Subscribe to Gizbot

'ವ್ಯಾಲೆಂಟೈನ್ ಡೇ' ಗಿಫ್ಟ್ ನೀಡಲು ಟಾಪ್ 5 ಬಜೆಟ್ ಸ್ಮಾರ್ಟ್‌ಫೋನ್ಸ್ ಇವು!!

Written By:

ಪ್ರೇಮಿಗಳ ದಿನದಂದು ತಮ್ಮ ಪ್ರೀತಿಪಾತ್ರರಿಗೆ ಒಂದು ಉತ್ತಮ ಗಿಫ್ಟ್ ಹುಡುವುವವರ ಕಣ್ಣು ಮೊದಲು ಬೀಳುವುದು ಸ್ಮಾರ್ಟ್‌ಪೊನ್‌ಗಳ ಮೇಲೆ. ಏಕೆಂದರೆ, ಪ್ರೀತಿಪಾತ್ರರಿಗೆ ಸಂಭ್ರಮದ ಜೊತೆ ಆಶ್ಚರ್ಯ ಮೂಡಿಸುವ ಗ್ಯಾಜೆಟ್ ಎಂದರೆ ಸ್ಮಾರ್ಟ್‌ಪೋನ್ ಮಾತ್ರ.! ಹಾಗಾಗಿ, ಫೋನ್ ಖರೀದಿಸಿ ಪ್ರೇಯಸಿಗೆ ಗಿಫ್ಟ್ ಆಗಿ ನೀಡುವ ಯೋಚನೆಯಲ್ಲಿ ಹಲವರು ಇರುತ್ತಾರೆ.!!

ಆದರೆ, ವ್ಯಾಲೆಂಟೈನ್ ಡೇ ಯಾವ ಸ್ಮಾರ್ಟ್‌ಪೋನ್ ಖರೀದಿಸುವುದು? ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾದ ಉತ್ತಮ ಸ್ಮಾರ್ಟ್‌ಫೋನ್ ಯಾವುದು ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡಿರಬಹುದು.! ಹಾಗಾಗಿ, ನಾವು ಈ ವ್ಯಾಲೆಂಟೈನ್ ಡೇ ಗೆ ಖರೀದಿಸಬಹುದಾದ ಉತ್ತಮ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನಾವು ಪಟ್ಟಿ ಮಾಡಿದ್ದೇವೆ.!!

'ವ್ಯಾಲೆಂಟೈನ್ ಡೇ' ಗಿಫ್ಟ್ ನೀಡಲು ಟಾಪ್ 5 ಬಜೆಟ್ ಸ್ಮಾರ್ಟ್‌ಫೋನ್ಸ್ ಇವು!!

ಇಂದಿನ ಲೇಖನದಲ್ಲಿ ಈ ಬಾರಿಯ ಪ್ರೇಮಿಗಳ ಸಂಭ್ರಮಾಚರಣೆಗೆ ಪ್ರಸ್ತುತ ಖರೀದಿಸಬಹುದಾದ ಉತ್ತಮ ಬಜೆಟ್ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಕನ್ನಡ ಗಿಜ್‌ಬಾಟ್ ತಂಡ ಪಟ್ಟಿ ಮಾಡಿದ್ದು, ಅವುಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ಎಮ್ಐ ಎ1

ಶಿಯೋಮಿ ಎಮ್ಐ ಎ1

ಅತ್ಯಂತ ಕಡಿಮೆ ಬೆಲೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿರುವ ಶಿಯೋಮಿ ಎಮ್ಐ ಎ1 ಸ್ಮಾರ್ಟ್‌ಪೊನ್ ಅನ್ನು ಈ ಬಾರಿಯ ವ್ಯಾಲೆಂಟೈನ್ ಡೇ ಗಿಫ್ಟ್ ಆಗಿ ನೀಡಬಹುದು. 13,999 ರೂಪಾಯಿ ಬೆಲೆ ಹೊಂದಿರುವ ಈ ಫೋನ್ ಪ್ರಸ್ತುತದ ನಂಬರ್ ಒನ್ ಬಜೆಟ್ ಸ್ಮಾರ್ಟ್‌ಪೋನ್ ಆಗಿದೆ.!!

Xiaomi Mi A1 : ಶಿಯೋಮಿಯ ಮೊದಲ ಡ್ಯುಯಲ್ ಕ್ಯಾಮೆರಾ ಫೋನ್: ಮಿ A1 ಫಸ್‌ಲುಕ್
ಹಾನರ್ 7 ಎಕ್ಸ್!!

