2020 ಕ್ಕೆ ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ಬಜೆಟ್ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳು
2020 ರಲ್ಲಿ ಬಿಡುಗಡೆಗೊಳ್ಳಲಿರುವ ಬಗ್ಗೆ ಅತೀ ಹೆಚ್ಚು ಚರ್ಚೆಗೆ ಕಾರಣವಾಗುತ್ತಿರುವ ಕೆಲವು ಫೋನ್ ಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ. ಬಿಡುಗಡೆಯ ದಿನಾಂಕ ಹತ್ತಿರ ಬರುತ್ತಿರುವುದರಿಂದಾಗಿ ಆ ಡಿವೈಸ್ ಗಳ ವೈಶಿಷ್ಟ್ಯತೆಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿದ್ದೇವೆ. ಈ ಬಜೆಟ್ ಫ್ಲ್ಯಾಗ್ ಶಿಪ್ ಹ್ಯಾಂಡ್ ಸೆಟ್ ಗಳು ಫೆಬ್ರವರಿಯಲ್ಲಿ ಅಥವಾ ಮಾರ್ಚ್ ಆರಂಭದಲ್ಲಿ ಬಿಡುಗಡೆಗೊಳ್ಳಲಿವೆ.

2020 ಕ್ಕೆ ಬಿಡುಗಡೆಗೊಳ್ಳಲಿರುವ ಬಜೆಟ್ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳು
ಈ ಲಿಸ್ಟ್ ನಲ್ಲಿರುವ ಪೋಕೋ X2 ಸಾಕಷ್ಟು ಏರಿಳಿತವನ್ನು ಗಮನಿಸಿದೆ. ಕೆಲವು ವರದಿಗಳು ಹೇಳುವ ಪ್ರಕಾರ ಈ ಡಿವೈಸ್ ಬಿಡುಗಡೆಗೊಳ್ಳುವುದಿಲ್ಲ ಎನ್ನಲಾಗಿದೆ. ಆದರೆ ಕಂಪೆನಿಯು ಅಂತಿಮವಾಗಿ ಅಧಿಕೃತ ಪ್ರಕಟಣೆಯನ್ನು ಮಾಡಿದ್ದು ಫೆಬ್ರವರಿ 4,2020 ಕ್ಕೆ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದೆ.
ಆದರೆ ಈ ಫೋನಿನ ವೈಶಿಷ್ಟ್ಯತೆಗಳ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.ವದಂತಿಯಾಗಿರುವ ಪ್ರಕಾರ ಈ ಡಿವೈಸಿನ ಪ್ರಮುಖ ವೈಶಿಷ್ಟ್ಯತೆಗಳೆಂದರೆ ಫಾಸ್ಟ್ ಚಾರ್ಜಿಂಗ್, ಮಧ್ಯಮ ರೇಂಜಿನ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 730G ಪ್ರೊಸೆಸರ್, MIUI 11 ಆಧಾರಿತ ಆಂಡ್ರಾಯ್ಡ್ 10 ನ್ನು ಇದು ಹೊಂದಿದೆ.
ಮತ್ತೊಂದು ವರದಿಯು ತಿಳಿಸುವ ಪ್ರಕಾರ ಐಫೋನ್ ಎಸ್ಇ 2 ಮಾರುಕಟ್ಟೆಗೆ ಪರಿಚಯವಾಗಲಿದೆ. ಆಪಲ್ ನ ಈ ಹ್ಯಾಂಡ್ ಸೆಟ್ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ. ಐಫೋನ್ ಎಸ್ ಇ ಯ ನಂತರ ಆಪಲ್ ನ ಕಡಿಮೆ ಬೆಲೆಯ ಡಿವೈಸ್ ಇದಾಗಿರಲಿದೆ. ಒನ್ ಪ್ಲಸ್ ಸರಣಿ ಫೋನ್ ಗಳು ಮತ್ತು ಸ್ಯಾಮ್ ಸಂಗ್ ನ ಮಿಡ್-ರೇಂಜಿನ ಫೋನ್ ಗಳ ಜೊತೆಗೆ ಸ್ಪರ್ಧೆಗಿಳಿಯುವ ನಿಟ್ಟಿನಲ್ಲಿ ಆಪಲ್ ಈ ಫೋನಿನ ಬಿಡುಗಡೆಗೆ ನಿರ್ಧರಿಸಿದೆ ಎನ್ನಲಾಗಿದೆ.
ಕಡಿಮೆ ಬೆಲೆಯನ್ನು ಹೊರತು ಪಡಿಸಿದರೆ ಐಫೋನ್ ಎಸ್ಇ2 ಐಫೋನ್ 8ಎಸ್ ನ ಡಿಸೈನ್ ನ್ನೇ ಹೊಂದಿರಲಿದೆ.ನೂತನ ಎ13 ಬಯೋನಿಕ್ ಚಿಪ್ ಸೆಟ್ ಮತ್ತು iOS 13 out-of-the-box ನಲ್ಲಿ ಇದು ರನ್ ಆಗುತ್ತದೆ. ಹಾಗಾದ್ರೆ ಯಾವೆಲ್ಲಾ ಪ್ರಮುಖ ಫೋನ್ ಗಳು ಬಿಡುಗಡೆಗೊಳ್ಳಲಿದೆ ಎಂಬ ಪಟ್ಟಿಯನ್ನು ನೋಡೋಣ.

ಪೋಕೋ X2
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು
• 6.7 ಇಂಚುಗಳ ಕೆಪಾಸಿಟೀವ್ ಟಚ್ ಸ್ಕ್ರೀನ್, ಮಲ್ಟಿ ಟಚ್
• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 765
• ಆಂಡ್ರಾಯ್ಡ್ ವಿ10 (Q)
• 128 GB ಮೆಮೊರಿ
• 4500 mAh ಲಿ-ಪಾಲಿಮರ್ ಬ್ಯಾಟರಿ

ಆಸೂಸ್ 7ಝಡ್
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು
• 6.5 ಇಂಚುಗಳ ಸ್ಕ್ರೀನ್
• ಸ್ನ್ಯಾಪ್ ಡ್ರ್ಯಾಗನ್ 865 SoC
• 8GB RAM
• 256GB
• 64MP ಪ್ರಮುಖ ಕ್ಯಾಮರಾ
• 6000 mAh ಬ್ಯಾಟರಿ

ಒನ್ ಪ್ಲಸ್ 8 ಲೈಟ್
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು
• 6.4-ಇಂಚಿನ AMOLED ಡಿಸ್ಪ್ಲೇ
• 48MP ಮತ್ತು 5MP ಹಿಂಭಾಗದ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• 4000 mAh ಬ್ಯಾಟರಿ

ರಿಯಲ್ ಮಿ X3 ಪ್ರೋ
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು
• 6.5-ಇಂಚಿನ ಫುಲ್-HD (1080x2400 ಪಿಕ್ಸಲ್ಸ್) ಸೂಪರ್ ಅನ್ ಮೋಲ್ಡ್ ಫ್ಲೂಯಿಡ್ ಡಿಸ್ಪ್ಲೇ.
• 120 Hz ಮತ್ತು ಸ್ಯಾಂಪಲಿಂಗ್ ರೇಟ್ 135 Hz
• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865 ಪ್ರೊಸೆಸರ್
• 108MP + 16MP + 8MP + 5MP ಕ್ಯಾಮರಾ
• 64MP ಮುಂಭಾಗದ ಕ್ಯಾಮರಾ
• 256 GB (UFS 3.0) ಸ್ಟೋರೇಜ್/512GB(UFS3.0) ಸ್ಟೋರೇಜ್
• 5,000 mAh ಬ್ಯಾಟರಿ

ರೆಡ್ಮಿ ಕೆ 30
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು
• 6.67 ಇಂಚುಗಳ IPS LCD ಕೆಪಾಸಿಟೀವ್ ಟಚ್ ಸ್ಕ್ರೀನ್
• ಆಂಡ್ರಾಯ್ಡ್ 10.0; MIUI 11
• ಕ್ವಾಲ್ಕಂ SDM765 ಸ್ನ್ಯಾಪ್ ಡ್ರ್ಯಾಗನ್ 765G
• 64GB 6GB RAM, 128GB 6GB RAM, 128GB 8GB RAM, 256GB 8GB RAM
• 64MP + 8MP + 5MP + 2MP ಹಿಂಭಾಗದ ಕ್ಯಾಮರಾ
• 20MP + 2MP ಹಿಂಭಾಗದ ಕ್ಯಾಮರಾ
• ನಾನ್-ರಿಮೂವೇಬಲ್ ಲಿ-ಪೋ 4500 mAh ಬ್ಯಾಟರಿ

ಆಪಲ್ ಐಫೋನ್ SE 2
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು
• 4.7 ಇನ್-ಡಿಸ್ಪ್ಲೇ
• A13 ಚಿಪ್
• 3GB of RAM
• 64GB ಇಂಟರ್ನಲ್ ಸ್ಟೋರೇಜ್
• ಅಪ್ ಡೇಟ್ ಆಗಿರುವ LCP ಆಂಟೆನಾ,ಇದು ವಯರ್ ಲೆಸ್ ಪ್ರದರ್ಶನವನ್ನು ಉತ್ತಮವಾಗಿಸಿದೆ
• ಸ್ಪೇಸ್ ಗ್ರೇ, ರೆಡ್ ಮತ್ತು ಸಿಲ್ವರ್ ಫಿನಿಶ್ ನ್ನು ಇದು ಹೊಂದಿರುತ್ತದೆ.


Click it and Unblock the Notifications








