ಸುಮಧುರ ಸಂಗೀತಲೋಕಕ್ಕೆ ಹೊಸ ದಾರಿ ಇಲ್ಲಿದೆ ನೋಡಿ!

Posted By: Staff

ಸುಮಧುರ ಸಂಗೀತಲೋಕಕ್ಕೆ ಹೊಸ ದಾರಿ ಇಲ್ಲಿದೆ ನೋಡಿ!
ಎಂ.ಪಿ.3 ಯಿಂದ ಹೊರಗಡೆ ಸೌಂಡ್ ಸಿಸ್ಟಮ್ ಇಟ್ಟು ಹಾಡು ಕೇಳುವ ಕಾಲ ಈಗಿಲ್ಲ. ಈಗೇನಿದ್ದರೂ "ಆಲ್ ಇನ್ ವನ್" ಯುನಿಟ್ ಕಾಲ. ಸ್ಪೀಕರ್ ಕಡಿಮೆ ಸಾಮರ್ಥ್ಯ ಹೊಂದಿದ್ದರೆ ಮ್ಯೂಸಿಕ್ ಎಷ್ಟೇ ಚೆನ್ನಾಗಿದ್ದರೂ ಪ್ರಯೋಜನಕ್ಕೆ ಬರುವುದಿಲ್ಲ. ಈಗ ಆ ಸಮಸ್ಯೆಯೇ ಇಲ್ಲ ಬಿಡಿ...

ಏಕೆಂದರೆ ಇನ್ ಸ್ಪಾನ್ ಕಂಪೆನಿ ಹೊಸ ಸೌಂಡ್ ಸಿಸ್ಟಮ್ ಬಿಡುಗಡೆಗೆ ಸಜ್ಜಾಗಿದೆ. ಹೆಸರು ಇನ್ಸ್ ಪಾನ್ ಜೀನಿಯಸ್ SP i300. ಇದು ಸ್ಪೀಕರ್ ಜೊತೆಗಿನ ಪೋರ್ಟೆಬಲ್ ಎಂ ಪಿ 3 ಪ್ಲೇಯರ್ ಗೆ ಹೇಳಿ ಮಾಡಿಸಿದ ಜೋಡಿ.

ಬೇರೆ ಮ್ಯೂಸಿಕ್ ಡಿವೈಸ್ ಗೆ ಹೋಲಿಸಿದರೆ ಇದು ಸಾಕಷ್ಟು ಉತ್ತಮವಾಗಿದೆ. ಇದರಲ್ಲಿರುವ USB ಪೋರ್ಟ್ ನೇರವಾಗಿ USB ಪೆನ್ ಡ್ರೈವ್ ಗೆ ಕನೆಕ್ಟ್ ಆಗಿ ಸಂಗೀತ ಸುಧೆ ಹರಿಯಲು ನೆರವಾಗುತ್ತದೆ. ಇದು ಯಾವುದೇ ಪಾರ್ಮೆಟ್ ನಲ್ಲಿದ್ದರೂ ತೊಂದರೆಯೇನಿಲ್ಲ.


ಈ ಸಾಧನ 1.5 ಇಂಚ್ ಮೆಟಲ್ ಡ್ರೈವರ್ ಇರುವ ಸಪ್ಈಕರ್ ಸಹಿತ ಯುನಿಟ್. ಇದನ್ನು ಆಪಲ್ ಐಪ್ಯಾಡ್ ಹಾಗೂ ಬೇರೆ ಸೆಲ್ ಗಳಲ್ಲೂ ಬಳಸಬಹುದು. ಇದರ ಜೊತೆ ಇರುವ 3.5 mm ಆಡಿಯೋ ಜಾಕ್ ಸ್ಪೀಕರ್ ಕನೆಕ್ಟ್ ಮಾಡಲು ನೆರವಾಗುತ್ತದೆ. ಇಷ್ಟೆಲ್ಲ ಸಾಧ್ಯತೆಗಳು, ಉತ್ತಮ ಗುಣಮಟ್ಟ ಇದರ ಬೆಲೆ ಕೇವಲ ರು. 1,995. ನೋಡಿ, ಗುಣಮಟ್ಟದ ಸಂಗೀತವನ್ನು ನೀವು ಇಷ್ಟಪಡುವವರಾಗಿದ್ದರೆ ಇದು ನಮಗೆ ಸಾಕಷ್ಟು ಸಹಾಯವಾದೀತು!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot