ಫೋನ್ ನಲ್ಲಿ ಶಾಪಿಂಗ್ ಮಾಡುವುದರಿಂದಾಗಿ ಏನಾಗುತ್ತಂತೆ ಗೊತ್ತಾ?

By Gizbot Bureau
|

ಅಧ್ಯಯನವು ಫೋನ್ ಬಳಸಿ ಶಾಪಿಂಗ್ ಮಾಡುವುದರ ಬಗ್ಗೆ ವಿಶೇಷ ಸಂಗತಿಯೊಂದನ್ನು ತಿಳಿಸಿದೆ. ಯಾರು ಮೊಬೈಲ್ ಫೋನ್ ಬಳಸಿ ಕರೆಗಳನ್ನು ಮಾಡುತ್ತಾ ಅಥವಾ ಮ್ಯೂಸಿಕ್ ಕೇಳುತ್ತಾ ಶಾಪಿಂಗ್ ಮಾಡುತ್ತಾರೋ ಅವರು ನಿಜವಾಗಿಯೂ ಏನನ್ನು ಖರೀದಿಸಬೇಕು ಎಂದುಕೊಂಡಿರುತ್ತಾರೋ ಅದನ್ನು ಖರೀದಿಸುವುದನ್ನು ಮರೆತು ಇತರೆ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಹೆಚ್ಚಿರುತ್ತದೆಯಂತೆ. ಅಷ್ಟೇ ಅಲ್ಲ ತಮ್ಮ ಶಾಪಿಂಗ್ ಪ್ಲಾನ್ ನಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದಾಗಿ ಹೆಚ್ಚು ಶಾಪಿಂಗ್ ಮಾಡಿಕೊಳ್ಳುವ ಸಾಧ್ಯತೆ ಇದೆ.

ಹೆಚ್ಚು ಶಾಪಿಂಗ್:

ಹೆಚ್ಚು ಶಾಪಿಂಗ್:

ಶಾಪಿಂಗ್ ಗಾಗಿ ಕೇವಲ ಫೋನ್ ಮಾತ್ರ ಬಳಕೆ ಮಾಡುವುದರಿಂದಲೂ ಕೂಡ ಈ ರೀತಿ ಆಗುತ್ತದೆ ಎಂದು ರೀಸರ್ಚ್ ಟೀಮ್ ಹೇಳುತ್ತಿದೆ. ಯುಸ್ ನ ಫೇರ್ ಫೀಲ್ಡ್ ಯುನಿರ್ವಸಿಟಿಯ ಮೈಕೆಲ್ ಸ್ಕೈಂದ್ರಾ ಅಧ್ಯಯನ ಮಾಡಿ ಹೇಳಿರುವ ಪ್ರಕಾರ ಫೋನ್ ಬಳಸಿ ಯಾರು ಶಾಪಿಂಗ್ ಮಾಡುತ್ತಾರೋ ಅವರ ಶಾಪಿಂಗ್ ವರ್ತನೆ ಬದಲಾಗುತ್ತದೆ ಮತ್ತು ಹೆಚ್ಚಿನ ಖರ್ಚಿಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

230 ಮಂದಿಯ ಪ್ರಯೋಗ:

230 ಮಂದಿಯ ಪ್ರಯೋಗ:

ಸುಮಾರು 230 ಕ್ಕೂ ಅಧಿಕ ಮಂದಿಗೆ ಶಾಪಿಂಗ್ ಟಾಸ್ಕ್ ನ್ನು ನೀಡಿ ಈ ಅಧ್ಯಯನವನ್ನು ಕೈಗೊಳ್ಳಲಾಗಿದೆ ಮತ್ತು ಜರ್ನಲ್ ಆಫ್ ದಿ ಅಕಾಡಮಿ ಆಫ್ ಮಾರ್ಕೆಟಿಂಗ್ ಸೈನ್ಸ್ ನ ತಜ್ಞರು ಈ ವರದಿಯನ್ನು ಪ್ರಕಟಿಸಿದ್ದಾರೆ.

ಅಧ್ಯಯನದ ವಿವರ:

ಅಧ್ಯಯನದ ವಿವರ:

ಶಾಪಿಂಗ್ ನಲ್ಲಿ ಮೊಬೈಲ್ ಫೋನ್ ಬಳಕೆ ಮಾಡುವವರು ಹೆಚ್ಚಿನವರು ತಾವು ಶಾಪಿಂಗ್ ಮಾಡಬೇಕಿರುವ ವಸ್ತುವನ್ನು ಮರೆತು ಇತರೆ ವಸ್ತುಗಳ ಕಡೆಗೆ ಆಕರ್ಷಿತರಾಗುತ್ತಾರೆ ಜೊತೆಗೆ ಹೆಚ್ಚುವರಿ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಪ್ಲಾನ್ ಇಲ್ಲದ ಶಾಪಿಂಗ್ ಮಾಡುತ್ತಾರೆ.ಮೊಬೈಲ್ ಫೋನ್ ಗಳನ್ನು ಬಳಸಿ ಶಾಪಿಂಗ್ ಮಾಡುವುದರಿಂದಾಗಿ ಧನಾತ್ಮಕ ಮತ್ತು ಋಣಾತ್ಮಕ ಎರಡೂ ರೀತಿಯ ಪರಿಣಾಮಗಳು ಉಂಟಾಗುತ್ತವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Best Mobiles in India

English summary
Using phones while shopping may make you buy more

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X