5,300mAh ಬ್ಯಾಟರಿ ಹೊಂದಿರುವ ಶಿಯೋಮಿ ಮಿ ಮ್ಯಾಕ್ಸ್ 2 ಲಾಂಚ್: ಬೆಲೆ, ವಿಶೇಷತೆಗಳು..!!!

Written By:

ಭಾರತೀಯ ಸ್ಮಾರ್ಟ್‌ಫೋನ್ ಲೋಕದಲ್ಲಿ ತನ್ನದೇ ಅಭಿಮಾನಿ ವೃಂದವನ್ನು ಕಟ್ಟಿಕೊಂಡಿರುವ ಶಿಯೋಮಿ ವಾರಕ್ಕೊಂದು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದೇ ಮಾದರಿಯಲ್ಲಿ ಮೇ.25 ಗುರವಾರದಂದು ಮತ್ತು ಸ್ಮಾರ್ಟ್‌ಫೋನ್ ಶಿಯೋಮಿ ಮಿ ಮಾಕ್ಸ್ 2 ಲಾಂಚ್ ಮಾಡಿದೆ.

5,300mAh ಬ್ಯಾಟರಿ ಹೊಂದಿರುವ ಶಿಯೋಮಿ ಮಿ ಮ್ಯಾಕ್ಸ್ 2 ಲಾಂಚ್: ಬೆಲೆ, ವಿಶೇಷತೆ

ಓದಿರಿ: ದೇಶದಲ್ಲಿ ಮೊದಲಿಗೆ BSNLನಿಂದ ಸ್ಯಾಟಿಲೈಟ್ ಫೋನ್ ಸೇವೆ: ಪ್ರತಿ ನಿಮಿಷಕ್ಕೆ ವಿಧಿಸುವ ದರ ಕೇಳಿದ್ರೆ ಶಾಕ್ ಆಗ್ತೀರ..!

ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿರುವ ಈ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಶಿಯೋಮಿ ಮಿ ಮಾಕ್ಸ್ 2 5,300mAh ಬ್ಯಾಟರಿಯನ್ನು ಹೊಂದಿದೆ. ಇದೇ ಫೋನಿನ ಪ್ರಮುಖ ಅಂಶವಾಗಲಿದೆ. ಈ ಫೋನಿನಲ್ಲಿ ನೀವು ಒಮ್ಮೆಗ 18 ಗಂಟೆ ಕಾಲ ವಿಡಿಯೋ ನೋಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
6.44 ಇಂಚಿನ full HD ಪರದೆ:

6.44 ಇಂಚಿನ full HD ಪರದೆ:

ಶಿಯೋಮಿ ಮಿ ಮಾಕ್ಸ್ 2 ಸ್ಮಾರ್ಟ್‌ಫೋನಿನಲ್ಲಿ ಶಿಯೋಮಿ 6.44 ಇಂಚಿನ full HD ಪರದೆಯನ್ನು ಅಳವಡಿಸಿದೆ. ವಿಡಿಯೋ ನೋಡಲು ಈ ದೊಡ್ಡ ಪರದೆ ಉತ್ತಮವಾಗಿದ್ದು, ಗೇಮ್ ಆಡುವುದಕ್ಕೆ ಹೇಳಿ ಮಾಡಿಸಿದಂತಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಶಿಯೋಮಿ ಮಿ ಮಾಕ್ಸ್ 2 ಸ್ಮಾರ್ಟ್‌ಫೋನಿನಲ್ಲಿ ಸ್ನಾಪ್ ಡ್ರಾಗನ್ 625 ಪ್ರೋಸೆಸರ್ ಅಳವಡಿಸಲಾಗಿದ್ದು, ಇದರೊಂದಿಗೆ 4GB RAM ಸಹ ನೀಡಲಾಗಿದೆ. ಅಲ್ಲದೇ ಇದರಲ್ಲಿ 64GB ಮತ್ತು 128GB ಇಂಟರ್ನಲ್ ಮೆಮೊರಿಯನ್ನು ಈ ಪೋನ್ ಹೊಂದಿದೆ.

12MP/5 MP ಕ್ಯಾಮೆರಾ:

12MP/5 MP ಕ್ಯಾಮೆರಾ:

ಶಿಯೋಮಿ ತನ್ನ ಮಿ ಮಾಕ್ಸ್ 2 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 12MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಜೊತೆಗೆ LED ಫ್ಲಾಷ್ ಸಹ ನೀಡಲಾಗಿದೆ. ಇದರೊಂದಿಗೆ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ.

ಶಿಯೋಮಿ ಮಿ ಮಾಕ್ಸ್ 2 ಬೆಲೆ:

ಶಿಯೋಮಿ ಮಿ ಮಾಕ್ಸ್ 2 ಬೆಲೆ:

ಸದ್ಯ ಈ ಫೋನ್ ಚೀನಾ ಮಾರುಕಟ್ಟೆಯಲ್ಲಿ ಮಾತ್ರವೇ ಲಭ್ಯವಿದ್ದು, 64GB ಮಾದರಿಯ ಫೋನ್ ಬೆಲೆ ರೂ. 16,000 ಹಾಗೇ 128GB ಆವೃತ್ತಿಯ ಫೋನ್ ನ ಬೆಲೆ ರೂ.19,000 ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Xiaomi announced the Mi Max 2 in China. Successor to last year’s Mi Max to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot