Subscribe to Gizbot

ಹೊಸ ವಿಶೇಷತೆಯೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾದ ಸ್ಮಾರ್ಟ್‌‌ಫೋನ್‌ಗಳು

Posted By:

ಈ ವರ್ಷದ ಆರಂಭದಿಂದ ಭಾರತದ ಮಾರುಕಟ್ಟೆಗೆ ವಿವಿಧ ಕಂಪೆನಿಗಳು ಹೊಸ ಹೊಸ ವಿಶೇಷತೆಗಳಿರುವ ಸ್ಮಾರ್ಟ್‌‌ಫೋನ್‌ಗಳನ್ನು ಪರಿಚಯಿಸಿದೆ. ಮುಂದಿನ ಪುಟದಲ್ಲಿ ಮೋಟರೋಲಾ, ಮೈಕ್ರೋಮ್ಯಾಕ್ಸ್‌,ಎಲ್‌ಜಿ,ಸ್ಯಾಮ್‌ಸಂಗ್‌,ಇಂಟೆಕ್ಸ್‌,ನೋಕಿಯಾ‌‌ ಕಂಪೆನಿಗಳ ಹೊಸದಾಗಿ ಬಿಡುಗಡೆಯಾದ ಕೆಲ ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಮತ್ತು ಆ ಸ್ಮಾರ್ಟ್‌‌ಫೋನಿಗೆ ಸದ್ಯ ಮಾರುಕಟ್ಟೆಯಲ್ಲಿ ನಿಗದಿಯಾಗಿರುವ ಬೆಲೆಯ ಮಾಹಿತಿಯನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೋಟೋ ಜಿ

ಮೋಟೋ ಜಿ

ಬೆಲೆ: 12,499(8 Gಜಿಬಿ),13,999(16 ಜಿಬಿ)

ಕಡಿಮೆ ಬೆಲೆಯಲ್ಲಿ ಬೆಸ್ಟ್‌ ಆಂಡ್ರಾಯ್ಡ್‌ ಡ್ಯುಯಲ್‌ ಸಿಮ್‌‌ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗಾಗಿ ಬಿಡುಗಡೆಯಾದ ಫೋನ್‌.ಒಂದು ವಾರಗಳ ಹಿಂದೆ ಮಾರುಕಟ್ಟೆಗೆ ಬಿಡುಗಡೆಯಾದರೂ ಸದ್ಯಕ್ಕೆ ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಖರೀದಿಸಬೇಕು.ಸ್ಮಾರ್ಟ್‌ಫೋನಿನ ಸ್ಟಾಕ್‌ ಖಾಲಿಯಾಗಿದ್ದು ಸದ್ಯದಲ್ಲೇ ಬಳಕೆದಾರರಿಗೆ ವಿತರಿಸುತ್ತೇವೆ ಎಂದು ಫ್ಲಿಪ್‌ಕಾರ್ಟ್‌ ಹೇಳಿದೆ.ಕ್ಯಾಮೆರಾ ಒಂದನ್ನು ಹೊರತು ಪಡಿಸಿ ಹಾರ್ಡ್‌ವೇರ್‌,ಸಾಫ್ಟ್‌ವೇರ್‌‌ ಲೆಕ್ಕಹಾಕಿದರೆ ಉತ್ತಮ ಫೋನ್‌. ಅಷ್ಟೇ ಅಲ್ಲದೇ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿ ಕಿಟ್‌‌ಕ್ಯಾಟ್‌‌ ಓಎಸ್‌ಗೆ ಅಪ್‌ಡೇಟ್‌ ಆಗುತ್ತಿರುವ ಮೊದಲ ಫೋನ್‌ ಮೋಟೋ ಜಿ.

 ಎಲ್‌ಜಿ ಜಿ ಫ್ಲೆಕ್ಸ್‌:

ಎಲ್‌ಜಿ ಜಿ ಫ್ಲೆಕ್ಸ್‌:

ಬೆಲೆ:68,999

ಎಲ್‌ಜಿ ಕಂಪೆನಿಯ ಮೊದಲ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌‌. ಇದರ ಹಾರ್ಡ್‌ವೇರ್‌ ತಂತ್ರಜ್ಞಾನಕ್ಕಾಗಿ ಎಲ್‌ಜಿ ಈ ಫೋನಿಗೆ ದುಬಾರಿ ಬೆಲೆಯನ್ನು ನಿಗದಿ ಪಡಿಸಿದೆ. ಬಹುತೇಕ ಸ್ಮಾರ್ಟ್‌ಫೋನ್‌ ಕವರ್‌ ಹಿಂದೆ ಗೀರುಗಳಾಗುತ್ತದೆ. ಈ ಸ್ಮಾರ್ಟ್‌‌ಫೋನಲ್ಲಿ ಹಿಂದೆ ಗೀರುಗಳಾದ್ರೂ ಎರಡೇ ನಿಮಿಷದಲ್ಲಿ ಮರೆಯಾಗುತ್ತದೆ. Self Healing & Durability ತಂತ್ರಜ್ಞಾನದಿಂದ ತಯಾರಾದ ಹೊಸ ದೇಹದ ಕವರ್‌ನ್ನು ಎಲ್‌ಜಿ ಈ ಸ್ಮಾರ್ಟ್‌ಫೋನಿಗಾಗಿ ಅಭಿವೃದ್ಧಿ ಪಡಿಸಿದೆ.

 ಸ್ಯಾಮ್‌ಸಂಗ್‌ ಗೆಲಾಕ್ಸಿ ಗ್ರ್ಯಾಂಡ್ 2:

ಸ್ಯಾಮ್‌ಸಂಗ್‌ ಗೆಲಾಕ್ಸಿ ಗ್ರ್ಯಾಂಡ್ 2:

ಬೆಲೆ:23,449

ಸ್ಯಾಮ್‌ಸಂಗ್‌ ತನ್ನ ಗೆಲಾಕ್ಸಿ ಗ್ರ್ಯಾಂಡ್ ಸ್ಮಾರ್ಟ್‌ಫೋನಿನ ಯಶಸ್ಸಿನ ಬಳಿಕ ಬಿಡುಗಡೆ ಮಾಡಿದ ಸ್ಮಾರ್ಟ್‌‌‌ಫೋನ್‌ ಗೆಲಾಕ್ಸಿ ಗ್ರ್ಯಾಂಡ್ 2. ಸದ್ಯಕ್ಕೆ ಜನವರಿ ಬಳಿಕ ಭಾರತದ ಮಾರುಕಟ್ಟೆಗೆ ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿದ ದುಬಾರಿ ಬೆಲೆಯಫೋನ್‌ ಇದಾಗಿದೆ.ಡ್ಯುಯಲ್‌ ಸಿಮ್‌,ಕ್ವಾಡ್‌ಕೋರ್‌ ಪ್ರೊಸೆಸರ್‌,ರ್‍ಯಾಮ್‌ ಚೆನ್ನಾಗಿದ್ದು ಸ್ಯಾಮ್‌ಸಂಗ್‌ನ ಹೊಸ ಮಿಡ್‌ ರೇಂಜ್ ಸ್ಮಾರ್ಟ್‌‌ಫೋನ್ ಖರೀದಿಸಬೇಕು ಎಂದು ಯೋಚಿಸುತ್ತಿರುವವರು ಈ ಸ್ಮಾರ್ಟ್‌‌ಫೋನ್‌ ಖರೀದಿಸಬಹುದು.ಜೆಲ್ಲಿ ಬೀನ್‌ 4.3ಯಲ್ಲಿ ಬಿಡುಗಡೆಯಾಗಿದ್ದರೂ ಕಿಟ್‌ಕ್ಯಾಟ್‌ ಓಎಸ್‌ಗೆ ಸದ್ಯದಲ್ಲೇ ಅಪ್‌ಗ್ರೇಡ್‌ ಮಾಡಬಹುದು ಎಂದು ಸ್ಯಾಮ್‌ಸಂಗ್‌ ಹೇಳಿದೆ.

 ನೋಕಿಯಾ ಲೂಮಿಯಾ 525

ನೋಕಿಯಾ ಲೂಮಿಯಾ 525

ಬೆಲೆ:10,235

ಕಡಿಮೆ ಬೆಲೆಯಲ್ಲಿ ವಿಂಡೋಸ್‌ ಓಎಸ್‌ ಹೊಂದಿರುವ ಸ್ಮಾರ್ಟ್‌‌‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿರುವರಿಗೆ ಬಿಡುಗಡೆಯಾದ ಫೋನ್‌‌. ನೋಕಿಯಾದ ವಿಂಡೋಸ್‌ ಓಎಸ್‌ ಫೋನಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌‌ಫೋನ್‌ ಲೂಮಿಯಾ 520. ಈ ಸ್ಮಾರ್ಟ್‌‌ನಲ್ಲಿರುವ ವಿಶೇಷತೆಯನ್ನು ಲೂಮಿಯಾ 525 ಒಳಗೊಂಡಿದ್ದರೂ, 1ಜಿಬಿ ರ್‍ಯಾಮ್ ಒಳಗೊಂಡಿದೆ.ಲೂಮಿಯಾ 520 ಎಂಬಿ ರ್‍ಯಾಮ್‌ನಲ್ಲಿ ಬಿಡುಗಡೆಯಾಗಿತ್ತು.

 ನೋಕಿಯಾ ಲೂಮಿಯಾ 1320:

ನೋಕಿಯಾ ಲೂಮಿಯಾ 1320:

ಬೆಲೆ:23,599

ಕಡಿಮೆ ಬೆಲೆಯಲ್ಲಿ ವಿಂಡೋಸ್‌ ಓಎಸ್‌ನಲ್ಲಿ ದೊಡ್ಡ ಸ್ಕ್ರೀನ್‌ ಸ್ಮಾರ್ಟ್‌‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರು ಈ ಸ್ಮಾರ್ಟ್‌ಫೋನ್‌ ಖರೀದಿಸಬಹುದು.6 ಇಂಚಿನ ಎಚ್‌ಡಿ ಸ್ಕ್ರೀನ್‌(1280 x 720 ಪಿಕ್ಸೆಲ್‌,245 ಪಿಪಿಐ) ಹೊಂದಿರುವ ಸ್ಮಾರ್ಟ್‌‌‌ಫೋನ್‌ ಹಿಂದುಗಡೆ 5 ಎಂಪಿ ಕ್ಯಾಮೆರಾ ಮುಂದುಗಡೆ ವಿಜಿಎ ಕ್ಯಾಮೆರಾವನ್ನು ಒಳಗೊಂಡಿದೆ.

 ಒಪ್ಪೋ ಎನ್‌1

ಒಪ್ಪೋ ಎನ್‌1

ಬೆಲೆ:39,999

ಚೀನಾ ಮೂಲದ ಒಪ್ಪೋ ಕಂಪೆನಿ ವಿಶ್ವದ ಮೊದಲ ತಿರುಗುವ ಕ್ಯಾಮೆರಾವಿರುವ ಎನ್‌1 ಸಿಂಗಲ್‌ ಸಿಮ್ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಗೆ ಜನವರಿಯಲ್ಲಿ ಬಿಡುಗಡೆ ಮಾಡಿದೆ.ಬಹುತೇಕ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳಿಗೆ ಹಿಂದೆ ಮತ್ತು ಮುಂದೆ ಕ್ಯಾಮೆರಾ ಇರುತ್ತದೆ.ಆದರೆ ಈ ಸ್ಮಾರ್ಟ್‌ಫೋನಿಗೆ ಒಂದೇ ಕ್ಯಾಮೆರಾವಿದ್ದು ಈ ಕ್ಯಾಮೆರಾವನ್ನು 206ಡಿಗ್ರಿಯವರೆಗೆ ತಿರುಗಿಸಬಹುದಾಗಿದೆ.ಹೀಗಾಗಿ ಕ್ಯಾಮೆರಾವನ್ನು ಗ್ರಾಹಕರು ಕೈಯಲ್ಲಿ ತಿರುಗಿಸುವ ಮೂಲಕ ಹಿಂದೆ ಮತ್ತು ಮುಂದುಗಡೆಯ ದೃಶ್ಯವನ್ನು ಕ್ಲಿಕ್ಕಿಸಬಹುದು.ಅಷ್ಟೇ ಅಲ್ಲದೇ ಒಪ್ಪೊ ಸ್ಮಾರ್ಟ್‌‌ಫೋನ್‌ ಆರು ಲೆನ್ಸ್‌ ಜೊತೆಗೆ ಸಿಮೊಸ್‌ ಸೆನ್ಸರ್‌‌ಗಳನ್ನು ಹೊಂದಿದೆ. f/2.0 ಅಪರ್ಚರ್‌ ಮೂಲಕ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೋಗಳನ್ನು ತೆಗೆಯಬಹುದಾಗಿದೆ.

 ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಪವರ್‍ :

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಪವರ್‍ :

ಬೆಲೆ:9,900

ಕಡಿಮೆ ಬೆಲೆಯಲ್ಲಿ ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಸ್ಮಾರ್ಟ್‌‌ಫೋನ್‌‌ ಖರೀದಿಸಬೇಕು ಎಂದು ಯೋಚಿಸುತ್ತಿರುವ ಗ್ರಾಹಕರಿಗಾಗಿ ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಪವರ್‍ 4000mAh ಬ್ಯಾಟರಿಯಸ್ಮಾರ್ಟ್‌‌ಫೋನ್‌‌‌‌‌ ಬಿಡುಗಡೆ ಮಾಡಿದೆ.5 ಇಂಚಿನ TFT ಸ್ಕ್ರೀನ್‌(480x854 ಪಿಕ್ಸೆಲ್‌) ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌ 1.3GHz ಮಿಡಿಯಾಟೆಕ್‌ ಕ್ವಾಡ್‌ ಕೋರ್‌ ಪ್ರೊಸೆಸರ್‌ 512MB ರ್‍ಯಾಮ್‌ 4GB ಆಂತರಿಕ ಮೆಮೊರಿಯನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

 ಇಂಟೆಕ್ಸ್ ಅಕ್ವಾಅಕ್ಟಾ:

ಇಂಟೆಕ್ಸ್ ಅಕ್ವಾಅಕ್ಟಾ:

ಬೆಲೆ:19,695

ದೇಶೀಯ ಸ್ಮಾರ್ಟ್‌‌ಫೋನ್‌ ಕಂಪೆನಿ ಇಂಟೆಕ್ಸ್‌ ಮೊದಲ ಅಕ್ಟಾ ಕೋರ್‌ ಪ್ರೊಸೆಸರ್‌ ಹೊಂದಿರುವ ಸ್ಮಾರ್ಟ್‌‌‌‌ಫೋನ್‌ ಮಾರುಕಟ್ಟೆಗೆ ಪರಿಚಯಿಸಿದೆ.ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ) 6 ಇಂಚಿನ ಎಚ್‌ಡಿ ಐಪಿಎಸ್‌ ಸ್ಕ್ರೀನ್‌, ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌, 1.7 GHz ಮೀಡಿಯಾ ಟೆಕ್‌ ಅಕ್ಟಾ ಕೋರ್‌ ಪ್ರೊಸೆಸರ್‌,‌ 700 MHz Mali 450-MP4 ಗ್ರಾಫಿಕ್‌ ಪ್ರೊಸೆಸರ್‌,2ಜಿಬಿ ರ್‍ಯಾಮ್‌ನ್ನು ಸ್ಮಾರ್ಟ್‌‌ಫೋನ್ ಒಳಗೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot