Just In
Don't Miss
- Lifestyle
ಗುರುವಾರದ ಭವಿಷ್ಯ : ಮೇಷದವರಿಗೆ ಆರ್ಥಿಕ ಬಲ, ಉಳಿದ ರಾಶಿಫಲ ಹೇಗಿದೆ?
- Sports
ಐಎಸ್ಎಲ್: ಸಮಬಲ ಸಾಧಿಸಿದ ಕೇರಳ ಬ್ಲಾಸ್ಟರ್ಸ್, ಜೆಮ್ಷೆಡ್ಪುರ
- Movies
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
- News
ಸಂಸದರಿಗೆ 10 ರುಗೆ ಬೋಂಡಾ, 100 ರುಗೆ ಚಿಕನ್ ಬಿರಿಯಾನಿ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಅನಾವರಣವಾಯ್ತು 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್ಯುವಿ
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 27ರ ದರ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2019 ರಲ್ಲಿ ಭಾರತದಲ್ಲಿ ಅತೀ ಹೆಚ್ಚು ಮಾರಾಟ ಕಂಡ 5 ಪ್ರಮುಖ ಸ್ಮಾರ್ಟ್ ಫೋನ್ ಗಳು
2019 ನೇ ಇಸವಿ ಮುಗಿಯುವುದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳಲ್ಲಿ ನಡೆದ ಈ ವರ್ಷದ ಸ್ಪರ್ಧೆ ಕೂಡ ಬಹಳ ರೋಚಕವಾಗಿಯೇ ಇತ್ತು.ಇದೀಗ ಈ ವರ್ಷ ಯಾವ ಸ್ಮಾರ್ಟ್ ಫೋನ್ ಅತೀ ಹೆಚ್ಚು ಪ್ರಸಿದ್ಧಿಯಾಯಿತು, ಖರೀದಿಯಾಯಿತು ಎಂಬ ಲೆಕ್ಕಾಚಾರವನ್ನು ತೆಗೆಯುವ ಸಮಯ ಬಂದಿದೆ. ಹೌದು ಭಾರತೀಯ ಮಾರುಕಟ್ಟೆಯಲ್ಲಿ ರಾರಾಜಿಸಿ ಜನರ ಕೈಯನ್ನು ಅತೀ ಹೆಚ್ಚು ಸೇರಿದ ಸ್ಮಾರ್ಟ್ ಫೋನ್ ಗಳು ಯಾವುವು ಎಂಬ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

2019 ರ ಮೂರನೇ ತ್ರೈಮಾಸಿಕದಲ್ಲಿ 6.7 ಮಿಲಿಯನ್ ಯುನಿಟ್ ಗಳನ್ನು ಮಾರಾಟ ಕಂಡಿರುವ ರಿಯಲ್ ಮಿ ವರ್ಷದಿಂದ ವರ್ಷಕ್ಕೆ 400% ಮಾರಾಟದ ಅಭಿವೃದ್ಧಿಯನ್ನು ಕಾಣುತ್ತಿದೆ. ಇದರ ಕೈಗೆಟುಕುವ ಬೆಲೆಯ ಜೊತೆಗೆ ರಿಯಲ್ ಮಿ ಸಿ2 ಹೆಚ್ಚಿನ ಬಳಕೆದಾರರನ್ನು ಅಟ್ರ್ಯಾಕ್ಟ್ ಮಾಡುವುದರಲ್ಲಿ ಯಶಸ್ವಿಯಾಗಿದೆ.ಈ ಹ್ಯಾಂಡ್ ಸೆಟ್ ಡೈಮಂಡ್ ಕಟ್ ಡಿಸೈನ್ ನ್ನು ಹೊಂದಿದ್ದು ಅತೀ ದೊಡ್ಡ ಅಂದರೆ 4,000 mAh ಬ್ಯಾಟರಿ ಕೆಪಾಸಿಟಿ+ಡ್ಯೂಡ್ರಾಪ್ ಡಿಸ್ಪ್ಲೇ ಮತ್ತು ಎಐ-ಆಧಾರಿತ ಡುಯಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ.
ಸ್ಯಾಮ್ ಸಂಗ್ ಯಾವಾಗಲೂ ಕೂಡ ಅತೀ ಹೆಚ್ಚು ಮಾರಾಟ ಕಾಣುವ ಪ್ರೀಮಿಯಂ ಡಿವೈಸ್ ಗಳನ್ನ ಹೊಂದಿದ್ದು ಬಜೆಟ್ ಸ್ನೇಹಿಯಾಗಿರುತ್ತದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50 ಅಂತಹ ಒಂದು ಡಿವೈಸ್ ಆಗಿದ್ದು ಭಾರಾತೀಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ FHD+ ಸೂಪರ್ AMOLED ಇನ್ಫಿನಿಟಿ-ಯು ಡಿಸ್ಪ್ಲೇ, 4,000mAh ಬ್ಯಾಟರಿ ಜೊತೆಗೆ 15W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮರಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲ ಶಿಯೋಮಿ ರೆಡ್ಮಿ ನೋಟ್ 7 ಪ್ರೋ, ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10 ಮತ್ತು ಓಪ್ಪೋ ಎ5ಎಸ್ ಕೂಡ ಬಳಕೆದಾರರ ಫೇವರೆಟ್ ಆಯ್ಕೆಗಳಾಗಿವೆ.

ರಿಯಲ್ ಮಿ ಸಿ2
MRP: Rs. 5,999
ಪ್ರಮುಖ ವೈಶಿಷ್ಟ್ಯತೆಗಳು:
• 6.1-ಇಂಚಿನ (1560 x 720 ಪಿಕ್ಸಲ್ಸ್) 19.5:9 ಡ್ಯೂಡ್ರಾಪ್ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪೇ
• 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG ಪವರ್ ವಿಆರ್ GE8320 GPU
• 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• Color OS 6.0 ಆಧಾರಿತ ಆಂಡ್ರಾಯ್ಡ್9.0 (ಪೈ)
• ಡುಯಲ್ ಸಿಮ್
• 13MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 2MP ಕ್ಯಾಮರಾ
• 5MP ಮುಂಭಾಗದ ಕ್ಯಾಮರಾ
• ಡುಯಲ್ 4ಜಿ ವೋಲ್ಟ್
• 4000mAh (ಟಿಪಿಕಲ್) ಬಿಲ್ಟ್ ಇನ್ ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50
MRP: Rs. 16,999
ಪ್ರಮುಖ ವೈಶಿಷ್ಟ್ಯತೆಗಳು:
• 6.4 ಇಂಚಿನ FHD+ AMOLED ಡಿಸ್ಪೇ
• 2.3GHz ಆಕ್ಟಾ ಕೋರ್ Exynos 9610 ಪ್ರೊಸೆಸರ್
• 4GB/6GB RAM ಜೊತೆಗೆ 64/128GB ROM
• ಡುಯಲ್ ಸಿಮ್
• 25MP + 5MP + 8MP ಟ್ರಿಪಲ್ ಹಿಂಭಾಗದ ಕ್ಯಾಮರಾs ಜೊತೆಗೆ LED ಫ್ಲ್ಯಾಶ್
• 25MP ಮುಂಭಾಗದ ಕ್ಯಾಮರಾ
• 4ಜಿ ವೋಲ್ಟ್
• ವೈ-ಫೈ
• ಬ್ಲೂಟೂತ್ 5
• 4000 MAh ಬ್ಯಾಟರಿ

ಶಿಯೋಮಿ ರೆಡ್ಮಿ ನೋಟ್ 7 ಪ್ರೋ
MRP: Rs. 13,999
ಪ್ರಮುಖ ವೈಶಿಷ್ಟ್ಯತೆಗಳು:
• 6.3-ಇಂಚಿನ FHD+ 18:9 ಡಿಸ್ಪೇ
• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 675 ಪ್ರೊಸೆಸರ್
• 4/6GB RAM ಜೊತೆಗೆ 64/128GB ROM
• ಡುಯಲ್ ಸಿಮ್
• 48MP + 5MP ಡುಯಲ್ ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್
• 13MP ಮುಂಭಾಗದ ಕ್ಯಾಮರಾ
• 4G
• ಬ್ಲೂಟೂತ್ 5
• ಫಿಂಗರ್ ಪ್ರಿಂಟ್ ಸೆನ್ಸರ್
• IR ಸೆನ್ಸರ್
• USB ಟೈಪ್ ಸಿ
• 4000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10
MRP: Rs. 7,990
ಪ್ರಮುಖ ವೈಶಿಷ್ಟ್ಯತೆಗಳು:
• 6.2-ಇಂಚಿನ (1520 × 720 ಪಿಕ್ಸಲ್ಸ್) HD+ ಇನ್ಫಿನಿಟಿ-ವಿಡಿಸ್ಪೇ
• ಆಕ್ಟಾ ಕೋರ್ Exynos 7884 ಪ್ರೊಸೆಸರ್
• 2GB RAM
• 32GB ಸ್ಟೋರೇಜ್
• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ಆಂಡ್ರಾಯ್ಡ್9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ
• ಡುಯಲ್ ಸಿಮ್
• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, f/1.9 ಅಪರ್ಚರ್
• 5MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್
• ಫೇಸ್ ಅನ್ ಲಾಕ್
• ಡುಯಲ್ 4ಜಿ ವೋಲ್ಟ್
• 3,400mAh ಬ್ಯಾಟರಿ

ಒಪ್ಪೋ ಎ5ಎಸ್
MRP: Rs. 10,799
ಪ್ರಮುಖ ವೈಶಿಷ್ಟ್ಯತೆಗಳು:
• 6.22-ಇಂಚಿನ (1520 × 720 ಪಿಕ್ಸಲ್ಸ್) HD+ ಡಿಸ್ಪೇ ಜೊತೆಗೆ ವಾಟರ್ ಡ್ರಾಪ್ ನಾಚ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ35 12nm ಪ್ರೊಸೆಸರ್ ಜೊತೆಗೆ IMG ಪವರ್ ವಿಆರ್ GE8320 GPU
• 2GB RAM ಜೊತೆಗೆ 32GB ಸ್ಟೋರೇಜ್ / 4GB RAM ಜೊತೆಗೆ 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ
• ಆಂಡ್ರಾಯ್ಡ್8.1 (ಓರಿಯೋ) ಜೊತೆಗೆ ColorOS 5.2
• 13MP ಹಿಂಭಾಗದ ಕ್ಯಾಮರಾ ಜೊತೆಗೆ f/2.2 ಅಪರ್ಚರ್
• 2MP ಸೆಕೆಂಡರಿ ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಡುಯಲ್ ಸಿಮ್
• ಫಿಂಗರ್ ಪ್ರಿಂಟ್ ಸೆನ್ಸರ್
• 4ಜಿ ವೋಲ್ಟ್
• 4230mAh ಬ್ಯಾಟರಿ
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190