Subscribe to Gizbot

ಶಯೋಮಿ ರೆಡ್ಮೀ 4.2 ಸೆಕೆಂಡ್‌ನಲ್ಲಿ ಭರ್ಜರಿ ಮಾರಾಟ

Written By:

ಶಯೋಮಿ ಇನ್ನು ಕೂಡ ಮಾರುಕಟ್ಟೆಯಲ್ಲಿ ತನ್ನ ಅತ್ಯಪೂರ್ಣ ಹೆಗ್ಗಳಿಕೆಯನ್ನು ಕಾಪಾಡಿಕೊಂಡು ಬರುತ್ತಿದೆ. ತನ್ನ Mi 3 ಮೂಲಕ ಭಾರತೀಯ ಫೋನ್ ಪ್ರಿಯರ ಮನಗೆದ್ದ ಈ ಚೀನಾದ ಆಪಲ್ ನಿಜಕ್ಕೂ ಅವಿಸ್ಮರಣೀಯ ಇತಿಹಾಸವನ್ನೇ ಮಾರುಕಟ್ಟೆಯಲ್ಲಿ ಉಂಟುಮಾಡಿದೆ.

ಈಗ Mi 3 ನಂತರ ಶಯೋಮಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿರುವ ರೆಡ್ಮೀ 1s ಅನ್ನು ಫ್ಲಿಪ್‌ಕಾರ್ಟ್ ಮೂಲಕ ಮಾರಾಟ ಮಾಡಿದೆ. ಆದರೆ ಚೀನಾದ ಆಪಲ್ ಶಯೋಮಿಯ ಕಮಾಲು ಇನ್ನೂ ಇದೆ ಎಂಬುದಕ್ಕೆ ಸಾಕ್ಷಿಯಾಗಿ ಈ ಫೋನ್‌ನ 40,000 ಯೂನಿಟ್‌ಗಳು ಬಳಕೆದಾರರಿಗೆ 4.2 ಸೆಕೆಂಡುಗಳಲ್ಲಿ ಮಾರಾಟವಾಗಿದ್ದು ದಾಖಲೆಯತ್ತ ಮುನ್ನುಗ್ಗುತ್ತಿದೆ.

ರೂ 5,999 ಕ್ಕೆ ಸೂಪರ್ ಫೋನ್ ಶಯೋಮಿ ರೆಡ್ಮೀ

ಶಯೋಮಿ ರೆಡ್ಮೀ ವಿಶಿಷ್ಟತೆಗಳು
ರೆಡ್ಮೀ 1S ನ ಬೆಲೆ ರೂ 5,999 ಆಗಿದ್ದು ಇದು 4.7 ಇಂಚಿನ 720p IPS LCD ಡಿಸ್‌ಪ್ಲೇಯನ್ನು ಹೊಂದಿದೆ ಇದು ಡ್ರಾಗೋಂಟ್ರಿಲ್ ಅನ್ನು ಗ್ಲಾಸ್ ಅನ್ನು ಹೊಂದಿದೆ ಎಂಬುದು ಈ ಫೋನ್‌ನ ವಿಶೇಷತೆಯಾಗಿದೆ. ಈ ಡಿವೈಸ್ 1.6GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಕ್ವಾಡ್ - ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು ಡಿವೈಸ್‌ನ RAM ಸಾಮರ್ಥ್ಯ 1 ಜಿಬಿಯಾಗಿದೆ. ಈ ಫೋನ್ ಆಂಡ್ರಾಯ್ಡ್ ಜೆಲ್ಲಿ ಬೀನ್ 4.3 ನಲ್ಲಿ ಚಾಲನೆಯಾಗುತ್ತಿದ್ದು Xiaomi's MIUIಲೇಯರ್ ಅನ್ನು ಮೇಲ್ಭಾಗದಲ್ಲಿ ಹೊಂದಿದೆ.

ಫೋನ್‌ನ ಫೋಟೋಗ್ರಫಿ ಅಂಶದತ್ತ ಗಮನ ಹರಿಸಿದಾಗ ಇದು 8MP ರಿಯರ್ ಕ್ಯಾಮೆರಾವನ್ನು ಹೊಂದಿದ್ದು 1.6MP ಮುಂಭಾಗ ಕ್ಯಾಮೆರಾ ಇದರಲ್ಲಿದೆ. ಇನ್ನು ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 8GB ಯಾಗಿದ್ದು ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 64GB ಗೆ ವಿಸ್ತರಿಸಬಹುದು.

English summary
This article tells about xiaomi redmi 1s boasts 40000 units sale just 4 .2 secs via flipkart.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot