ಹಾರ್ಲೇ ಡೇವಿಡ್ಸನ್ ಬೂಮ್ ಆಡಿಯೋ ಸಿಸ್ಟಮ್, ಆಹಾ!

By Super
|
ಹಾರ್ಲೇ ಡೇವಿಡ್ಸನ್ ಬೂಮ್ ಆಡಿಯೋ ಸಿಸ್ಟಮ್, ಆಹಾ!
ಸಂಗೀತ ಲೋಕದ ಸಾಧನಗಳಲ್ಲಿ ಇತ್ತೀಚಿಗೆ ಸಾಕಷ್ಟು ಕ್ರಾಂತಿಯಾಗಿವೆ. ಹೊಸ ಹೊಸ ಸಾಧನಗಳು ಮಾರುಕಟ್ಟೆಯನ್ನು ಪ್ರವೇಶಿಸುವುದರ ಜೊತೆಗೆ ಈ ಸಾಧನಗಳು ಜನರ ಮನೆ-ಮನ ತಲುಪುತ್ತಿವೆ. ಈ ಸಂಕ್ರಮಣ ಕಾಲದಲ್ಲಿ ಹೊಸ ಸಾಹಸಕ್ಕೆ ಮುಂದಾಗಿದೆ ಖ್ಯಾತ ಹೆವ್ವಿ ಹಾರ್ಲೇ ಡೇವಿಡ್ಸನ್ ಮೋಟಾರ್ ಸೈಕಲ್ ಗಳಿಗೆ ಇನ್ನು ಮುಂದೆ ಹೊಸ ಹಾರ್ಲೇ ಡೇವಿಡ್ಸನ್ ಬೂಮ್ ಆಡಿಯೋ ಸಿಸ್ಟಮ್ ಬೆಸೆಯಲಾಗುವುದು.

ಈ ಸಾಧನವನ್ನು ಪರಿಚಯಿಸುತ್ತಿದೆ ಪ್ರಸಿದ್ಧ ಹಾರ್ಲೇ ಡೇವಿಡ್ಸನ್ ಜೆನ್ವಿನ್ ಮೋಟಾರ್ ಎಕ್ಸಸರೀಸ್. ಇದು ಹೊರ ತಂದಿರುವ ಸಾಧನ ಹಾರ್ಲೇ ಡೇವಿಡ್ಸನ್ ಬೂಮ್ ಆಡಿಯೋ ಸಿಸ್ಟಮ್ ಇನ್ನುಮುಂದೆ ಮೋಟಾರ್ ಸೈಕಲ್ಲಿನಲ್ಲಿ ಸಂಗೀತ ಸುಧೆ ಹರಿಸಲಿದೆ. ಇದು ಪ್ರವಾಸಿ ಮಾದರಿಯ ಆಧುನಿಕ ರೇಡಿಯೋ ಕೂಡ ಹೊಂದಿದೆ.

ಈ ಸಾಧನದ ಕಿಟ್ 2 ಚಾನೆಲ್ ಆಮ್ಫ್ಲಿಪಾಯರ್ ಹೊಂದಿದ್ದು ಸ್ಯಾಟಲ್ ಬ್ಯಾಗ್, 5.25 ಇಂಚುಗಳ ಸ್ಪೀಕರ್ ಜೋಡಿ ಹಾಗೂ 2 ಇಂಚುಗಳ ಟ್ವೀಟರ್ ಪೋಡ್ಸ್ ಕೂಡ ಹೊಂದಿದೆ. ಅಗತ್ಯ ವೈರಿಂಗ್ ಹೊಂದಿದ್ದು ತಡೆರಹಿತ ಸಂಪರ್ಕಕ್ಕೆ ನೆರವಾಗಲಿದೆ. ಇದು ದಢಲರ್ ಎಂಬ ಡಿಜಿಟಲ್ ಟೆಕ್ನೀಷಿಯನ್ ಸಾಪ್ಟ್ ವೇರ್ ಇನ್ ಸ್ಟಾಲ್ ಮಾಡಬೇಕಾದ ಅಗತ್ಯ ಹೊಂದಿದೆ.

ಸಂಪೂರ್ಣ ಪ್ಯಾಕೇಜಿನಲ್ಲಿ ದೊರೆಯುವ ಇದು 8 ಸ್ಪೀಕರ್, 2 ಆಮ್ಫ್ಲಿಪಾಯರ್ ಒಳಗೊಂಡಿದೆ. ಇದರ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ರು. 90,000. ಬೈಕಿಗೆ ಹೊಂದಿಕೆಯಾಗುವ ಈ ಸಂಗೀತ ಸಾಧನದೊಂದಿಗೆ ನೀವು ಸವಾರಿ ಹೊರಟರೆ ಸ್ವರ್ಗ ಸಮಾನ ಸಂತೋಷ ನಿಮ್ಮದಾಗಲಿರುವುದು ಗ್ಯಾರಂಟಿ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X