ಹೊಸ ಸೂಪರ್ ಜಾಮ್ ಬಾಕ್ಸ್ ಆಡಿಯೋ ಸ್ಪೀಕರ್

Posted By: Staff

ಹೊಸ ಸೂಪರ್ ಜಾಮ್ ಬಾಕ್ಸ್ ಆಡಿಯೋ ಸ್ಪೀಕರ್
ಗ್ಯಾಜೆಟ್ಸ್ ಮಾರುಕಟ್ಟೆಯಲ್ಲಿ ಸಂಗೀತ ಸಾಧನಗಳಿಗೆ ಕೊರತೆಯಿಲ್ಲ. ಹೊಸ ವಿನ್ಯಾಸದ ನಾನಾ ವಿಧದ ಸ್ಪೀಕರ್ ಗಳು ಈಗ ಹೇರಳವಾಗಿವೆ. ಸದ್ಯದಲ್ಲೇ ಜಾಬೋನ್ ಕಂಪೆನಿಯ ಹೊಸದೊಂದು ಆಡಿಯೋ ಸಾಧನ ಬಿಡುಗಡೆಯಾಗುತ್ತಿದೆ. ಹೆಸರು, ಜಾಮ್ ಬಾಕ್ಸ್. ಇದೊಂದು ಬ್ಲೂಟೂಥ್ ಸಾಧನ ಸಹ.

ಇದು ವೈರ್ ಲೆಸ್ ಆಗಿರುವುದಲ್ಲದೇ ಸಾಕಷ್ಟು ಅತ್ಯುನ್ನತ ತಂತ್ರಜ್ಞಾನದ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಸೌಂಡ್ ಕ್ಯಾನ್ಸಲಿಂಗ್ ತಂತ್ರಜ್ಞಾನದ ಸ್ಪೀಕರ್ ಫೊನ್ ಇದೆ. ಜೊತೆಗೆ ಇದು ಬ್ಲೂಟೂಥ್ ಡಿವೈಸ್ ಆಗಿದ್ದರೂ ಹಗುರ ಹಾಗೂ ಸಣ್ಣ ಆಕಾರ ಹೊಂದಿ ಸುಲಭವಾಗಿ ಪೋಲ್ಡ್ ಮಾಡಬಹುದಾಗಿದೆ. ಉಪಯುಕ್ತ ಗ್ರಿಲ್ಸ್ ಹೊಂದಿದೆ.

ಇದರ ಇನ್ನೊಂದು ವಿಶೇಷತೆ ಎಂದರೆ ಇದು ಸಾಮಾನ್ಯ ಸಾಂಪ್ರದಾಯಿಕ ಬಣ್ಣವಾದ ಕಪ್ಪು ಬಣ್ಣಕ್ಕೆ ಬದಲಾಗಿ ನೀಲಿ, ಕೆಂಪು ಹಾಗೂ ಕಪ್ಪು-ಚಿನ್ನ ಮಿಶ್ರಣದ ಬಣ್ಣದಲ್ಲಿ ಲಭ್ಯ. ಚಿನ್ನದ ಬಣ್ಣದ ಸ್ಪೆಷಲ್ ಆಪಲ್ ಆವೃತ್ತಿಯಲ್ಲೂ ಇದರ ಲಭ್ಯತೆ ಇದೆ. ಇದರ ಮೇಲ್ಭಾಗದಲ್ಲಿ ಕಂಟ್ರೋಲ್ ಕೀ ಗಳಿವೆ.

ಇದು ಕೇವಲ ಬಾಸ್ ಹಾಗೂ ಅತ್ಯುತ್ತಮ ಕ್ವಾಲಿಟಿ ಸಂಗೀತಕ್ಕೆ ಮೀಸಲಾಗಿರದೇ 85 dB ಜೊತೆಗೆ 60 MHz ಪ್ರೀಕ್ವೆನ್ಸಿ ಕೂಡ ಹೊಂದಿದೆ. ಯಾವುದೇ ಬ್ಲೂಟೂಥ್ ಡಿವೈಸ್ ಜೊತೆ ಸಂಪರ್ಕ ಸಾಧನೆ ಇದರ ಮಹತ್ವದ ಅಂಶ. ಇದರ ಬೆಲೆ ಭಾರತದಲ್ಲಿ ರು. 9,500.

ಸಾಕಷ್ಟು ಆಧುನಿಕ ಹಾಗೂ ಉಪಯುಕ್ತವಾಗಿರುವ ಈ ವೈರ್ ಲೆಸ್ ಆಡಿಯೋ ಸ್ಪೀಕರ್ ಇಷ್ಟು ಕಡಿಮೆ ಬೆಲೆಗೆ ದೊರೆಯುತ್ತದೆ ಎಂದಾದರೆ ಯಾರಿಗೆ ಬೇಡ!

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot