Subscribe to Gizbot

ಅಮೆರಿಕಾ ಮೂಲದ ಅದ್ಬುತ ಫೋನ್ ಭಾರತಕ್ಕೆ!.4 ಕ್ಯಾಮೆರಾದ ಫೋನ್ ಬೆಲೆ 11,999ರೂ.!!

Written By:

ಅತ್ಯಾಧುನಿಕ ಫೀಚರ್ಸ್, ಕಡಿಮೆ ಬೆಲೆ ಹೊಂದಿರುವ ಸ್ಮಾರ್ಟ್‌ಫೋನ್ ಮೂಲಕ ಅಮೆರಿಕಾ ಮೂಲದ ಇನ್‌ಫೋಕಸ್ ಮೊಬೈಲ್ ಕಂಪೆನಿ ಭಾರತದ ಗ್ರಾಹಕರಿಗೆ ಗಾಳ ಹಾಕಲು ರೆಡಿಯಾಗಿ ಬಂದಿದೆ.!! ಚೀನಾ ಮೊಬೈಲ್ ಕಂಪೆನಿಗಳಿಗಿಂತಲೂ ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್ ಅನ್ನು ಇನ್‌ಫೋಕಸ್ ನೂತನ ಸ್ಮಾರ್ಟ್‌ಫೋನ್ ಹೊಂದಿದ್ದು, ಎಲ್ಲರನ್ನು ಅಚ್ಚರಿಗೆ ದೂಡಿದೆ.!!

'ಇನ್‌ಫೋಕಸ್ ಸ್ನ್ಯಾಪ್ 4 'ಹೆಸರಿನ ಸ್ಮಾರ್ಟ್‌ಫೋನ್ ಅನ್ನು ಇನ್‌ಫೋಕಸ್ ಕಂಪೆನಿ ಬಿಡುಗಡೆ ಮಾಡಿದ್ದು, ಈ ಫೋನ್ ನಾಲ್ಕು ಕ್ಯಾಮೆರಾಗಳನ್ನು ಹೊಂದಿದೆ.!! ಇನ್ನು ಸ್ಮಾರ್ಟ್‌ಫೋನ್ ಬೆಲೆ ಕೇವಲ 11,999 ರೂಪಾಯಿಗಳಾಗಿದ್ದು, ಹಾಗಾದರೆ, ನೂತನ ಸ್ನ್ಯಾಪ್ 4 ಸ್ಮಾರ್ಟ್‌ಫೋನ್ ಹೇಗಿದೆ? ಫೀಚರ್ಸ್ ಏನು? ಖರೀದಿಸಲು ಬೆಸ್ಟ್ ಏಕೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಾಲ್ಕು ಕ್ಯಾಮೆರಾ!!

ನಾಲ್ಕು ಕ್ಯಾಮೆರಾ!!

ಹೆಸರಿನಲ್ಲಿಯೇ ಸೇರಿಕೊಂಡಿರುವಂತೆ ಇನ್‌ಫೋಕಸ್ ಸ್ನ್ಯಾಪ್ 4 ಫೋನ್ ಒಟ್ಟು ನಾಲ್ಕು ಕ್ಯಾಮೆರಾಗಳನ್ನು ಹೊಂದಿದೆ.!! ಹಿಂಬಾಗದಲ್ಲಿ 13MP ಯ ಎರಡು ಕ್ಯಾಮೆರಾಗಳು ಹಾಗೂ F/2.2 ಆಪಾರ್ಚರ್ ಹೊಂದಿದ್ದರೆ. 8MP ಯ ಎರಡು ಸೆಲ್ಫಿ ಕ್ಯಾಮೆರಾಗಳು ಹಾಗೂ F/2.4 ಅಪಾರ್ಚರ್ ಹೊಂದಿವೆ.!! ಜೊತೆಗೆ ಡಿಜಿಟಲ್ ಜೂಮ್, ಎಲ್‌ಇಡಿ ಫ್ಲಾಶ್, ಆಟೋ ಫೋಕಸ್ ಫೀಚರ್‌ಗಳು ಲಭ್ಯವಿವೆ.!!

ಡಿಸ್‌ಪ್ಲೇ ಹೇಗಿದೆ?

ಡಿಸ್‌ಪ್ಲೇ ಹೇಗಿದೆ?

'ಇನ್‌ಫೋಕಸ್ ಸ್ನ್ಯಾಪ್ 4 'ಸ್ಮಾರ್ಟ್‌ಫೋನ್ 5.5 ಇಂಚ್ ಹೆಚ್‌ಡಿ ಮೆಟಲ್ ಸಂರಕ್ಷಿತ ಡಿಸ್‌ಪ್ಲೇ ಹಾಗೂ 2.5D ಕರ್ವಡ್ ಗ್ಲಾಸ್ ಹೊಂದಿದೆ.!! ಹೋಮ್‌ ಬಟನ್‌ನಲ್ಲಿಯೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಲಭ್ಯವಿದ್ದು, ನೂತನ ಫೀಚರ್ ಅನ್ನು ಅಳವಡಿಸಿಕೊಂಡಿದೆ.!!

ಪ್ರೊಸೆಸರ್ ಮತ್ತು RAM ಹಾಗೂ ROM!!

ಪ್ರೊಸೆಸರ್ ಮತ್ತು RAM ಹಾಗೂ ROM!!

4GB RAM ಮತ್ತು 64GB ಆಮತರಿಕ ಮೆಮೊರಿ ಹೊಂದಿ 'ಇನ್‌ಫೋಕಸ್ ಸ್ನ್ಯಾಪ್ 4'ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ.!! 64 ಬಿಟ್ ಆಕ್ಟ-ಕೋರ್ ಮೀಡಿಯಾಟೆಕ್ MT6750N ಪ್ರೊಸೆಸರ್ ಹಾಗೂ ಆಮಡ್ರಾಯ್ಡ್ 7.0 ನ್ಯೂಗಾದಲ್ಲಿ ಸ್ಮಾರ್ಟ್‌ಫೋನ್‌ ಕಾರ್ಯನಿರ್ವಹಿಸಲಿದೆ.!!

ಬೇರೆ ಏನೆಲ್ಲಾ ಫೀಚರ್ಸ್!!

ಬೇರೆ ಏನೆಲ್ಲಾ ಫೀಚರ್ಸ್!!

4Gವೋಲ್ಟ್, ಡ್ಯುಯಲ್ ಸಿಮ್, 3000mAh ಬ್ಯಾಟರಿ ಹಾಗೂ ಬ್ಲೂಟೂಥ್ 5 ಸಪೋರ್ಟ್ ಮತ್ತು ಲೈಟ್‌ನಿಂಗ್ ಫಾಸ್ಟ್ ಫಿಂಗರ್‌ಪ್ರಿಂಟ್ ಸ್ಮಾಟ್‌ಫೋನ್ ಅಂದವನ್ನು ಹೆಚ್ಚಿಸಿವೆ.!! ಅತ್ಯಂತ ಕಡಿಮೆ ಬೆಲೆಗೆ ಬಹುತೇಕ ಎಲ್ಲಾ ಫೀಚರ್‌ಗಳು ಲಭ್ಯವಿವೆ.!!

ಅಮೆಜಾನ್‌ನಲ್ಲಿ ಲಭ್ಯ.!!

ಅಮೆಜಾನ್‌ನಲ್ಲಿ ಲಭ್ಯ.!!

ಇಷ್ಟೆಲ್ಲಾ ಅದ್ಬುತ ಫೀಚರ್‌ಗಳನ್ನು ಒಳಗೊಂಡಿರುವ ನೂತನ 'ಇನ್‌ಫೋಕಸ್ ಸ್ನ್ಯಾಪ್ 4' ಇದೇ ಬುದವಾರ ಬಿಡುಗಡೆಯಾಗಿದ್ದು, ಸೆಪ್ಟೆಂಬರ್ 26 ರಿಂದ ಅಮೆಜಾನ್‌ನಲ್ಲಿ ಸೇಲ್‌ಗಿದೆ.!! ಚೀನಾ ಕಂಪೆನಿಗಳಿಗಳಿಗೆ ಸೆಡ್ಡು ಹೊಡೆಯಬಹುದಾದ ಸ್ಮಾರ್ಟ್‌ಪೋನ್‌ಗಳಲ್ಲಿ ಇದು ಕೂಡ ಒಂದಾಗಿದೆ.!!

ಓದಿರಿ:'ಶಿಯೋಮಿ ಎಂಐ ಎ1' ಫೋನ್‌ಗಾಗಿ ಮತ್ತೆ ಫ್ಲಾಶ್‌ಸೇಲ್ ಆಯೋಜನೆ!!..ಯಾವಾಗ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Are you content with just two cameras doing to magic in your smartphone? Well, InFocus doubles that without boosting the price.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot