ನಿಮ್ಮ ಕಾರ್ ನಲ್ಲಿ ಪ್ಲಗ್ ಅಂಡ್ ಪ್ಲೇ ಮಾಡಿ

Posted By: Staff

ನಿಮ್ಮ ಕಾರ್ ನಲ್ಲಿ ಪ್ಲಗ್ ಅಂಡ್ ಪ್ಲೇ ಮಾಡಿ
ಕಾರಿನಲ್ಲಿ ಡ್ರೈವ್ ಮಾಡುತ್ತಾ ಸಂಗೀತದ ರಸಾನುಭವ ಸವಿಯುವ ಉತ್ತಮ ಅವಕಾಶ ನಿಮಗೆ ಈಗ ಒದಗಿಬಂದಿದೆ. ಈಗಷ್ಟೇ ಕಾಲಿಡಲು ತಯಾರಾಗಿರುವ JBL MS-2 ಮ್ಯೂಸಿಕ್ ಆಕ್ಸೆಸರಿ ನಿಮ್ಮ ಕಾರಿನ ಒಳ್ಳೆ ಮ್ಯಾಚ್ ಆಗಲಿದೆ.

ಕಡಿಮೆ ಬೆಲೆಗೆ ಲಭ್ಯವಿರುವ ಈ ಸಾಧನ ನಿಮ್ಮ ಮನೆಗೂ ಸೂಕ್ತ. ಈ ಪ್ಲಗ್ ಅಂಡ್ ಪ್ಲೇ ಕಾರ್ ಸ್ಟಿರಿಯೋ ಡಿಜಿಟಲ್ ಸಿಗ್ನಲ್ ಹೊಂದಿರುವುದರಿಂದ ಸಂಗೀತದ ಗಾಢತೆ ಮತ್ತು ಸ್ಪಷ್ಟತೆಯನ್ನು ನೀವು ಮನಸ್ಸಾರೆ ಅನುಭವಿಸಬಹುದು. ಆದರೆ ನೀವು ಮಾಡಬೇಕಾದ್ದು ಇಷ್ಟೆ. ಈ ಸಾಧನವನ್ನು ನಿಮ್ಮ ಕಾರ್ ಜಾಕ್ ಗೆ ಕನೆಕ್ಟ್ ಮಾಡಬೇಕು. ಇದರಲ್ಲಿ ನೀಡಿರುವ 3 ಎಂಎಂ ಆಕ್ಸ್ ಜಾಕ್ ಸಹಾಯದೊಂದಿಗೆ ಸುಲಭವಾಗಿ ಸಂಪರ್ಕ ಸಾಧ್ಯವಿದೆ.

90.7 ಗ್ರಾಂ ಇರುವ JBL MS-2, ಬೇರೆ ಆಡಿಯೋ ಸಾಧನಗಳಿಗೆ ಹೋಲಿಸಿದರೆ ಕಡಿಮೆ ತೂಕ ಹೊಂದಿದೆ. ಇದರಲ್ಲಿ ವಿನೂತನ DSP ತಂತ್ರಜ್ಞಾನವಿರುವುದು ಇನ್ನಷ್ಟು ಸೌಂಡ್ ಕೇಪ್ ನೀಡಲಿದೆ. ಇದರಲ್ಲಿ ವಾಲ್ಯೂಮ್ ಮತ್ತು ಸೌಂಡ್ ಚೆಕ್ ಆಯ್ಕೆ ಇದ್ದರೂ ಸಂಗೀತ ಬರುವಾಗ ಪ್ಲೇಬ್ಯಾಕ್ ಮತ್ತು ಬಾಸ್, ಟ್ರೆಬಲ್ ನಿಯಂತ್ರಿಸಲು ಸಾಧ್ಯವಾಗದಿರುವುದು ಸ್ವಲ್ಪ ಹಿನ್ನೆಡೆ ಎನಿಸಿದೆ.

ಇದರೊಂದಿಗೆ ಇನ್ ಪುಟ್ ಮತ್ತು ಔಟ್ ಪುಟ್ ಕೇಬಲ್ ಸಹ ನೀಡಲಾಗಿದೆ. ಮನೆಯಲ್ಲಿ ಈ ಸಾಧನವನ್ನು ಬಳಸುತ್ತಿದ್ದೀರ ಎಂದಾದರೆ ಇದಕ್ಕೆ ಬ್ಯಾಟರಿ ಅವಶ್ಯಕತೆಯಿದೆ. 6 ವಾಲ್ಟ್ ಡಿಸಿ ಪವರ್ ಸಪ್ಲೈ ಆಯ್ಕೆ ಇದರಲ್ಲಿದೆ. ಸಂಗೀತ ಪ್ರಿಯರ ನಿರೀಕ್ಷೆಗಳನ್ನು ತಣಿಸಲು ಹೊರಬಂದಿರುವ ಈ ಸಾಧನದ ಬೆಲೆ 11,000 ರು ಆಗಿದ್ದು, ಇನ್ನೇನು ಕೆಲವು ದಿನಗಳಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot