ಕರ್ನಾಟಕದಲ್ಲೇ ಮೊದಲು: ಹಳೇ ಫೋನ್ ಎಸೆದವರಿಗೆ ಹೊಸ ಸ್ಮಾರ್ಟ್‌ಫೋನ್ ಫ್ರೀ..!

|

ನಿಮ್ಮ ಮನೆಯಲ್ಲಿ ಬಳಕೆಗೆಬಾರದ ಹಳೇಯ ಫೋನ್‌ವೊಂದು ಇದ್ದರೆ ಅದನ್ನು ಸುಮ್ಮನೆ ಕೊಳೆಯುವಂತೆ ಮಾಡುವ ಬದಲು ಇಲ್ಲೊಂದು ಸ್ಪರ್ಧೆ ಆಯೋಜನೆಯಾಗಿದೆ. ಅಲ್ಲಿ ಬಂದು ನಿಮ್ಮ ಹಳೇಯ ಫೋನ್ ಅನ್ನು ತಂದು ಎಸೆಯಬೇಕಾಗಿದೆ. ಯಾರು ದೂರಕ್ಕೆ ಹಳೇಯ ಫೋನ್ ಅನ್ನು ಎಸೆಯವರೋ ಅವರಿಗೆ ಹೊಸ ಫೋನ್ ಅನ್ನು ಬಹುಮಾನವಾಗಿ ನೀಡಲಾಗುವುದು ಎನ್ನಲಾಗಿದೆ.

ಕರ್ನಾಟಕದಲ್ಲೇ ಮೊದಲು: ಹಳೇ ಫೋನ್ ಎಸೆದವರಿಗೆ ಹೊಸ ಸ್ಮಾರ್ಟ್‌ಫೋನ್ ಫ್ರೀ..!

ಹಳೇಯ ಮೊಬೈಲ್ ಎಸೆಯುವ ಸ್ಪರ್ಧೆ ಉಡುಪಿ ಜಿಲ್ಲೆಯ ಹೆಬ್ರಿ-ಪಾಲಾಡಿ- ಕುಂದಾಪುರ ದಾರಿ ಮದ್ಯೆ ಸಿಗುವ ಗೋಳಿಯಂಗಡಿ ಎಂಬಲ್ಲಿ ನಡೆಯಲಿದೆ. ಈ ರೀತಿಯಾಗಿ ವಿಭಿನ್ನವಾಗಿ ಸ್ಪರ್ಧೆಯನ್ನು ನಡೆಸುತ್ತಿರುವವರು ಉಡುಪಿಯ ಗೋಳಿಯಂಗಡಿಯ ಪ್ರಗತಿ ಎಂಟರ್ ಪ್ರೈಸಸ್ ಮಾಲೀಕರಾದ ರೂಪೇಶ್ ಕುಮಾರ್ ಎಂಬುವವರು, ವಿಭಿನ್ನವಾಗಿ ಮೊಬೈಲ್ ಎಸೆಯುವ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ದೇಶದಲ್ಲೆ ಸುದ್ದಿಯಲ್ಲಿದ್ದಾರೆ.

ಎಲ್ಲಿ, ಎಂದು..?

ಎಲ್ಲಿ, ಎಂದು..?

ಈ ಮೊಬೈಲ್ ಎಸೆತದ ಸ್ಪರ್ಧೆ ಅಕ್ಟೋಬರ್ 7ರಂದು ಉಡುಪಿ ಜಿಲ್ಲೆಯ ಹೆಬ್ರಿ-ಪಾಲಾಡಿ- ಕುಂದಾಪುರ ದಾರಿ ಮದ್ಯೆ ಸಿಗುವ ಗೋಳಿಯಂಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ 9 ರಿಂದ ಪ್ರಾರಂಭವಾಗುವ ಸ್ಪರ್ಧೆ ಸಂಜೆ 5ರವರೆಗೆ ನಡೆಯಲಿದೆ.

ಯಾರು ಭಾಗಿಯಾಗಬಹುದು:

ಯಾರು ಭಾಗಿಯಾಗಬಹುದು:

ಈ ಮೊಬೈಲ್ ಎಸೆತದ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ನಿರ್ಬಂಧವಿಧಿಸಿಲ್ಲ, ಬದಲಾಗಿ ಮೊಬೈಲ್ ಬಳಸುವ ಎಲ್ಲರು ಅಂದರೆ ಮಕ್ಕಳು. ಪುರುಷರು. ಮಹಿಳೆಯರು ಭಾಗಿಯಾಗಬಹುದು..

ಷರತ್ತುಗಳು ಅನ್ವಯ:

ಷರತ್ತುಗಳು ಅನ್ವಯ:

ಸ್ಪರ್ಧೆಯಲ್ಲಿ ಭಾಗವಹಿಸಲು ರೂ.20 ಪಾವತಿಸಿ ನೋಂದಾಯಿಸಿಕೊಳ್ಳಬೇಕು, ಒಂದು ಬಾರಿಯ ಎರಡು ಮೊಬೈಲ್ ಎಸೆಯಬಹುದು. ಮತ್ತೆ ನೋಂದಾಯಿಸಿಕೊಳ್ಳೂವ ಮೂಲಕ ಒಬ್ಬರು ಎಷ್ಟು ಫೋನ್ ಬೇಕಾದರು ಎಸೆಯಬಹುದು. ಆದರೆ ಸ್ಪರ್ಧೆಯಲ್ಲಿ ಎಸೆಯಲ್ಪಟ್ಟ ಮೊಬೈಲ್​ಗಳನ್ನು ಹಿಂತಿರುಗಿಸಲಾಗುವುದಿಲ್ಲ.

ಬಹುಮಾನ:

ಬಹುಮಾನ:

ಸ್ಪರ್ಧೆಯಲ್ಲಿ ಅತಿ ದೂರ ಎಸೆದವರಿಗೆ ಪ್ರಥಮ ಬಹುಮಾನ ನೀಡಲಾಗುತ್ತದೆ. ಮೊದಲ ಬಹುಮಾನವಾಗಿ 4G ಸ್ಮಾರ್ಟ್​ಫೋನ್​ ನೀಡಲಾಗುತ್ತದೆ. ಹಾಗೆಯೇ ದ್ವೀತಿಯ ಸ್ಥಾನ ಪಡೆದವರಿಗೆ ಆಂಡ್ರಾಯ್ಡ್ ಮೊಬೈಲ್ ನೀಡಲಾಗುತ್ತದೆ.

Best Mobiles in India

English summary
Throw your old phone, win a brand new smartphone, to kw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X