತ್ತಮ ಕ್ಯಾಮರಾ ವ್ಯವಸ್ಥೆ ಇದೆ. ಗರಿಷ್ಟ ಬ್ಯಾಟರಿ ಇದೆ. 4260mAh ಜೊತೆಗೆ 65W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ ಮತ್ತು ಇತರೆ ಹಲವು ಗಮನಿಸಬಹುದಾದ ವಿಶೇಷತೆಗಳಿವೆ.

ರಿಯಲ್ ಮಿ X3

ರಿಯಲ್ ಮಿ X3

ರಿಯಲ್ ಮಿ X3 ಅತೀ ಹೆಚ್ಚು ವದಂತಿಗಳನ್ನು ಸೃಷ್ಟಿಸಿರುವ ಡಿವೈಸ್ ಗಳಲ್ಲಿ ಒಂದಾಗಿದೆ. ಇದರಲ್ಲಿ 6.57-ಇಂಚಿನ FHD+ ಡಿಸ್ಪ್ಲೇ, ಕ್ವಾಡದ ಕ್ಯಾಮರಾ ಸೆಟ್ ಅಪ್ ಜೊತೆಗೆ 48MP ಪ್ರೈಮರಿ ಸೆನ್ಸರ್ , ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಮುಂಭಾಗದಲ್ಲಿ ಹೊಂದಿದೆ. ಸ್ಟ್ಯಾಂಡರ್ಟ್ ಕನೆಕ್ಟಿವಿಟಿ ಅಂಶಗಳು ಮತ್ತು 4100mAh ಬ್ಯಾಟರಿ ವ್ಯವಸ್ಥೆ ಇದರಲ್ಲಿದೆ.

ರಿಯಲ್ ಮಿ ಎಕ್ಸ್3 ಸೂಪರ್ ಝೂಮ್

ರಿಯಲ್ ಮಿ ಎಕ್ಸ್3 ಸೂಪರ್ ಝೂಮ್

ರಿಯಲ್ ಮಿ ಎಕ್ಸ್3 ಸೂಪರ್ ಝೂಮ್ ಅತೀ ಹೆಚ್ಚು ಚರ್ಚೆಗೊಳಗಾದ ಫೋನ್ ಗಳಲ್ಲಿ ಒಳದಾಗಿದೆ. ಅತ್ಯುತ್ತಮ ಕ್ಯಾಮರಾ ವಿಚಾರಗಳಿಗಾಗಿ ಇದು ಫೇಮಸ್ ಆಗಿದೆ. ಮುಂಬರುವ ಈ ರಿಯಲ್ ಮಿ ಡಿವೈಸ್ ನಲ್ಲಿ 60x ಝೂಮ್ ಕೆಪಾಸಿಟಿ ಇರುವ ಕ್ಯಾಮರಾ ಇರಲಿದೆ‌ ಎನ್ನಲಾಗಿದೆ. ಆದರೆ ಯಾವಾಗ ಈ ಫೋನ್ ಮಾರುಕಟ್ಟೆಗೆ ಬರಲಿದೆ ಎಂಬ ಬಗೆಗಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

ನೋಕಿಯಾ 5.3

ನೋಕಿಯಾ 5.3

ಎರಡು ತಿಂಗಳ ಮುಂಚೆ ನೋಕಿಯಾ 5.3 ಫೋನ್ ಪ್ರಕಟಗೊಂಡಿದೆ. ಈ ಫೋ‌ನ್ ನಲ್ಲಿ 6.55-ಇಂಚಿನ IPS LCD ಡಿಸ್ಪ್ಲೇ, ಸ್ನ್ಯಾಪ್ ಡ್ರ್ಯಾಗನ್ 665 SoC, 4000mAh ಬ್ಯಾಟರಿ ಮತ್ತು ಇತರೆ ಹಲವು ವೈಶಿಷ್ಟ್ಯಗಳನ್ನು ಇದು ಒಳಗೊಂಡಿರುತ್ತದೆ.

Most Read Articles
Best Mobiles in India

English summary
Some of these devices are already available in select markets and await their Indian launch. This includes the smartphones from Chinese players such as Xiaomi, Realme Honor, etc. Do take a look at the upcoming smartphones to be launched soon in India from below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X