Subscribe to Gizbot

ಈ ಹೊಸ ಟಂಡೆಮ್ ಸ್ಪೀಕರ್ ಸದ್ಯದಲ್ಲಿ ಮಾರುಕಟ್ಟೆಗೆ

Posted By: Super

ಈ ಹೊಸ ಟಂಡೆಮ್ ಸ್ಪೀಕರ್ ಸದ್ಯದಲ್ಲಿ ಮಾರುಕಟ್ಟೆಗೆ
ಗ್ಯಾಜೆಟ್ಸ್ ಲೋಕ ಇಂದು ಸಾಕಷ್ಟು ಮಿಂಚುತ್ತಿದೆ. ಹೊಸ ಹೊಸ ಉತ್ಪನ್ನಗಳು ಹೊಸ ಹೊಸ ಕಂಪೆನಿಗಳಿಂದ ಹೇರಳವಾಗಿ ಹರಿದು ಬರುತ್ತಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಸಂಗೀತ ಸಾಧನಗಳು ಸಾಕಷ್ಟಿವೆ. ಇದೀಗ ಬರುತ್ತಿದೆ ಹೊಸ ಸ್ಪರ್ಧಿ ಸ್ಟೀಮ್ ಇನ್ನೋವೇಶನ್ ಕಂಪೆನಿಯ ಹೊಸ ಟಂಡೆಮ್ ಸ್ಪೀಕರ್.
ಈ ಹೊಸ ಸಾಧನ ಸಾಕಷ್ಟು ಆಧುನಿಕ ಹಾಗೂ ಉತ್ಕೃಷ್ಟವಾಗಿದೆ.

ಇದರಲ್ಲಿ ಹೊಸ ತಂತ್ರಜ್ಞಾನವಾದ USB ಇದೆ. ಟ್ಯೂನ್ಡ್ ಬಾಸ್ ರಿಫ್ಲೆಕ್ಸ್, ಸುಧಾರಿತ ಹೆಡ್ ಫೊನ್ ಔಟ್ ಪುಟ್ ಹಾಗೂ ಡಿಜಿಟಲ್ ಸಿಗ್ನಲ್ ಪ್ರೊಸೆಸಿಂಗ್ ಇವೆ. ಈ ಸಾಧನದ ರೂಪ ಆಪಲ್ ಹಾರ್ಡ್ ವೇರ್ ಐಮಾಕ್ಸ್ ಮತ್ತು ಮ್ಯಾಕ್ ಬಾಕ್ಸ್ ನ ಪ್ರತಿರೂಪದಂತಿದೆ. ಅಲ್ಯುಮೀನಿಯಮ್ ಕಲರ್ ಹಾಗೂ ಸ್ಪಾರ್ಟನ್ ಡಿಸೈನ್ ಹೊಂದಿರುವ ಇದನ್ನು ಆಪಲ್ ನ ಸಹೋದರ ಎಂದೂ ಕರೆಯಬಹುದು. ಆಪಲ್ ಗಿಂತಲೂ ನೋಡಲು ಇದೇ ಆಕರ್ಷಕವಾಗಿದೆ.

ಇದು ಟ್ರೇಪ್ ಜಾಯ್ಡಲ್ ಆಕಾರ ಹೊಂದಿದ್ದು ಎದುರಿನಲ್ಲಿ ಮೃದುವಾದ ಬ್ಲಾಕ್ ಬಟ್ಟೆಯ ಗ್ರಿಲ್ಸ್ ಕವರಿಂಗ್ ಹೊಂದಿದೆ. ಹಾಗಾಗಿ ಇದನ್ನು ಸುಲಭವಾಗಿ ಪೋಲ್ಡ್ ಮಾಡಿ ಅನುಕೂಲಕರ ಸಾಗಾಟ ಮಾಡಬಹುದು.

ಇದರಲ್ಲಿರುವ USB ಕೇಬಲ್ ಮೂಲಕ ಒಂದು ಸ್ಪೀಕರನ್ನು ಕಂಪ್ಯೂಟರಿಗೆ ಸಂಪರ್ಕಹೊಂದಿಸಿ ಸಂಗೀತ ಸವಿಯಬಹುದು. ಇನ್ನೊಂದು ಸ್ಪೀಕರ್ ಮೂಲಕ ಸಂಪೂರ್ಣ ಸಾಧನಕ್ಕೆ ಸಂಪರ್ಕ ಕಲ್ಪಿಸುವ ಮೂಲಕ ಸಂಗೀತದ ರಸದೌತಣ ಅನುಭವಿಸಬಹುದು. ಇದರಲ್ಲಿ ಇಯರ್ ಫೊನ್, ವಾಲ್ಯೂಮ್ ಕಂಟ್ರೋಲ್ ಸೌಲಭ್ಯ ಲಭ್ಯ. ವಿಸ್ತಾರವಾದ ಪ್ರದೇಶಕ್ಕೆ ಇದು ಅಷ್ಟೊಂದು ಹೊಂದಿಕೆಯಾಗಲಾರದು. ಆದರೆ ಸೀಮಿತ ಪ್ರದೇಶದಲ್ಲಿ ಇದು ಬಹಳಷ್ಟು ಪರಿಣಾಮಕಾರಿ.

ಇಷ್ಟೇ ಅಲ್ಲ, ಇದನ್ನು ಐಪೋಡ್, ಐಫೋನ್, ಹಾಗೂ ಲೈನ್ ಔಟ್ಸ್ ಇರುವ ಡಾಕ್ಸ್ ಗಳಿಗೆ ಬೆಸೆದು ಕೂಡ ಬಳಕೆ ಮಾಡಬಹುದು. ಇದರ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ರು. 3,500.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot