ಎಲ್ಲೆಲ್ಲೂ ಝೇಂಕರಿಸಲಿದೆ ಈ ಪಾಕೆಟ್ ಬೂಮ್ ಸ್ಪೀಕರ್

Posted By: Staff

ಎಲ್ಲೆಲ್ಲೂ ಝೇಂಕರಿಸಲಿದೆ ಈ ಪಾಕೆಟ್ ಬೂಮ್ ಸ್ಪೀಕರ್
ಸ್ಪೀಕರ್ ನ ಹೊಸ ಅವಿಷ್ಕಾರಗಳಲ್ಲಿ ಇದೀಗ ಪಾಕೆಟ್ ಬೂಮ್ ವೈಬ್ರೇಷನ್ ಸ್ಪೀಕರ್ ಎಲ್ಲರಲ್ಲಿ ಕುತೂಹಲವನ್ನು ಕೆರಳಿಸಿದೆ. ಮೊಬೈಲ್ ಮಾದರಿಯಲ್ಲಿರುವ ಈ ಸ್ಪೀಕರ್ ಪರಿಸರ ಸ್ನೇಹಿ ಕೂಡ ಹೌದು.

ಈ ಪಾಕೆಟ್ ಬೂಮ್ ವೈಬ್ರೇಷನ್ ಸ್ಪೀಕರ್ ಮಾರುಕಟ್ಟೆಯಲ್ಲಿ ಒಂದು ದೊಡ್ಡ ಹೈಪ್ ಉಂಟುಮಾಡಿತ್ತು. ಇದರಲ್ಲಿ ಸ್ವಲ್ಪ ನಕಾರಾತ್ಮಕ ವಿಷಯಗಳಿದ್ದರೂ ಇದರಲ್ಲಿರುವ ಉತ್ತಮ ಅಂಶಗಳು ಅದನ್ನು ಮರೆಮಾಚುವಂತೆ ಮಾಡುತ್ತವೆ.

ಈ ಸ್ಪೀಕರ್ ಅನ್ನು ಗೋಡೆ, ಬಾಗಿಲು, ಕಿಟಕಿ ಹೀಗೆ ಯಾವುದಕ್ಕೂ ಬೇಕಾದರೂ ಜೋಡಿಸಿದರೆ ಆ ಜೋಡಿಸಿದ ಸ್ಥಳವು ಸ್ಪೀಕರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದರ ಈ ಗುಣವು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿದೆ.

ಈ ಸ್ಪೀಕರ್ ನೋಡುವುದಕ್ಕೂ ಆಕರ್ಷಕವಾಗಿದ್ದು 2AAA ಬ್ಯಾಟರಿ ಹೊಂದಿದ್ದು, USB ಕೇಬಲ್ ಬಳಸಿ ಜಾರ್ಜ್ ಮಾಡಿಕೊಳ್ಳುತ್ತವೆ. ಇದರಲ್ಲಿ 3.5 ಆಡಿಯೋ ಜಾಕ್ ಇದೆ.

ಶಬ್ದ ಸ್ಪಷ್ಟತೆಯಲ್ಲಿ ಇಷ್ಟವಾದರೂ ಒಂದು ಕಿರಿಕಿರಿಯೆಂದರೆ ಇದನ್ನು ಅಂಟಿಸಲು ಇರುವ ಕೂಲ್ ಸ್ಟಿಕ್ ಸ್ವಲ್ಪ ಕಾಲದ ಬಳಿಕ ಯಾವುದೇ ಸ್ಥಳದ ಮೇಲ್ಮೈಗೆ ಅಂಟಿಕೊಳ್ಳುವ ಸಾಮರ್ಥ್ಯ ಕಳೆದುಕೊಳ್ಳುವುದು. ಆದರೆ ಆ ಸ್ಟಿಕ್ ಗಳನ್ನು ಸುಲಭವಾಗಿ ಬದಲಾಯಿಸಬಹುದು.

ಆದರೆಕೆಲವು ಜಾಗದಲ್ಲಿ ನೀವು ಅಂಟಿಸಿದಾಗ ಅದು ವಿಚಿತ್ರ ಶಬ್ದ ಹೊರಡಿಸಬಹುದು, ಆದರೆ ಅದನ್ನು ಕೇಳಲು ವಿನೋದಕರವಾಗಿರುತ್ತದೆ. ಮಕ್ಕಳಿಗೂ ಸಹ ಈ ಸ್ಪೀಕರ್ ಇಷ್ಟವಾಗಬಹುದು.

ಪಾಕೆಟ್ ಬೂಮ್ ವೈಬ್ರೇಷನ್ ಸ್ಪೀಕರ್ ಸದ್ಯದಲ್ಲಿಯೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದ್ದು ,ಸುಮಾರು ರೂಪಾಯಿ 2,300ಗೆ ಲಭ್ಯವಾಗುವ ಸಾಧ್ಯತೆ ಇದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot