ಮಾರುಕಟ್ಟೆಯನ್ನು ಧೂಳೀಪಟ ಮಾಡಲಿರುವ ಶ್ಯೋಮಿ

Written By:

ಶ್ಯೋಮಿ ರೆಡ್ಮೀ ನೋಟ್ ಫ್ಯಾಬ್ಲೆಟ್ ಅನ್ನು ರೂ 8,999 ಕ್ಕೆ ಭಾರತದಲ್ಲಿ ಲಾಂಚ್ ಮಾಡಿದೆ. ಚೀನಾದ ಕಂಪೆನಿ ಇನ್ನೊಂದು 5.5 ಇಂಚಿನ ಫ್ಯಾಬ್ಲೆಟ್‌ನಲ್ಲಿ 4 ಜಿ ಎಲ್‌ಟಿಇ ವೇರಿಯೇಂಟ್ ಇರುವುದಾಗಿ ತಿಳಿಸಿದ್ದು. ತನ್ನ ಫ್ಯಾಬ್ಲೆಟ್ಗೆ ರೆಡ್ಮೀ ನೋಟ್ 4 ಜಿ ಎಂದು ಹೆಸರಿಟ್ಟಿರುವ ಕಂಪೆನಿ ಫ್ಯಾಬ್ಲೆಟ್ ಬೆಲೆಯನ್ನು ರೂ 9,999 ಎಂದು ನಿರ್ಧರಿಸಿದೆ.

ಇದನ್ನೂ ಓದಿ: ಆಂಡ್ರಾಯ್ಡ್ ಅಪ್ಲಿಕೇಶನ್ ಐಫೋನ್‌ಗಿಂತಲೂ ಹಿತಕಾರಿ

ಶ್ಯೋಮಿ ಎಮ್ಐ 3 ಮತ್ತು ರೆಡ್ಮೀ 1ಎಸ್ ನಂತೆ ಡಿಸೆಂಬರ್ 2 ರಂದು ತನ್ನ ಮಾರಾಟವನ್ನು ಶ್ಯೋಮಿ ರೆಡ್ಮೀ ಕಂಡುಕೊಳ್ಳಲಿದೆ. ಇಂದೇ ಗ್ರಾಹಕರು ಫ್ಲಿಪ್‌ಕಾರ್ಟ್‌ನಲ್ಲಿ ಫ್ಯಾಬ್ಲೆಟ್‌ಗಾಗಿ ನೋಂದಾಯಿಸಬೇಕಾಗಿದೆ. ಎಷ್ಟು ಯೂನಿಟ್‌ಗಳನ್ನು ಕಂಪೆನಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂಬುದು ಗುಟ್ಟಿನ ವಿಷಯವಾಗಿದೆ.

ರೆಡ್ಮೀ ನೋಟ್‌ನಂತೆ, ರೆಡ್ಮೀ ನೋಟ್ 4 ಜಿ, ಆರು ನಗರಗಳಲ್ಲಿ ಏರ್‌ಟೆಲ್ ಮಳಿಗೆಗಳಲ್ಲಿ ಲಭ್ಯವಾಗಲಿದೆ. ಏರ್‌ಟೆಲ್ ಸ್ಟೋರ್‌ನಿಂದ ರೆಡ್ಮೀ ನೋಟ್ 4 ಜಿಯನ್ನು ಪಡೆದುಕೊಳ್ಳಲು ಗ್ರಾಹಕರು ಪ್ರತ್ಯೇಕವಾಗಿ ನೋಂದಾವಣೆಯನ್ನು ಮಾಡಬೇಕಾಗಿದೆ. ಡಿಸೆಂಬರ್‌ನ ಮಧ್ಯಭಾಗದಲ್ಲಿ ಇದು ದೊರೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶ್ಯೋಮಿ ರೆಡ್ಮೀ ನೋಟ್‌

ಶ್ಯೋಮಿ ರೆಡ್ಮೀ ನೋಟ್‌

#1

ಇನ್ನು ಶ್ಯೋಮಿ ರೆಡ್ಮೀ ನೋಟ್‌ನ ವಿಶೇಷತೆಗಳತ್ತ ಗಮನಿಸಿದಾಗ ಇದು ಡ್ಯುಯಲ್ ಸಿಮ್ ಮತ್ತು ಡ್ಯುಯಲ್ ಸ್ಟ್ಯಾಂಡ್‌ಬೈ ಬೆಂಬಲದೊಂದಿಗೆ ಬರುತ್ತಿದೆ. ಇದು 1.7GHZ ಓಕ್ಟಾ ಕೋರ್ ಮೀಡಿಯಾ ಟೆಕ್ MTK6592 ಸೋಕ್‌ ಜೊತೆಗೆ ಬಂದಿದ್ದು ಮಾಲಿ 450MP4 GPU ಅನ್ನು ಡಿವೈಸ್ ಪಡೆದುಕೊಂಡಿದೆ. ಫೋನ್ 2 ಜಿಬಿ RAM ಅನ್ನು ಒಳಗೊಂಡಿದ್ದು ಆಂಡ್ರಾಯ್ಡ್ 4.2.2 ಜೊತೆಗೆ ಶ್ಯೋಮಿ MIUI ಆವೃತ್ತಿ5 ಸ್ಕಿನ್ ಅನ್ನು ಟಾಪ್‌ನಲ್ಲಿ ನಮಗೆ ಕಂಡುಕೊಳ್ಳಬಹುದಾಗಿದೆ.

ರೆಡ್ಮೀ ನೋಟ್ 4ಜಿ

ರೆಡ್ಮೀ ನೋಟ್ 4ಜಿ

#2

ಕ್ವಾಡ್ ಕೋರ್ 1.6GHZ ಸ್ನ್ಯಾಪ್‌ಡ್ರಾಗನ್ 400 ಸಿಪಿಯುವನ್ನು ಹೊಂದಿದ್ದು 2 ಜಿಬಿ RAM ಬೆಂಬಲವನ್ನು ಹೊಂದಿದೆ. ಇದು ಸಿಂಗಲ್ ಸಿಮ್ ಡಿವೈಸ್ ಆಗಿದೆ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ಡಿವೈಸ್ ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಚಾಲನೆಯಲ್ಲಿದ್ದು ಅದೇ MIUI ಆವೃತ್ತಿ5 ಸ್ಕಿನ್‌ನೊಂದಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ 5 ಲಾಲಿಪಪ್ ಅನ್ನು ಡಿವೈಸ್‌ಗಳಲ್ಲಿ ನಮಗೆ ಪಡೆದುಕೊಳ್ಳಬಹುದಾಗಿದೆ ಎಂದು ಕಂಪೆನಿ ತಿಳಿಸಿದ್ದು ಯಾವಾಗ ಎಂಬುದನ್ನು ಕಾದು ನೋಡಬೇಕಾಗಿದೆ.

ರೆಡ್ಮೀ ನೋಟ್ ಹಾಗೂ ರೆಡ್ಮೀ ನೋಟ್ 4ಜಿ

ರೆಡ್ಮೀ ನೋಟ್ ಹಾಗೂ ರೆಡ್ಮೀ ನೋಟ್ 4ಜಿ

#3

ಇನ್ನು ಇತರ ವಿಶೇಷತೆಗಳತ್ತ ಕಣ್ಣು ಹಾಯಿಸಿದಾಗ, ರೆಡ್ಮೀ ನೋಟ್ ಹಾಗೂ ರೆಡ್ಮೀ ನೋಟ್ 4ಜಿ ಒಂದೇ ರೀತಿಯ ವಿಶೇಷತೆಗಳನ್ನು ಒಳಗೊಂಡಿದೆ. ಇವೆರಡೂ ಡಿವೈಸ್‌ಗಳು 5.5 ಇಂಚಿನ, 720x1280 ಪಿಕ್ಸೆಲ್‌ಗಳ ಐಪಿಎಸ್ ಎಲ್‌ಸಿಡಿ ಸ್ಕ್ರೀನ್ ಜೊತೆಗೆ ಬಂದಿದ್ದು 13 ಮೆಗಾಪಿಕ್ಸೆಲ್ ರಿಯರ್ ಆಟೋಫೋಕಸ್ ಅನ್ನು ಫೋನ್ ಹೊಂದಿದೆ. ಇನ್ನು ಫೋನ್ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನಮಗೆ ಕಾಣಬಹುದಾಗಿದೆ.

ರೆಡ್ಮೀ ನೋಟ್ ಹಾಗೂ ರೆಡ್ಮೀ ನೋಟ್ 4 ಜಿ

ರೆಡ್ಮೀ ನೋಟ್ ಹಾಗೂ ರೆಡ್ಮೀ ನೋಟ್ 4 ಜಿ

#4

ಫೋನ್‌ನ ಆಂತರಿಕ ಸಂಗ್ರಹಣಾ ಸಾಮರ್ಥ್ಯ 8 ಜಿಬಿಯಾಗಿದ್ದು ವಿಸ್ತರಣೆಗೆ ಮೈಕ್ರೋ ಎಸ್‌ಡಿ ಕಾರ್ಡ್ ಅನ್ನು ನಮಗೆ ಕಾಣಬಹುದಾಗಿದೆ. ರೆಡ್ಮೀ ನೋಟ್ 32 ಜಿಬಿ ವಿಸ್ತರಣೆಯನ್ನು ಒದಗಿಸಿದರೆ, ರೆಡ್ಮೀ ನೋಟ್ 4 ಜಿ 64 ಜಿಬಿ ವಿಸ್ತರಣೆ ಬೆಂಬಲವನ್ನು ಒದಗಿಸಲಿದೆ.

ರೆಡ್ಮೀ ನೋಟ್ ಹಾಗೂ ರೆಡ್ಮೀ ನೋಟ್ 4 ಜಿ

ರೆಡ್ಮೀ ನೋಟ್ ಹಾಗೂ ರೆಡ್ಮೀ ನೋಟ್ 4 ಜಿ

#5

ಇನ್ನು ರೆಡ್ಮೀ ನೋಟ್ ಮಾಡೆಲ್‌ಗಳು ಒದಗಿಸುವ ಸಂಪರ್ಕ ಅಂಶಗಳೆಂದರೆ GPRS/EDGE, 3ಜಿ, ವೈ-ಫೈ 802.11 b/g/n ಜೊತೆಗೆ ವೈ-ಫೈ ಡೈರೆಕ್ಟ್ ಹಾಗೂ ಹಾಟ್‌ಸ್ಪಾಟ್ ಫಂಕ್ಶನಾಲಿಟಿ, ಬ್ಲ್ಯೂಟೂತ್ 4.0, ಮೈಕ್ರೋ-USB ಪೋರ್ಟ್ ಜೊತೆಗೆ OTG ಬೆಂಬಲ, ಹಾಗೂ A-GPS ಅನ್ನು ಹೊಂದಿದೆ.

ರೆಡ್ಮೀ ನೋಟ್ ಹಾಗೂ ರೆಡ್ಮೀ ನೋಟ್ 4 ಜಿ

ರೆಡ್ಮೀ ನೋಟ್ ಹಾಗೂ ರೆಡ್ಮೀ ನೋಟ್ 4 ಜಿ

#6

ಇನ್ನು ವೇಗವಾದ ಚಾರ್ಜಿಂಗ್‌ಗಾಗಿ ರೆಡ್ಮೀ ನೋಟ್ ಮತ್ತು ರೆಡ್ಮೀ ನೋಟ್ 4ಜಿ, 3100mAh ಬ್ಯಾಟರಿಯನ್ನು ಒಳಗೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Xiaomi has launched the Redmi Note phablet in India, priced at Rs. 8,999 and 4G-LTE variant of its 5.5-inch phablet named Redmi Note 4G priced at Rs. 9,999.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot