Subscribe to Gizbot

ಇದು ಸ್ಲಿಮ್ & ಟ್ರಿಮ್ ಬೇಕೆನ್ನುವ ಕಾಲ !

Posted By: Super
ಇದು ಸ್ಲಿಮ್ & ಟ್ರಿಮ್ ಬೇಕೆನ್ನುವ ಕಾಲ !
ಇದು ಸ್ಲಿಮ್ & ಡ್ರಿಮ್ ಬಯಸುವ ಕಾಲ, ಹಗುರವಾಗಿರ ಬೇಕು(ಲೈಟ್ ವೈಟ್ ) , ಫ್ಯಾಷನೇಬಲ್ ಆಗಿರಬೇಕು , ಗುಣದಲ್ಲಿ ಅಪ್ಪಟವಾಗಿರಬೇಕು ಈ ಎಲ್ಲಾ ಅಂಶಗಳು ನಿಮ್ಮ ಇಯರ್ ಫೋನ್ ನಲ್ಲಿರಬೇಕು ಎಂದ ಬಯಸುವರಿಗಾಗಿ ಬಂದಿದೆ ಫಿಯಾಟನ್ ಬೆಸ್ಟ್ ಆಗಿದೆ.

ಆಡಿಯೋ ವಸ್ತುಗಳ ಉತ್ಪಾದನೆ ಮುಂಚುಣಿಯಲ್ಲಿರುವ ಕಂಪನಿಗಳಲ್ಲಿ ಫಿಯಾಟನ್ ಕೂಡ ಒಂದಾಗಿದೆ. ಇದು ಇತ್ತೀಚಿಗೆ ಫಿಯಾಟನ್ PS 20 BT ಬ್ಲೂಟೂಥ್ ಸ್ಟಿರಿಯೋ ಇಯರ್ ಫೋನ್ ತಯಾರಿಸಿದೆ.

ಇದರಲ್ಲಿರುವ ಗುಣ ಲಕ್ಷಣಗಳು ಹೀಗಿವೆ:

* USB ರೀಜಾರ್ಜ್ ಬ್ಯಾಟರಿಯ ಬ್ಲೂಟೂಥ್ ಇಯರ್ ಬಡ್ಸ್
* ಫೋನ್ ಟಾಕ್ ಫೀಚರ್
* 3.0 ಬ್ಯೂಟೂಥ್ ಫ್ರೋಫೈಲ್
* ಮಾಕ್ಸ್ ಬಾಸ್(MaxBass) ಫೀಚರ್
* ಇದರ ಆಪರೇಟಿಂಗ್ ರೇಂಜ್ 10 ಮೀ ಒಳಗೆ
* ಇದರ ಕಂಪನಾಂಕ 4000Hz.
* ತೂಕ 16 ಗ್ರಾಂ

ಈ ಇಯರ್ ಫೋನಿನಲ್ಲಿ 3 ಬಣ್ಣದಲ್ಲಿರುವ ಇಂಡಿಕೇಟರ್ ಇದರ ಕಾರ್ಯಗಳನ್ನು ತೋರಿಸುತ್ತಾ ಇರುತ್ತದೆ. ಶಬ್ದವನ್ನು ಕಂಟ್ರೋಲ್ ಮಾಡಲು ಚಿಕ್ಕ ಕಂಟ್ರೋಲ್ ಸ್ಟಿಕ್ ಅನ್ನು ನೀಡಲಾಗುತ್ತದೆ.

ಮೊಟ್ಟೆಯ ಆಕಾರದಲ್ಲಿ ಇಯರ್ ಫೋನ್ ಅನ್ನು ಕಂಟ್ರೋಲ್ ಪ್ಯಾಡ್ ಒಳಗೆ ಅಳವಡಿಸಲಾಗಿರುತ್ತದೆ. ಈ ಹೆಡ್ ಫೋನ್ ಉದ್ದ 18 ಇಂಚಾಗಿದ್ದು, 14.36 mm ಡ್ರೈವರ್ಸ್ ಅನ್ನು ಈ ಸಾಧನದಲ್ಲಿ ಬಳಸಲಾಗಿದೆ.

ಇದರಲ್ಲಿ ಸ್ಪ್ರಿಂಗ್ ಕ್ಲಿಪ್ ಬಳಸಲಾಗಿದ್ದು , ಅದು ಬೇಡವೆಂದರೆ ಗ್ರೇ ನೆಕ್ ಸ್ಟ್ರಾಪ್ ಅನ್ನು ನೀಡಲಾಗುವುದು, ಇದರಲ್ಲಿ 150mAh ಲೀಥಿಯಂ ಪಾಲಿಮರ್ ಬ್ಯಾಟರಿಯನ್ನು ಬಳಸಲಾಗಿದೆ.

ಈ ಲೈಟ್ ವೈಟ್ ಇಯರ್ ಫೋನ್ ಬೆಲೆ ರು. 7, 500 ಇರಬಹುದು ಎಂದು ಊಹಿಸಲಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot