ಎಲ್‌ಜಿ ಜಿ3 ಕುರಿತ ಟಾಪ್ ಆಸಕ್ತಿಕರ ವೈಶಿಷ್ಟ್ಯಗಳು

By Shwetha
|

ಎಲ್‌ಜಿ ಕಂಪೆನಿಯ ಹೆಚ್ಚು ನಿರೀಕ್ಷೆಯ ಹ್ಯಾಂಡ್‌ಸೆಟ್ ಎಂದೇ ಗಮನಸೆಳೆದಿರುವ ಸ್ಮಾರ್ಟ್‌ಫೋನ್ ಎಲ್‌ಜಿ ಜಿ 3 ಬೇರೆಲ್ಲಾ ಶ್ರೇಣಿಯ ಫೋನ್‌ಗಿಂತ ವಿಭಿನ್ನ ಮತ್ತು ಆಕರ್ಷಕ ಮಾದರಿಯಲ್ಲಿದೆ.

ಎಲ್‌ಜಿ ತನ್ನ ಫ್ಲ್ಯಾಗ್‌ಶಿಪ್‌ನ ಜಿ3 ಫೋನ್ ಅನ್ನು ಸರಳ ಫೋನ್ ಆಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದಲ್ಲಿ ತನ್ನದೇ ಸಿಗ್ನೇಚರ್ ಬ್ರಾಂಡ್ ವೈಶಿಷ್ಟ್ಯವಾದ ನಾಕ್ ಕೋಡ್ ಮತ್ತು ನಾಕ್ ಆನ್ ಅಳವಡಿಸಿದೆ. ಇದರ ಕಾನ್ಫಿಗರೇಶನ್ ಈ ಕೆಳಗಿನಂತಿದ್ದು ನಿಮ್ಮಲ್ಲಿ ಫೋನ್ ಬಗ್ಗೆ ಆಕರ್ಷಣೆಯನ್ನು ಉಂಟುಮಾಡುವುದು ಖಂಡಿತ.

ಚಿಪ್‌ಸೆಟ್: ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 801 (2.5GHz ವರೆಗೆ ಕ್ವಾಡ್-ಕೋರ್)
ಡಿಸ್‌ಪ್ಲೇ: 5.5 ಇಂಚಿನ ಕ್ವಾಡ್ ಎಚ್‌ಡಿ ಐಪಿಎಸ್ (2560 x 1440, 538ppi)
ಮೆಮೊರಿ: 16/32ಜಿಬಿ eMMC ರೋಮ್, 2/3ಜಿಬಿ DDR3 ರ್‌ಯಾಮ್ / ಮೈಕ್ರೋಎಸ್‌ಡಿ ಸ್ಲಾಟ್ (128ಜಿಬಿ ಗರಿಷ್ಟ)
ಕ್ಯಾಮೆರಾ: OIS+ ಹಾಗೂ ಲೇಸರ್ ಆಟೋಫೋಕಸ್ ಜೊತೆಗೆ ರಿಯರ್ 13.0ಎಂಪಿ / ಮುಂಭಾಗ 2.1ಎಂಪಿ
ಬ್ಯಾಟರಿ: 3,000mAh (ತೆಗೆಯಬಹುದಾಗಿದೆ)
ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
ಗಾತ್ರ: 146.3 x 74.6 x 8.9mm
ತೂಕ: 149g
ನೆಟ್‌ವರ್ಕ್: 4ಜಿ / LTE / HSPA+ 21 Mbps (3ಜಿ)
ಸಂಪರ್ಕ: ವೈ-ಫೈ 802.11 a/b/g/n/ac, ಬ್ಲೂಟೂತ್ ಸ್ಮಾರ್ಟ್ ರೆಡಿ (Apt-X), ಎನ್‌ಎಫ್‌ಸಿ, ಸ್ಲಿಮ್‌ಪೋರ್ಟ್, A-GPS/ಗ್ಲೋನಾಸ್, ಯುಎಸ್‌ಬಿ 2.0
ಬಣ್ಣ: ಮೆಟಾಲಿಕ್ ಕಪ್ಪು, ಸಿಲ್ಕ್ ಬಿಳಿ, ಶೈನ್ ಗೋಲ್ಡ್, ಮೂನ್ ವೈಲೆಟ್, ಬರ್ಗಂಡಿ ಕೆಂಪು
ಇತರ: ಸ್ಮಾರ್ಟ್‌ ಕೀಬೋರ್ಡ್, ಸ್ಮಾರ್ಟ್ ನೋಟೀಸ್, ನಾಕ್ ಕೋಡ್ ಟಿಎಮ್, ಗೆಸ್ಟ್ ಮೋಡ್, ಇತರೆ

ಇಷ್ಟೆಲ್ಲಾ ವೈಶಿಷ್ಟ್ಯಗಳನ್ನು ತನ್ನಲ್ಲಿ ಹೊಂದಿದ್ದರೂ ಎಲ್‌ಜಿ ಜಿ3 ಇನ್ನೂ ಕೆಲವೊಂದು ಆಸಕ್ತಿಕರ ಅಂಶಗಳಿಂದ ಕಣ್ಣುಸೆಳೆಯುವಂತಿದ್ದು ಉತ್ತಮ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಡಿಸ್‌ಪ್ಲೇ, ಕ್ಯಾಮೆರಾ ಅತಿ ವಿಶಿಷ್ಟವಾಗಿದ್ದು ಎಲ್‌ಜಿ ಹೆಸರನ್ನು ಮಾರುಕಟ್ಟೆಯಲ್ಲಿ ಉಳಿಸುವುದು ಖಂಡಿತ.

#1

#1

ಎಲ್‌ಜಿ ಜಿ3 2560 x 1440 ರೆಸಲ್ಯೂಶನ್‌ನೊಂದಿಗೆ 5.5-ಇಂಚಿನ ಕ್ವಾಡ್ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದೆ. ಎಲ್‌ಜಿ ಪ್ರಕಾರ ಜಿ3 ಡಿಸ್‌ಪ್ಲೇ ಇತರ ಸ್ಮಾರ್ಟ್‌ಫೋನ್‌ಗಿಂತ ನಾಲ್ಕು ಪಟ್ಟು ಹೆಚ್ಚು ಆಕರ್ಷಕವಾಗಿದ್ದು ಪ್ರಮಾಣಿತ ಎಚ್‌ಡಿ ಪರದೆಯೊಂದಿಗೆ ಬಂದಿದೆ. ಇದೊಂದು ದೊಡ್ಡ ಗಾತ್ರದ ಹ್ಯಾಂಡ್‌ಸೆಟ್ ಎಂಬುದನ್ನು ಹೊರತುಪಡಿಸಿ, ಇದರ ದೊಡ್ಡ ಪರದೆ ಗಮನಸೆಳೆಯುವಂತಿದೆ. ಇದು 8.9ಎಂಎಂ ದಪ್ಪವನ್ನು ಹೊಂದಿದ್ದು ತೂಕ 149 ಗ್ರಾಮ್‌ಗಳಾಗಿದೆ. ಹೆಚ್ಚಾಗಿ ಎಲ್‌ಜಿ ಹೊಸ ಬಳಕೆದಾರ ಇಂಟರ್ಫೇಸ್ ಅನ್ನು ಹೊರತಂದಿದ್ದು G3 ಯ ಸಾಮರ್ಥ್ಯಗಳಿಗೆ ಸಮನಾಗಿರುವಂತೆ ನೋಡಿಕೊಂಡಿದೆ.

#2

#2

13 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ ಎಲ್‌ಜಿ ಜಿ3 ಯಲ್ಲಿದ್ದು ಲೇಸರ್ ಆಟೋ ಫೋಕಸ್ ಅನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಜಗತ್ತಿನಲ್ಲೇ ಇದೊಂದು ಪ್ರಥಮ ಪ್ರಯೋಗವಾಗಿದೆ. ಕಡಿಮೆ ಬೆಳಕಿನ ಸೌಲಭ್ಯದಲ್ಲಿ ಕೂಡ ನೀವು ಉತ್ತಮ ಫೋಟೋ ಮೂವ್‌ಮೆಂಟನ್ನು ಈ ಫೋನ್‌ನಲ್ಲಿ ನಿಮಗೆ ತೆಗೆಯಬಹುದು. ವಸ್ತು ಮತ್ತು ಕ್ಯಾಮೆರಾದ ನಡುವೆ ಇರುವ ಅಂತರವನ್ನು ಫೋನ್‌ನಲ್ಲಿರುವ ಕ್ಯಾಮೆರಾ ಲೇಸರ್ ಬೀಮ್ ಮೂಲಕ ಅಳತೆ ಮಾಡಲಿದೆ.

#3

#3

ಎಲ್‌ಜಿ ಜಿ3 ಕೆಲವೊಂದು ಅನೂಹ್ಯ ವೈಶಿಷ್ಟ್ಯಗಳೊಂದಿಗೆ ಬಂದಿದ್ದು ಸ್ಮಾರ್ಟ್‌ ಕೀಬೋರ್ಡ್, ಸ್ಮಾರ್ಟ್ ನೋಟೀಸ್ ಹಾಗೂ ಸ್ಮಾರ್ಟ್‌ ಭದ್ರತೆ ಇದರ ವಿಶೇಷತೆಯಾಗಿದೆ. ಇದು ನಿಮ್ಮಿಂದಾಗುವ ಇನ್್ಪುಟ್ ದೋಷಗಳನ್ನು ನಿವಾರಿಸಿ ನಿಮ್ಮ ಟೈಪಿಂಗ್ ಅಭ್ಯಾಸವನ್ನು ಉತ್ತಮಗೊಳಿಸುತ್ತದೆ. ಇದು ಬಳಕೆದಾರರ ಕೈಯಲ್ಲಿ ಸೂಕ್ತವಾಗಿ ನಿಲ್ಲುವಂತಿದ್ದು ನಿಮ್ಮ ಹೆಬ್ಬೆರಳಿನ ಮೂಲಕ ಸುಲಭವಾಗಿ ನಿಮಗೆ ಸಂದೇಶ ಮೇಲ್ ಮುಂತಾದವನ್ನು ಟೈಪ್ ಮಾಡಬಹುದು.

#4

#4

ಬಳಕೆದಾರರ ವರ್ತನೆಗೆ ಅನುಗುಣವಾಗಿ, ಫೋನ್ ಬಳಕೆ ಪ್ಯಾಟ್ರನ್‌ಗೆ ಉಚಿತವಾಗಿ ಸ್ಮಾರ್ಟ್‌ ನೋಟೀಸ್ ಸಲಹೆಗಳು ಮತ್ತು ಶಿಫಾರಸುಗಳನ್ನು ಒದಗಿಸುತ್ತದೆ. ನಿಮಗೆ ಬಂದಿರುವ ಕರೆಯನ್ನು ಸಾರ್ಟ್ ನೋಟೀಸ್ ನೆನೆಪಿಗೆ ತಂದು ಅದೇ ವ್ಯಕ್ತಿಗೆ ಪುನಃ ಕರೆ ಮಾಡುವಂತೆ ಸ್ಮರಣಿಸುತ್ತದೆ.

#5

#5

ಸ್ಮಾರ್ಟ್‌ಫೋನ್ ಎಲ್ಲಿಯಾದರೂ ಕಳೆದುಹೋದಾಗ, ಹಂಚಿಕೊಂಡಾಗ, ಕದ್ದಾಗ ನಿಮ್ಮ ಫೋನ್‌ನಲ್ಲಿರುವ ಗೌಪ್ಯ ಮಾಹಿತಿಯನ್ನು ಸಂರಕ್ಷಿಸುವ ಹೊಣೆಯನ್ನು ನಿರ್ದಿಷ್ಟ ವೈಶಿಷ್ಟ್ಯ ಮಾಡುತ್ತದೆ. ನಾಕ್ ಕೋಡ್, ಕಂಟೆಂಟ್ ಕೋಡ್ ಹಾಗೂ ಕಿಲ್ಸ್ ಸ್ವಿಚ್ ಇವುಗಳು ಭದ್ರತಾ ಫೀಚರ್‌ಗಳಾಗಿವೆ.

#6

#6

ಎಲ್‌ಜಿ ತನ್ನ ಹೊಸ ಜಿ3 ಲಾಂಚ್‌ನೊಂದಿಗೆ ಕೆಲವೊಂದು ವಿಶಿಷ್ಟ ಆಕ್ಸಸಿರೀಸ್ ಅನ್ನು ಕೂಡ ಹೊರತಂದಿದೆ. ಕ್ವಿಕ್ ಸರ್ಕಲ್ ಕೇಸ್ ನಿಮಗೆ ಕರೆ ಮಾಡಲು, ಪಠ್ಯ ಸಂದೇಶ ರಚಿಸಲು, ಹಾಡು ಮತ್ತು ಕ್ಯಾಮೆರಾ ಕರೆಗೆ ಅನುಮತಿಸುತ್ತದೆ. ವೈರ್‌ಲೆಸ್ ಚಾರ್ಜರ್ ಅನ್ನು ಕೂಡ ಫೋನ್‌ನೊಂದಿಗೆ ಎಲ್‌ಜಿ ನೀಡಿದೆ. ಇದೇ ಸಮಯದಲ್ಲಿ ಎಲ್‌ಜಿ ಜಿ ವಾಚ್ ಕೂಡ ವೇದಿಕೆಯಲ್ಲಿ ಜಿ3 ಯೊಂದಿಗೆ ಬಿಡುಗಡೆಯಾಗುತ್ತಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X