ಸೋನಿ ಸ್ವಾಧೀನಕ್ಕೆ ಬರಲಿದೆ ಎರಿಕ್ಸನ್

By Super
|
ಸೋನಿ ಸ್ವಾಧೀನಕ್ಕೆ ಬರಲಿದೆ ಎರಿಕ್ಸನ್
2001ರಲ್ಲಿ ಒಂದು ಸಂವಹನದ ಮತ್ತೊಂದು ಡಿಜಿಟೆಲ್ ಗ್ಯಾಜೆಟ್ ಈ ಎರಡು ಗ್ಯಾಜೆಟ್ ಗಳು ಜೊತೆಗೂಡಿ ಒಂದು ಹೊಸ ಕಂಪನಿ ಸೋನಿ ಎರಿಕ್ಸನ್ ಎಂಬ ಕಂಪನಿಯನ್ನು ಹುಟ್ಟು ಹಾಕಲಾಯಿತು.

ಈ ಕಂಪನಿಯ ಉತ್ಪನ್ನಗಳು ಜಗತ್ತಿನಾದ್ಯಂತ ಒಳ್ಳೆಯ ಹೆಸರನ್ನು ಗಳಿಸಿತು. ಆದರೆ ಇನ್ನು ಮುಂದೆ ಈ ಸೋನಿ ಎರಿಕ್ಸನ್ ಎಂಬ ಎರಡು ಪದದ ಹೆಸರಿನ ಬದಲು ಸೋನಿ ಎಂಬ ಹೆಸರಿನ ಉತ್ಪನ್ನಗಳು ಕೇಳಿಬರುವ ಸಾಧ್ಯತೆ ಇದೆ.

ಮೊಬೈಲ್ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ 10ನೇ ಸ್ಥಾನದಲ್ಲಿರುವ ಈ ಸೋನಿ ಎರಿಕ್ಸನ್ ಅನ್ನು "ಸೋನಿ" 1.5 ಬಿಲಿಯನ್ ಡಾಲರ್ ಗೆ ಸಧ್ಯದಲ್ಲಿಯೆ ಕೊಂಡುಕೊಳ್ಳಲಿದೆ.

ಸೋನಿ ಎರಿಕ್ಸನ್ ಡಿಜಿಟಲ್ ಉತ್ಪನ್ನಗಳ ಜೊತೆ ಅನೇಕ ಹೊಸ ರೀತಿಯ ಮೊಬೈಲ್ ಅನ್ನು ಬಿಡುಗಡೆ ಮಾಡಿದ್ದರೂ ಸಹ ದುರಾದೃಷ್ಟವಶಾತ್ ಅಧಿಕ ಮಾರುಕಟ್ಟೆಯನ್ನು ಗಳಿಸಿಕೊಡಲಿಲ್ಲ.

ಸೋನಿ ಈಗ ಸ್ಮಾರ್ಟ್ ಪೋನ್ ಮತ್ತು ಟ್ಯಾಬ್ಲೆಟ್ಸ್ ಉತ್ಪನ್ನಗಳತ್ತ ಹೆಚ್ಚಿನ ಗಮನ ಹರಿಸಿದ್ದು , ಆಂಡ್ರೋಯ್ಡ್ ಸ್ಮಾರ್ಟ್ ಪೋನಿನ ತಯಾರಿಕೆಯಲ್ಲಿ ತನ್ನದೆ ಛಾಫುನ್ನು ಒತ್ತಲು ತೀರ್ಮಾನಿಸಿದೆ.

ಆದರೆ ಸೋನಿ ಎರಿಕ್ಸನ್ ಕೆಲವು ಆಂಡ್ರೋಯ್ಡ್ ಸ್ಮಾರ್ಟ್ ಪೋನ್ ಗಳನ್ನು ತಯಾರಿ ಮಾಡಿದ್ದರೂ ಅದರಲ್ಲಿ ಸ್ವಲ್ಪ ಲೋಪ ದೋಷಗಳಿವೆ. ಆದರೆ ಸೋನಿ ಎರಿಕ್ಸನ್ ಕಂಪನಿಯನ್ನು ಕೊಂಡು ಕೊಂಡರೆ ಉತ್ತಮ ಗುಣ ಮಟ್ಟದ ಸ್ಮಾರ್ಟ್ ಪೋನ್ ಅನ್ನು ಸೋನಿ ಹೆಸರಿನಲ್ಲಿ ಮಾರುಕ್ಟಟ್ಟೆಗೆ ಬಿಡಬಹುದು ಎಂಬ ಲೆಕ್ಕಚಾರದಲ್ಲಿದೆ ಸೋನಿ ಕಂಪನಿ.

ಅಲ್ಲದೆ ಕಂಪನಿ ಟಿವಿ, ಕ್ಯಾಮೆರಾ, ಮೊಬೈಲ್ ಪೋನ್ , ಮೀಡಿಯಾ ಪ್ಲೇಯರ್ ಗಳನ್ನು ತಯಾರಿಸಿ ಸೋನಿ ಕಂಪನಿಯ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಯೋಜನೆಯನ್ನು ಹಾಕಿಕೊಂಡಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X