ಹಾನರ್ 7 ಎಕ್ಸ್!!

ಶಿಯೋಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ನೇರಾನೇರ ಸೆಡ್ಡು ಹೊಡೆಯುತ್ತಿರುವ ಹಾನರ್ 7 ಎಕ್ಸ್ ಪ್ರಸ್ತುತ ಖರೀದಿಸಬಹುದಾದ ಎರಡನೇ ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಪೋನ್ ಆಗಿದೆ.!! 12,999 ರೂಪಾಯಿಗಳಿಗೆ ಲಭ್ಯವಿರುವ ಈ ಫೋನ್ ಅಮೆಜಾನ್‌ನಲ್ಲಿ ಮಾತ್ರ ಮಾರಟಕ್ಕಿದೆ.!!

ಶಿಯೋಮಿ ರೆಡ್ ಮಿ ನೋಟ್ 4!!

ಶಿಯೋಮಿ ರೆಡ್ ಮಿ ನೋಟ್ 4!!

ಭಾರತದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆ ಹೊಂದಿರುವ ರೆಡ್ ಮಿ ನೋಟ್ 4 ಫೋನ್ ಈಗಲೂ ಖರೀದಿದಾರರ ಫೇವರೇಟ್.! 11 ಸಾವಿರ ಬೆಲೆಯನ್ನು ಹೊಂದಿರುವ ಈ ಫೋನ್ ಖರೀದಿಸಬಹುದಾದ ಮೂರನೇ ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಪೋನ್ ಆಗಿದೆ.!!

ಲೆನೊವೊ ಕೆ8 ಪ್ಲಸ್!!

ಲೆನೊವೊ ಕೆ8 ಪ್ಲಸ್!!

ಕೇವಲ 9999 ರೂಪಾಯಿಗಳಿಗೆ 3GB RAM, 4000mAh ಬ್ಯಾಟರಿಯಂತಹ ಫೀಚರ್ಸ್ ಹೊಂದಿರುವ ಲೆನೊವೊ ಕೆ8 ಪ್ಲಸ್ ಸ್ಮಾರ್ಟ್‌ಫೋನ್ ಪ್ರಸ್ತುತ ಖರೀದಿಸಬಹುದಾದ ನಾಲ್ಕನೇ ಬೆಸ್ಟ್ ಸ್ಮಾರ್ಟ್‌ಪೋನ್ ಆಗಿದೆ. ನಾವು ನೀಡುವ ಹಣಕ್ಕೆ ಅತ್ಯುತ್ತಮ ಫೋನ್ ಇದಾಗಿದೆ.!!

ಹಾನರ್ 9 ಲೈಟ್!!

ಹಾನರ್ 9 ಲೈಟ್!!

ಅತ್ಯಂತ ಕಡಿಮೆ ಬೆಲೆಗೆ ನಾಲ್ಕು ಕ್ಯಾಮೆರಾಗಳನ್ನು ಹೊಂದಿರುವ ಫೋನ್ ಹಾನರ್ 9 ಲೈಟ್ ಕೇವಲ 10,999 ರೂಪಾಯಿಗಳಿಗೆ ಮಾರುಕಟ್ಟೆಗೆ ಎಂಟ್ರಿ ನೀಡಿದೆ.! ಮಾರಾಟ ಶುರುವಾದ ಕೆಲವೇ ಸೆಕೆಂಡ್‌ಗಳಲ್ಲಿ ಸೋಲ್ಡ್ ಔಟ್ ಆದ ಹಾನರ್ 9 ಲೈಟ್ ಪ್ರಸ್ತುತ ಖರೀದಿಸಬಹುದಾದ ಐದನೇ ಬೆಸ್ಟ್ ಸ್ಮಾರ್ಟ್‌ಪೋನ್ ಆಗಿದೆ.!!

ಓದಿರಿ:9,990 ರೂ.ಗೆ 'ಎಐ ಸೆಲ್ಫಿ' ಆಧಾರಿತ ಒಪ್ಪೊ ಸ್ಮಾರ್ಟ್‌ಫೋನ್ ಬಿಡುಗಡೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
ಪ್ರೇಮಿಗಳ ದಿನದಂದು ತಮ್ಮ ಪ್ರೀತಿಪಾತ್ರರಿಗೆ ಒಂದು ಉತ್ತಮ ಗಿಫ್ಟ್ ಹುಡುವುವವರ ಕಣ್ಣು ಮೊದಲು ಬೀಳುವುದು ಸ್ಮಾರ್ಟ್‌ಪೊನ್‌ಗಳ ಮೇಲೆ.!
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot