ಸೋನಿ ಸ್ಪೀಕರ್ ಬಳಸಿ ಸಂಗೀತ ಸ್ವರ್ಗದಲ್ಲಿ ತೇಲಾಡಿ

Posted By: Staff

ಸೋನಿ ಸ್ಪೀಕರ್ ಬಳಸಿ ಸಂಗೀತ ಸ್ವರ್ಗದಲ್ಲಿ ತೇಲಾಡಿ
ಸೋನಿ ಕಂಪೆನಿ ಯಾರಿಗೆ ಗೊತ್ತಿಲ್ಲ ಹೇಳಿ! ಎಲೆಕ್ಟ್ರಾನಿಕ್ಸ್ ನಲ್ಲಿ ಜಗತ್ತಿನ ಅದ್ವಿತೀಯ ಕಂಪೆನಿ ಇದು. ಇದೀಗ ಹೊಸ ಸಾಹಸಕ್ಕೆ ಅದು ಮುಂದಾಗಿದೆ. 360 ಸ್ಮಾರ್ಟ್ ಫೊನ್ ಸ್ಪೀಕರ್ಸ್ ಗಳನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ.

ಸ್ಮಾರ್ಟ್ ಫೊನ್ ಜಗತ್ತಿನಲ್ಲಿ ಈಗ ಎಲ್ಲವೂ ಸ್ಮಾರ್ಟ್ ಸ್ಮಾರ್ಟ್! ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಈಗ ಸ್ಲಲ್ಪ ಹಳೆಯದಾಗಿ ತೋರುತ್ತಿದೆ. ಹಾಗಾಗು ಗ್ರಾಹಕರಿಗೆ ಹೊಸತೇನನ್ನಾದರೂ ಕೊಡಲು ಬಯಸಿರುವ ಸೋನಿ ಕಂಪೆನಿ ಈ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಈ ಮೊದಲಿ ಇದು ವಾಕ್ ಮನ್ ಹಾಗೂ ಪೋರ್ಟೆಬಲ್ ಮ್ಯೂಸಿಕ್ ತಂದಿದ್ದನ್ನು ನೆನೆಪಿಸಿಕೊಳ್ಳಿ!

SRS BTV25 ಎಂಬ ಚೆಂಡಿನಾಕಾರದ ಈ ಸ್ಪೀಕರ್ ನೋಡಿದೊಡನೆಯೇ ಗಮನ ಸೆಳೆಯುವಂತಿದೆ. ಇದನ್ನು 360 ಡಿಗ್ರಿ ರೌಂಡ್ ನಲ್ಲಿ ವಿನ್ಯಾಸಗೊಳಿಸಲಾಗಿದ್ದು ಇದರಿಂದ ಸೌಂಡ್ ನ ಕ್ಲಾರಿಟಿ ಹಾಗೂ ಪಸರಿಸುವಿಕೆ ಸಮಾನವಾಗಿ ಹಂಚಿಕೆಯಾಗುತ್ತದೆ.

ಈ ಡಿವೈಸ್ ಮೊಬೈಲಿನಲ್ಲಿರುವ ಬ್ಲೂಟೂಥ್ ಡಿವೈಸ್ ಜೊತೆ ಕನೆಕ್ಟ್ ಆಗುವುದರ ಜೊತೆಗೆ ಐಫೋನ್ ಅಥವಾ ವಾಕ್ ಮನ್ ಪ್ಲೇಯರ್ ಗಳಿಗೆ ವೈರ್ ಇಲ್ಲದೆಯೂ ಸಂಪರ್ಕ ಕಲ್ಪಿಸುತ್ತದೆ. ಗೇಮ್ ಅಥವಾ ಸಿನಿಮಾ ಕೂಡ ಸಾಕಷ್ಟು ಸ್ಪಷ್ಟವಾಗಿ ಕೇಳಿಸುವಂತಿದೆ. USB ಚಾರ್ಜರ್ ಪೋರ್ಟ್, RDP ರಿಮೋಟ್ ಎಕ್ಸೆಸ್ ಎಲ್ಲ ಲಭ್ಯವಿದೆ. SRS ಇದು ಕಸ್ಟಮ್ ಬ್ಲಾಕ್ ಮತ್ತು ಬಿಳಿ & RDP ಕೆಂಪು ಬಣ್ಣದಲ್ಲಿ ಸಿಗುತ್ತದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot