ತನ್ನ ಕಚೇರಿ ಸ್ಥಳವನ್ನು ವಿಸ್ತರಿಸುತ್ತಿದೆಯಂತೆ ವಾಟ್ಸಾಪ್

Written By:

ಸಿಲಿಕಾನ್ ವಾಲ್ಲಿ ಎಂಬ ಬ್ಯುಸಿನೆಸ್ ಜರ್ನಲ್ ಪ್ರಕಾರ ಇನ್ಸಟಂಟ್ ಮೆಸೇಜ್ ಆಪ್ ಎಂದು ಹೆಸರುವಾಸಿಯಾದ ವಾಟ್ಸಾಪ್ ಮೌಂಟನ್ ವ್ಯೂನಲ್ಲಿ 78,000 ಸ್ಕೇರ್ ಫೀಟ್‌ನ ಕಟ್ಟಡವೊಂದನ್ನು ನಿರ್ಮಿಸುತ್ತಿದ್ದೆಯಂತೆ. ಇದಕ್ಕಾಗಿ ಅದು ಈಗಾಗಲೇ 250 ಬ್ರಿಯಾಂಟ್ ಸ್ಥಳವನ್ನು ಲೀಸ್‌ನಲ್ಲಿ ಖರೀದಿಸಿದ್ದು ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ.

ಇದು ವಾಟ್ಸಾಪ್‌ನ ಇತ್ತೀಚಿನ ಕಚೇರಿಗಿಂತ ಎಂಟು ಪಟ್ಟು ದೊಡ್ಡದಾಗಿದ್ದು 11,000 ಸ್ಕ್ವೇರ್ ‌ಫೀಟ್‌ನಷ್ಟಿದೆ. ಇನ್ನೊಂದು ಸುದ್ದಿಯ ಪ್ರಕಾರ ಕಂಪೆನಿ 20,000 ಸ್ಕ್ವೇರ್ ಫೀಟ್ ಕಟ್ಟಡವೊಂದನ್ನು ಲೀಸ್‌ಗೆ ತೆಗೆದುಕೊಂಡಿದ್ದು ತನ್ನ ಕಚೇರಿ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿರುವುದನ್ನು ಬಲಪಡಿಸಿದೆ.

ತನ್ನ ಕಚೇರಿ ಸ್ಥಳವನ್ನು ವಿಸ್ತರಿಸುತ್ತಿದೆಯಂತೆ ವಾಟ್ಸಾಪ್

ಫೇಸ್‌ಬುಕ್ ಈ ಮೆಸೇಜ್ ದೈತ್ಯನನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಸಮಯದಲ್ಲಿ 60 ಉದ್ಯೋಗಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಈಗ ಅದು ಲೀಸ್‌ಗೆ ತೆಗೆದುಕೊಂಡಿರುವ ಜಾಗವು 400 ಸಿಬ್ಬಂದಿಗಳಿಗೆ ಕೆಲಸ ಮಾಡುವ ಸ್ಥಳಾವಕಾಶವನ್ನು ಒದಗಿಸಲಿದೆ.

ಈಗಾಗಲೇ ಅಕ್ಟೋಬರ್ 2013 ರಲ್ಲಿ ಕಟ್ಟಡ ನಿರ್ಮಾಣದ ಕೆಲಸವು ಪ್ರಾರಂಭಗೊಂಡಿದ್ದು 2015 ರ ಹೊತ್ತಿಗೆ ಈ ಯೋಜನೆಯನ್ನು ಸಂಪೂರ್ಣಗೊಳಿಸುವ ನಿರೀಕ್ಷೆ ಇದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot