ಜಗತ್ತಿನಾದ್ಯಂತ ಹೆಚ್ಚು ಮಾರಾಟವಾಗುವ 5ಜಿ ಸ್ಮಾರ್ಟ್ ಫೋನ್ ಗಳು

By Gizbot Bureau
|

ಸ್ಮಾರ್ಟ್ ಫೋನ್ ಗಳನ್ನು ನಾವೀಗ ನಮ್ಮ ಮನರಂಜನೆಗಾಗಿ ಮತ್ತು ಆಫೀಸಿನ ಕೆಲಸಗಳಿಗಾಗಿ ಎರಡಕ್ಕೂ ಬಳಕೆ ಮಾಡುತ್ತಿದ್ದೇವೆ. ಸದ್ಯ ಕರೋನಾ ವೈರಸ್ ಕಾರಣದಿಂದಾಗಿ ಮನೆಯಿಂದಲೇ ಅತೀ ಹೆಚ್ಚು ಮಂದಿ ಕೆಲಸ ಮಾಡುತ್ತಿರುವುದರಿಂದಾಗಿ ಅಂತರ್ಜಾಲ ಮತ್ತು ಮೊಬೈಲ್ ಬಳಕೆ ಹೆಚ್ಚಾಗಿದೆ. ಹಾಗಾಗಿ ಸ್ಮಾರ್ಟ್ ಫೋನ್ ಮಾರಾಟವಾಗುವಿಕೆಯೂ ಕೂಡ ಜಗತ್ತಿನಾದ್ಯಂತ ಅತ್ಯಧಿಕಗೊಂಡಿದೆ.

ಸ್ಮಾರ್ಟ್ ಫೋನ್

2020 ರಲ್ಲಿ ನೂರಕ್ಕೂ ಅಧಿಕ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯನ್ನು ಪ್ರವೇಶಿಸಿದ್ದರೂ ಕೂಡ ಕೆಲವು ಟಾಪ್ ಸ್ಥಾನದಲ್ಲಿವೆ. 2020 ರ ಮೊದಲಾರ್ಧದಲ್ಲಿ ಅತೀ ಹೆಚ್ಚು ಜಗತ್ತಿನಾದ್ಯಂತ ಮಾರಾಟವಾದ ಸ್ಮಾರ್ಟ್ ಫೋನ್ ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಗ್ಯಾಲಕ್ಸಿ ಎಸ್20 ಪ್ಲಸ್ 5ಜಿ

ಗ್ಯಾಲಕ್ಸಿ ಎಸ್20 ಪ್ಲಸ್ 5ಜಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಪ್ಲಸ್ 5ಜಿ ಸ್ಮಾರ್ಟ್ ಫೋನ್ ನೂತನ ಎಸ್ ಸರಣಿಯ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಆಗಿದ್ದು Exynos 990 ಅಥವಾ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865 SoC ನ್ನು ಹೊಂದಿದೆ. ಅದು ಮಾರುಕಟ್ಟೆಯ ಮೇಲೆ ಆಧರಿಸಿರುತ್ತದೆ. ಇದರಲ್ಲಿ 2K AMOLED ಡಿಸ್ಪ್ಲೇ ಜೊತೆಗೆ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಮತ್ತು IP68 ರೇಟಿಂಗ್ ಮತ್ತು ವಯರ್ ಲೆಸ್ ಚಾರ್ಜಿಂಗ್ ವ್ಯವಸ್ಥೆ ಇದೆ.

ಮೇಟ್ 30 5ಜಿ

ಮೇಟ್ 30 5ಜಿ

ಕೆಲವು ಆಯ್ದ ಮಾರುಕಟ್ಟೆಗಳಲ್ಲಿ ಮಾತ್ರವೇ ಬಿಡುಗಡೆಗೊಂಡಿದ್ದರೂ ಕೂಡ ಮೇಟ್ 30 5ಜಿ ಹೆಚ್ಚು ಮಾರಾಟವಾಗಿರುವ 5ಜಿ ಸ್ಮಾರ್ಟ್ ಫೋನ್ ಆಧಾರಿತ ಫ್ಲ್ಯಾಗ್ ಶಿಪ್ ಕಿರಿನ್ ಪ್ರೊಸೆಸರ್ ನ್ನು ಹೊಂದಿರುವ ಡಿವೈಸ್ ಆಗಿದೆ.

ಹುವಾಯಿ ಮೇಟ್ 30 ಪ್ರೋ 5ಜಿ

ಹುವಾಯಿ ಮೇಟ್ 30 ಪ್ರೋ 5ಜಿ

ಹುವಾಯಿ ಮೇಟ್ 30 ಪ್ರೋ 5ಜಿ ಪ್ರೀಮಿಯಂ ವರ್ಷನ್ ಆಗಿರುವ ಮೇಟ್ 30 5ಜಿ ಜೊತೆಗೆ ದೊಡ್ಡ ಸ್ಕ್ರೀನ್ ಮತ್ತು ದೊಡ್ಡ ಬ್ಯಾಟರಿ ವ್ಯವಸ್ಥೆಯನ್ನು ಇದು ಹೊಂದಿದೆ. ಈ ಸ್ಮಾರ್ಟ್ ಫೋನ್ ಅಭಿವೃದ್ಧಿ ಪಡಿಸಲಾಗಿರುವ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 5ಜಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 5ಜಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 5ಜಿ ಸ್ಯಾಮ್ ಸಂಗ್ ಸಂಸ್ಥೆಯಿಂದ ಬಿಡುಗಡೆಗೊಂಡಿರುವ ಕಾಂಪ್ಯಾಕ್ಟ್ ಫ್ಲ್ಯಾಗ್ ಶಿಪ್ ಡಿವೈಸ್ ಆಗಿದ್ದು 2ಕೆ AMOLED ಡಿಸ್ಪ್ಲೇ ಮತ್ತು Exynos 990 SoC ನ್ನು ಇದು ಭಾರತದಲ್ಲಿ ಮತ್ತು ಇತರೆ ಯುರೋಪಿಯನ್ ದೇಶಗಳಲ್ಲಿ ಹೊಂದಿರುತ್ತದೆ. ಇದೇ ಫೋನ್ ಯುಎಸ್ ನಲ್ಲಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865 SoC ನ್ನು ಒಳಗೊಂಡಿರುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 20 ಆಲ್ಟ್ರಾ 5ಜಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 20 ಆಲ್ಟ್ರಾ 5ಜಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಆಲ್ಟ್ರಾ 5ಜಿ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಮತ್ತು 108ಎಂಪಿ ಕ್ಯಾಮರಾ ವ್ಯವಸ್ಥೆ ಹೊಂದಿರುವ ಮೊದಲ ಸ್ಯಾಮ್ ಸಂಗ್ ಡಿವೈಸ್ ಆಗಿದೆ ಜೊತೆಗೆ 8ಕೆ ವೀಡಿಯೋ ರೆಕಾರ್ಡಿಂಗ್ ಕೆಪಾಸಿಟಿಯನ್ನು ಕೂಡ ಇದು ಒಳಗೊಂಡಿದೆ.

Most Read Articles
Best Mobiles in India

English summary
Smartphones are now devices that we use for both entertainment and to fulfill our office tasks. It is also high-time where people are doing a lot of work due to the virus outbreak. This has significantly raised the number of smartphone sales across the globe.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X