Subscribe to Gizbot

2017ರಲ್ಲಿ ವಿಶ್ವದಲ್ಲೇ ಹೆಚ್ಚು ಮಾರಾಟವಾದ ಸ್ಮಾರ್ಟ್ಫೋನ್ಸ್ ಮಾಹಿತಿ ಬಹಿರಂಗ!!

By: Prathap T

ಸ್ಮಾರ್ಟ್ಫೋನ್ ವಿಶ್ವದೆಲ್ಲೆಡೆ ಎಲ್ಲರ ಸಾಮಾನ್ಯ ಬಳಕೆ ಸಾಧನವಾಗಿರುವುದರಿಂದ ಸ್ಮಾರ್ಟ್ಫೋನ್ಸ್ ಶರವೇಗದಲ್ಲಿ ಮಾರಾಟಗೊಳ್ಳುತ್ತಿವೆ. ಸ್ಮಾರ್ಟ್ಫೋನ್ ಉತ್ಪಾದಕ ಕಂಪನಿಗಳು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಪೈಪೋಟಿಗಿಳಿದಿರುವುದು ಸುಳ್ಳಲ್ಲ. ಈತ್ಮನ್ಮಧ್ಯೆ ಯಾವ ಸ್ಮಾರ್ಟ್ಫೋನ್ಸ್ ಹೆಚ್ಚು ಮಾರಾಟಗೊಂಡಿವೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಸಹಜವಾಗಿಯೇ ಎಲ್ಲರಿಗೂ ಇರುತ್ತದೆ.

2017ರಲ್ಲಿ ವಿಶ್ವದಲ್ಲೇ ಹೆಚ್ಚು ಮಾರಾಟವಾದ ಸ್ಮಾರ್ಟ್ಫೋನ್ಸ್ ಮಾಹಿತಿ ಬಹಿರಂಗ!!

ಅಂತೆಯೇ, 2017ರಲ್ಲಿ ವಿಶ್ವದಲ್ಲೇ ಹೆಚ್ಚು ಮಾರಾಟಗೊಂಡಿರುವ ಸ್ಮಾರ್ಟ್ಫೋನ್ಸ್ ವಿವರನ್ನು ಕ್ಯೂ2 ವರದಿ ಬಹಿರಂಗ ಮಾಡಿಸಿದೆ. ಅದರ ಮಾಹಿತಿ ಪ್ರಕಾರ ನಿರೀಕ್ಷೆಯಂತೆ ಸ್ಯಾಮ್ಸಂಗ್ ಮೊದಲ ಸ್ಥಾನ ಗಟ್ಟಿಯಾಗಿಸಿಕೊಂಡಿದೆ. ಎರಡನೇ ಸ್ಥಾನವನ್ನು ಐಫೋನ್ ಆಪಲ್ ಹಾಗೂ ಮೂರನೇ ಸ್ಥಾನವನ್ನು ಕ್ಸಿಯೋಮಿ ರೆಡ್ಮಿ ಭಾಚಿಕೊಂಡಿವೆ. ಕಳೆದ ತ್ರೈಮಾಸಿಕದಲ್ಲಿ ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್8 ಸ್ಮಾರ್ಟ್ಫೋನ್ ಅತೀ ಹೆಚ್ಚು ಮಾರಾಟಗೊಂಡ ಹೆಗ್ಗಳಿಕೆಗೆ ಪಾತ್ರವಾಗಿದೆ ಎನ್ನಲಾಗಿದೆ.

ಆದಾಗ್ಯೂ, ಐಫೋನ್ 7 ಹಾಗೂ ಕ್ಸಿಯೋಮಿ ರೆಡ್ಮಿ 4ಎ ಕೂಡ ಗಣನೀಯವಾಗಿ ಮಾರಾಟಗೊಂಡು ಮುನ್ನಲೆ ಕಾಯ್ದುಕೊಂಡಿವೆ. ಅತಿ ಹೆಚ್ಚು ಮಾರಾಟಗೊಂಡಿರುವ ಉತ್ಕೃಷ್ಟ ಶ್ರೇಣಿಯ ಸ್ಮಾರ್ಟ್ಫೋನ್ಸ್ ಪಟ್ಟಿಯನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.

80 ವರ್ಷದ ಹಿಂದೆಯೇ ಸ್ಮಾರ್ಟ್‌ಫೋನ್ ಇತ್ತೇ? ಈ ವರ್ಣಚಿತ್ರದಲ್ಲಿ ಅಡಗಿರುವ ರಹಸ್ಯವಾದರೂ ಏನು?

ಅವುಗಳ ವೈಶಿಷ್ಟ್ಯ, ವಿಶೇಷತೆ ಮತ್ತು ಖರೀದಿ ಬೆಲಲೆ ಒಳಗೊಂಡ ಸಂಪೂರ್ಣ ಮಾಹಿತಿಯನ್ನ ನಾವು ನೀಡುತ್ತಿದ್ದೇವೆ. ಇದರಿಂದ ನಿಮಗೆ ಯಾವುದು ಉತ್ತಮ ಸ್ಮಾರ್ಟ್ಫೋನ್ ಆಯ್ಕೆ ಎಂಬುದನ್ನು ಅರಿತುಗೊಳ್ಳಲು ಸಹಕಾರಿಯಾಗಲಿದೆ. ಜೊತೆಗೆ ಪರಸ್ಪರ ಹೋಲಿಕೆ ಮಾಡಿ ಆಯ್ಕೆ ಮಾಡಿಕೊಳ್ಳಲು ನೆರವಾಗಲಿದೆ. ಉದಾಹರಣೆಗೆ ಇರೆ ತಯಾರಕರೊಂದಿಗೆ ಹೋಲಿಸಿದರೆ ಸ್ಯಾಮ್ಸಂಗ್ ಫ್ಲ್ಯಾಗ್ಶಿಪ್ ಬೆಲೆಯು ಹೆಚ್ಚು ದುಬಾರಿ. ಆದರೆ ಕ್ಸಿಯೋಮಿ ರೆಡ್ಮಿ ಸ್ಮಾರ್ಟ್ಫೋನ್ ಆರಿಸಿಕೊಂಡರೆ ನೀವು ಅಗ್ಗದ ಬೆಲೆಗೆ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಪಡೆಯಬಹುದು.

ಆದ್ದರಿಂದ ಸಂಪೂರ್ಣ ಮಾಹಿತಿಯನ್ನು ಓದಲು ಕೆಳಗೆ ಸ್ಕ್ರಾಲ್ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್ ಐಫೋನ್ 7

ಆಪಲ್ ಐಫೋನ್ 7

ಖರೀದಿ ಬೆಲೆ ರೂ 56,999

ಪ್ರಮುಖ ಲಕ್ಷಣಗಳು:

* 4.7 ಇಂಚ್ ರೆಟಿನಾ ಎಚ್ಡಿ ಡಿಸ್ಪ್ಲೇ 3ಡಿ ಟಚ್

* ಕ್ವಾಡ್-ಕೋರ್ ಆಪಲ್ ಎ10 ಫ್ಯೂಷನ್ ಪ್ರೊಸೆಸರ್

* ಫೋರ್ಸ್ ಟಚ್ ಟೆಕ್ನಾಲಜಿ

* 2 ಜಿಬಿ ರಾಮ್ 32/128/256 ಜಿಬಿ ರೋಮ್

* ಡ್ಯುಯಲ್ 12 ಎಂಪಿ ಐಸೈಟ್ ಕ್ಯಾಮೆರಾ ಜೊತೆ ಒಐಎಸ್

* 7 ಎಂಪಿ ಫ್ರಂಟ್ ಕ್ಯಾಮೆರಾ

* ಟಚ್ ಐಡಿ

* ಬ್ಲೂಟೂತ್ 4.2

* ಎಲ್ಟಿಇ ಬೆಂಬಲ

* ನೀರು ಮತ್ತು ಧೂಳು ಪ್ರತಿರೋಧ

* ತೆಗೆಯಲಾಗದ ಲಿ-ಐಯಾನ್ 1960 ಎಂಎಎಚ್ ಬ್ಯಾಟರಿ (7.45 Wh)

ಆಪಲ್ ಐಫೋನ್ 7 ಪ್ಲಸ್

ಆಪಲ್ ಐಫೋನ್ 7 ಪ್ಲಸ್

ಖರೀದಿ ಬೆಲೆ: ರೂ. 60,999

ಪ್ರಮುಖ ಲಕ್ಷಣಗಳು:

* 5.5 ಇಂಚ್ ರೆಟಿನಾ ಎಚ್ಡಿ ಡಿಸ್ಪ್ಲೇ 3ಡಿ ಟಚ್

* ಕ್ವಾಡ್-ಕೋರ್ ಆಪಲ್ ಎ10 ಫ್ಯೂಷನ್ ಪ್ರೊಸೆಸರ್

* 2 ಜಿಬಿ ರಾಮ್ 32/128/256 ಜಿಬಿ ರೋಮ್

* ಫೋರ್ಸ್ ಟಚ್ ಟೆಕ್ನಾಲಜಿ

* ಡ್ಯೂಯಲ್ 12 ಎಂಪಿ ಐಸೈಟ್ ಕ್ಯಾಮೆರಾ ಒಐಎಸ್

* 7 ಎಂಪಿ ಫ್ರಂಟ್ ಕ್ಯಾಮೆರಾ

* ಟಚ್ ಐಡಿ

* ಬ್ಲೂಟೂತ್ 4.2

* ಎಲ್ ಟಿಇ ಬೆಂಬಲ

* ನೀರು ಮತ್ತು ಡಸ್ಟ್ ಪ್ರತಿರೋಧ

* ಲಿ-ಇಯಾನ್ 2900 ಎಂಎಎಚ್ ಬ್ಯಾಟರಿಯೊಂದಿಗೆ

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8

ಖರೀದಿ ಬೆಲೆ: ರೂ. 57,900

ಪ್ರಮುಖ ಲಕ್ಷಣಗಳು:

* 5.8 ಅಂಗುಲ ಸೂಪರ್ ಅಮೋಲೆಡ್ (ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5) 1440 x 2960 ಪಿಕ್ಸೆಲ್ಸ್ ಡಿಸ್ಪ್ಲೆ

* ಆಂಡ್ರಾಯ್ಡ್, 7.0 ನೌಗಾಟ್

* ಆಕ್ಟಾ ಕೋರ್ (4 ಎಕ್ಸ್ 2.3 ಜಿಹೆಚ್ಝ್ & 4 ಎಕ್ಸ್ 1.7 ಜಿಹೆಚ್ಝ್)

* 4 ಜಿಬಿ ರಾಮ್

* ಎಕ್ಸ್ನೊಸ್ 8895 ಆಕ್ಟಾ ಪ್ರೊಸೆಸರ್

* 64ಜಿಬಿ ಸ್ಥಳೀಯ ಶೇಖರಣಾ ಸಾಮರ್ಥ್ಯ

* 12ಎಂಪಿ ಹಿಂಭಾಗದ ಕ್ಯಾಮೆರಾ

* 8 ಎಂಪಿ ಮುಂಭಾಗದ ಕ್ಯಾಮೆರಾ

* ತೆಗೆಯಲಾಗದ ಲಿ-ಇಯಾನ್ 3000ಎಂಎಎಚ್ ಬ್ಯಾಟರಿ

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8 ಪ್ಲಸ್

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 8 ಪ್ಲಸ್

ಖರೀದಿ ಬೆಲೆ: 64,900 ರೂ.

ಪ್ರಮುಖ ಲಕ್ಷಣಗಳು:

* 6.2 ಇಂಚಿನ ಸೂಪರ್ ಅಮೋಲ್ಡೋ (ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5) 1440 x 2560 ಪಿಕ್ಸೆಲ್ಸ್ ಡಿಸ್ಪ್ಲೆ

* ಆಂಡ್ರಾಯ್ಡ್, 7.0 ನೌಗಾಟ್

* ಆಕ್ಟಾ-ಕೋರ್ (4x2.3 ಜಿಹೆಚ್ಝ್ ಮತ್ತು 4x1.7 ಜಿಹೆಚ್ಝ್)

* 4 ಜಿಬಿ ರಾಮ್ ಎಕ್ಸಿನೋಸ್ 8895 ಆಕ್ಟಾ ಪ್ರೊಸೆಸರ್

* 64ಜಿಬಿ ಸ್ಥಳೀಯ ಶೇಖರಣಾ ಸಾಮರ್ಥ್ಯ

* 12ಎಂಪಿ ಹಿಂಭಾಗದ ಕ್ಯಾಮೆರಾ

* 8 ಎಂಪಿ ಮುಂಭಾಗದ ಕ್ಯಾಮೆರಾ

* ತೆಗೆಯಲಾಗದ ಲಿ-ಇಯಾನ್ 3500 ಎಂಎಎಚ್ ಬ್ಯಾಟರಿ ಪವರ್ಸಿಂಗ್

ರೆಡ್‌ಮಿ ನೋಟ್ 4 ನಲ್ಲಿರೋ ಈ ಫೀಚರ್ಸ್ ಯಾರೂ ಬಳಸುತ್ತಿಲ್ಲ.!!
ಕ್ಸಿಯೋಮಿ ರೆಡ್ಮಿ 4ಎ

ಕ್ಸಿಯೋಮಿ ರೆಡ್ಮಿ 4ಎ

ಖರೀದಿ ಬೆಲೆ: 5,999ರೂ.

ಪ್ರಮುಖ ಲಕ್ಷಣಗಳು

* 5.0 ಇಂಚಿನ ಐಪಿಎಸ್ ಎಲ್ಸಿಡಿ 720 x 1280 ಪಿಕ್ಸೆಲ್ಸ್ ಡಿಸ್ಪ್ಲೆ

* ಆಂಡ್ರಾಯ್ಡ್, 6.0.1 ಮಾರ್ಷ್ಮ್ಯಾಲೋ

* ಕ್ವಾಡ್ ಕೋರ್ 1.4 ಜಿಹೆಚ್ಝ್ ಕಾರ್ಟೆಕ್ಸ್-ಎ 53

* 2 ಜಿಬಿ ರಾಮ್

* ಕ್ವಾಲ್ಕಾಮ್ ಎಂಎಸ್ಎಂ 8917 ಸ್ನಾಪ್ಡ್ರಾಗನ್ 425 ಪ್ರೊಸೆಸರ್

* 16 ಜಿಬಿ ಸ್ಥಳೀಯ ಶೇಖರಣಾ ಸಾಮರ್ಥ್ಯ

* 13 ಎಂಪಿ ಹಿಂಬದಿ ಕ್ಯಾಮೆರಾ

* 5ಎಂಪಿ ಮುಂಭಾಗದ ಕ್ಯಾಮೆರಾ

* ತೆಗೆಯಲಾಗದ ಲೀ-ಪೊ 3120 ಎಂಎಎಚ್ ಬ್ಯಾಟರಿ ಪವರ್ಕಿಂಗ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Find out which are world's best selling smartphones/mobiles in Q2 2017. Models are Samsung Galaxy S8 plus, iPhone 7 plus, Xiaomi redmi 4a and more.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot