ಸ್ಯಾಮ್ ಸಂಗ್ ಹೊಸ ಹೋಮ್ ಥಿಯೇಟರ್ ಇಲ್ಲಿದೆ ನೋಡಿ!

Posted By: Staff

ಸ್ಯಾಮ್ ಸಂಗ್ ಹೊಸ ಹೋಮ್ ಥಿಯೇಟರ್ ಇಲ್ಲಿದೆ ನೋಡಿ!
ಸ್ಯಾಮ್ ಸಂಗ್ ಕಂಪೆನಿ ಗ್ಯಾಜೆಟ್ ಲೋಕದ ವಿಸ್ಮಯ ಎಂದೇ ಹೇಳಬಹುದು. ಈಗಾಗಲೇ ಸಾಕಷ್ಟು ಗ್ಯಾಜೆಟ್ ಸಾಮಗ್ರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಸ್ಯಾಮ್ ಸಂಗ್ ಇದೀಗ ಹೊಸ DVD ಹೋಮ್ ಥಿಯೇಟರ್ ಬಿಡುಗಡೆಗೆ ಸಜ್ಜಾಗಿದೆ. ಹೆಸರು ಸ್ಯಾಮ್ ಸಂಗ್ HT-D 555. ಈ ಹೊಸ ಸ್ಯಾಮ್ ಸಂಗ್ DVD ಹೋಮ್ ಥಿಯೇಟರ್ ನಲ್ಲಿ ಇರುವ ಸೌಲಭ್ಯಗಳು ಹೀಗಿವೆ...

ಈ ಹೊಸ ಹೋಮ್ ಥಿಯೇಟರ್ ರೂಪ ಉಳಿದ ಕಂಪೆನಿಯ ಸಾಮಾನ್ಯ ಹೋಮ್ ಥಿಯೇಟರ್ ನಂತೆಯೇ ಇದೆ. ಇದರ ಸ್ಪೆಷಾಲಿಟಿ ಇಂದರೆ ಇದು ಬಾಕ್ಸ್ ನ ಒಳಗಡೆಯೇ ಎಲ್ಲಾ ವಿಶೇಷತೆಗಳನ್ನೂ ಅಳವಡಿಸಿಕೊಂಡಿದೆ.

ಸಂಪೂರ್ಣ ಸಿಸ್ಟಮ್ ಕಠಿಣ ಹಾಗೂ ಉತ್ಕೃಷ್ಟ ಸಾಮಗ್ರಿಯಿಂದಲೇ ರಚಿತವಾಗಿದೆ. ಟಾಲ್ ಬಾಯ್ ಎಂಬ ಅಡ್ಡ ಹೆಸರಿನಿಂದ ಇದನ್ನು ಕರೆಯುಲಾಗುತ್ತಿದೆ.

ಈ ಸಾಧನದ ಮಧ್ಯದಲ್ಲಿ ಆಕರ್ಷಕವಾದ LCD ಡಿಸ್ ಪ್ಲೇ ಇದೆ. ಇದು USB ಪೋರ್ಟ್ ಸಹಕಾರ ಹೊಂದಿದೆ. ಪೆನ್ ಡ್ರೈವ್ ಬಳಸಬಹುದಾದ ಸೌಲಭ್ಯವಿದೆ. ಆಡಿಯೋ ಮತ್ತು ವಿಡಿಯೋ ಪ್ಲೇ ಬ್ಯಾಕ್ ಸೌಲಭ್ಯವಿರುವ ಇದರಲ್ಲಿ 8 ಸೆಗ್ ಮೆಂಟ್ ಸ್ಟೈಲ್ಡ್ ಲೆಡ್ ಮ್ಯಾಟ್ರಿಕ್ಸ್ ಡಿಸ್ ಪ್ಲೇ ಮತ್ತು USB ಇದೆ.

ಈ ಸಾಧನಕ್ಕೆ ಬಳಸುವ ರಿಮೋಟ್ ಕಂಟ್ರೋಲ್ ಕೆಟ್ಟದಾಗಿರುವುದು ಬಳಕೆದಾರರು ಕಿರಿಕಿರಿ ಎನಿಸಬಹುದು. ಆದರೆ ವಾಲ್ಯೂಮ್ ಮತ್ತು ಟ್ಯೂನ್ ರಾಕರ್ ಬಟನ್ಸ್ ನಲ್ಲಿ ಟ್ಯಾಕ್ಟೈಲ್ ಇರುವುದು ಬಳಕೆದಾರರಿಗೆ ಖುಷಿಕೊಡುವ ಸಂಗತಿ. ಇನ್ನು, ಇದು ಸಾಕಷ್ಟು ಗ್ಯಾರಂಟಿ ಹೊಂದಿದ್ದು ಉತ್ತಮ ಕಾರ್ಯದಕ್ಷತೆ ಹೊಂದಿದೆ. ಇದರ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಸ್ವಲ್ಪ ಹೆಚ್ಚೇ ಎನ್ನಬಹುದಾದ ರು. 28,250 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot