ಸ್ಮಾರ್ಟ್‌ಫೋನ್‌ನಲ್ಲಿ ಬಂತು ನಾವಿಕ್‌..! ಇಸ್ರೋ ನಿರ್ಮಿತ ಸ್ವದೇಶಿ ಜಿಪಿಎಸ್‌..!

By Gizbot Bureau
|

ಸ್ಮಾರ್ಟ್‌ಫೋನ್‌ ಚಿಪ್ ತಯಾರಕ ಕ್ವಾಲ್‌ಕಾಮ್ ತನ್ನ ಸ್ನಾಪ್‌ಡ್ರಾಗನ್ 4, 6, 7 ಸರಣಿಯಡಿಯಲ್ಲಿ ಕ್ರಮವಾಗಿ 3 ಹೊಸ ಚಿಪ್‌ಸೆಟ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ಚಿಪ್‌ಸೆಟ್‌ಗಳಾದ ಸ್ನಾಪ್‌ಡ್ರಾಗನ್ 720 ಜಿ, 662 ಮತ್ತು 460ಗಳು ನ್ಯಾವಿಗೇಷನ್ ವಿಥ್ ಇಂಡಿಯನ್ ಕಾನ್ಸ್ಟೆಲ್ಲೇಷನ್ (ನಾವಿಕ್) ಅನ್ನು ಬೆಂಬಲಿಸುತ್ತವೆ. ನಾವಿಕ್ ಜಿಪಿಎಸ್‌ನ ಭಾರತೀಯ ಆವೃತ್ತಿಯಾಗಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿಪಡಿಸಿದೆ.

ಶಿಯೋಮಿಯಲ್ಲಿ ನಾವಿಕ್‌ ಖಚಿತ

ಶಿಯೋಮಿಯಲ್ಲಿ ನಾವಿಕ್‌ ಖಚಿತ

ಚೀನಾದ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಾದ ಶಿಯೋಮಿ ಮತ್ತು ರಿಯಲ್‌ಮಿ ಅವರು ನಾವಿಕ್ ಬೆಂಬಲದೊಂದಿಗೆ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದನ್ನು ಖಚಿತಪಡಿಸಿದ್ದಾರೆ. ಟಾಪ್-ಎಂಡ್ ಸ್ನಾಪ್‌ಡ್ರಾಗನ್ 720 ಜಿ ಪ್ರೊಸೆಸರ್ ಆಧಾರಿತ ಸ್ಮಾರ್ಟ್‌ಫೋನ್‌ನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಶಿಯೋಮಿ ಜಾಗತಿಕ ಉಪಾಧ್ಯಕ್ಷ ಹಾಗೂ ಭಾರತದ ಎಂಡಿ ಮನು ಜೈನ್ ಖಚಿತಪಡಿಸಿದ್ದಾರೆ. ಹೊಸ ಸ್ಮಾರ್ಟ್‌ಫೋನ್‌ ಮಾದರಿಯನ್ನು ಬಹಿರಂಗಪಡಿಸದೆ, ಶಿಯೋಮಿಯ ಮುಂದಿನ ಸ್ನಾಪ್‌ಡ್ರಾಗನ್ 720ಜಿ ಆಧಾರಿತ ಸ್ಮಾರ್ಟ್‌ಫೋನ್ ನಾವಿಕ್‌ಗೆ ಬೆಂಬಲ ನೀಡುತ್ತದೆ ಎಂದು ಜೈನ್ ಸುಳಿವು ನೀಡಿದ್ದಾರೆ.

ಉತ್ತಮ ತಂತ್ರಜ್ಞಾನ

ಉತ್ತಮ ತಂತ್ರಜ್ಞಾನ

ಹೊಸ ಸ್ನಾಪ್‌ಡ್ರಾಗನ್ 720ಜಿ ಆಧರಿತ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವವರಲ್ಲಿ ನಾವು ಒಬ್ಬರಾಗಿದ್ದೇವೆ ಎಂಬುದನ್ನು ನಿಮ್ಮ ಜೊತೆ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಕ್ವಾಲ್‌ಕಾಮ್ ಟೆಕ್ನಾಲಜೀಸ್‌ನೊಂದಿಗಿನ ನಮ್ಮ ದೀರ್ಘಕಾಲದ ಸಹಯೋಗದಲ್ಲಿ ಇದು ಮತ್ತೊಂದು ಹೆಜ್ಜೆಯಾಗಿದೆ, ಇದು ನಮ್ಮ Mi ಅಭಿಮಾನಿಗಳಿಗೆ ಉತ್ತಮ ಗುಣಮಟ್ಟದ ತಂತ್ರಜ್ಞಾನಗಳನ್ನು ತಲುಪಿಸಲು ಅನುವು ಮಾಡಿಕೊಡುತ್ತದೆ ಎಂದು ಜೈನ್ ಹೇಳಿದ್ದಾರೆ.

ರಿಯಲ್‌ಮಿಯಿಂದಲೂ ನಾವಿಕ್‌ ಬಳಕೆ

ರಿಯಲ್‌ಮಿಯಿಂದಲೂ ನಾವಿಕ್‌ ಬಳಕೆ

ಇದರ ಮಧ್ಯೆ, ಸ್ನ್ಯಾಪ್‌ಡ್ರಾಗನ್ 720ಜಿ ಆಧಾರಿತ ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇವೆ ಎಂದು ರಿಯಲ್‌ಮಿ ಇಂಡಿಯಾ ಸಿಇಒ ಖಚಿತಪಡಿಸಿದ್ದಾರೆ. ಭಾರತದಲ್ಲಿ ರಿಯಲ್‌ಮಿ 5 ಸರಣಿಯೊಂದಿಗೆ ಸ್ನಾಪ್‌ಡ್ರಾಗನ್ 665 ಆಧಾರಿತ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ ಮೊದಲ ಬ್ರಾಂಡ್ ನಾವಾಗಿದ್ದೇವು. 2020ರಲ್ಲಿ ನಮ್ಮ ಸ್ಮಾರ್ಟ್‌ಫೋನ್ ಬಿಡುಗಡೆಗಾಗಿ ನಾವು ಮತ್ತಷ್ಟು ಉತ್ಸುಕರಾಗಿದ್ದೇವೆ. ಇದು ಹೊಸ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಸಹಾಯ ಮಾಡುವ ಹೊಚ್ಚಹೊಸ ಸ್ನಾಪ್‌ಡ್ರಾಗನ್ 720ಜಿ ಮೊಬೈಲ್ ಪ್ಲಾಟ್‌ಫಾರ್ಮ್‌ನ್ನು ಒಳಗೊಂಡಿರುತ್ತದೆ "ಎಂದು ಶೆತ್ ಹೇಳಿದ್ದಾರೆ.

ರಷ್ಯಾದಲ್ಲಿ ಗ್ಲೋನಾಸ್‌

ರಷ್ಯಾದಲ್ಲಿ ಗ್ಲೋನಾಸ್‌

ಸ್ಮಾರ್ಟ್‌ಫೋನ್‌ನಲ್ಲಿ ಜಿಪಿಎಸ್ ಬಹಳ ಜನಪ್ರಿಯವಾಗಿದ್ದರೂ, ಹೆಚ್ಚಿನ ಜನರಿಗೆ ಜಿಪಿಎಸ್ ಕೇವಲ ಉಪಗ್ರಹ ಸಂಚರಣೆ ವ್ಯವಸ್ಥೆ ಅಲ್ಲ ಎಂಬುದು ತಿಳಿದಿಲ್ಲ. ರಷ್ಯಾ ತನ್ನದೇ ಆದ ಗ್ಲೋನಾಸ್ ಎಂಬ ಜಿಪಿಎಸ್‌ ಬಳಸಿದರೆ ಯುರೋಪಿಯನ್ ಯೂನಿಯನ್ ಮತ್ತು ಚೀನಾ ಗೆಲಿಲಿಯೊ ಮತ್ತು ಬೀಡೌ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಬಿಡಿಎಸ್) ಅನ್ನು ಬಳಸುತ್ತಿವೆ.

 GPSಗಿಂತಲೂ ಹೆಚ್ಚು ನಿಖರ

GPSಗಿಂತಲೂ ಹೆಚ್ಚು ನಿಖರ

ನಾವಿಕ್ ಭಾರತದ ಮೇಲೆ ಮಾತ್ರ ಕೇಂದ್ರೀಕರಿಸುತ್ತದೆ. 5 ಮೀಟರ್ ಸ್ಥಾನದ ನಿಖರತೆ ಹೊಂದಿರುವ ನಾವಿಕ್‌ ಜಿಪಿಎಸ್‌ಗಿಂತ ಹೆಚ್ಚು ನಿಖರವೆಂದು ಇಸ್ರೋ ಪರಿಗಣಿಸುತ್ತದೆ. ನಾವಿಕ್ ಅನ್ನು ಡ್ಯುಯಲ್ ಫ್ರೀಕ್ವೆನ್ಸಿ (ಎಸ್ ಮತ್ತು ಎಲ್ ಬ್ಯಾಂಡ್‌ಗಳು) ನಿಂದ ನಡೆಸಲಾಗುತ್ತದೆ, ಆದರೆ, ಜಿಪಿಎಸ್ ಎಲ್ ಬ್ಯಾಂಡ್‌ನ್ನು ಮಾತ್ರ ಅವಲಂಬಿಸಿತ್ತು. ಆದ್ದರಿಂದ, ನಾವಿಕ್‌ ಜಿಪಿಎಸ್‌ಗಿಂತ ಹೆಚ್ಚು ನಿಖರ.

8 ಉಪಗ್ರಹ ಬಳಕೆ

8 ಉಪಗ್ರಹ ಬಳಕೆ

2016ರಲ್ಲಿ ಇಸ್ರೋ ತಯಾರಿಸಿದ ನಾವಿಕ್ ಸ್ಯಾಟಲೈಟ್ ನ್ಯಾವಿಗೇಷನ್ ಸಿಸ್ಟಮ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಅಂತಿಮವಾಗಿ 2020ರಲ್ಲಿ ನಾವಿಕ್ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಥಾನ ಪಡೆದಿದೆ. ನಾವಿಕ್‌ಗಾಗಿ ಇಸ್ರೋ ಎಂಟು ಉಪಗ್ರಹಗಳನ್ನು ನಿಯೋಜಿಸಿದ್ದು, ಅದರಲ್ಲಿ ಏಳು ಸ್ಥಾನಗಳು, ಸ್ಥಳ, ಸಂಚರಣೆ ಮತ್ತು ಸಮಯ (ಪಿಎನ್‌ಟಿ) ಸೇವೆಗಳನ್ನು ಒದಗಿಸಲಿದ್ದು, ಇನ್ನೊಂದು ಸಂದೇಶ ಸೇವೆಯನ್ನು (ಐಆರ್‌ಎನ್‌ಎಸ್‌ಎಸ್ -1 ಎ) ನೀಡುತ್ತದೆ.

ಕಾರ್ಗಿಲ್‌ ಟೂ ನಾವಿಕ್‌

ಕಾರ್ಗಿಲ್‌ ಟೂ ನಾವಿಕ್‌

ಜಿಪಿಎಸ್‌ ಇರುವಾಗ ನಾವಿಕ್‌ ಏಕೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ, ಉತ್ತರಕ್ಕೆ 1999ರ ಕಾರ್ಗಿಲ್‌ ಯುದ್ಧಕ್ಕೆ ನೀವು ತೆರಳಬೇಕು. ಪಾಕಿಸ್ತಾನ ಪಡೆಗಳ ಬಗ್ಗೆ ಪ್ರಮುಖ ಜಿಪಿಎಸ್ ಮಾಹಿತಿಯನ್ನು ಭಾರತಕ್ಕೆ ನೀಡಲು ಯುಎಸ್ ನಿರಾಕರಿಸಿತ್ತು. ಆಗ ಭಾರತಕ್ಕೆ ತನ್ನದೇ ಆದ ಸ್ವಂತ ಉಪಗ್ರಹ ಸಂಚರಣೆ ವ್ಯವಸ್ಥೆಯನ್ನು ಹೊಂದುವ ಅಗತ್ಯ ಕಂಡು ಬಂದಿತ್ತು. ಎರಡು ದಶಕಗಳ ನಂತರ, ಇಸ್ರೋ ಅಂತಿಮವಾಗಿ ನಾವಿಕ್‌ನ್ನು ಜನರ ಮುಂದಿಟ್ಟಿದೆ.

Most Read Articles
Best Mobiles in India

English summary
Xiaomi And Realme To Launch First Set Of Phones with NavIC Support.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X