ಜೆಬಿಎಲ್ ಹೊಸ ಸಂಗೀತ ಸಾಧನ ಶೀಘ್ರದಲ್ಲಿ

By Super
|
ಜೆಬಿಎಲ್ ಹೊಸ ಸಂಗೀತ ಸಾಧನ ಶೀಘ್ರದಲ್ಲಿ
ಈಗ ಮಾರುಕಟ್ಟೆಯಲ್ಲಿರುವ iOS ಡಿವೈಸ್ ಗಳಾದ ಐಪೋಡ್, ಐಪ್ಯಾಡ್ಗಳ ಸೌಂಡ್ ಕ್ವಾಲಿಟಿಯಲ್ಲಿ ಮಹತ್ವದ ಹೆಚ್ಚಳ ತರಲು ಜೆಬಿಎಲ್ ನಿರ್ಧರಿಸಿದೆ. ಅದಕ್ಕಾಗಿ ಹೊಸ ಮಾದರಿಯ ಲೌಡ್ ಸ್ಪೀಕರನ್ನು ಮಾರುಕಟ್ಟೆಗೆ ತರಲು ಕಾರ್ಯಪ್ರವೃತ್ತವಾಗಿದೆ.

ಈ ದಿಸೆಯಲ್ಲಿ ಆಪಲ್ ಕಾರ್ಪೋರೇಶನ್ ನೊಂದಿಗೆ ಕೈಜೋಡಿಸಿದೆ. ಈ ಜೆಬಿಎಲ್, ಡ್ಯುಯಲ್ ಫಿಯೋನಿಕ್ಸ್ ಟ್ರಾನ್ಸ್ ಡ್ಯೂಸರ್ಸ್ ನೊಂದಿಗೆ ಬರುತ್ತಿದ್ದು ಅತ್ಯತ್ತಮ ಗುಣಮಟ್ಟದ ಸೇವೆಯನ್ನು ನೀಡಲು ಸಮರ್ಥವಾಗಿದೆ.

ಈ ಹೊಸ ಸಾಧನದಿಂದ, ಐಫೋನ್, ಐಪ್ಯಾಡ್ ಅಥವಾ ಐಪೋಡ್ ನ ಯಾವುದೇ ಆವೃತ್ತಿಯಲ್ಲಿ ಸುಪರ್ ಕ್ವಾಲಿಟಿಯ ಸಂಗೀತ ಹರಿದುಬರಲಿದ್ದು ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಲಿದೆ. ಈ ಕೆಲಸಕ್ಕೆ ಯುನಿವರ್ಸೆಲ್ ಕನೆಕ್ಟರ್ ಸಹಕಾರ ನೀಡಲಿದೆ.

ಸ್ಕೈಪ್ ಮತ್ತು ಯೂಟ್ಯೂಬ್ ಗಳಿಗೆ ಈ ಗುಣಮಟ್ಟದ ಆಡಿಯೋದಿಂದ ಸಿಗ್ನೇಚರ್ ಕ್ವಾಲಿಟಿ ಲಭಿಸಲಿದೆ. ಇದರಲ್ಲಿರುವ ಡಾಕ್ ಬಾಸ್ ಪರಿಣಾಮವನ್ನು ಹೆಚ್ಚಿಸಲು ನೆರವಾಗಲಿದೆ. ಇದು ರಿಮೋಟ್ ಕಂಟ್ರೋಲ್ ಸೌಲಭ್ಯವನ್ನು ಹೊಂದಿರುವುದು ವೇಗದ ಕಾ್ಯಕ್ಷಮತೆಗೆ ನೆರವಾಗಲಿದೆ. ಕೇವಲ 2 ಬಣ್ಣಗಳಲ್ಲಿ ಲಭ್ಯವಿರುವ ಇದು ಬಿಳಿ-ಕಪ್ಪು ಬಣ್ಣಗಳ ಸಂಗಮವಾಗಿದೆ.

ಇದರ ಬೆಲೆ ಸುಮಾರು ರು. 8,000. ಬೆಲೆಗೆ ಹೆಚ್ಚೇ ಎನ್ನಬಹುದಾದ ವಿಶಿಷ್ಠತೆಗಳನ್ನು ಹೊಂದರುವ ಇದು ಈ ತಿಂಗಳ ಕೊನೆಯಲ್ಲಿ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬರಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X