Subscribe to Gizbot

ಭಾರತದಲ್ಲಿ ಲಭ್ಯವಿರುವ ಟಾಪ್ 5 "6GB RAM" ಸ್ಮಾರ್ಟ್‌ಫೋನ್‌ಗಳಿವು!!

Written By:

ವೇಗ ಮತ್ತು ಕಾರ್ಯನಿರ್ವಹಣೆ ಎರಡರಲ್ಲಿಯೂ ಬದಲಾವಣೆ ಬಯಸುತ್ತಿರುವ ಮೊಬೈಲ್ ಪ್ರಿಯರು ಇಂದು 4GB ಮತ್ತು 6GB ಸ್ಮಾರ್ಟ್‌ಫೋನ್‌ಗಳ ಸ್ಮಾರ್ಟ್‌ಪೋನುಗಳನ್ನೇ ಖರೀದಿಸಲು ಇಚ್ಚಿಸುತ್ತಾರೆ. ಹೆಚ್ಚಿನ ಸಾಮರ್ಥ್ಯ‌ ಹೊಂದಿರುವ ಈ 6GB ಸ್ಮಾರ್ಟ್‌ಫೋನ್‌ಗಳ ಕಾರ್ಯವೈಖರಿ ಗ್ರಾಹಕರ ಮನವನ್ನು ಗೆದ್ದಿದೆ.!!

ಭಾರತದಲ್ಲಿ ಲಭ್ಯವಿರುವ ಟಾಪ್ 5

ಇನ್ನು ಮೊದಲೆಲ್ಲಾ 2GB RAM ಹೊಂದಿರುವ ಸ್ಮಾರ್ಟ್‌ಪೋನ್ ಖರೀದಿಸುವುದೇ ಕಷ್ಟವಾಗಿದ್ದರೆ, ಈಗ ಹೆಚ್ಚು RAM ಇರುವ ಫೋನುಗಳೇ ಇದೀಗ ಬಜೆಟ್ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ಭಾರತದಲ್ಲಿ ಲಭ್ಯವಿರುವ ಟಾಪ್ 5 6GB RAM ಸ್ಮಾರ್ಟ್‌ಫೋನ್‌ಗಳು ಯಾವುವು? ಅವುಗಳ ಬೆಲೆ ಎಷ್ಟು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ರೆಡ್‌ಮಿ 5 ಪ್ರೊ

ಶಿಯೋಮಿ ರೆಡ್‌ಮಿ 5 ಪ್ರೊ

ಶಿಯೋಮಿ ರೆಡ್‌ಮಿ 5 ಪ್ರೊ ಸ್ಮಾರ್ಟ್‌ಫೋನ್ 6ಜಿಬಿ ಮತ್ತು 4ಜಿಬಿ RAM ಎರಡೂ ವೆರಿಯಂಟ್‌ಗಳಲ್ಲಿಯೂ ಮಾರುಕಟ್ಟೆಯಲ್ಲಿ ಲಭ್ಯವಿದೆ. 6ಜಿಬಿ RAM ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆ 16,999 ರೂ.ಗಳಾಗಿದ್ದರೆ, 4ಜಿಬಿRAM ವೆರಿಯಂಟ್ ಸ್ಮಾರ್ಟ್‌ಫೋನ್ ಬೆಲೆ 13,999ರೂ.ಗಳಾಗಿವೆ.!!

ಒನ್ ಪ್ಲಸ್‌ 5ಟಿ

ಒನ್ ಪ್ಲಸ್‌ 5ಟಿ

ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಿದ ಒನ್ ಪ್ಲಸ್‌ 5ಟಿ ಸ್ಮಾರ್ಟ್‌ಫೋನ್ 6ಜಿಬಿ ಮತ್ತು 8ಜಿಬಿ RAMನ ಎರಡೂ ವೆರಿಯಂಟ್‌ಗಳಲ್ಲಿ ಭಾರತದಲ್ಲಿ ಲಭ್ಯವಿದೆ. ಎರಡೂ ವೆರಿಯಂಟ್ ಸ್ಮಾರ್ಟ್‌ಪೋನುಗಳ ಬೆಲೆ ಕ್ರಮವಾಗಿ 32,999 ರೂ. ಮತ್ತು 37,999 ರೂಪಾಯಿಗಳಾಗಿದ್ದು, ಖರೀದಿಸಲು ಬೆಸ್ಟ್ ಫೋನುಗಳು ಎನ್ನಬಹುದು!!

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಸ್‌9+!!

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಸ್‌9+!!

ಇನ್ನು ಕೇವಲ 3 ದಿನಗಳಲ್ಲಿ ಭಾರತದಲ್ಲಿ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಸ್‌9 ಮತ್ತು ಗ್ಯಾಲಾಕ್ಸಿ ಎಸ್‌9+ ಸ್ಮಾರ್ಟ್‌ಫೋನ್‌ಗಳು ಕೂಡ 4ಜಿಬಿ , 6ಜಿಬಿ ಮತ್ತು 8ಜಿಬಿ RAMನ ಮೂರು ವೆರಿಯಂಟ್‌ಗಳಲ್ಲಿ ಬಿಡುಗಡೆಯಾಗುತ್ತಿವೆ. ಭಾರತದಲ್ಲಿ ಫೋನುಗಳ ಬೆಲೆ ಇನ್ನು ನಿಗದಿಯಾಗಿಲ್ಲ.!!

ಇನ್‌ಫಿನಿಕ್ಸ್ ಜೀರೊ 5

ಇನ್‌ಫಿನಿಕ್ಸ್ ಜೀರೊ 5

ಹಾಂಕಾಂಗ್ ಮೂಲದ ಸ್ಮಾರ್ಟ್‌ಪೋನ್‌ ಬ್ರಾಂಡ್‌ ಇನ್‌ಫಿನಿಕ್ಸ್ ಕಂಪೆನಿಯ ಇನ್‌ಫಿನಿಕ್ಸ್ ಜೀರೊ 5 ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ಬೆಲೆಗೆ 6 ಜಿಬಿ RAM ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. 4350 mAh ಬ್ಯಾಟರಿ ಮತ್ತು 6 ಜಿಬಿ RAM ಹೊಂದಿರುವ ಈ ಫೋನ್ ಬೆಲೆ 17,999 ರೂ.ಗಳಾಗಿವೆ.!!

ಹಾನರ್ ವೀವ್ 10!!

ಹಾನರ್ ವೀವ್ 10!!

6GB RAM ಮತ್ತು 128GB ಮೆಮೊರಿ ಹೊಂದಿರುವ ಮೊದಲ ಕೃತಕ ಬುದ್ಧಿಮತ್ತೆ(ಎಐ) ಆಧರಿಸಿದ ಸ್ಮಾರ್ಟ್‌ಫೋನ್‌ ಹಾನರ್ ವೀವ್ 10 ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. 3750mAH ಬ್ಯಾಟರಿ ಶಕ್ತಿಯನ್ನು ಈ ಸ್ಮಾರ್ಟ್‌ಫೋನ್‌ ಬೆಲೆ 29,999 ರೂಪಾಯಿಗಳಾಗಿವೆ.!!

ಓದಿರಿ:ಫೇಸ್‌ಬುಕ್‌ನಲ್ಲಿ ಒಂದಿಕ್ಕಿಂತ ಹೆಚ್ಚು ಅಕೌಂಟ್ ಹೊಂದಿದ್ದವರಿಗೆ ಬಿಗ್ ಶಾಕ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This list contains status of launch, specs, best prices and pictures of 6GB RAM mobiles in India. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot